ಜ.20: ಇಂಧನ ಸಚಿವರ ಪ್ರವಾಸ ಕಾರ್ಯಕ್ರಮ
ಉಡುಪಿ: ಕರ್ನಾಟಕ ಸರಕಾರದ ಇಂಧನ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವರಾದ ವಿ ಸುನಿಲ್ ಕುಮಾರ್ ಅವರು ಜನವರಿ 20 ರಂದು ಜಿಲ್ಲೆಯಲ್ಲಿ ಪ್ರವಾಸ ಕೈಗೊಳ್ಳಲಿದ್ದಾರೆ. ಅಂದು ಸಂಜೆ 7 ಗಂಟೆಗೆ ಕಾಪು ಕಡಲ ಕಿನಾರೆಯಲ್ಲಿ ತಾಲೂಕು ಆಡಳಿತದ ವತಿಯಿಂದ ಆಯೋಜಿಸಲಾದ ಉಡುಪಿ ಜಿಲ್ಲೆಯ ರಜತ ಮಹೋತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸಲಿರುವರು.
ಬಹು ಧಾರ್ಮಿಕ ಭಾರತದಲ್ಲಿ ಯಾವುದೇ ಒಂದು ಧರ್ಮ ಏಕಸ್ವಾಮ್ಯ ಸಾಧಿಸಲು ಸಾಧ್ಯವಿಲ್ಲ: ಪ್ರೊ. ಕನುಂಗೋ
ಮಣಿಪಾಲ: ಭಾರತೀಯ ಪರಂಪರೆಯು ಬಹು-ಸಾಂಸ್ಕೃತಿಕ ಮತ್ತು ಬಹು-ಧಾರ್ಮಿಕವಾಗಿದ್ದು, ಯಾವುದೇ ಒಂದು ಧರ್ಮವು ಅದರ ಮೇಲೆ ಏಕಸ್ವಾಮ್ಯತ್ವವನ್ನು ಹೊಂದಲು ಸಾಧ್ಯವಿಲ್ಲ ಎಂದು ಜರ್ಮನಿಯ ಎರ್ಫರ್ಟ್ ವಿಶ್ವವಿದ್ಯಾಲಯದ ಫೆಲೋ ಪ್ರೊಫೆಸರ್ ಪ್ರಳಯ್ ಕನುಂಗೋ ಹೇಳಿದರು. ಮಾಹೆಯ ಗಾಂಧಿಯನ್ ಸೆಂಟರ್ ಫಾರ್ ಫಿಲಾಸಫಿಕಲ್ ಆರ್ಟ್ಸ್ ಅಂಡ್ ಸೈನ್ಸಸ್, ಮಂಗಳೂರು ವಿಶ್ವವಿದ್ಯಾನಿಲಯದ ನೆಹರು ಅಧ್ಯಯನ ಕೇಂದ್ರದ ಸಹಯೋಗದಲ್ಲಿ ಆಯೋಜಿಸಿದ್ದ ಉಪನ್ಯಾಸದಲ್ಲಿ ಧರ್ಮ, ಪರಂಪರೆ ಮತ್ತು ಅಸ್ಮಿತೆಯ ಕುರಿತು ಅವರು ಮಾತನಾಡಿದರು. ಖಂಡಿತವಾಗಿಯೂ ಧರ್ಮ, ಪರಂಪರೆ ಮತ್ತು ಅಸ್ಮಿತೆ ಒಂದೇ ರೀತಿಯ ಪರಿಕಲ್ಪನೆಗಳು. ಆದಾಗ್ಯೂ, […]
ಸ್ಪೆಕ್ಟ್ರಮ್ ಡಿಜಿಟಲ್ಸ್ ನಲ್ಲಿ ಉದ್ಯೋಗಾವಕಾಶ
ಸ್ಪೆಕ್ಟ್ರಮ್ ಡಿಜಿಟಲ್ಸ್ ನಲ್ಲಿ ಬಿಸ್ ನೆಸ್ ಡೆವಲಪ್ಮೆಂಟ್ ಅಸೋಸಿಯೇಟ್ ಮತ್ತು ಸೋಶಿಯಲ್ ಮೀಡಿಯಾ ಮಾರ್ಕೆಟಿಂಗ್ ಅಸೋಸೊಯೇಟ್ ಗಳು ಬೇಕಾಗಿದ್ದಾರೆ. ಅವಶ್ಯಕತೆಗಳು: # ಅಭ್ಯರ್ಥಿಯು ಇಂಗ್ಲೀಷ್ ಭಾಷೆಯಲ್ಲಿ ಸಂವಹನ ಕೌಶಲ್ಯ ಹೊಂದಿರಬೇಕು # ಯಾವುದೆ ಪದವಿ ಆದವರಿಗೆ ಅವಕಾಶ # ಅಂತಾರಾಷ್ಟ್ರೀಯ ಕರೆಗಳಲ್ಲಿ ಟೆಲೆಮಾರ್ಕೆಟಿಂಗ್ ಮಾಡಿರುವ ಅನುಭವ ಇದ್ದವರಿಗೆ ಆದ್ಯತೆ # ಸೋಶಿಯಲ್ ಮೀಡಿಯಾ ಸ್ಪೆಶಲಿಸ್ಟ್ ಆಗಲು ಸೋಶಿಯಲ್ ಮೀಡಿಯಾ ಮಾರ್ಕೆಟಿಂಗ್ ನಲ್ಲಿ ಕೆಲಸ ಮಾಡಿರುವ ಅನುಭವ ಇರಬೇಕು ಈ ಅರ್ಹತೆಗಳು ಇದ್ದಲ್ಲಿ ಜ. 26 ರ ಮೊದಲು […]
