ಉಡುಪಿ ಜಿಲ್ಲಾಧಿಕಾರಿ ಶಿರೂರು ಚೆಕ್‌ಪೋಸ್ಟ್‌ಗೆ ಭೇಟಿ: ತಪಾಸಣೆ ಕ್ರಮ ಪರಿಶೀಲನೆ

ಬೈಂದೂರು: ಶಿರೂರು ಪೊಲೀಸ್ ಚೆಕ್ ಪೋಸ್ಟ್‌ಗೆ ವಿಧಾನಸಭಾ ಚುನಾವಣೆ ಹಿನ್ನೆಲೆಯಲ್ಲಿಉಡುಪಿ ಜಿಲ್ಲಾಧಿಕಾರಿ ಕೂರ್ಮಾರಾವ್ ಎಂ. ಭೇಟಿ ನೀಡಿ ತಪಾಸಣೆ ಕ್ರಮವನ್ನು ಪರಿಶೀಲಿಸಿದರು. ಈ ಸಂದರ್ಭದಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹಾಕೆ ಅಕ್ಷಯ್ ಮಚ್ಚೀಂದ್ರ, ಕುಂದಾಪುರ ಡಿ.ವೈ.ಎಸ್.ಪಿ. ಬೆಳ್ಳಿಯಪ್ಪ, ಬೈಂದೂರು ವಿಧಾನಸಭಾ ಕ್ಷೇತ್ರದ ಚುನಾವಣಾಧಿಕಾರಿ ಜಗದೀಶ್ ಗಂಗಣ್ಣನವರ್, ಬೈಂದೂರು ತಾಲೂಕು ಎ. ಗ್ರೇಡ್ ತಹಶೀಲ್ದಾರ್ ಪ್ರಭುಸ್ವಾಮಿ ಎ., ಬೈಂದೂರು ತಹಶೀಲ್ದಾರ್ ಶ್ರೀಕಾಂತ ಹೆಗ್ಡೆ, ಉಪ ತಹಶೀಲ್ದಾರ್ ಭೀಮಪ್ಪ ಬಿಲ್ಲಾರ್, ಬೈಂದೂರು ಆರಕ್ಷಕ ಠಾಣೆಯ ವೃತ್ತನಿರೀಕ್ಷಕ ಸಂತೋಷ ಕಾಯ್ಕಿಣಿ, ಶಿರೂರು […]
ಮಾಹೆ ಗಾಂಧಿಯನ್ ಸೆಂಟರ್ ವತಿಯಿಂದ ಯೂಥ್ ಪಾರ್ಲಿಮೆಂಟ್ ಕಾರ್ಯಕ್ರಮ

ಮಣಿಪಾಲ: ಮಾಹೆಯ ಗಾಂಧಿಯನ್ ಸೆಂಟರ್ ಫಾರ್ ಫಿಲಾಸಫಿಕಲ್ ಆರ್ಟ್ಸ್ ಅಂಡ್ ಸೈನ್ಸಸ್ (GCPAS) ಆಶ್ರಯದಲ್ಲಿ ಸಂಸದೀಯ ಕಾರ್ಯವಿಧಾನ ಮತ್ತು ಚರ್ಚೆಗಳ ಉತ್ತಮ ತಿಳುವಳಿಕೆಗಾಗಿ ‘ಯೂಥ್ ಪಾರ್ಲಿಮೆಂಟ್’ ನ್ನು ಶನಿವಾರ ಹಮ್ಮಿಕೊಳ್ಳಲಾಯಿತು. ಇದನ್ನು ವಿಭಾಗದ ಬಿಎ- ಎಸ್ಥೆಟಿಕ್ಸ್ ಅಂಡ್ ಪೀಸ್ ಸ್ಟಡೀಸ್ ನ ವಿದ್ಯಾರ್ಥಿಗಳು ಆಯೋಜಿಸಿದ್ದರು, ಇತರ ಎಲ್ಲ ವಿದ್ಯಾರ್ಥಿಗಳು ಇದರಲ್ಲಿ ಭಾಗವಹಿಸಿದ್ದರು. ವಿದ್ಯಾರ್ಥಿಗಳು ಸಂಸತ್ತಿನ ಕಲಾಪವನ್ನು ಪ್ರಶ್ನೋತ್ತರ ಅವಧಿ, ವಿಧೇಯಕಗಳ ಮಂಡನೆ ಇತ್ಯಾದಿಗಳೊಂದಿಗೆ ಮರುಸೃಷ್ಟಿಸಿದರು ಮತ್ತು ಆರೋಗ್ಯ-ಕುಟುಂಬ ಕಲ್ಯಾಣ, ಕೃಷಿ, ಮಹಿಳೆ, ಗೃಹ ವ್ಯವಹಾರ ಇತ್ಯಾದಿ ವಿಷಯಗಳ […]
ಎಸೆಸೆಲ್ಸಿ ಪರೀಕ್ಷೆ: ಮಧುಮೇಹ ವಿದ್ಯಾರ್ಥಿಗಳಿಗೆ ವಿಶೇಷ ಸೌಲಭ್ಯ, ವಿನಾಯಿತಿ

