ಧೋನಿ ಎಂಟರ್‌ಟೈನ್‌ಮೆಂಟ್‌ನ ಮೊದಲ ತಮಿಳು ಚಿತ್ರ ‘ಲೆಟ್ಸ್ ಗೆಟ್ ಮ್ಯಾರೀಡ್’ ಟೈಟಲ್ ಬಿಡುಗಡೆ

ತಮ್ಮ ಮೊದಲ ತಮಿಳು ಚಲನಚಿತ್ರವನ್ನು ಬಿಡುಗಡೆ ಮಾಡುವ ಘೋಷಣೆ ಮಾಡಿದ ಮೂರು ತಿಂಗಳ ನಂತರ, ಧೋನಿ ಎಂಟರ್‌ಟೈನ್‌ಮೆಂಟ್ ಚಿತ್ರದ ಟೈಟಲ್ ಮತ್ತು ತಾರಾಗಣದ ವಿವರವನ್ನು ಬಹಿರಂಗಪಡಿಸಿದೆ. ಜನವರಿ 27 ರಂದು (ಶುಕ್ರವಾರ), ಭಾರತದ ಮಾಜಿ ನಾಯಕ ಎಂಎಸ್ ಧೋನಿ ಒಡೆತನದ ಎಂಟರ್‌ಟೈನ್‌ಮೆಂಟ್ ಕಂಪನಿಯು ಚಿತ್ರದ ಶೀರ್ಷಿಕೆ ‘ಎಲ್‌ಜಿಎಂ – ಲೆಟ್ಸ್ ಗೆಟ್ ಮ್ಯಾರೀಡ್’ ಅನ್ನು ಅನಾವರಣಗೊಳಿಸಿತು. ಚಿತ್ರದ ನಿರ್ಮಾಪಕಿ ಸಾಕ್ಷಿ ಧೋನಿ ಟೈಟಲ್ ಅನ್ನು ಅನಾವರಣಗೊಳಿಸಿದರು. ಚಿತ್ರದಲ್ಲಿ ಹರೀಶ್ ಕಲ್ಯಾಣ್ ಮತ್ತು ಇವಾನಾ ಮುಖ್ಯ ಪಾತ್ರದಲ್ಲಿ ನಟಿಸಲಿದ್ದು, […]

ರಾಜ್ಯಮಟ್ಟದ ಪ್ರಥಮ ಯಕ್ಷಗಾನ ಸಮ್ಮೇಳನ: ಚೌಕಿಗಳಲ್ಲಿ ಬ್ಯಾನರ್ ಅಳವಡಿಕೆ

ಉಡುಪಿ: ಫೆಬ್ರವರಿ 11 ಮತ್ತು 12ರಂದು ಉಡುಪಿ ಎಂ.ಜಿ.ಎಂ. ಕಾಲೇಜಿನ ಕ್ರೀಡಾಂಗಣದಲ್ಲಿ ನಡೆಯಲಿರುವ ರಾಜ್ಯಮಟ್ಟದ ಪ್ರಥಮ ಯಕ್ಷಗಾನ ಸಮ್ಮೇಳನದ ಪ್ರಚಾರಾರ್ಥವಾಗಿ ಸುಮಾರು 40 ವೃತ್ತಿ ಮೇಳಗಳಲ್ಲಿ ಬ್ಯಾನರನ್ನು ಅಳವಡಿಸಲಾಗುತ್ತಿದ್ದು, ಜ.26 ರಂದು ಶಿರಿಯಾರದಲ್ಲಿ ಮಂದಾರ್ತಿ ಮೇಳದ ಚೌಕಿಯಲ್ಲಿ ಗಣಪತಿ ದೇವರ ಮುಂಭಾಗದಲ್ಲಿ ಹಾಗೂ ಕಲಾವಿದರ ಸಮ್ಮುಖದಲ್ಲಿ ಬ್ಯಾನರನ್ನು ಅನಾವರಣಗೊಳಿಸಲಾಯಿತು. ಈ ಸಂದರ್ಭದಲ್ಲಿ ಸಮ್ಮೇಳನದ ಕಾರ್ಯಾಧ್ಯಕ್ಷ ಡಾ. ಜಿ. ಎಲ್. ಹೆಗಡೆ, ಪ್ರಧಾನ ಸಂಚಾಲಕ ಪಿ. ಕಿಶನ್ ಹೆಗ್ಡೆ, ಮುರಲಿ ಕಡೆಕಾರ್ ಮತ್ತು ಮೇಳದ ಮ್ಯಾನೇಜರ್ ನರಾಡಿ ಭೋಜರಾಜ್ […]

