ಉನ್ನತಿ ಕರಿಯರ್ ಅಕಾಡೆಮಿಯಲ್ಲಿ ಬಹುಬೇಡಿಕೆಯ ಕೋರ್ಸ್ ಗಳು ಲಭ್ಯ

ಉಡುಪಿ: ಕೌಶಲ್ಯ ಶಿಕ್ಷಣಕ್ಕೆ ಪ್ರಸಿದ್ಧಿ ಪಡೆದಿರುವ ಹಾಗೂ ರಾಜ್ಯ ಕೌಶಲ್ಯಾಭಿವೃದ್ಧಿ ನಿಗಮದ ಪಾಲುದಾರ ಸಂಸ್ಥೆಯಾದ ಉಡುಪಿಯ ಉನ್ನತಿ ಕರಿಯರ್ ಅಕಾಡೆಮಿಯು ಈಗಾಗಲೇ 3000ಕ್ಕೂ ಅಧಿಕ ಅಭ್ಯರ್ಥಿಗಳಿಗೆ ಉದ್ಯೋಗಾವಕಾಶ ಕಲ್ಪಿಸಿದೆ. ಇದೀಗ ಜಿಲ್ಲೆಯ ಹಾಗೂ ರಾಜ್ಯದ ಇತರ ಯುವಕ-ಯುವತಿಯರಿಗೆ ಉತ್ತಮ ಭವಿಷ್ಯ ನಿರ್ಮಿಸಲು ಉದ್ಯೋಗ ಖಾತ್ರಿಯುಳ್ಳ ಎವಿಯೇಶನ್, ಟ್ರಾವೆಲ್ ಟೂರಿಸಂ, ಐಟಿ ಹಾಗೂ ಬ್ಯಾಂಕಿಂಗ್ ಕ್ಷೇತ್ರಗಳಲ್ಲಿ ಬಹುಬೇಡಿಕೆಯ ಕೋರ್ಸ್ ಗಳನ್ನು ಒದಗಿಸುತ್ತಿದೆ. ಏವಿಯೇಶನ್- ಟ್ರಾವೆಲ್ ಟೂರಿಸಂ ಕೋರ್ಸ್ ಗಳು ಅಂತಾರಾಷ್ಟ್ರೀಯ ಸಂಸ್ಥೆ ಐಎಟಿಎ ಮಾನ್ಯತೆ ಹೊಂದಿದ್ದು ದೇಶ ವಿದೇಶಗಳಲ್ಲಿ ಉದ್ಯೋಗ ಪಡೆಯಲು ಅತ್ಯಂತ ಸಹಕಾರಿಯಾಗಲಿದೆ.

ಹಾಗೆಯೇ ಹೆಚ್ಚಿನ ಬೇಡಿಕೆಯಿರುವ ಮಾಹಿತಿ ತಂತ್ರಜ್ಞಾನ ಕ್ಷೇತ್ರದ ಕ್ಲೌಡ್ ಕಂಪ್ಯೂಟಿಂಗ್, ಫ್ರಂಟ್ ಎಂಡ್ ಡೆವಲಪ್ಮೆಂಟ್, ಬ್ಯಾಕ್ ಎಂಡ್ ಡೆವಲಪ್ಮೆಂಟ್ ಅಥವಾ ಫುಲ್ ಸ್ಟಾಕ್ ಡೆವಲಪ್ಮೆಂಟ್ ತಂತ್ರಜ್ಞಾನದಲ್ಲಿ ಇಂಟರ್ನ್ಶಿಪ್ ನೊಂದಿಗೆ ಪರಿಣಿತಿ ಹೊಂದಲು ತರಬೇತಿಯನ್ನು ತಯಾರಿಸಲಾಗಿದೆ. ಹಾಗೆಯೇ ಇಂದಿನ ಬ್ಯಾಂಕಿಂಗ್ – ಫೈನಾಶಿಯಲ್ ಕ್ಷೇತ್ರದಲ್ಲಿ ಅಗತ್ಯವಿರುವ ಡಿಜಿಟಲ್ ಬ್ಯಾಂಕಿಂಗ್, ಕಸ್ಟಮರ್ ಸರ್ವೀಸ್, ಕೆವೈಸಿ – ಎಎಂಎಲ್ ಕ್ಷೇತ್ರಗಳಲ್ಲಿ ಪ್ರಾಯೋಗಿಕವಾಗಿ ಕಲಿತು ಉತ್ತಮ ಅವಕಾಶ ಗಿಟ್ಟಿಸಲು ಅಡ್ವಾನ್ಸ್ ಬಿಎಫ್ಎಸ್ಐ ಕೋರ್ಸ್ ಗಳು ಉಪಯುಕ್ತ.

ಈ ಮೇಲಿನ ಎಲ್ಲಾ ಕೋರ್ಸ್ ಗಳ ತರಬೇತಿಯು ಕ್ಲಾಸ್ ರೂಮ್ ಅಥವಾ ಆನ್ ಲೈನ್ ಮುಖಾಂತರ ಲಭ್ಯವಿದ್ದು, ತರಬೇತಿಗಳು ಆಯಾ ಕ್ಷೇತ್ರದ ನುರಿತ ತಜ್ಞರಿಂದ ಪ್ರಾಯೋಗಿಕವಾಗಿ ಕಲಿಯಬಹುದಾಗಿದೆ. ಈ ಕೋರ್ಸ್ ಗಳೊಂದಿಗೆ ಸಂದರ್ಶನ ಎದುರಿಸಲು ಅವಶ್ಯವಿರುವ ಕಮ್ಯುನಿಕೇಶನ್ ಸ್ಕಿಲ್ಸ್, ಆಪ್ಟಿಟ್ಯೂಡ್, ಬಿಸಿನೆಸ್ ಎಟಿಕ್ವೆಟ್ಸ್, ಕಂಪ್ಯೂಟರ್ ಸ್ಕಿಲ್ಸ್, ಗ್ರೂಪ್ ಡಿಸ್ಕಷನ್, ಮೋಕ್ ಇಂಟರ್ವ್ಯೂ ಗಳನ್ನೂ ಕಲಿಸಲಾಗುತ್ತದೆ.

ಸಂಸ್ಥೆಯಲ್ಲಿ ಕೋರ್ಸ್ ಮುಗಿಸಿದ ಅಭ್ಯರ್ಥಿಗಳಿಗೆ ನೇಮಕಾತಿ ಪಾಲುದಾರ ಕಂಪೆನಿಗಳಲ್ಲಿ ಉದ್ಯೋಗಾವಕಾಶವನ್ನು ಸಂಸ್ಥೆಯೇ ಕಲ್ಪಿಸಿಕೊಡಲಿದೆ.

ಹೆಚ್ಚಿನ ಮಾಹಿತಿಗಾಗಿ www.unnathi.careers ಅಥವಾ www.unnathijobs.com ಗೆ ಭೇಟಿ ನೀಡಬಹುದು ಎಂದು ಸಂಸ್ಥೆಯು ಪ್ರಕಟಣೆಯಲ್ಲಿ ತಿಳಿಸಿದೆ.