ಸಮುದ್ರದಲ್ಲಿ ವಾಯು ಅಬ್ಬರ, ಮೀನುಗಾರಿಕೆ ತತ್ತರ; ಹೆಚ್ಚಾಯ್ತು ಮೋಚಾ ಚಂಡಮಾರುತ ಭೀತಿ..!!

ಮಂಗಳೂರು: ನೋಡಲು ಪ್ರಶಾಂತವಾಗಿರುವ ಸಮುದ್ರದಲ್ಲಿ ಮುಂದಕ್ಕೆ ಹೋದಂತೆ ಗಾಳಿಯ ಅಬ್ಬರ. ಗಂಟೆಗೆ 28 ಕಿ.ಮೀನಿಂದ 32 ಕಿ.ಮೀ.ವರೆಗೆ ವೇಗದ ಗಾಳಿ ಬೀಸುತ್ತಿದೆ. ಹೀಗಾಗಿ ಮೀನುಗಾರರು ಕಂಗಾಲಾಗಿದ್ದಾರೆ. ಆಳಸಮುದ್ರದ ಮೀನುಗಾರಿಕೆ (fishing) ಸಂಪೂರ್ಣ ಬಂದ್ ಆಗುವ ಪರಿಸ್ಥಿತಿಯಲ್ಲಿದೆ. ಅಷ್ಟೇ ಅಲ್ಲ, ಇತರ ಮೀನುಗಾರರೂ ತಮ್ಮ ಬೋಟುಗಳನ್ನು ಕಡಲಿಗಿಳಿಸಿಲ್ಲ. ಬಂಗಾಳಕೊಲ್ಲಿಯಲ್ಲಿ (Bay of Bengal) ವಾಯುಭಾರ ಕುಸಿತವಾಗಿದ್ದು, ಇನ್ನೆರಡು ದಿನಗಳಲ್ಲಿ ಆಗ್ನೇಯ ಬಂಗಾಳ ಕೊಲ್ಲಿಯಲ್ಲಿ ಚಂಡಮಾರುತ ರೂಪುಗೊಳ್ಳುವ ಸಾಧ್ಯತೆಯಿದೆ. ಈ ಚಂಡಮಾರುತಕ್ಕೆ ಈಗಾಗಲೇ ಮೋಚಾ (Mocha cyclone) ಎಂದು ಹೆಸರಿಡಲಾಗಿದೆ. ಇದು […]

ಮಣಿಪಾಲ: ಮೇ 5ರಿಂದ ಗಾಂಧಿಯನ್ ಸೆಂಟರ್‌ನಲ್ಲಿ ಉಡುಪಿ ಸೀರೆಗಳ ಕುರಿತ ಕಾರ್ಯಾಗಾರ ‘ನೇಯ್ಗೆ’

ಉಡುಪಿ: ಮಾಹೆಯ ಗಾಂಧಿಯನ್ ಫಿಲಾಸಫಿಕಲ್ ಆರ್ಟ್ಸ್ ಅಂಡ್ ಸೈನ್ಸಸ್‌ನ ಆಶ್ರಯದಲ್ಲಿ ಉಡುಪಿ ಸೀರೆಗಳ ಕುರಿತು ಎರಡು ದಿನಗಳ ಪ್ರದರ್ಶನ, ಉಪನ್ಯಾಸ, ಸಾಕ್ಷ್ಯಚಿತ್ರ ಪ್ರದರ್ಶನಗಳ ಕಾರ್ಯಾಗಾರ ‘ನೇಯ್ಗೆ’ ಮೇ 5 ಮತ್ತು 6ರಂದು ಮಣಿಪಾಲದಲ್ಲಿ ನಡೆಯಲಿದೆ. ಈ ಕಾರ್ಯಾಗಾರ ಅಮೆರಿಕದ ಡಿಪಾರ್ಟ್‌ಮೆಂಟ್ ಆಫ್ ಸ್ಟೇಟ್ಸ್‌ನ ಶೈಕ್ಷಣಿಕ ಮತ್ತು ಸಾಂಸ್ಕೃತಿಕ ವ್ಯವಹಾರಗಳ ಬ್ಯೂರೋ ಆರಂಭಿಸಿದ ‘ಗಾಂಧಿ-ಕಿಂಗ್ ಎಕ್ಸೆಚೇಂಜ್’ ಕಾರ್ಯಕ್ರಮದ ಭಾಗವಾಗಿ ನಡೆಯಲಿದೆ ಎಂದು ಕಾರ್ಯಾ ಗಾರದ ಸಂಘಟಕರಲ್ಲೊಬ್ಬರಾದ ಲಾವಣ್ಯ ಎನ್.ಕೆ. ಇಂದಿಲ್ಲಿ ಕರೆದ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ. ಉಡುಪಿ ಸೀರೆ ಮತ್ತು […]

ಉಡುಪಿ: ಅಂಬಲಪಾಡಿ ಯಕ್ಷಗಾನ ಶಿಬಿರ ಸಮಾರೋಪ..!!

