ಪ್ರತಿಫಲಾಪೇಕ್ಷೆ ಇಲ್ಲದೆ ಮಾಡುವ ಕಾರ್ಯ ಜನರ ಮನಸ್ಸಿನಲ್ಲಿ ಉಳಿಯುತ್ತದೆ: ಎಂ.ಎನ್. ನಟರಾಜ್

ಉಡುಪಿ: ಪ್ರತಿಫಲಾಪೇಕ್ಷೆ ಇಲ್ಲದೇ ತಮ್ಮ ಕರ್ತವ್ಯದಲ್ಲಿ ತೊಡಗಿಕೊಳ್ಳುವವರಿಗೆ ಜನರ ಮನಸ್ಸಿನಲ್ಲಿಯೂ ದೊಡ್ಡ ಸ್ಥಾನ ದೊರೆಯುತ್ತದಲ್ಲದೆ, ಗೌರವ ಸನ್ಮಾನಗಳು ಅರಸಿ ಬರುತ್ತವೆ ಎಂದು ನೆಹರು ಯುವ ಕೇಂದ್ರದ ಪ್ರಾಂತೀಯ ಹಾಗೂ ರಾಜ್ಯ ನಿರ್ದೇಶಕ ಎಂ.ಎನ್. ನಟರಾಜ್ ಹೇಳಿದರು. ಅವರು ಉಡುಪಿ ಜಿಲ್ಲೆಯ ವಿವಿಧ ಯುವಕ ಹಾಗೂ ಯುವತಿ ಮಂಡಲಗಳ ನೇತೃತ್ವದಲ್ಲಿ ಇಲ್ಲಿನ ಕ್ರಿಸ್ಟ್ ಸ್ಕೂಲ್ ಆವರಣದಲ್ಲಿ ಆಯೋಜಿಸಲಾದ ಜಿಲ್ಲಾ ಯುವ ಸಮನ್ವಯಾಧಿಕಾರಿ ವಿಲ್‌ಫ್ರೆಡ್ ಡಿಸೋಜಾ ಅವರಿಗೆ ಬೀಳ್ಕೊಡುಗೆ ಸಮಾರಂಭದಲ್ಲಿ ವಿಲ್‌ಫ್ರೆಡ್ ಡಿಸೋಜಾ ಅವರನ್ನು ಸನ್ಮಾನಿಸಿ ಮಾತನಾಡಿ ನೆಹರು ಯುವ […]

ಕರಾವಳಿ ಹಾಗೂ ಇತರೆಡೆಗಳಲ್ಲಿ ಗುಡುಗು-ಸಿಡಿಲು ಸಹಿತ ಮಳೆಯ ಮುನ್ಸೂಚನೆ ನೀಡಿದ ಹವಾಮಾನ ಇಲಾಖೆ

ಉಡುಪಿ/ ಮಂಗಳೂರು: ಮುಂದಿನ 03 ಗಂಟೆಗಳಲ್ಲಿ ದಕ್ಷಿಣ ಕನ್ನಡ, ಉಡುಪಿ, ಬೆಳಗಾವಿ, ಧಾರವಾಡ, ಚಿಕ್ಕಮಗಳೂರು, ಕೋಲಾರ, ಶಿವಮೊಗ್ಗ ಈ ಜಿಲ್ಲೆಗಳಲ್ಲಿ ಗುಡುಗು ಮಿಂಚಿನ ಸಹಿತ ಸಾಧಾರಣದಿಂದ ಮಧ್ಯಮ ಮಳೆಯಾಗುವ ಸಂಭವವಿದ್ದು, ಗಂಟೆಗೆ 30-40 ಕಿಮೀ ವೀಗದಲ್ಲಿ ಜೋರಾದ ಗಾಳಿ ಬೀಸುವ ಅನುಮಾವಿದೆ ಎಂದು ಭಾರತೀಯ ಹವಾಮಾನ ಇಲಾಖೆ ತಿಳಿಸಿದೆ.

ಕೊಡವೂರು ಅಭಿವೃದ್ಧಿ ಸಮಿತಿ ವತಿಯಿಂದ ಮಿನಿ ಉದ್ಯೋಗ ಮೇಳ

ಉಡುಪಿ: ಕೊಡವೂರು ಅಭಿವೃದ್ಧಿ ಸಮಿತಿ ಹಾಗೂ ಇತರ ಸಂಸ್ಥೆಗಳ ಸಹಯೋಗದೊಂದಿಗೆ ಆರನೇ ಮಿನಿ ಉದ್ಯೋಗ ಮೇಳವು ಭಗವಾನ್ ನಿತ್ಯಾನಂದ ಮಂದಿರದಲ್ಲಿ ಭಾನುವಾರದಂದು ಯಶಸ್ವಿಯಾಗಿ ನಡೆಯಿತು. ಮಲ್ಪೆ ಪ್ರಾಥಮಿಕ ಮೀನುಗಾರರ ಸಂಘದ ಅಧ್ಯಕ್ಷ ಸತೀಶ್ ಎಸ್ ಕುಂದರ್ ಉದ್ಯೋಗ ಮೇಳವನ್ನು ಉದ್ಘಾಟಿಸಿದರು. ಸ್ಥಳೀಯ ಹಾಗೂ ಬೆಂಗಳೂರಿನ ಒಟ್ಟು 9 ಪ್ರತಿಷ್ಠಿತ ಕಂಪನಿಗಳು ಉದ್ಯೋಗ ಮೇಳದಲ್ಲಿ ಭಾಗವಹಿಸಿದ್ದವು. 9 ಕಂಪನಿಗಳ 171 ಹುದ್ದೆಗಳಿಗೆ ಒಟ್ಟು 84 ಅಭ್ಯರ್ಥಿಗಳು ಸಂದರ್ಶನ ನೀಡಲು ಹಾಜರಾಗಿದ್ದರು. ಮುಂದಿನ ಸುತ್ತಿನ ಸಂದರ್ಶನಕ್ಕೆ 57 ಅಭ್ಯರ್ಥಿಗಳು ಶಾರ್ಟ್‌ಲಿಸ್ಟ್ ಆಗಿದ್ದು, 6 […]

