ಬ್ರಹ್ಮಾವರ: ಎಡಬೆಟ್ಟಿನಲ್ಲಿ ನ್ಯಾಯಬೆಲೆ ಅಂಗಡಿ ತೆರೆಯಲು ಅರ್ಜಿ ಆಹ್ವಾನ

ಬ್ರಹ್ಮಾವರ: ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯ ವತಿಯಿಂದ ಬ್ರಹ್ಮಾವರ ತಾಲೂಕು ಮೂಡಹಡು ಗ್ರಾಮದ ಎಡಬೆಟ್ಟು ಪ್ರದೇಶದಲ್ಲಿ ಹೊಸ ನ್ಯಾಯಬೆಲೆ ಅಂಗಡಿ ತೆರೆಯಲು ಅರ್ಜಿ ಆಹ್ವಾನಿಸಲಾಗಿದೆ. ರಾಜ್ಯ ಸರ್ಕಾರದ ಸ್ವಾಮ್ಯದ ನಿಗಮ/ ಉದ್ಯಮ ಅಥವಾ ಕಂಪೆನಿಗಳು ಅಥವಾ ಗ್ರಾಮ ಪಂಚಾಯತಿಗಳು, ನಗರ ಸ್ಥಳೀಯ ಸಂಸ್ಥೆಗಳು, ಸಂಘಗಳು, ತಾಲೂಕು ಕೃಷಿ ಪ್ರಾಥಮಿಕ ಸಂಘಗಳು, ಸಹಕಾರ ಮಾರಾಟ ಸಂಘಗಳು, ಪ್ರಾಥಮಿಕ ಕೃಷಿ ಸಹಕಾರ ಸಂಘ ಅಥವಾ ವಿ.ಎಸ್.ಎಸ್.ಎನ್, ಹಾಪ್‌ಕಾಮ್ಸ್, ನೋಂದಾಯಿತ ಸಹಕಾರ ಸಂಘಗಳು, ನೋಂದಾಯಿತ ಪ್ರಾಥಮಿಕ ಗ್ರಾಹಕ ಸಹಕಾರ ಸಂಘ, […]
ಅರೆಹೊಳೆ ಪ್ರತಿಷ್ಠಾನದ ನಂದಗೋಕುಲ ರಂಗ ಶಾಲೆ ಉದ್ಘಾಟನೆ

ಅರೆಹೊಳೆ: ಗ್ರಾಮೀಣ ಪ್ರದೇಶಗಳಲ್ಲಿ ನೃತ್ಯ ಸಂಗೀತ ನಾಟಕಗಳಂತಹ ಕಲೆಯನ್ನು ಮಕ್ಕಳಿಗೆ ಕಲಿಸುವ ಮೂಲಕ ಅರೆಹೊಳೆ ಪ್ರತಿಷ್ಠಾನವು ಕೈಗೊಂಡಿರುವ ಕೆಲಸಗಳು ಮಾದರಿಯಾಗಲಿದೆ ಎಂದು ಕರ್ಣಾಟಕ ಬ್ಯಾಂಕ್‌ನ ಮುಖ್ಯಕಾರ್ಯನಿರ್ವಹಣಾಧಿಕಾರಿ ಮಹಾಬಲೇಶ್ವರ ಎಂ ಎಸ್. ಹೇಳಿದರು. ಅವರು ಅರೆಹೊಳೆಯಲ್ಲಿ ಅರೆಹೊಳೆ ಪ್ರತಿಷ್ಠಾನವು ನಿರ್ಮಿಸಿರುವ ನಂದಗೋಕುಲ ರಂಗ ಶಾಲೆಯನ್ನು ಉದ್ಘಾಟಿಸಿ ಮಾತನಾಡುತ್ತಿದ್ದರು. ಶತಮಾನದ ಸಂಭ್ರಮದಲ್ಲಿರುವ ಕರ್ಣಾಟಕ ಬ್ಯಾಂಕ್ ಗ್ರಾಮೀಣ ಪ್ರದೇಶಗಳ ಅಗತ್ಯತೆಗಳನ್ನು ಪೂರೈಸಲು ಸದಾ ಶ್ರಮಿಸುತ್ತದೆ ಎಂದು ಅವರು ಹೇಳಿದರು. ಡಾ. ಹಂದಟ್ಟು ಹರೀಶ್ ಹಂದೆ ರಂಗ ಮಂದಿರವನ್ನು ಸೆಲ್ಕೋ ಲೈಟ್ ನ […]
ಜಾತಿ-ಆಧಾರಿತ ಅವಮಾನ ಉದ್ದೇಶವಿಲ್ಲದೆ ಸಂತ್ರಸ್ತರ ಜಾತಿಯನ್ನು ಉಲ್ಲೇಖಿಸುವುದು ಎಸ್‌ಸಿ/ಎಸ್‌ಟಿ ಕಾಯ್ದೆಯಡಿ ಅಪರಾಧವಲ್ಲ: ಕರ್ನಾಟಕ ಹೈಕೋರ್ಟ್

