ಚಾಲಕನ ನಿಯಂತ್ರಣ ತಪ್ಪಿ ರಸ್ತೆ ಬದಿಯ ದಿಬ್ಬಕ್ಕೆ ಢಿಕ್ಕಿ ಹೊಡೆದ ಕಾರು: ಇಬ್ಬರಿಗೆ ಗಾಯ

ಕಾರ್ಕಳ: ಚಾಲಕನ ನಿಯಂತ್ರಣ ತಪ್ಪಿ ಕಾರೊಂದು ರಸ್ತೆ ಬದಿಯ ದಿಬ್ಬಕ್ಕೆ ಬಡಿದು ಮಗುಚಿ ಬಿದ್ದು ಪ್ರಯಾಣಿಕರು ಗಾಯಗೊಂಡ ಘಟನೆ ನೀರೆ ಗುಡ್ಡೆಯಂಗಡಿ ಬಳಿಯಲ್ಲಿ ಮಂಗಳವಾರ ನಡೆದಿದೆ. ಪ್ರಯಾಣಿಕರು ಪುತ್ತೂರು ಮೂಲದವರೆಂದು ತಿಳಿದು ಬಂದಿದೆ. ಉಡುಪಿಯಿಂದ ಕಾರ್ಕಳ ಕಡೆಗೆ ಬರುತ್ತಿದ್ದ ಕಾರು ಚಾಲಕನ ನಿಯಂತ್ರಣ ಕಳೆದುಕೊಂಡು ಈ ಘಟನೆ ನಡೆದಿದೆ. ಘಟನೆಯಲ್ಲಿ ಕಾರು ಸಂಪೂರ್ಣ ಜಖಂಗೊಂಡಿದ್ದು ಕಾರಿನಲ್ಲಿದ್ದ ಇಬ್ಬರು ಪ್ರಯಾಣಿಕರು ಗಾಯಗೊಂಡಿದ್ದು ಆಸ್ಪತ್ರೆಗೆ ದಾಖಲಿಸಲಾಗಿದೆ.

ಅತಿಯಾದ ಮೊಬೈಲ್ ಬಳಕೆಗೆ ತಾಯಿ ಬೈದಿದ್ದಕ್ಕೆ ಬಾಲಕ ಆತ್ಮಹತ್ಯೆ

ಮಂಗಳೂರು: ಅತಿಯಾದ ಮೊಬೈಲ್ ಬಳಕೆಗೆ ತಾಯಿ ಬೈದಿದ್ದಕ್ಕೆ ಇಲ್ಲಿನ ಖಾಸಗಿ ಶಾಲೆಯೊಂದರಲ್ಲಿ ಓದುತ್ತಿದ್ದ 9ನೇ ತರಗತಿ ವಿದ್ಯಾರ್ಥಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಜನವರಿ 30ರಂದು ನಡೆದಿದೆ. ಮೃತ ಬಾಲಕನನ್ನು ಜ್ಞಾನೇಶ್(14) ಎಂದು ಗುರುತಿಸಲಾಗಿದೆ. ಪದವು ಬಿ ಹಳ್ಳಿಯ ಕೋಟಿಮುರದಲ್ಲಿರುವ ರೆಡ್ ಬ್ರಿಕ್ಸ್ ಅಪಾರ್ಟ್‌ಮೆಂಟ್‌ನಲ್ಲಿ ವಾಸಿಸುತ್ತಿದ್ದ ಜ್ಞಾನೇಶ್, ಜಗದೀಶ್ ಮತ್ತು ವಿನಯಾ ದಂಪತಿಯ ಪುತ್ರ. ಈತ ನಿರಂತರವಾಗಿ ಮೊಬೈಲ್ ಬಳಸುತ್ತಿದ್ದ ಮತ್ತು ಈ ಕಾರಣಕ್ಕಾಗಿ ಈತನ ತಾಯಿ ಈತನಿಗೆ ಬೈದಿದ್ದಾರೆ. ತಾಯಿಯ ಬೈಗುಳದ ಬಳಿಕ, ಸ್ನಾನ ಮಾಡಿ ಬರುವುದಾಗಿ […]

ಮಣಿಪಾಲ: ಕೋಸ್ಟಲ್ ಸ್ಟಾರ್ ಮ್ಯೂಸಿಕ್ ಕ್ಲಬ್ ಉದ್ಘಾಟನೆ

ಮಣಿಪಾಲ: ಕೋಸ್ಟಲ್ ಸ್ಟಾರ್ ಮ್ಯೂಸಿಕ್ ಕ್ಲಬ್ ಮಣಿಪಾಲ ಇದರ ಉದ್ಘಾಟನಾ ಸಮಾರಂಭವು ಜ. 21 ರಂದು ಎಂ.ಜಿ.ಎಮ್ ಕಾಲೇಜಿನ ರವೀಂದ್ರ ಕಲಾ ಮಂಟಪದಲ್ಲಿ ಅದ್ದೂರಿಯಾಗಿ ನೆರವೇರಿತು. ಮುಖ್ಯ ಅತಿಥಿಗಳಾಗಿ ವಿದ್ವಾನ್ ಗುರುದಾಸ ಶೆಣೈ, ಟಿ. ರಂಗ ಪೈ, ತಲ್ಲೂರು ಶಿವಪ್ರಸಾದ್ ಶೆಟ್ಟಿ, ಡಾ. ನೀತಾ ಇನಾಂದಾರ್, ಚೇಂಪಿ ರಾಮಚಂದ್ರ ಭಟ್ ಇವರು ಆಗಮಿಸಿದ್ದರು. ಖ್ಯಾತ ಹಿನ್ನೆಲೆ ಗಾಯಕ ರವೀಂದ್ರ ಪ್ರಭು ಮುಲ್ಕಿ, ಶ್ರೀಮತಿ ಮಾಲಿನಿ ಪ್ರಸಾದ್, ಕುಮಾರಿ ಶರಧಿ ಪಾಟೀಲ್ ರ ನೇತೃತ್ವದಲ್ಲಿ ಸುಮಾರು 16 ಕ್ಕಿಂತಲೂ […]

