ಅರೆಹೊಳೆ ಪ್ರತಿಷ್ಠಾನದ ನಂದಗೋಕುಲ ರಂಗ ಶಾಲೆ ಉದ್ಘಾಟನೆ

ಅರೆಹೊಳೆ: ಗ್ರಾಮೀಣ ಪ್ರದೇಶಗಳಲ್ಲಿ ನೃತ್ಯ ಸಂಗೀತ ನಾಟಕಗಳಂತಹ ಕಲೆಯನ್ನು ಮಕ್ಕಳಿಗೆ ಕಲಿಸುವ ಮೂಲಕ ಅರೆಹೊಳೆ ಪ್ರತಿಷ್ಠಾನವು ಕೈಗೊಂಡಿರುವ ಕೆಲಸಗಳು ಮಾದರಿಯಾಗಲಿದೆ ಎಂದು ಕರ್ಣಾಟಕ ಬ್ಯಾಂಕ್‌ನ ಮುಖ್ಯಕಾರ್ಯನಿರ್ವಹಣಾಧಿಕಾರಿ ಮಹಾಬಲೇಶ್ವರ ಎಂ ಎಸ್. ಹೇಳಿದರು.

ಅವರು ಅರೆಹೊಳೆಯಲ್ಲಿ ಅರೆಹೊಳೆ ಪ್ರತಿಷ್ಠಾನವು ನಿರ್ಮಿಸಿರುವ ನಂದಗೋಕುಲ ರಂಗ ಶಾಲೆಯನ್ನು ಉದ್ಘಾಟಿಸಿ ಮಾತನಾಡುತ್ತಿದ್ದರು.

ಶತಮಾನದ ಸಂಭ್ರಮದಲ್ಲಿರುವ ಕರ್ಣಾಟಕ ಬ್ಯಾಂಕ್ ಗ್ರಾಮೀಣ ಪ್ರದೇಶಗಳ ಅಗತ್ಯತೆಗಳನ್ನು ಪೂರೈಸಲು ಸದಾ ಶ್ರಮಿಸುತ್ತದೆ ಎಂದು ಅವರು ಹೇಳಿದರು.

ಡಾ. ಹಂದಟ್ಟು ಹರೀಶ್ ಹಂದೆ ರಂಗ ಮಂದಿರವನ್ನು ಸೆಲ್ಕೋ ಲೈಟ್ ನ ಸಿಇಒ. ಮೋಹನ್ ಭಾಸ್ಕರ ಹೆಗಡೆಯವರು ಉದ್ಘಾಟಿಸಿ, ಪ್ರಕೃತಿಯ ಮಡಿಲಲ್ಲಿರುವ ಈ ರಂಗ ಕೇಂದ್ರ ರಾಷ್ಟ್ರವ್ಯಾಪಿಯಾಗಲಿ ಎಂದು ಹಾರೈಸಿದರು.

ಧರ್ಮದರ್ಶಿ ಡಾ. ಹರಿಕೃಷ್ಣ ಪುನರೂರು ಅಧ್ಯಕ್ಷತೆ ವಹಿಸಿದ್ದರು.

ಚಲನಚಿತ್ರ ನಟ ರಮೇಶ್ ಭಟ್ ಹಾಗೂ ಪಿ ರತ್ನಾಕರ್ ಇವರು ಶಾಂತಾ ರತ್ನಾಕರ್ ವನವೇದಿಕೆಯನ್ನು ಉದ್ಘಾಟಿಸಿದರು.

ಬೈಂದೂರಿನ ಶಾಸಕ ಬಿ. ಎಂ. ಸುಕುಮಾರ್ ಶೆಟ್ಟಿ, ಚಲನಚಿತ್ರ ನಟ ರಾಮಕೃಷ್ಣ ನೀರ್ನಳ್ಳಿ, ಮಾನಸಿ ಸುಧೀರ್, ನೀಲಾವರ ಸುರೇಂದ್ರ ಅಡಿಗ, ಎಸ್. ಜನಾರ್ಧನ್, ಪ್ರಮೋದ್ ಪೂಜಾರಿ, ಕೆ.ಸಿ.ಪ್ರಭು, ಡಾ. ಕೇದಿಗೆ ಅರವಿಂದ ರಾವ್, ಶ್ಯಾಮಲ ಕುಂದರ್, ಸುಮಿತ್ರಾ ಶೆಟ್ಟಿ, ಎ. ಶಿವರಾಮ, ಉದಯ ಎನ್ ಶೆಟ್ಟಿ ಉಪಸ್ಥಿತರಿದ್ದರು.

ಇದೇ ಸಂದರ್ಭದಲ್ಲಿ ವಿವಿಧ ಕ್ಷೇತ್ರದ ಸಾಧನೆಗಾಗಿ ಗೋವಿಂದ ಬಾಬು ಪೂಜಾರಿ, ಡಾಸಿ.ಜೆ ಶಶಿಧರ್, ಶಂಕರ್ ಕುಂದರ್, ರಾಮಯ್ಯ ಬಳೆಗಾರರನ್ನು ಸನ್ಮಾನಿಸಲಾಯಿತು.

ಅರೆಹೊಳೆ ಸದಾಶಿವ ರಾವ್ ಸ್ವಾಗತಿಸಿದರು, ಮಾಧುರಿ ಶ್ರೀರಾಮ್ ನಿರೂಪಿಸಿದರು.

ನಂತರ ತೆಕ್ಕಟ್ಟೆಯ ಯಶಸ್ವಿ ಕಲಾ ವೃಂದ ಮಕ್ಕಳ ಮೇಳದಿಂದ ಹೂವಿನ ಕೋಲು, ಶಂಭು ಶಿಷ್ಯ ಯಕ್ಷಗಾನ ಪ್ರತಿಷ್ಠಾನದ ಕಲಾವಿದರಿಂದ ಯಕ್ಷಗಾನ ಪ್ರದರ್ಶನ ನಡೆಯಿತು. ಕಾರ್ಯಕ್ರಮದ ಆರಂಭದಲ್ಲಿ ನಂದಗೋಕುಲ ನೃತ್ಯ ತರಗತಿಯ ವಿವಿಧ ಶಾಖೆಯ ವಿದ್ಯಾರ್ಥಿಗಳಿಂದ ನೃತ್ಯಾರ್ಪಣ ಕಾರ್ಯಕ್ರಮವು ನಡೆಯಿತು.