ಕುಂದಾಪುರ: ಯಾತ್ರಿಕ ನಾಪತ್ತೆ

ಕುಂದಾಪುರ: ಊರಿನ ಗ್ರಾಮಸ್ಥರೊಂದಿಗೆ ಯಾತ್ರೆಗೆಂದು ಬಂದು ಕೊಲ್ಲೂರು ಶ್ರೀ ಮೂಕಾಂಬಿಕಾ ದೇವಸ್ಥಾನದ ಲಲಿತಾಂಬಿಕ ಗೆಸ್ಟ್ ಹೌಸ್‌ನಲ್ಲಿ ಉಳಿದುಕೊಂಡಿದ್ದ ಚಿಕ್ಕಬಳ್ಳಾಪುರ ಜಿಲ್ಲೆ ಗೌರಿಬಿದನೂರು ತಾಲೂಕು ಕೋಡಿಹಳ್ಳಿ ಗ್ರಾಮದ ನಿವಾಸಿ ವೆಂಕಟರಾಮಪ್ಪ (55) ಎಂಬವರು ಏಪ್ರಿಲ್ 6 ರಂದು ಬೆಳಗ್ಗೆ 4 ಗಂಟೆಯ ಸುಮಾರಿಗೆ ಹೊರಗೆ ಹೋದವರು ವಾಪಾಸು ಬಾರದೇ ನಾಪತ್ತೆಯಾಗಿರುತ್ತಾರೆ. 5 ಅಡಿ 2 ಇಂಚು ಎತ್ತರ, ಕೋಲು ಮುಖ, ಸಾಧಾರಣ ಶರೀರ, ಎಣ್ಣೆಕಪ್ಪು ಮೈಬಣ್ಣ ಹೊಂದಿದ್ದು, ತೆಲುಗು ಭಾಷೆ ಮಾತನಾಡುತ್ತಾರೆ. ಇವರ ಬಗ್ಗೆ ಮಾಹಿತಿ ದೊರೆತಲ್ಲಿ ಕೊಲ್ಲೂರು […]

ಉಡುಪಿ: ಪಟ್ಟಿಯಲ್ಲಿ ಹೆಸರಿಲ್ಲದಿದ್ದರೆ ಆಲೋಚಿಸಿ ನಿರ್ಧಾರ ಶಾಸಕ ರಘುಪತಿ ಭಟ್‌ ಹೇಳಿಕೆ

ಉಡುಪಿ: ಉಡುಪಿ ವಿಧಾನಸಭಾ ಕ್ಷೇತ್ರದ ಬಿಜೆಪಿ‌ ಅಭ್ಯರ್ಥಿ‌ ಆಯ್ಕೆ ಕುರಿತಂತೆ ಪ್ರತಿಕ್ರಿಯೆ ‌ನೀಡಿದ ಉಡುಪಿಯ ಹಾಲಿ ಶಾಸಕ ರಘುಪತಿ ಭಟ್, ಬ್ರಾಹ್ಮಣ ಎಂಬ ಕಾರಣಕ್ಕೆ ಪಕ್ಷ ಈವರೆಗೆ ನನಗೆ ಟಿಕೆಟ್ ಕೊಟ್ಟದಲ್ಲ. ನಾನು ಯಾವುದೇ ಜಾತಿಯ ಕ್ಯಾಂಡಿಡೇಟ್‌ ಅಲ್ಲ. ನಾನು ಒಳ್ಳೆಯ ಕಾರ್ಯಕರ್ತ, ಕೆಲಸಗಾರ ಎಂಬ ಕಾರಣಕ್ಕೆ ಪಕ್ಷ ಈ ಹಿಂದೆ ಸೀಟ್ ಕೊಟ್ಟಿದೆ. ಒಂದು ವೇಳೆ ಅಭ್ಯರ್ಥಿಗಳ ಪಟ್ಟಿಯಲ್ಲಿ ನನ್ನ ಹೆಸರು ಇಲ್ಲದಿದ್ದರೆ, ಮುಂದಿನ ಅಭಿಪ್ರಾಯವನ್ನು ತಿಳಿಸುತ್ತೇನೆ ಎಂದರು. ಕುಂದಾಪುರದಲ್ಲಿ ಯಾವುದೇ ಮಾನದಂಡ ಬಂದರೂ ನನಗೆ ಎಫೆಕ್ಟ್ […]

