ಉಡುಪಿ: ಯುವತಿ ನಾಪತ್ತೆ

ಉಡುಪಿ: ಉಡುಪಿ ತಾಲೂಕು ಚಿಟ್ಪಾಡಿ ನಿವಾಸಿ ಸ್ವಾತಿ ಮಾಲ್ತೇಶ್ ಮಾನೆ (20) ಎಂಬ ಯುವತಿಯು ಜನವರಿ 16 ರಂದು ಮನೆಯಿಂದ ಹೊರೆಗ ಹೋದವರು ವಾಪಾಸು ಬಾರದೇ ನಾಪತ್ತೆಯಾಗಿರುತ್ತಾರೆ. 5 ಅಡಿ 5 ಇಂಚು ಎತ್ತರ, ಸಪೂರ ಮೈಕಟ್ಟು, ಗೋಧಿ ಮೈಬಣ್ಣ, ದುಂಡು ಮುಖ ಹೊಂದಿದ್ದು, ಕನ್ನಡ, ಇಂಗ್ಲೀಷ್ ಹಾಗೂ ಹಿಂದಿ ಭಾಷೆ ಮಾತನಾಡುತ್ತಾರೆ. ಇವರ ಬಗ್ಗೆ ಮಾಹಿತಿ ದೊರೆತಲ್ಲಿ ಉಡುಪಿ ನಗರ ಪೊಲೀಸ್ ಠಾಣಾಧಿಕಾರಿಯನ್ನು ಸಂಪರ್ಕಿಸುವಂತೆ ಪ್ರಕಟಣೆ ತಿಳಿಸಿದೆ.

ಪಾಕ್ ಆಕ್ರಮಿತ ಕಾಶ್ಮೀರದ ನಿವಾಸಿಗಳು ಭಾರತೀಯ ಒಕ್ಕೂಟಕ್ಕೆ ಸೇರಲು ಸಿದ್ಧ: ಪಿಒಕೆ ಕಾರ್ಯಕರ್ತ ಅಮ್ಜದ್ ಅಯೂಬ್ ಮಿರ್ಜಾ

ಕರಾಚಿ: 1970 ರ ದಶಕದಲ್ಲಿ ಜುಲ್ಫಿಕರ್ ಅಲಿ ಭುಟ್ಟೊ ಪಾಕಿಸ್ತಾನಿಗಳು ಹುಲ್ಲು ತಿನ್ನುತ್ತಾರೆ, ಹಸಿವಿನಿಂದ ಇರುತ್ತಾರೆ ಆದರೆ ಪರಮಾಣು ಬಾಂಬ್ ಹೊಂದಿಯೇ ಹೊಂದುತ್ತಾರೆ ಎಂದಿದ್ದರು. ಅದರಂತೆ ಈಗ 2023 ರಲ್ಲಿ ಪಾಕಿಸ್ತಾನಿಗಳು ತಮ್ಮದೇ ಆದ ಪರಮಾಣು ಬಾಂಬ್ ಹೊಂದಿದ್ದಾರೆ ಆದರೆ ಅಲಿ ಭುಟ್ಟೋ ಹೇಳಿದಂತೆ ಹುಲ್ಲು ತಿನ್ನುತ್ತಿದ್ದಾರೆ, ಇಡೀ ಪ್ರಪಂಚವನ್ನು ಹಣಕ್ಕಾಗಿ ಬೇಡುತ್ತಿದ್ದಾರೆ, ಜೀವ ಉಳಿಸುವ ಔಷಧಿಗಳಿಗಾಗಿ ಭಾರತವನ್ನು ಅವಲಂಬಿಸಿದ್ದಾರೆ. ಪಾಕಿಸ್ತಾನವು ಭಯೋತ್ಪಾದನೆಯನ್ನು ಪೋಷಿಸುತ್ತ ಬಂದಿದ್ದು ಇದೀಗ ಅದರ ಬೆಲೆ ತೆರುತ್ತಿದೆ. ಪಾಕಿಸ್ತಾನವು ಕಂಗಾಲಾಗಿ ಹೋಗಿದೆ. ಅಲ್ಲಿನ […]