ಧರ್ಮಸ್ಥಳ, ಸುಬ್ರಮಣ್ಯ, ಮಣಿಪಾಲದಲ್ಲಿ ರೋಡಿಗಿಳಿಯಲಿರುವ ಎಲೆಕ್ಟ್ರಿಕ್ ಬಸ್!

ಮಂಗಳೂರು:ಕರಾವಳಿಯ  ಜನತೆಗೆ ಸಿಹಿ ಸುದ್ದಿಯೊಂದು ಹೊರಬಿದ್ದಿದೆ. ಕರಾವಳಿಯಲ್ಲಿ ಎಲೆಕ್ಟ್ರಿಕ್ ಬಸ್ಗಳ ಕಾರ್ಯಾಚರಣೆಗೆ ಕೆಎಸ್ಸಾರ್ಟಿಸಿ  ತೀರ್ಮಾನ ಕೈಗೊಂಡಿದ್ದು, 6 ತಿಂಗಳೊಳಗೆ ಸುಮಾರು 90 ಎಸಿ ಮತ್ತು ನಾನ್ ಎಸಿ  ಎಲೆಕ್ಟ್ರಿಕ್ ಬಸ್ಗಳು ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳಲ್ಲಿ ರೋಡಿಗೆ ಇಳಿಯಲಿವೆ. ದಕ್ಷಿಣ ಕನ್ನಡ ಮತ್ತು ಉಡುಪಿ ಎರಡೂ ಡಿಪೋಗಳಿಂದ ಬಸ್ಗಳಿಗೆ ಬೇಡಿಕೆ ಇದ್ದರೂ ಕೂಡ ನಿಗಮದಲ್ಲಿ ಬಸ್ಗಳ ಕೊರತೆಯಿದ್ದು, ಎಲೆಕ್ಟ್ರಿಕ್ ಬಸ್ಗಳು(Electric Bus)ಈ ಸಮಸ್ಯೆಗೆ ಪರಿಹಾರ ನೀಡುವ ಸಾಧ್ಯತೆ ದಟ್ಟವಾಗಿದೆ. ಈಗಾಗಲೇ ಕೆಲವು ಎಲೆಕ್ಟ್ರಿಕ್ ಬಸ್ಗಳು ಕೆಎಸ್ಸಾರ್ಟಿಸಿಗೆ […]

ಅಗ್ನಿಪಥ ಯೋಜನೆಯ ಸಿಂಧುತ್ವವನ್ನು ದೃಢಪಡಿಸಿದ ಸುಪ್ರೀಂ ಕೋರ್ಟ್: ಮೇಲ್ಮನವಿ ವಜಾ

ನವದೆಹಲಿ: ಕೇಂದ್ರದ ಅಗ್ನಿಪಥ ಯೋಜನೆಯನ್ನು ಎತ್ತಿ ಹಿಡಿದ ದೆಹಲಿ ಹೈಕೋರ್ಟ್ ತೀರ್ಪನ್ನು ಪ್ರಶ್ನಿಸಿ ಸಲ್ಲಿಸಲಾಗಿದ್ದ ಎರಡು ಅರ್ಜಿಗಳನ್ನು ಸುಪ್ರೀಂ ಕೋರ್ಟ್ ಸೋಮವಾರ ವಜಾಗೊಳಿಸಿದೆ. ರಾಷ್ಟ್ರೀಯ ಭದ್ರತೆಯನ್ನು ಕಾಪಾಡುವ ಶ್ಲಾಘನೀಯ ಉದ್ದೇಶದೊಂದಿಗೆ ರಾಷ್ಟ್ರೀಯ ಹಿತಾಸಕ್ತಿಯಲ್ಲಿ ಅಗ್ನಿಪಥ್ ಯೋಜನೆಯನ್ನು ರೂಪಿಸಲಾಗಿದೆ ಎಂದು ಫೆಬ್ರವರಿ 27 ರಂದು ಹೈಕೋರ್ಟ್ ಹೇಳಿತ್ತು. ಈ ಯೋಜನೆಯ ಸಿಂಧುತ್ವಕ್ಕೆ ಧಕ್ಕೆಯುಂಟು ಮಾಡುವ ಅರ್ಜಿಗಳ ಬ್ಯಾಚ್ ಅನ್ನು ಕೆಳಗಿನ ನ್ಯಾಯಾಲಯವು ವಜಾಗೊಳಿಸಿತ್ತು ಮತ್ತು ಕೇಂದ್ರದ “ಉತ್ತಮ ಚಿಂತನೆಯ” ನೀತಿ ನಿರ್ಧಾರ ಎಂದು ಬಣ್ಣಿಸಿತ್ತು. ಇದೀಗ, ಕೇಂದ್ರದ ಅಗ್ನಿಪಥ […]