ಉಡುಪಿ:ಮಧುಮೇಹದಿಂದ ಬಳಲುತ್ತಿರುವ ಎಸೆಸೆಲ್ಸಿ ವಿದ್ಯಾರ್ಥಿಗಳಿಗೆ ಪರೀಕ್ಷೆ ಹಾಜರಾಗುವ ಸಂದರ್ಭ ವಿಶೇಷ ಸೌಲಭ್ಯ, ವಿನಾಯಿತಿ ನೀಡಲಾಗಿದೆ. ಔಷಧ, ಲಘು ಉಪಾಹಾರ, ಕುಡಿಯುವ ನೀರು, ಬಿಸ್ಕತ್ತು, ಒಣ ಹಣ್ಣು, ಗ್ಲುಕೋಮೀಟರ್, ಗ್ಲುಕೋಸ್ ಪರೀಕ್ಷಾ ಪಟ್ಟಿಯನ್ನು ತರಲು ಅನುವು ಮಾಡಿಕೊಡಲಾಗುವುದು. ಪರೀಕ್ಷೆ ಮಧ್ಯದಲ್ಲಿ ಅಗತ್ಯವಿದ್ದಲ್ಲಿ ಔಷಧ ಸೇವೆ, ರಕ್ತದಲ್ಲಿನ ಸಕ್ಕರೆ ಪರೀಕ್ಷಿಸಲು 15 ನಿಮಿಷಗಳ ಹೆಚ್ಚಿನ ಸಮಯದ ಅವಕಾಶ ನೀಡುವ ಬಗ್ಗೆ ಪರೀಕ್ಷಾ ಕೇಂದ್ರದ ಮುಖ್ಯಸ್ಥರು ಕ್ರಮ ತೆಗೆದುಕೊಳ್ಳುವಂತೆ ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಳಿಯ ಪರೀಕ್ಷಾ ವಿಭಾಗದ […]
ಕಾರ್ಕಳ: ವ್ಯಕ್ತಿ ನಾಪತ್ತೆ

ಕಾರ್ಕಳ: ಮುಂಡ್ಕೂರು ಗ್ರಾಮದ ಜಾರಿಗೆಕಟ್ಟೆ ನಿವಾಸಿ ಉದಯ್ ಕುಮಾರ್ (38) ಎಂಬವರು ಮಾರ್ಚ್ 25 ರಂದು ತಂದೆಯ ಮನೆಯಾದ ಕಾಂತಾವರ ಗ್ರಾಮದ ಬೇಲಾಡಿಯ ಮನೆಯಿಂದ ಹೋದವರು ವಾಪಾಸು ಬಾರದೇ ನಾಪತ್ತೆಯಾಗಿರುತ್ತಾರೆ. 5 ಅಡಿ 6 ಇಂಚು ಎತ್ತರ, ಗೋಧಿ ಮೈಬಣ್ಣ, ಕೋಲು ಮುಖ, ಸಪೂರ ಶರೀರ ಹೊಂದಿದ್ದು, ಕನ್ನಡ ಹಾಗೂ ತುಳು ಭಾಷೆ ಮಾತನಾಡುತ್ತಾರೆ. ಇವರ ಬಗ್ಗೆ ಮಾಹಿತಿ ದೊರೆತಲ್ಲಿ ಕಾರ್ಕಳ ಗ್ರಾಮಾಂತರ ಪೊಲೀಸ್ ಠಾಣಾಧಿಕಾರಿಯನ್ನು ಸಂಪರ್ಕಿಸಬಹುದಾಗಿದೆ ಎಂದು ಪ್ರಕಟಣೆ ತಿಳಿಸಿದೆ.
ಆಟೋರಿಕ್ಷಾಗಳಲ್ಲಿ ರಾಜಕೀಯ ಸಂಬಂಧಿತ ಪೋಸ್ಟರ್‌ಗಳ ತೆರವಿಗೆ ಸೂಚನೆ

ಉಡುಪಿ: ರಾಜ್ಯ ವಿಧಾನಸಭೆ ಚುನಾವಣೆ – 2023 ಕ್ಕೆ ಸಂಬಂಧಿಸಿದಂತೆ ನೀತಿ ಸಂಹಿತೆ ಜಾರಿಯಲ್ಲಿರುವ ಹಿನ್ನೆಲೆ, ಜಿಲ್ಲೆಯ ಎಲ್ಲಾ ಆಟೋರಿಕ್ಷಾಗಳಲ್ಲಿ ರಾಜಕೀಯ ಸಂಬಂಧಿತ ಪೋಸ್ಟರ್‌ಗಳನ್ನು ತೆರವುಗೊಳಿಸಬೇಕು ಮತ್ತು ಯಾವುದೇ ರೀತಿಯ ರಾಜಕೀಯ ಸಂಬಂಧಿತ ಪೋಸ್ಟರ್‌ಗಳನ್ನು ಅಳವಡಿಸದಂತೆ ಆಟೋರಿಕ್ಷಾ ಚಾಲಕರು ಹಾಗೂ ಮಾಲಕರು ಕ್ರಮಕೈಗೊಳ್ಳಬೇಕು. ತಪ್ಪಿದ್ದಲ್ಲಿ ಅಂತಹ ವಾಹನಗಳ ಪರವಾನಿಗೆಯನ್ನು ರದ್ದುಗೊಳಿಸಿ, ಎಫ್.ಐ.ಆರ್ ದಾಖಲಿಸಲು ಶಿಫಾರಸು ಮಾಡಲಾಗುವುದು ಎಂದು ಜಿಲ್ಲಾ ಪ್ರಾದೇಶಿಕ ಸಾರಿಗೆ ಅಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.