1 ಶತಕೋಟಿ ಹಣ್ಣಿನ ಮರಗಳನ್ನು ಬೆಳೆಸಿ ಜಾಗತಿಕ ತಾಪಮಾನ ಕಡಿಮೆಗೊಳಿಸಲು ನಾಗಾಲ್ಯಾಂಡ್ ಪಣ: ಫ್ರುಟ್ ಹಬ್ ಆಫ್ ಇಂಡಿಯಾ ಆಗುವತ್ತ ಈಶಾನ್ಯರಾಜ್ಯ
ಭಾರತದ ಈಶಾನ್ಯ ರಾಜ್ಯವಾದ ನಾಗಾಲ್ಯಾಂಡ್ ಸ್ಥಳೀಯವಾಗಿ ಬೆಳೆಯುವ ಹಣ್ಣುಗಳಿಗೆ ಹೆಸರುವಾಸಿಯಾಗಿದೆ. ಸ್ಥಳೀಯವಾಗಿ ಬೆಳೆಯುವ ವಿಲಕ್ಷಣ ಹಣ್ಣುಗಳು ಅತ್ಯಂತ ರುಚಿಯಾಗಿದ್ದು ಅಂತರರಾಷ್ಟ್ರೀಯ ಮಾರುಕಟ್ಟೆಯನ್ನು ಆಕರ್ಷಿಸುತ್ತವೆ ಮತ್ತು ರೈತರನ್ನು ಸಬಲೀಕರಣಗೊಳಿಸುತ್ತವೆ. 2019 ರಲ್ಲಿ ಪ್ರಾರಂಭವಾದ ‘ಟ್ರೀಸ್ ಫಾರ್ ವೆಲ್ತ್’ ನ ಮಹತ್ವಾಕಾಂಕ್ಷೆಯ ಮಿಷನ್ ಅಡಿಯಲ್ಲಿ, ನಾಗಾಲ್ಯಾಂಡ್ನ ಎನ್ಜಿಒ ‘ದ ಎಂಟಪ್ರ್ಯೂನರ್ಸ್ ಅಸೋಸಿಯೇಟ್ಸ್ ‘(ಟಿಇಎ) ರಾಜ್ಯವನ್ನು ‘ಫ್ರೂಟ್ ಹಬ್ ಆಫ್ ಇಂಡಿಯಾ’ ಆಗಿ ಪರಿವರ್ತಿಸಲು ಪಣ ತೊಟ್ಟಿದೆ. ಇದು 2025 ರ ವೇಳೆಗೆ 2 ಮಿಲಿಯನ್ ಹಣ್ಣಿನ ಮರಗಳನ್ನು ನೆಡುವ ಗುರಿಯನ್ನು […]
ಜ. 29 ರಂದು ಶಿವಪಾಡಿ ದೇವಸ್ಥಾನದಲ್ಲಿ ಅತಿರುದ್ರ ಯಾಗ ಸಂಕಲ್ಪ ದಿವಸ್ ಹಾಗೂ ಮೃತ್ತಿಕಾ ಪೂಜೆ
ಮಣಿಪಾಲ: ಇಲ್ಲಿನ ಶಿವಪಾಡಿ ಶ್ರೀ ಉಮಾಮಹೇಶ್ವರ ದೇವಸ್ಥಾನದಲ್ಲಿ ಫೆ.22 ರಿಂದ ಮಾ.5 ರವರೆಗೆ ಅತಿರುದ್ರ ಯಾಗ ನಡೆಯಲಿದ್ದು, ಜ. 29 ರಂದು ಬೆಳಿಗ್ಗೆ ಅತಿರುದ್ರ ಯಾಗ ಸಂಕಲ್ಪ ದಿವಸ್ ಮತ್ತು ಮೃತ್ತಿಕಾ ಪೂಜೆಯನ್ನು ಸಾಮೂಹಿಕವಾಗಿ ಆಚರಿಸಲಾಗುತ್ತದೆ. ಶೃಂಗೇರಿ ಶಾರದಾ ಪೀಠದ ಜಗದ್ಗುರು ಶಂಕರಾಚಾರ್ಯ ಶ್ರೀ ಭಾರತೀತೀರ್ಥ ಮಹಾಸ್ವಾಮಿ, ಶ್ರೀ ವಿಧುಶೇಖರ ಭಾರತೀ ಸ್ವಾಮಿಜಿಯವರ ಮಾರ್ಗದರ್ಶನದಲ್ಲಿ ಧಾರ್ಮಿಕ ಕಾರ್ಯಕ್ರಮಗಳು ನಡೆಯಲಿವೆ. ದೇಗುಲದಲ್ಲಿ ಪ್ರಾರ್ಥನೆ, ಯಾಗಶಾಲೆಯ ಭೂಮಿ ಪೂಜೆ, ಪುಣ್ಯತೀರ್ಥ ಕ್ಷೇತ್ರಗಳಿಂದ ತಂದ ಮೃತ್ತಿಕಾ ವಿತರಣೆ, ಸಾಮೂಹಿಕ ದೀಕ್ಷಾ ಸಂಕಲ್ಪ […]
ಕುಂದಾಪುರ: ಬಸ್ ನಿಂದ ಆಯತಪ್ಪಿ ಬಿದ್ದು ಚಕ್ರದಡಿ ಸಿಲುಕಿ ವಿದ್ಯಾರ್ಥಿ ಸಾವು
