ತೀರ್ಥಹಳ್ಳಿ-ಕುಂದಾಪುರ ರಾಜ್ಯ ಹೆದ್ದಾರಿ 52 ರ ಬಾಳೆಬರೆ ಘಾಟ್ ನಲ್ಲಿ ವಾಹನ ಸಂಚಾರ ನಿಷೇಧ ವಿಸ್ತರಣೆ

ತೀರ್ಥಹಳ್ಳಿ-ಕುಂದಾಪುರ ರಾಜ್ಯ ಹೆದ್ದಾರಿ 52 ರ ಬಾಳೆಬರೆ ಘಾಟ್‌ ನಲ್ಲಿ ಕಾಂಕ್ರೀಟ್‌ ಪೇವ್‌ ಮೆಂಟ್‌ ಕಾಮಗಾರಿಯ ನಿರೀಕ್ಷಿತ ಪ್ರಗತಿಯಲ್ಲಿ ವ್ಯತ್ಯಯವಾಗಿರುವುದರಿಂದ ಬಾಳೆಬರೆ ಘಾಟ್ ನಲ್ಲಿ ವಾಹನ ಸಂಚಾರಕ್ಕೆ ಇದ್ದ ನಿಷೇಧವನ್ನು 10 ದಿನಗಳ ಕಾಲ ವಿಸ್ತರಿಸಿ ಜಿಲ್ಲಾಧಿಕಾರಿ ಕೂರ್ಮಾ ರಾವ್ ಆದೇಶ ಹೊರಡಿಸಿದ್ದಾರೆ. ಹೆದ್ದಾರಿ ಕಾಮಗಾರಿಗಾಗಿ ಎಪ್ರಿಲ್ 05 ರ ವರೆಗೆ ಬಾಳೆಬರೆ ಘಾಟ್‌ ನಲ್ಲಿ ವಾಹನ ಸಂಚಾರಕ್ಕೆ ನಿಷೇಧ ಹೇರಲಾಗಿತ್ತು. ಇದೀಗ ಕ್ಯೂರಿಂಗ್ ಗೆ ಇನ್ನೂ ಕೆಲವು ದಿನಗಳ ಕಾಲಾವಕಾಶ ಅಗತ್ಯವಾಗಿರುವುದರಿಂದ ವಾಹನ ಸಂಚಾರದ ನಿಷೇಧವನ್ನು […]

ಎಪ್ರಿಲ್ 8 ಅಥವಾ 9 ರಂದು ಬಿಜೆಪಿ ಅಭ್ಯರ್ಥಿಗಳ ಅಧಿಕೃತ ಪಟ್ಟಿ ಬಿಡುಗಡೆ: ಬೊಮ್ಮಾಯಿ

ಬೆಂಗಳೂರು: ಕಳೆದೆರೆಡು ದಿನಗಳಿಂದ ಜಿಲ್ಲಾ ಸಮಿತಿಗಳಲ್ಲಿ ತೆಗೆದುಕೊಂಡ ತೀರ್ಮಾನಗಳನ್ನು ಇಂದು ರಾಜ್ಯ ಕೋರ್ ಕಮಿಟಿ ಪರಿಶೀಲಿಸಿ, ಕೇಂದ್ರಕ್ಕೆ ಕಳುಹಿಸಿಕೊಡಲಿದೆ. ಬಹುತೇಕ ಎಪ್ರಿಲ್ 8 ಅಥವಾ 9 ರಂದು ಅಧಿಕೃತ ಪಟ್ಟಿ ಬಿಡುಗಡೆಯಾಗಲಿದೆ ಎಂದು ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ತಿಳಿಸಿದ್ದಾರೆ. ಕಾರ್ಯಕರ್ತರಲ್ಲಿ ಉತ್ಸಾಹ ಇಮ್ಮಡಿಯಾಗಿದ್ದು, ಸ್ಪಷ್ಟ ಬಹುಮತದ ಸರ್ಕಾರ ರಚನೆಯಾಗುವ ವಿಶ್ವಾಸವಿದ್ದು, ಕೆಲವು ಕಡೆ ಅಚ್ಚರಿ ರೀತಿಯಲ್ಲಿ ನಮ್ಮ ಅಭ್ಯರ್ಥಿಗಳು ಗೆಲ್ಲಲಿದ್ದಾರೆ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಬಿಜೆಪಿ ಟಿಕೆಟ್‌ ಪ್ರಕ್ರಿಯೆ ಅಂತಿಮಗೊಳಿಸಲು ಮಂಗಳವಾರ ಹಾಗೂ ಬುಧವಾರದಂದು ರಾಜ್ಯ […]

ಉಡುಪಿ: ಜಾಯ್ ಆಲುಕ್ಕಾಸ್ ನಲ್ಲಿ ಉದ್ಯೋಗಾವಕಾಶ

ಉಡುಪಿ: ಜೋಯ್ ಆಲುಕ್ಕಾಸ್ ಚಿನ್ನದ ಮಳಿಗೆಯಲ್ಲಿ ಸೇಲ್ಸ್ ಎಕ್ಸಿಕ್ಯೂಟಿವ್ ಮತ್ತು ಸೇಲ್ಸ್ ಟ್ರೈನಿ ಹುದ್ದೆ ಖಾಲಿ ಇದ್ದು, ಆಸಕ್ತ ಉದ್ಯೋಗಾಕಾಂಕ್ಷಿಗಳು ಏ. 5 ರಂದು ಬಡಗುಪೇಟೆಯಲ್ಲಿರುವ ಸಂಸ್ಥೆಯ ಮಳಿಗೆಯಲ್ಲಿ ಬೆಳಿಗ್ಗೆ 10 ರಿಂದ ಮಧ್ಯಾಹ್ನ 02 ಗಂಟೆಯವರೆಗೆ ನೇರವಾಗಿ ಭೇಟಿ ನೀಡಬಹುದು ಅಥವಾ [email protected] ಗೆ ತಮ್ಮ ಬಯೋಡೇಟಾ ಕಳುಹಿಸಬಹುದು. ಪದವಿ ಅಥವಾ ಡಿಪ್ಲೋಮಾ ಆದವರಿಗೆ ಆದ್ಯತೆ. ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ: 0820-2593777/ 9449842262

