ಮಂಗಳೂರು: ಚಿತ್ರ ನಟಿ ಪೂಜಾ ಹೆಗ್ಡೆ ಅಣ್ಣನ ಮದುವೆಯಲ್ಲಿ ಸಲ್ಮಾನ್ ಖಾನ್ ಭಾಗಿ

ಮಂಗಳೂರು: ಮಂಗಳೂರಿನಲ್ಲಿ ನಡೆದ ಪೂಜಾ ಹೆಗ್ಡೆ ಸಹೋದರನ ಮದುವೆಯಲ್ಲಿ ಚಿತ್ರನಟ ಸಲ್ಮಾನ್ ಭಾಗವಹಿಸಿರುವ ಚಿತ್ರಗಳು ಕಂಡುಬಂದಿವೆ. ಮುಂಬರುವ ಚಿತ್ರ ಕಿಸಿ ಕಾ ಭಾಯ್ ಕಿಸಿ ಕಿ ಜಾನ್‌ನಲ್ಲಿ ಪೂಜಾ ಹೆಗ್ಡೆ ಸಲ್ಮಾನ್ ಎದುರು ಜೋಡಿಯಾಗಿದ್ದಾರೆ. ಪೂಜಾ ಹೆಗ್ಡೆ ಅವರ ಸಹೋದರ ರಿಷಬ್ ಹೆಗ್ಡೆ ಜನವರಿ 30 ರಂದು ಶಿವಾನಿ ಶೆಟ್ಟಿ ಅವರನ್ನು ವಿವಾಹವಾಗಿದ್ದಾರೆ.ಅಂತರ್ಜಾಲದಲ್ಲಿ ಹರಿದಾಡುತ್ತಿರುವ ವೈರಲ್ ಚಿತ್ರವೊಂದರಲ್ಲಿ, ಪೂಜಾ ಮತ್ತು ಸಲ್ಮಾನ್ ಖಾನ್ ನವವಿವಾಹಿತರೊಂದಿಗೆ ಪೋಸ್ ನೀಡುತ್ತಿರುವುದನ್ನು ಕಾಣಬಹುದು. ಪೂಜಾ ಹೆಗ್ಡೆ ಕೂಡ ತಮ್ಮ ಇನ್‌ಸ್ಟಾಗ್ರಾಮ್ ಹ್ಯಾಂಡಲ್ […]
ಪರೀಕ್ಷಾ ಕೊಠಡಿಯಲ್ಲಿ 500 ವಿದ್ಯಾರ್ಥಿನಿಯರನ್ನು ಕಂಡು ಮೂರ್ಛೆ ಹೋದ ಹುಡುಗ: ಬಿಹಾರದಲ್ಲೊಂದು ಅಡ್ಮಿಟ್ ಕಾರ್ಡ್ ಅವಾಂತರ

ಪಟ್ನಾ: ಪರೀಕ್ಷಾ ಕೊಠಡಿಯಲ್ಲಿ 500 ವಿದ್ಯಾರ್ಥಿನಿಯರ ನಡುವೆ ಏಕಾಂಗಿಯಾಗಿದ್ದ ವಿದ್ಯಾರ್ಥಿಯೊಬ್ಬ ಪ್ರಜ್ಞೆ ತಪ್ಪಿ ಬಿದ್ದ ಪ್ರಕರಣವೊಂದು ಬಿಹಾರದಿಂದ ವರದಿಯಾಗಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಬಹಳ ಸದ್ದು ಮಾಡುತ್ತಿದೆ. 12ನೇ ತರಗತಿಯ ಮನೀಷ್ ಶಂಕರ್ ಎನ್ನುವ ಈ ವಿದ್ಯಾರ್ಥಿಯ ಪ್ರವೇಶ ಪತ್ರದಲ್ಲಿ ಆತನ ಲಿಂಗದ ಜಾಗದಲ್ಲಿ ‘ಗಂಡು’ ಬದಲಿಗೆ ‘ಹೆಣ್ಣು’ ಎಂದು ತಪ್ಪಾಗಿ ಬರೆದಿರುವುದೆ ಈ ಘಟನೆಗೆ ಕಾರಣ ಎಂದು ಹೇಳಲಾಗಿದೆ. ತಪ್ಪಾಗಿ ನಮೂದಾದ ಲಿಂಗದ ಕಾರಣದಿಂದಾಗಿ ಅವನು ಬರೇ ಹುಡುಗಿಯರೇ ತುಂಬಿದ್ದ ಪರೀಕ್ಷಾ ಕೇಂದ್ರದಲ್ಲಿ ಪರೀಕ್ಷೆ ಬರೆಯಬೇಕಾಗಿ ಬಂದಿದೆ. […]
ಉನ್ನತಿ ಕರಿಯರ್ ಅಕಾಡೆಮಿಯಲ್ಲಿ ಬಹುಬೇಡಿಕೆಯ ಕೋರ್ಸ್ ಗಳು ಲಭ್ಯ