ಬೆಂಗಳೂರು: ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ (ಎಸ್‌ಸಿ/ಎಸ್‌ಟಿ) ಕಾಯ್ದೆ,1989 ರ ಅಡಿಯಲ್ಲಿ ವ್ಯಕ್ತಿಯನ್ನು ಅವಮಾನಿಸುವ ಉದ್ದೇಶವಿಲ್ಲದೆ ಕೇವಲ ವ್ಯಕ್ತಿಯ ಜಾತಿಯ ಹೆಸರನ್ನು ತೆಗೆದುಕೊಳ್ಳುವುದು ಅಪರಾಧ ಎಂದು ಪರಿಗಣಿಸಲಾಗುವುದಿಲ್ಲ ಎಂದು ಕರ್ನಾಟಕ ಹೈಕೋರ್ಟ್ ಶನಿವಾರ (28 ಜನವರಿ), ಅಭಿಪ್ರಾಯಪಟ್ಟಿದೆ. ನ್ಯಾಯಮೂರ್ತಿ ಎಂ ನಾಗಪ್ರಸನ್ನ ಅವರಿದ್ದ ಏಕಸದಸ್ಯ ಪೀಠವು ವಿ ಶೈಲೇಶ್ ಕುಮಾರ್ ಸಲ್ಲಿಸಿದ್ದ ಅರ್ಜಿಯನ್ನು ಭಾಗಶಃ ಅಂಗೀಕರಿಸಿತು ಮತ್ತು ಕಾಯಿದೆಯ ಸೆಕ್ಷನ್ 3 (1) (ಆರ್) ಮತ್ತು (ಎಸ್) ಅಡಿಯಲ್ಲಿ ಅವರ ವಿರುದ್ಧ ಹೊರಿಸಲಾದ ಆರೋಪಗಳನ್ನು ರದ್ದುಗೊಳಿಸಿತು, […]
ಕಾರ್ಕಳ: ಸ್ವರಾಜ್ಯ ಮೈದಾನದಲ್ಲಿ ಪೊಲೀಸ್ ಬ್ಯಾಂಡ್; ಪಂಜಿನ ಕವಾಯತು

ಕಾರ್ಕಳ: ಬೆಂಗಳೂರು ಮತ್ತು ಮೈಸೂರಿನಂತಹ ನಗರಗಳಿಗೆ ಸೀಮಿತವಾಗಿದ್ದ ಪೊಲೀಸ್ ಬ್ಯಾಂಡ್ ಮತ್ತು ಪಂಜಿನ ಕವಾಯತು ಕಾರ್ಯಕ್ರಮವನ್ನು ಕಾರ್ಕಳ ಸ್ವರಾಜ್ಯ ಮೈದಾನದಲ್ಲಿ ನಡೆಸಲಾಗಿದ್ದು, ಇದು ಸ್ವರ್ಣ ಕಾರ್ಕಳಕ್ಕೆ ಇನ್ನಷ್ಟು ಗರಿಮೆ, ಹೊಸತನ ನೀಡುವ ಪ್ರಯತ್ನ ಮಾಡಲಾಗುತ್ತಿದೆ ಎಂದು ಇಂಧನ ಸಚಿವ ವಿ.ಸುನಿಲ್ ಕುಮಾರ್ ಹೇಳಿದರು. ಪರಶುರಾಮ ಥೀಂ ಪಾರ್ಕ್ ಲೋಕಾರ್ಪಣೆ ನಿಮಿತ್ತ ಆಯೋಜಿಸಲಾಗಿದ್ದ ಪೊಲೀಸ್ ಬ್ಯಾಂಡ್ ಮತ್ತು ಪಂಜಿನ ಕವಾಯತು ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಈ ಸಂದರ್ಭದಲ್ಲಿ ವಿಧಾನ ಪರಿಷತ್ ಸದಸ್ಯ ಮಂಜುನಾಥ್ ಭಂಡಾರಿ, ಗೇರು ನಿಗಮದ ಅಧ್ಯಕ್ಷ […]
ಕಾರ್ಕಳ: ಬಗೆಬಗೆ ಮೀನಿನ ಖಾದ್ಯ ಸವಿದ ತುಳುನಾಡಿಗರು

ಕಾರ್ಕಳ: ಜ. 26 ರಿಂದ 30 ರ ವರೆಗೆ ಕಾರ್ಕಳದ ಯರ್ಲಪಾಡಿಯಲ್ಲಿ ಪರಶುರಾಮ ಥೀಮ್ ಪಾರ್ಕ್ ನ ಲೋಕಾರ್ಪಣೆ ಕಾರ್ಯಕ್ರಮದಲ್ಲಿ ಮಲ್ಪೆ ಮೀನುಗಾರರ ಉತ್ಪಾದಕ ಕಂಪನಿಯು ಆಹಾರ ಮಳಿಗೆ ಮತ್ತು ಕಂಪನಿಯ ಉತ್ಪನ್ನಗಳ ಪ್ರದರ್ಶನ ಮಳಿಗೆ ಹಾಕಿದ್ದು, ಕಂಪನಿಯ ಮೀನುಗಾರ ಮಹಿಳೆಯರು, ಆಹಾರ ಮಳಿಗೆಯಲ್ಲಿ ವಿವಿಧ ಮೀನಿನ ಖಾದ್ಯಗಳು, ಶುಚಿ ರುಚಿಯಾದ ಅಡುಗೆಗಳನ್ನು ಮಾರಾಟಕ್ಕಿಟ್ಟಿದ್ದರು. ಉತ್ಪನ್ನಗಳ ಪ್ರದರ್ಶನದ ಮಳಿಗೆಯಲ್ಲಿ ಕಂಪನಿಯ ಸದಸ್ಯರು ತಯಾರಿಸಿದ ಮೀನಿನ ಉಪ್ಪಿನಕಾಯಿ, ಚಟ್ನಿ ಪುಡಿ, ಒಣ ಮೀನು, ಮೀನಿನ ಚಕ್ಕುಲಿ, ಮೀನಿನ ಹಪ್ಪಳ […]