ತುಳು ಚಿತ್ರರಂಗದಲ್ಲಿ ಕ್ರಾಂತಿ ಮೂಡಿಸಿದ  ‘ಶಕಲಕ ಬೂಂ ಬೂಂ’: ಎರಡನೇ ವಾರವು ಭರ್ಜರಿ ಪ್ರದರ್ಶನ

ಜನ ಮೆಚ್ಚಿದ ಚಿತ್ರ ಶಕಲಕ ಬೂಂ ಬೂಂ ತುಳು ಚಿತ್ರರಂಗದಲ್ಲಿ ಏಕತಾನೆತೆಯಿಂದ ವಿಭಿನ್ನತೆಗೆ ಕೊಂಡೊಯ್ಯುವ ಸಾಹಸವನ್ನು ಯು.ಎನ್ ಸಿನಿಮಾಸ್ ಉಡುಪಿ ಮಾಡಿದಲ್ಲದೆ ಚಿತ್ರದ ಕಥೆ,ನಿರ್ಮಾಣ,ಛಾಯಗ್ರಹಣ,ಹಾಡುಗಳು ಎಲ್ಲರ ಮನ ಮುಟ್ಟುತ್ತಿರುವುದು ಅತೀವ ಸಂತಸದ ವಿಚಾರ.
ಚಿತ್ರ ವೀಕ್ಷಿಸಿದ ಎಲ್ಲರೂ ಅತ್ಯುತ್ತಮ ಚಿತ್ರ ,ಒಳ್ಳೆಯ ಸಂದೇಶ ಹಾಗೂ ಸಾಮಾಜಿಕ ಕಳಕಳಿಯನ್ನು ಹೊತ್ತು ವಿಭಿನ್ನವಾಗಿದೆ ಎಂದು ಪ್ರಶಂಸಿರುವರು.ಶ್ರೀಶ ನಾಯಕ್ ಎಳ್ಳಾರೆ ಯುವ ನಿರ್ದೇಶಕ ನಿರ್ದೇಶಿಸಿದ ಪ್ರಥಮ ಚಿತ್ರವಾದರೂ ಅತ್ಯದ್ಭುತವಾಗಿ ನಿರ್ದೇಶಿಸಿರುವರು.
ತುಳು ಚಿತ್ರರಂಗದಲ್ಲಿ ನೂತನ ಪ್ರತಿಭೆಗಳನ್ನು ರಂಗಕ್ಕೆ ಪರಿಚಯಿಸಿದಲ್ಲದೇ ನೈಜವಾದ ಅಭಿನಯ ರಂಗದಲ್ಲಿ ಮೂಡಿ ಬಂದಿರುವುದು ಎದ್ದು ಕಾಣುತ್ತದೆ.
ಯಶಸ್ವಿಯಾಗಿ 2 ನೇ ವಾರ ಚಿತ್ರಮಂದಿರದಲ್ಲಿ  ಭರ್ಜರಿ ಪ್ರದರ್ಶನಗೊಳ್ಳುತ್ತಿದ್ದು ತುಳು ಚಿತ್ರರಂಗದಲ್ಲಿ ಕ್ರಾಂತಿಯನ್ನು ಹುಟ್ಟಿಸಿದೆ.
ಚಿತ್ರದಲ್ಲಿ ಸಾಮಾಜಿಕ ಪಿಡುಗುಗಳು,ಮಾದಕ ವಸ್ತುಗಳು ವಿದ್ಯಾರ್ಥಿಗಳ ಮೇಲೆ ಬೀರುತ್ತಿರುವ ಪರಿಣಾಮ ,ಹೆಣ್ಣು ಮಕ್ಕಳಿಗೆ  ಸಮಾಜದಲ್ಲಿ ಸಿಗುವ ಸ್ಥಾನಮಾನ,ದುರ್ಗತಿ,ಯಾರ ಮನೆಯಲ್ಲಿ ಶಾಲಾ-ಕಾಲೇಜು ಹೋಗುವ ಹೆಣ್ಣುಮಕ್ಕಳು,ಗಂಡುಮಕ್ಕಳು  ಇರುವರೋ, ಅಂಥವರ ಪೋಷಕರು ತಮ್ಮ ಮಕ್ಕಳೊಂದಿಗೆ ವೀಕ್ಷಿಸಲೇ ಬೇಕಾದ ಚಿತ್ರವಿದು.ಸಾಮಾಜಿಕ ಕಳಕಳಿ ನೀತಿಯನ್ನು ಸಿನೆಮಾದಲ್ಲಿ ವಿಶಿಷ್ಟವಾಗಿ ಬಿಂಬಿಸಲಾಗಿದೆ.
ತುಳುನಾಡಿನಲ್ಲಿ ವಿಭಿನ್ನತೆಗೆ ಒತ್ತು ನೀಡಿ ಮಾಡಿರುವ ಈ ಚಿತ್ರಕ್ಕೆ ತುಳುನಾಡಿನ ಸಮಸ್ತ ಬಂಧುಗಳು ಚಿತ್ರ ವೀಕ್ಷಿಸಿ ನಮ್ಮ ತಂಡಕ್ಕೆ ಹುರಿದುಂಬಿಸಿ ಹಾಗೂ ನೀವೆಲ್ಲರೂ ಚರ್ಮ ಮತ್ತು ಅಂಗಾಂಗ ದಾನದಂತಹ ಮಹತ್ ಕಾರ್ಯದಲ್ಲಿ ಕೈ ಜೋಡಿಸಿ ಜೀವನ ಸಾರ್ಥಕಗೊಳಿಸಿ ಎಂದು ನಿರ್ಮಾಪಕರಾದ ನಿತ್ಯಾನಂದ ನರಸಿಂಗೆ ಪತ್ರಿಕಾ ಪ್ರಕಟನೆಯಲ್ಲಿ ತಿಳಿಸಿರುತ್ತಾರೆ.