ಫೆ. 4 ಮತ್ತು 7 ರಂದು ವಾಯುಸೇನೆ ಏರ್‌ಮ್ಯಾನ್ ಹುದ್ದೆಗಳ ನೇರ ನೇಮಕಾತಿ ರ‍್ಯಾಲಿ

ಉಡುಪಿ: ಭಾರತೀಯ ವಾಯುಪಡೆಯು ಭಾರತೀಯ ಮತ್ತು ಗೂರ್ಖಾ (ನೇಪಾಳ) ಪುರುಷ ಅಭ್ಯರ್ಥಿಗಳಿಂದ ಭಾರತೀಯ ವಾಯುಪಡೆಯ ವೈ (ತಾಂತ್ರಿಕೇತರ) ಗುಂಪಿನಲ್ಲಿ ವೈದ್ಯಕೀಯ ಸಹಾಯಕ ಮತ್ತು ವೈದ್ಯಕೀಯ ಸಹಾಯಕ (ಫಾರ್ಮಸಿ) ಗುಂಪಿನಲ್ಲಿ ಏರ್‌ಮ್ಯಾನ್ ಹುದ್ದೆಗಳ ನೇಮಕಾತಿಗೆ ಫೆಬ್ರವರಿ 4 ಮತ್ತು 7 ರಂದು ಚೆನ್ನೈ ಏರ್ ಫೋರ್ಸ್ ಸ್ಟೇಷನ್ ತಾಂಬರಂ ನಲ್ಲಿ ನೇರ ನೇಮಕಾತಿ ರ‍್ಯಾಲಿಯನ್ನು ಅಯೋಜಿಸಲಾಗಿದ್ದು, ಅರ್ಹ ಪುರುಷ ಅಭ್ಯರ್ಥಿಗಳು ಭಾಗವಹಿಸಬಹುದಾಗಿದೆ. ವೈದ್ಯಕೀಯ ಸಹಾಯಕ ಹುದ್ದೆಗೆ ಅಭ್ಯರ್ಥಿಯು ಅವಿವಾಹಿತರಾಗಿರಬೇಕು ಮತ್ತು 27 ಜೂನ್ 2002 ಮತ್ತು 27 ಜೂನ್ […]

ದೇಸೀ ಕ್ರ್ಯೂ ಸಂಸ್ಥೆಯಲ್ಲಿ ಉದ್ಯೋಗಾವಕಾಶ

ದೇಸೀ ಕ್ರ್ಯೂ ಸಂಸ್ಥೆಯಲ್ಲಿ ಉದ್ಯೋಗಾವಕಾಶವಿದ್ದು, ತಿಂಗಳಿಗೆ 20 ಸಾವಿರ ರೂಗಳ ವೇತನ ನೀಡಲಾಗುವುದು. ಅರ್ಹತೆಗಳು: # ರಾತ್ರಿ ಪಾಳಿಯಲ್ಲಿ ಕೆಲಸ ಮಾಡಲು ತಯಾರಿರಬೇಕು # ಕೆಲಸದ ಸ್ಥಳ ಕಾಪು # ಇ.ಎಸ್.ಐ ಮತ್ತು ಪಿ.ಎಫ್ ಸೌಲಭ್ಯ ನೀಡಲಾಗುವುದು ಆಸಕ್ತರು 8618257511, 9326012660 ಕರೆಮಾಡಬಹುದು ಅಥವಾ trisha@desicrew.in ಇ-ಮೇಲ್ ಮಾಡಬಹುದು ಅಥವಾ ನೇರವಾಗಿ ದೇಸೀ ಕ್ರ್ಯೂ, ರಾ.ಹೆ-66 ಕಾಪು ಇಲ್ಲಿ ಭೇಟಿ ನೀಡಬಹುದು.

ಜ. 22 ರಂದು ಸಹಕಾರ ರತ್ನ ಜಯಕರ್ ಶೆಟ್ಟಿ ಇಂದ್ರಾಳಿಯವರಿಗೆ ಅಭಿನಂದನಾ ಸಮಾರಂಭ

ಉಡುಪಿ: ಬಡಗಬೆಟ್ಟು ಕ್ರೆಡಿಕ್ ಕೋ-ಆಪ್ ಸೊಸೈಟಿ.ಲಿ ವತಿಯಿಂದ ಸಹಕಾರ ರತ್ನ ಪ್ರಶಸ್ತಿ ಪುರಸ್ಕೃತರಾದ ಲಯನ್. ಜಯಕರ್ ಶೆಟ್ಟಿ ಇಂದ್ರಾಳಿಯವರಿಗೆ ಅಭಿನಂದನಾ ಸಮಾರಂಭ ಹಾಗೂ ಸೇವಾ ಚಿಂತನ ಕಾರ್ಯಕ್ರಮವನ್ನು ಜ. 22 ಆದಿತ್ಯವಾರದಂದು ಬೆಳಗ್ಗೆ 9 ಗಂಟೆಗೆ ಮಿಷನ್ ಕಂಪೌಂಡ್ ರಸ್ತೆಯಲ್ಲಿರುವ ಬಾಸೆಲ್ ಮಿಷನರೀಸ್ ಮೆಮೋರಿಯಲ್ ಆಡಿಟೋರಿಯಂನಲ್ಲಿ ಹಮ್ಮಿಕೊಳ್ಳಲಾಗಿದೆ. ಅದಮಾರು ಮಠದ ಶ್ರೀ ಈಶಪ್ರಿಯತೀರ್ಥ ಸ್ವಾಮಿಜಿಯವರ ದಿವ್ಯ ಉಪಸ್ಥಿತಿಯಲ್ಲಿ ದ.ಕ.ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ನ ಅಧ್ಯಕ್ಷ ಡಾ.ಎಂ.ಎನ್ ರಾಜೇಂದ್ರಕುಮಾರ್ ಕಾರ್ಯಕ್ರಮವನ್ನು ಉದ್ಘಾಟಿಸಲಿದ್ದು, ಬಡಗಬೆಟ್ಟು ಕ್ರೆಡಿಟ್ ಕೊ-ಆಪ್ ಸೊಸೈಟಿಯ […]