ಉಡುಪಿ: ಏ.11-12 ರಂದು ನೀರು ಸರಬರಾಜಿನಲ್ಲಿ ವ್ಯತ್ಯಯ

ಉಡುಪಿ: ಉಡುಪಿ ನಗರಸಭಾ ವ್ಯಾಪ್ತಿಯ ಪರ್ಕಳದಿಂದ ಹಿರಿಯಡ್ಕವರೆಗಿನ ರಾಷ್ಟ್ರೀಯ ಹೆದ್ದಾರಿ 169 ಎ ರಲ್ಲಿ ರಸ್ತೆ ಅಗಲೀಕರಣ ಕಾಮಗಾರಿ ಸಂದರ್ಭ, ಉಡುಪಿ ನಗರಸಭಾ ವ್ಯಾಪ್ತಿಗೆ ನೀರು ಸರಬರಾಜು ಮಾಡುವ ಮುಖ್ಯ ಕೊಳವೆಗೆ ಹಾನಿಯಾಗಿದ್ದು, ದುರಸ್ಥಿ ಕಾರ್ಯ ನಡೆಯುತ್ತಿರುವ ಹಿನ್ನೆಲೆಯಲ್ಲಿ ಏಪ್ರಿಲ್ 11 ಮತ್ತು 12 ರಂದು ನಗರಸಭಾ ವ್ಯಾಪ್ತಿಯ 35 ವಾರ್ಡ್ಗಳಲ್ಲಿ ನೀರು ಸರಬರಾಜಿನಲ್ಲಿ ವ್ಯತ್ಯಯ ಉಂಟಾಗಲಿದ್ದು, ಸಾರ್ವಜನಿಕರು ನಗರಸಭೆಯೊಂದಿಗೆ ಸಹಕರಿಸುವಂತೆ ಪೌರಾಯುಕ್ತರ ಕಚೇರಿ ಪ್ರಕಟಣೆ ತಿಳಿಸಿದೆ.

ಉಡುಪಿ: ಯುವತಿ ನಾಪತ್ತೆ

ಉಡುಪಿ: ಉಡುಪಿ ತಾಲೂಕು ಪುತ್ತೂರು ಗ್ರಾಮದ ಅಂಬಾಗಿಲು ಕಕ್ಕುಂಜೆ ಹೌಸ್ ನಿವಾಸಿ ಶ್ರೀಲಕ್ಷ್ಮೀ(19) ಎಂಬ ಯುವತಿಯು ಏಪ್ರಿಲ್ 7 ರಂದು ಮನೆಯಿಂದ ಹೊರಗೆ ಹೋದವರು ವಾಪಾಸು ಬಾರದೇ ನಾಪತ್ತೆಯಾಗಿರುತ್ತಾರೆ. 5 ಅಡಿ 6 ಇಂಚು ಎತ್ತರ, ಸಾಧಾರಣ ಮೈಕಟ್ಟು, ಗೋಧಿ ಮೈಬಣ್ಣ ಹೊಂದಿದ್ದು, ಕನ್ನಡ ಭಾಷೆ ಮಾತನಾಡುತ್ತಾರೆ. ಇವರ ಬಗ್ಗೆ ಮಾಹಿತಿ ದೊರೆತಲ್ಲಿ ಉಡುಪಿ ನಗರ ಪೊಲೀಸ್ ಠಾಣಾಧಿಕಾರಿಯನ್ನು ಸಂಪರ್ಕಿಸಬಹುದಾಗಿದೆ ಎಂದು ಪ್ರಕಟಣೆ ತಿಳಿಸಿದೆ.

ಚಿತ್ರನಟ ಜೈ ಜಗದೀಶ್ ಕುಟುಂಬದಿಂದ ಶ್ರೀಕೃಷ್ಣ ಮಠಕ್ಕೆ ಭೇಟಿ

ಉಡುಪಿ: ಚಲನಚಿತ್ರರಂಗದ ಹಿರಿಯ ನಟ ಜೈ ಜಗದೀಶ್ ಮತ್ತು ವಿಜಯಲಕ್ಷ್ಮಿಸಿಂಗ್ ಅವರು ಕುಟುಂಬ ಸಮೇತರಾಗಿ ಶ್ರೀಕೃಷ್ಣಮಠಕ್ಕಾಗಮಿಸಿ ಶ್ರೀಕೃಷ್ಣದೇವರ ದರ್ಶನ ಮಾಡಿ ಪ್ರಸಾದ ಸ್ವೀಕರಿಸಿದರು. ಪರ್ಯಾಯ ಮಠದ ದಿವಾನರಾದ ವರದರಾಜ ಭಟ್ ಮತ್ತು ನಾರಾಯಣ ಸರಳಾಯ ಉಪಸ್ಥಿತರಿದ್ದರು.