ಸವಿತಾ ಸಮಾಜ ಬಾಂಧವರು ಸಮಾಜದಲ್ಲಿ ಮುಂದೆ ಬರಬೇಕು: ಕೆ. ಜಯಪ್ರಕಾಶ್ ಹೆಗ್ಡೆ

ಉಡುಪಿ: ಸವಿತಾ ಸಮಾಜದವರು ನಾವು ಎಲ್ಲರೂ ಸಮಾನರು ಎಂಬ ಭಾವನೆಯನ್ನು ಬೆಳೆಸಿ ಕೀಳರಿಮೆಯನ್ನು ಹೋಗಲಾಡಿಸಿ ಸಮಾಜದ ಮುಖ್ಯಧಾರೆಯಲ್ಲಿ ಒಂದಾಗಿ ಮುಂದೆ ಬರಬೇಕು. ಮಕ್ಕಳಿಗೆ ಶಿಕ್ಷಣ ಕೊಡಿಸಬೇಕು, ಮುಂದಿನ ಪೀಳಿಗೆಗೆ ಸಮಾಜದಲ್ಲಿ ಬದಲಾವಣೆ ತರಲು ನಿಮ್ಮಿಂದ ಸಾಧ್ಯವಿದೆ ಎಂದು ರಾಜ್ಯ ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷ ಕೆ. ಜಯಪ್ರಕಾಶ್ ಹೆಗ್ಡೆ ಹೇಳಿದರು. ಮಂಗಳವಾರದಂದು ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಹಾಗೂ ಕನ್ನಡ ಸಂಸ್ಕೃತಿ ಇಲಾಖೆ ಇವರ ಸಂಯುಕ್ತಾಶ್ರಯದಲ್ಲಿ ಜಿಲ್ಲಾ ಸವಿತಾ ಸಮಾಜ ಸಮುದಾಯದ ಸಭಾಂಗಣ ಅಂಬಲಪಾಡಿಯಲ್ಲಿ ಹಮ್ಮಿಕೊಳ್ಳಲಾದ ಸವಿತಾ ಮಹರ್ಷಿ […]

ಕನ್ನಡ ಪುಸ್ತಕ ನೀತಿ ಪುನರ್ ರಚನೆಗಾಗಿ ಸಾರ್ವಜನಿಕರಿಂದ ಸಲಹೆ ಆಹ್ವಾನ

ಉಡುಪಿ: ಕನ್ನಡ ಪುಸ್ತಕ ಲೋಕವು ಆಧುನಿಕ ಮಾಧ್ಯಮಗಳ ನೂತನ ಆವಿಷ್ಕಾರಗಳ ಫಲವಾಗಿ ವಿಸ್ತಾರಗೊಳ್ಳುತ್ತಿದೆ. ಪುಸ್ತಕೋದ್ಯಮದ ಎಲ್ಲಾ ಸಾಧ್ಯತೆ ಮತ್ತು ಸವಾಲುಗಳನ್ನು ಹೊಸ ದೃಷ್ಠಿಕೋನದಿಂದ ನೋಡುವ ಅಗತ್ಯತೆ ಇರುವುದರಿಂದ ಕನ್ನಡ ಪುಸ್ತಕ ನೀತಿಯನ್ನು ಪುನರ್ ರಚಿಸಲು ನಿರ್ಧರಿಸಲಾಗಿದೆ. ಇ-ಪುಸ್ತಕ, ಆಡಿಯೋ ಪುಸ್ತಕ ಒಳಗೊಂಡಂತೆ ಆಧುನಿಕ ಪುಸ್ತಕೋದ್ಯಮದ ಸಾಧಕ-ಬಾಧಕಗಳು ಹಾಗೂ ಕನ್ನಡ ಪುಸ್ತಕ ಲೋಕದ ಸಮಗ್ರ ಅಭಿವೃದ್ಧಿಗೆ ಪೂರಕವಾಗಿ ಪುಸ್ತಕ ನೀತಿ ರಚನೆ ಆಗಬೇಕಿದ್ದು, ಇದಕ್ಕಾಗಿ ಕನ್ನಡ ಪುಸ್ತಕ ಪ್ರಾಧಿಕಾರದ ವತಿಯಿಂದ ಕನ್ನಡ ಪುಸ್ತಕ ನೀತಿ ಪುನರ್ ರಚನೆಗೆ ಸಾರ್ವಜನಿಕರಿಂದ […]