ಲೈಗರ್ ನಿಂದ ಪ್ರಪಂಚದ ಮೊಟ್ಟ ಮೊದಲ ಸ್ವಯಂ-ಸಮತೋಲನ ತಂತ್ರಜ್ಞಾನದ ಎಲೆಕ್ಟ್ರಿಕ್ ಸ್ಕೂಟರ್ ಅನಾವರಣ
ನವದೆಹಲಿ: ಮುಂಬೈ ಮೂಲದ ಸ್ಟಾರ್ಟ್‌ಅಪ್ ಕಂಪನಿ ಲೈಗರ್ ಮೊಬಿಲಿಟಿಯು ದೆಹಲಿ ಆಟೋ ಎಕ್ಸ್‌ಪೋ 2023 ರಲ್ಲಿ ಎರಡು ಹೊಸ ಸ್ವಯಂ-ಸಮತೋಲಿತ ಎಲೆಕ್ಟ್ರಿಕ್ ಸ್ಕೂಟರ್‌ಗಳಾದ ಲೈಗರ್ ಎಕ್ಸ್ ಮತ್ತು ಲೈಗರ್ ಎಕ್ಸ್ + ಅನ್ನು ಅನಾವರಣಗೊಳಿಸಿದೆ. ಕೃತಕ ಬುದ್ದಿಮತ್ತೆಯ ಸೆನ್ಸರ್ ಗಳನ್ನು ಅಳವಡಿಸಿರುವ ಇ-ಸ್ಕೂಟರ್ಗಳು ತಮ್ಮನ್ನು ತಾವೇ ಸಮತೋಲದಲ್ಲಿಡಲು ಸಮರ್ಥವಾಗಿದೆ. ಎರಡೂ ಸ್ಕೂಟರ್ ಗಳು ಲಿಥಿಯಂ-ಐಯಾನ್ ಬ್ಯಾಟರಿ ಪ್ಯಾಕ್ ಅನ್ನು ಒಳಗೊಂಡಿದ್ದರೂ, ಲೈಗರ್ ಎಕ್ಸ್ + ಗಿಂತ ಭಿನ್ನವಾಗಿರುವ ಎಕ್ಸ್ ನ ಬ್ಯಾಟರಿಗಳನ್ನು ಹೊರತೆಗೆಯಬಹುದು ಮತ್ತು ಎಲ್ಲಿ ಬೇಕೆಂದರಲ್ಲಿ […]
ಮುದೂರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದಿಂದ ಮೊಟ್ಟ ಮೊದಲ ಸಂಚಾರಿ ಚಿತಾಗಾರ ಕಾರ್ಯಾಚರಣೆ
ಕುಂದಾಪುರ: ಇಲ್ಲಿನ ಮುದೂರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರವು ಗ್ರಾಮೀಣ ಭಾಗದಲ್ಲಿ ಕಂಡುಬರುತ್ತಿರುವ ಹೆಣಸುಡುವ ಸಮಸ್ಯೆಗಳಿಗೆ ಮುಕ್ತಾಯ ಹಾಡುವ ನಿಟ್ಟಿನಲ್ಲಿ ಮುಂದಾಗಿದೆ. ಕುಂದಾಪುರ ಬೈಂದೂರು ವಿಧಾನಸಭಾ ಕ್ಷೇತ್ರದ ಜಡ್ಕಲ್ ಗ್ರಾಮ ಪಂಚಾಯತ್ ವ್ಯಾಪ್ತಿಯ ಮುದೂರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘವು ಉಚಿತವಾಗಿ ಸಂಚಾರಿ ಚಿತಾಗಾರವನ್ನು ಒದಗಿಸಿಕೊಡುವ ಮೂಲಕ ರಾಜ್ಯದಲ್ಲೇ ಮೊಟ್ಟ ಮೊದಲ ಸಂಚಾರಿ ಚಿತಾಗಾರ ಒದಗಿಸಿದ ಸಂಘ ಎನ್ನುವ ಕೀರ್ತಿಗೆ ಪಾತ್ರವಾಗಿ ಇತಿಹಾಸ ನಿರ್ಮಿಸಿದೆ. ಗ್ರಾಮೀಣ ಭಾಗದಲ್ಲಿ ಯಾರಾದರೂ ಮೃತರಾದಾಗ ಅವರ ಅಂತ್ಯಕ್ರಿಯೆ ನಡೆಸುವುದೇ ಒಂದು […]