ಉಡುಪಿ: ಕೌಶಲ್ಯ ಶಿಕ್ಷಣಕ್ಕೆ ಪ್ರಸಿದ್ಧಿ ಪಡೆದಿರುವ ಹಾಗೂ ರಾಜ್ಯ ಕೌಶಲ್ಯಾಭಿವೃದ್ಧಿ ನಿಗಮದ ಪಾಲುದಾರ ಸಂಸ್ಥೆಯಾದ ಉಡುಪಿಯ ಉನ್ನತಿ ಕರಿಯರ್ ಅಕಾಡೆಮಿಯು ಈಗಾಗಲೇ 3000ಕ್ಕೂ ಅಧಿಕ ಅಭ್ಯರ್ಥಿಗಳಿಗೆ ಉದ್ಯೋಗಾವಕಾಶ ಕಲ್ಪಿಸಿದೆ. ಇದೀಗ ಜಿಲ್ಲೆಯ ಹಾಗೂ ರಾಜ್ಯದ ಇತರ ಯುವಕ-ಯುವತಿಯರಿಗೆ ಉತ್ತಮ ಭವಿಷ್ಯ ನಿರ್ಮಿಸಲು ಉದ್ಯೋಗ ಖಾತ್ರಿಯುಳ್ಳ ಎವಿಯೇಶನ್, ಟ್ರಾವೆಲ್ ಟೂರಿಸಂ, ಐಟಿ ಹಾಗೂ ಬ್ಯಾಂಕಿಂಗ್ ಕ್ಷೇತ್ರಗಳಲ್ಲಿ ಬಹುಬೇಡಿಕೆಯ ಕೋರ್ಸ್ ಗಳನ್ನು ಒದಗಿಸುತ್ತಿದೆ. ಏವಿಯೇಶನ್- ಟ್ರಾವೆಲ್ ಟೂರಿಸಂ ಕೋರ್ಸ್ ಗಳು ಅಂತಾರಾಷ್ಟ್ರೀಯ ಸಂಸ್ಥೆ ಐಎಟಿಎ ಮಾನ್ಯತೆ ಹೊಂದಿದ್ದು ದೇಶ ವಿದೇಶಗಳಲ್ಲಿ […]
ಸಂತೆಕಟ್ಟೆ ಸರ್ವೀಸ್ ರೋಡ್ ಕಾಮಗಾರಿಗಾಗಿ ಮರಗಳ ತೆರವು: ಸಾರ್ವಜನಿಕ ಅಹವಾಲು ಸಭೆ

ಉಡುಪಿ: ಉಡುಪಿ ತಾಲೂಕು ಸಂತೆಕಟ್ಟೆ ಜಂಕ್ಷನ್‌ನಿಂದ ಉಪ್ಪೂರು ಬ್ರಿಡ್ಜ್ ವರೆಗಿನ ರಾಷ್ಟ್ರೀಯ ಹೆದ್ದಾರಿ 66 ರ ಪಕ್ಕ ಸರ್ವೀಸ್ ರೋಡ್ ನಿರ್ಮಾಣಕ್ಕೆ ಅಡಚಣೆಯಾಗುವ ವಿವಿಧ ಜಾತಿಯ 109 ಮರಗಳನ್ನು ತೆರವುಗೊಳಿಸುವ ಹಿನ್ನೆಲೆ, ಫೆಬ್ರವರಿ 6 ರಂದು ಬೆಳಗ್ಗೆ 11 ಗಂಟೆಗೆ ಉಡುಪಿ ವಲಯ ಅರಣ್ಯಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಸಾರ್ವಜನಿಕ ಅಹವಾಲು ಸಭೆ ನಡೆಯಲಿದೆ. ಈ ಕುರಿತು ಆಕ್ಷೇಪಣೆಗಳಿದ್ದಲ್ಲಿ ಸಾರ್ವಜನಿಕರು ಸಭೆಯಲ್ಲಿ ಹಾಜರಾಗಿ ಅಥವಾ ಸದ್ರಿ ದಿನಾಂಕದ ಒಳಗೆ ವೃಕ್ಷ ಅಧಿಕಾರಿ ಹಾಗೂ ಉಪ ಅರಣ್ಯ ಸಂರಕ್ಷಣಾಧಿಕಾರಿ, ಕುಂದಾಪುರ […]