ಗಡಿಯಲ್ಲಿ ಚೀನಾ ದಾರ್ಷ್ಟ್ಯ ಪ್ರದರ್ಶನ: ಮೊತ್ತೊಮ್ಮೆ ಅರುಣಾಚಲ ಪ್ರದೇಶದ 11 ಸ್ಥಳಗಳಿಗೆ ಮರುನಾಮಕರಣ

ಗುವಾಹಟಿ: ಅರುಣಾಚಲ ಪ್ರದೇಶದ ಮೇಲಿನ ತನ್ನ ಹಕ್ಕನ್ನು ಮತ್ತೊಮ್ಮೆ ಒತ್ತಿಹೇಳುವ ಪ್ರಯತ್ನದ ಭಾಗವಾಗಿ ಚೀನಾವು ಅರುಣಾಚಲ ಪ್ರದೇಶದ 11 ಸ್ಥಳಗಳಿಗೆ ಹೊಸ ಹೆಸರುಗಳನ್ನು ಬಿಡುಗಡೆ ಮಾಡಿದೆ. ಇದೀಗ ಮೂರನೇ ಬಾರಿಗೆ ಚೀನಾವು ಅರುಣಾಚಲ ಪ್ರದೇಶದ ಸ್ಥಳಗಳಿಗೆ ‘ಮರುನಾಮಕರಣ’ ಮಾಡಿದ್ದು, ಅದನ್ನು “ಜಂಗ್ನಾನ್, ಟಿಬೆಟ್‌ನ ದಕ್ಷಿಣ ಭಾಗ” ಎಂದು ಕರೆದಿದೆ. ಚೀನಾದ ನಾಗರಿಕ ವ್ಯವಹಾರಗಳ ಸಚಿವಾಲಯವು ನಿನ್ನೆ ಚೀನಾದ ಕ್ಯಾಬಿನೆಟ್, ಸ್ಟೇಟ್ ಕೌನ್ಸಿಲ್ ನೀಡಿದ ಭೌಗೋಳಿಕ ಹೆಸರುಗಳ ಮೇಲಿನ ನಿಯಮಗಳಿಗೆ ಅನುಸಾರವಾಗಿ ಚೀನಾ, ಟಿಬೆಟ್ ಮತ್ತು ಪಿನ್ಯಿನ್ ಅಕ್ಷರಗಳಲ್ಲಿ […]

ಅಪಘಾತ ವಲಯವಾಗಿದ್ದ ಉಚ್ಚಿಲದ ಪಣಿಯೂರು- ಹೆದ್ದಾರಿ 66ರ ತಿರುವಿಗೆ ಮುಕ್ತಿ….!!

ಕಾಪು: ಉಚ್ಚಿಲದ ಅಪಘಾತ ವಲಯ ಎಂದೇ ಕುಖ್ಯಾತಿ ಪಡೆದಿದ್ದ ಪಣಿಯೂರು- ಹೆದ್ದಾರಿ 66ರ ತಿರುವಿಗೆ ರವಿವಾರ ಸಂಜೆ ತಾರ್ಕಿಕ ಅಂತ್ಯ ಸಿಕ್ಕಿದ್ದು, ಸಾರ್ವಜನಿಕರು ನಿಟ್ಟಿಸಿರು ಬಿಡುವಂತಾಗಿದೆ. ಇಲ್ಲಿಯ ಅವೈಜ್ಞಾನಿಕ ತಿರುವಿನಲ್ಲಿ ಮೂರು ವರ್ಷದ ಅವಧಿಯಲ್ಲಿ ಸರಿಸುಮಾರು 300ಕ್ಕೂ ಹೆಚ್ಚುಅಪಘಾತಗಳು ಸಂಭವಿಸಿದೆ. ಇಲ್ಲಿ ಹಲವಾರು ಪ್ರಾಣತೆತ್ತಿದ್ದು, ಹೆಚ್ಚಿನವರು ಕೈ ಕಾಲು ಮುರಿತಕ್ಕೆ ಒಳಗಾಗಿದ್ದಾರೆ. ಈ ಬಗ್ಗೆ ಹೆದ್ದಾರಿ ಇಲಾಖೆಗೆ ಮಾಹಿತಿ ನೀಡಿ, ಈ ಅವಜ್ಞಾನಿಕ ತಿರುವನ್ನು ಬಂದ್ ಮಾಡಬೇಕೆಂದು ಸಾರ್ವಜನಿಕರು ಆಗ್ರಹಿಸಿದ್ದರು. ಹೆದ್ದಾರಿ ಇಲಾಖೆ ಕಿವಿ ಕೇಳದಂತಾಗಿತ್ತು. ಅಂತೂ […]