ಮಣಿಪಾಲ: ಕೋಸ್ಟಲ್ ಸ್ಟಾರ್ ಮ್ಯೂಸಿಕ್ ಕ್ಲಬ್ ಉದ್ಘಾಟನೆ

ಮಣಿಪಾಲ: ಕೋಸ್ಟಲ್ ಸ್ಟಾರ್ ಮ್ಯೂಸಿಕ್ ಕ್ಲಬ್ ಮಣಿಪಾಲ ಇದರ ಉದ್ಘಾಟನಾ ಸಮಾರಂಭವು ಜ. 21 ರಂದು ಎಂ.ಜಿ.ಎಮ್ ಕಾಲೇಜಿನ ರವೀಂದ್ರ ಕಲಾ ಮಂಟಪದಲ್ಲಿ ಅದ್ದೂರಿಯಾಗಿ ನೆರವೇರಿತು.

ಮುಖ್ಯ ಅತಿಥಿಗಳಾಗಿ ವಿದ್ವಾನ್ ಗುರುದಾಸ ಶೆಣೈ, ಟಿ. ರಂಗ ಪೈ, ತಲ್ಲೂರು ಶಿವಪ್ರಸಾದ್ ಶೆಟ್ಟಿ, ಡಾ. ನೀತಾ ಇನಾಂದಾರ್, ಚೇಂಪಿ ರಾಮಚಂದ್ರ ಭಟ್ ಇವರು ಆಗಮಿಸಿದ್ದರು.

ಖ್ಯಾತ ಹಿನ್ನೆಲೆ ಗಾಯಕ ರವೀಂದ್ರ ಪ್ರಭು ಮುಲ್ಕಿ, ಶ್ರೀಮತಿ ಮಾಲಿನಿ ಪ್ರಸಾದ್, ಕುಮಾರಿ ಶರಧಿ ಪಾಟೀಲ್ ರ ನೇತೃತ್ವದಲ್ಲಿ ಸುಮಾರು 16 ಕ್ಕಿಂತಲೂ ಹೆಚ್ಚು ಗಾಯಕ ಗಾಯಕಿಯರಿಂದ ಎರಡು ಗಂಟೆಗಳ ಕಾಲ ಸಂಗೀತ ರಸಮಂಜರಿ ಕಾರ್ಯಕ್ರಮವು ಜರುಗಿತು.

ಮ್ಯೂಸಿಕ್ ಕ್ಲಬ್ ನ ಸದಸ್ಯರಾಗಲು ಇಚ್ಛಿಸುವವರು ಹೆಚ್ಚಿನ ಮಾಹಿತಿಗಾಗಿ ಪ್ರಕಾಶ್ ಕಾಮತ್: 9845087714 ಇವರನ್ನು ಸಂಪರ್ಕಿಸಬಹುದು.