ಜ. 31 ರಂದು ಜಿಲ್ಲಾವ್ಯಾಪ್ತಿಯಲ್ಲಿ ವಿದ್ಯುತ್ ವ್ಯತ್ಯಯ

ಉಡುಪಿ: ಜಿಲ್ಲಾ ವ್ಯಾಪ್ತಿಯಲ್ಲಿ ನಿರ್ವಹಣಾ ಕೆಲಸಗಳ ಕಾರಣದಿಂದಾಗಿ ಜನವರಿ 31 ರಂದು ಈ ಕೆಳಕಂಡ ಸ್ಥಳಗಳಲ್ಲಿ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಲಿದೆ ಎಂದು ಮೆಸ್ಕಾಂನ ಪ್ರಕಟಣೆ ತಿಳಿಸಿದೆ. 110/11 ಕೆ.ವಿ ಹಾಲಾಡಿ ವಿದ್ಯುತ್ ಉಪಕೇಂದ್ರದಲ್ಲಿ 110/11 ಕೆವಿ 10 ಎಮ್.ವಿ.ಎ ಪರಿವರ್ತಕ-1 ಹಾಗೂ ಪರಿವರ್ತಕ-2 ಗೆ ಬಣ್ಣ ಬಳಿಯುವ ಕಾಮಗಾರಿ ಹಮ್ಮಿಕೊಂಡಿರುವುದರಿಂದ ಸದರಿ ವಿದ್ಯುತ್ ಉಪಕೇಂದ್ರದಿಂದ ಹೊರಡುವ 11ಕೆ.ವಿ ಶಂಕರನಾರಾಯಣ, ಆವರ್ಸೆ, ಬಿದ್ಕಲ್‌ಕಟ್ಟೆ, ಬೈಲೂರು, ಬೆಳ್ವೆ, ಹೈಕಾಡಿ, ವಾರಾಹಿ ಮತ್ತು ಕೆ.ಎನ್.ಎನ್.ಎಲ್ ಹಾಲಾಡಿ ಮಾರ್ಗಗಳಲ್ಲಿ ಅಮಾಸೆಬೈಲು, ಕುಳುಂಜೆ, […]

ಉರ್ವಶೆ 2023- ಕೆಎಂಸಿ ಆಸ್ಪತ್ರೆಯಲ್ಲಿ ರಾಷ್ಟ್ರೀಯ ಸ್ತ್ರೀ ಮೂತ್ರರೋಗ ಶಾಸ್ತ್ರ ವಿಚಾರ ಸಂಕಿರಣ

ಮಣಿಪಾಲ: ಪ್ರಸೂತಿ ಮತ್ತು ಸ್ತ್ರೀರೋಗ ಶಾಸ್ತ್ರ ವಿಭಾಗದ ಉಪವಿಭಾಗವಾಗಿರುವ ಸ್ತ್ರೀ ಮೂತ್ರರೋಗ ಶಾಸ್ತ್ರ ವಿಭಾಗವು ಮಣಿಪಾಲದ ಕಸ್ತೂರ್ಬಾ ವೈದ್ಯಕೀಯ ಕಾಲೇಜಿನಲ್ಲಿ ಜನವರಿ 21- 22 ರಂದು ಮೊದಲ ರಾಷ್ಟ್ರೀಯ ಸ್ತ್ರೀ ಮೂತ್ರರೋಗ ಶಾಸ್ತ್ರ ವಿಚಾರ ಸಂಕಿರಣ (ಉರ್ವಶೆ 2023 )ವನ್ನು ಆಯೋಜಿಸಿತ್ತು. ದೇಶದ ವಿವಿಧ ಭಾಗಗಳಿಂದ ಸ್ತ್ರೀ ಶ್ರೋಣಿಯ (ಸ್ತ್ರೀ ಪೆಲ್ವಿಕ್) ಮೆಡಿಸಿನ್ ಮತ್ತು ಪುನರ್ನಿರ್ಮಾಣ ಶಸ್ತ್ರಚಿಕಿತ್ಸೆಯ ಭರವಸೆಯ ಕುರಿತು ರಾಷ್ಟ್ರೀಯ ದಿಗ್ಗಜರ ಸಮ್ಮೇಳನ ಇದಾಗಿತ್ತು. ಉದ್ಘಾಟನಾ ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಕೆಎಂಸಿ ಮಣಿಪಾಲದ ಸಹ ಡೀನ್ […]

ಕಂಡ ಕನಸುಗಳೆಲ್ಲವೂ ಈಡೇರುವ ಮುನ್ನ ಬಣ್ಣ ಕಳಚಿಟ್ಟು ಹೋದ ಕಾರ್ತಿಕ್: ಸಹಾಯದ ನಿರೀಕ್ಷೆಯಲ್ಲಿ ಕುಟುಂಬ

ಬ್ರಹ್ಮಾವರ: ಬದುಕಿನಲ್ಲಿ ಏನೇನೋ ಸಾಧನೆ ಮಾಡಬೇಕೆಂದು ಕನಸು ಕಂಡ ಕಾರ್ತಿಕ್ ಉದಯೋನ್ಮುಖ ರಂಗಭೂಮಿ ನಟ. ಬಣ್ಣದ ಬದುಕಿನ ರಂಗಭೂಮಿಯಲ್ಲಿ ಹಲವಾರು ನಾಟಕ ಮತ್ತು ಕಿರುಚಿತ್ರಗಳಲ್ಲಿ ನಟಿಸಿ ಸೈ ಎನಿಸಿಕೊಂಡಿದ್ದ ಕಾರ್ತಿಕ್ ಇಂದು ಬಣ್ಣ ಕಳಚಿಟ್ಟು ಬಾರದ ಲೋಕಕ್ಕೆ ಪಯಣಿಸಿದ್ದಾರೆ. 31 ರ ಹರೆಯದ ಕಾರ್ತಿಕ್ ಜ.22ರಂದು ನಿಧನರಾಗಿದ್ದು, ತಾಯಿ ಮತ್ತು ಸಹೋದರನನ್ನು ಅಗಲಿದ್ದಾರೆ. ಮನುಹಂದಾಡಿಯವರ ತಂಡದಲ್ಲಿ ಗುರುತಿಸಿಕೊಂಡಿದ್ದ ಇವರು ಹಲವಾರು ಹಾಸ್ಯ ವೀಡಿಯೋಗಳಲ್ಲಿ, ನಾಟಕಗಳಲ್ಲಿ ಹಾಗೂ ಕಿರುಚಿತ್ರಗಳಲ್ಲಿ ತಮ್ಮ ಪ್ರತಿಭೆಯನ್ನು ಅನಾವರಣಗೊಳಿಸಿದ್ದರು. ಅರೆಹೊಳೆ ಪ್ರತಿಷ್ಠಾನದಲ್ಲಿಯೂ ಕಾರ್ತಿಕ್ ಸಕ್ರಿಯವಾಗಿ […]