ಕುಂದಾಪುರ: ಇಲ್ಲಿನ ಖಾಸಗಿ ಬಸ್ ಒಂದರಲ್ಲಿ ವಿಪರೀತ ಜನ ಜಂಗುಳಿ ಇದ್ದ ಕಾರಣ ಫುಟ್ ಬೋರ್ಡ್ ಮೇಲೆ ನಿಂತು ಕಾಲೇಜಿಗೆ ಪ್ರಯಾಣಿಸುತ್ತಿದ್ದ ವಿದ್ಯಾರ್ಥಿ ಕೆಳಗೆ ಇಳಿಯುವ ಸಂದರ್ಭದಲ್ಲಿ ಆಯತಪ್ಪಿ ಬಸ್ ನ ಚಕ್ರದಡಿ ಸಿಲುಕಿ ಸ್ಥಳದಲ್ಲೇ ಸಾವನ್ನಪ್ಪಿದ ಘಟನೆ ಹೆಮ್ಮಾಡಿಯಲ್ಲಿ ಶನಿವಾರ ಬೆಳಗ್ಗೆ ನಡೆದಿದೆ. ಹೆಮ್ಮಾಡಿ ಸಮೀಪದ ಕಟ್ ಬೇಲ್ತೂರು ನಿವಾಸಿ, ಕೋಟೇಶ್ವರ ಕಾಗೇರಿ ಕಾಲೇಜಿನ ಅಂತಿಮ ವರ್ಷದ ಬಿಕಾಂ ವಿದ್ಯಾರ್ಥಿ ಸುದೀಪ್ (20) ಸಾವನ್ನಪ್ಪಿದ ದುರ್ದೈವಿ. ಶನಿವಾರ ಬೆಳಿಗ್ಗೆ ಸಾಗರದಿಂದ ಕುಂದಾಪುರಕ್ಕೆ ತೆರಳುವ ಖಾಸಗಿ ಬಸ್ […]
ನವೀಕರಿಸಬಹುದಾದ ಇಂಧನ ವಲಯದಲ್ಲಿ ಕರಾವಳಿಗೆ ಒಂದೂವರೆ ಲಕ್ಷಕೋಟಿ ರೂಪಾಯಿ ಬಂಡವಾಳ: ಬೊಮ್ಮಾಯಿ
ಕಾರ್ಕಳ: ಪರಶುರಾಮ ಸೃಷ್ಟಿಯ ಮೂಲಕ ಸಾರ್ಥಕತೆ ಇದೆ. ಇಲ್ಲಿ ಭಾಗವಹಿಸಿದ ನಾವು ಭಾಗ್ಯವಂತರು. ಪರಶುರಾಮರ ಪ್ರತಿಮೆ ನಿರ್ಮಾಣದ ಮೂಲಕ ಪುರಾಣಕ್ಕೆ ಹೊಸದೊಂದು ಕುರುಹು ಸಿಕ್ಕಿದ್ದು, ಆಮೂಲಕ ಐತಿಹಾಸಿಕ ದಿನವಾಗಿ ಮೂಡಿಬಂದಿದೆ ಎಂದು ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಹೇಳಿದರು. ಸಿಕ್ಕ ಅವಕಾಶವನ್ನು ಸರಿಯಾಗಿ ಬಳಸಿಕೊಂಡು ಸಾಧಿಸುವುದೆ ಸಾಧಕನ ಕೆಲಸ ಎಂದು ಸಚಿವ ಸುನೀಲ್ ಕುಮಾರ್ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು. ನಾನು ಉದ್ಘಾಟನೆಗೆ ಬಂದಿಲ್ಲ ಪರಶುರಾಮನ ಭಕ್ತನಾಗಿ ಬಂದಿದ್ದೇನೆ. ನನ್ನ ಮನೆಯ ಆರಾಧ್ಯ ದೇವಿ ಎಲ್ಲಮ್ಮ ದೇವಿಯ ಆರಾಧಕ ನಾನು. […]
ಜ.29 ರಂದು ಮಿನಿ ಉದ್ಯೋಗ ಮೇಳ
ಉಡುಪಿ: ಸ್ವಾವಲಂಬಿ ಭಾರತ ಉಡುಪಿ ಜಿಲ್ಲೆ, ಸೌತ್ ಕೆನರಾ ಫೋಟೋಗ್ರಫರ್ಸ್ ಅಸೋಸಿಯೇಶನ್ ಉಡುಪಿ ವಲಯ, ರಾಷ್ಟ್ರೀಯ ಪದವಿ ಪೂರ್ವ ವಿದ್ಯಾರ್ಥಿಗಳ, ಪೋಷಕರ ಮತ್ತು ಶಿಕ್ಷಕರ ಸಂಘದ ವತಿಯಿಂದ ಜ.29 ರಂದು ಮಧ್ಯಾಹ್ನ 3 ಗಂಟೆಗೆ ಉಡುಪಿಯ ಭಗವಾನ್ ನಿತ್ಯಾನಂದ ಸ್ವಾಮಿ ಮಂದಿರದಲ್ಲಿ ಮಿನಿ ಉದ್ಯೋಗ ಮೇಳವನ್ನು ಆಯೋಜಿಸಲಾಗಿದೆ. ಕುಂದಾಪುರ, ಕಾರ್ಕಳ ಬೈಲೂರು ಮತ್ತು ಉಡುಪಿ ಪರಿಸರದಲ್ಲಿ ಸೈಟ್ ಸುಪರ್ವೈಸರ್, ಸಿವಿಲ್ ಇಂಜಿನಿಯರ್ ಮತ್ತು ರಿಲಯನ್ಸ್ ಸ್ಮಾರ್ಟ್ ಗೆ ಗ್ರಾಹಕ ಸೇವಾ ಸಹವರ್ತಿ ಮತ್ತು ಕ್ಯಾಷಿಯರ್ ಹುದ್ದೆಗಳಿಗೆ ಅಭ್ಯರ್ಥಿಗಳು […]