ಉಡುಪಿ: ಇಲ್ಲಿನ ಅಂಬಲಪಾಡಿಯ ಶ್ರೀ ಲಕ್ಷ್ಮೀಜನಾರ್ದನ ಯಕ್ಷಗಾನ ಕಲಾ ಮಂಡಳಿ, ಕನ್ನಡ ಮತ್ತು ಸಂಸ್ಕತಿ ಇಲಾಖೆ ಸಹಯೋಗ ದೊಂದಿಗೆ ಅಂಬಲಪಾಡಿಯ ಕಂಬ್ಳಕಟ್ಟದಲ್ಲಿರುವ ಸಂಸ್ಥೆಯ ಜನಾರ್ದನ ಮಂಟಪ ದಲ್ಲಿ ಹತ್ತು ದಿನಗಳ ಕಾಲ ನಡೆಸಿದ ‘ಯಕ್ಷಗಾನ ಶಿಬಿರ’ ಗುರುವಾರ ಮುಕ್ತಾಯಗೊಂಡಿತು. ಶಿಬಿರದಲ್ಲಿ ಒಟ್ಟು ಆಸಕ್ತ 56 ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು. ಎಲ್ಲರಿಗೂ ಪ್ರಮಾಣ ಪತ್ರವನ್ನು ವಿತರಿಸಲಾುತು. ಸಂಸ್ಥೆಯ ಅಧ್ಯಕ್ಷ ಕೆ.ಅಜಿತ್ ಕುಮಾರ್ ಸ್ವಾಗತಿಸಿದರು. ನಿಕಟ ಪೂರ್ವ ಅಧ್ಯಕ್ಷ ಮುರಲಿ ಕಡೆಕಾರ್ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಯಕ್ಷಗಾನ ಕಲಾರಂಗದ ಉಪಾಧ್ಯಕ್ಷ ಎಸ್.ವಿ.ಭಟ್, ಜತೆ […]

ಉಡುಪಿ: ಮೇ 10ರ ಸಂತೆ, ಜಾತ್ರೆ, ಉತ್ಸವಕ್ಕೆ ನಿಷೇಧ..!!

ಉಡುಪಿ, ಮೇ 4: ರಾಜ್ಯ ವಿಧಾನಸಭಾ ಚುನಾವಣೆಗೆ ಸಂಬಂಧಿಸಿದಂತೆ ಮೇ 10ರಂದು ಬೆಳಗ್ಗೆ 6 ಗಂಟೆಯಿಂದ, ಚುನಾವಣೆಯ ಮತದಾನ ಮುಕ್ತಾಯವಾಗುವವರೆಗೆ ಉಡುಪಿ ಜಿಲ್ಲೆಯಾದ್ಯಂತ ನಡೆಯುವ ಸಂತೆ ಮತ್ತು ಎಲ್ಲಾ ತರಹದ ಜಾತ್ರೆಗಳನ್ನು ಹಾಗೂ ಪೂರ್ವಾನುಮತಿ ಪಡೆಯದೆ ಉತ್ಸವಗಳನ್ನು ನಡೆಸುವುದನ್ನು ನಿಷೇಧಿಸಿ ಜಿಲ್ಲಾಧಿಕಾರಿ ಕೂರ್ಮಾರಾವ್ ಎಂ ಆದೇಶ ಹೊರಡಿಸಿದ್ದಾರೆ.

ಪಣಂಬೂರಿನಲ್ಲಿ 7ನೇ ಪ್ರವಾಸಿ ಹಡಗು ಲಂಗರು…..!!

ಪಣಂಬೂರು: ಎಂ.ವಿ. ಇನ್ಸಿಗ್ನಿಯಾ ಐಷಾರಾಮಿ ಬೃಹತ್‌ 7ನೇ ಪ್ರವಾಸಿ ಹಡಗು ಮುಂಬಯಿ ಜಲ ಮಾರ್ಗವಾಗಿ ನವಮಂಗಳೂರು ಬಂದರಿಗೆ ಬುಧವಾರ ಆಗಮಿಸಿತು. ಈ ಹಡಗು 466 ಪ್ರವಾಸಿಗರು, 399 ಸಿಬಂದಿಯನ್ನೊಳಗೊಂಡಿದೆ. ಬಸ್‌ ಹಾಗೂ ಖಾಸಗೀ ಕಾರುಗಳಲ್ಲಿ ತೆರಳಿದ ಪ್ರವಾಸಿಗರು ಮೂಡುಬಿದಿರೆಯ ಸಾವಿರ ಕಂಬದ ಬಸದಿ, ಸೈಂಟ್‌ ಎಲೋಶಿಯಸ್‌ ಚಾಪೆಲ್‌, ಕದ್ರಿ ದೇವಸ್ಥಾನ, ಮಾರ್ಕೆಟ್‌, ಕುದ್ರೋಳಿ ದೇವಸ್ಥಾನ, ಗೇರು ಬೀಜ ಸಂಸ್ಕರಣ ಕಂಪೆನಿ ಸಹಿತ ಆಕರ್ಷಕ ಪ್ರವಾಸಿ ಸ್ಥಳಗಳನ್ನು ವೀಕ್ಷಿಸಿದರು. ಭೇಟಿ ಸಂದರ್ಭ ಇಲ್ಲಿನ ಯಕ್ಷಗಾನ ಕಲೆ, ಆಯುಷ್‌ ಚಿಕಿತ್ಸಾ ಪದ್ದತಿ […]