ರಾಷ್ಟ್ರೀಯ ಬೆಂಚ್ ಪ್ರೆಸ್ ಪವರ್ ಲಿಫ್ಟಿಂಗ್ ಚಾಂಪಿಯನ್ ಶಿಪ್ ನಲ್ಲಿ ಅಕ್ಷತಾ ಪೂಜಾರಿಗೆ ಚಿನ್ನದ ಪದಕ

ಉಡುಪಿ: ಔರಂಗಾಬಾದಿನಲ್ಲಿ ಜ.೧೬ ರಂದು ನಡೆದ ರಾಷ್ಟ್ರೀಯ ಬೆಂಚ್ ಪ್ರೆಸ್ ಪವರ್ ಲಿಫ್ಟಿಂಗ್ ಚಾಂಪಿಯನ್ ಶಿಪ್ ನ ಸೀನಿಯರ್ ವಿಭಾಗದಲ್ಲಿ ಅಕ್ಷತಾ ಪೂಜಾರಿ ಬೋಳ ಇವರು ಚಿನ್ನದ ಪದಕ ಗೆದ್ದು ಬೀಗಿದ್ದಾರೆ. ಈಕೆ ಬೋಳ ಭೋಜ ಪೂಜಾರಿ ಹಾಗೂ ಪ್ರೇಮಾ ಪೂಜಾರಿ ಇವರ ಪುತ್ರಿ.

ಅಷ್ಟ ಮಠದ ಖ್ಯಾತಿಯ ಮುಕುಟಕ್ಕೆ ಮತ್ತೊಂದು ಗರಿ ಭಗವಾನ್ ನಿತ್ಯಾನಂದ ಮಂದಿರ: ಡಾ.ಎಚ್. ಎಸ್. ಬಲ್ಲಾಳ್

ಉಡುಪಿ: ನಗರದ ಕೆ.ಎಂ ಮಾರ್ಗದಲ್ಲಿರುವ ನಿತ್ಯಾನಂದ ಸ್ವಾಮಿ ಮಂದಿರ ಮಠವು ನವೀಕೃತಗೊಂಡಿದ್ದು ಜ.16 ರಂದು ಮಂದಿರ ಲೋಕಾರ್ಪಣೆ, ಗರ್ಭಗೃಹ ಸಮರ್ಪಣೆ, ಶ್ರೀ ಗುರುವರ್ಯರ ಪಂಚಲೋಹದ ವಿಗ್ರಹ ಪ್ರತಿಷ್ಠೆ ಕಾರ್ಯಕ್ರಮವು ಅದ್ದೂರಿಯಾಗಿ ಜರುಗಿತು. ಈ ಸಂದರ್ಭದಲ್ಲಿ ಮಾತನಾಡಿದ ಮಣಿಪಾಲ ಮಾಹೆ ವಿ.ವಿ. ಸಹಕುಲಾಧಿಪತಿ ಡಾ.ಎಚ್. ಎಸ್. ಬಲ್ಲಾಳ್, ಮಂದಿರದ ಜೊತೆ ಜೊತೆಗೆ ಶೈಕ್ಷಣಿಕ, ಹಾಗೂ ಆರೋಗ್ಯ ಸಂಸ್ಥೆಗಳು ಕೂಡಾ ಸ್ಥಾಪನೆಯಾಗಲಿ. ಅಷ್ಟ ಮಠಗಳಿಗೆ ಖ್ಯಾತಿ ಪಡೆದ ಉಡುಪಿ ನಗರದ ಮುಕುಟಕ್ಕೆ ಶ್ರೀ ಭಗವಾನ್ ನಿತ್ಯಾನಂದ ಮಂದಿರ ಇನ್ನೊಂದು ಗರಿ […]

ಅಖಿಲ ಭಾರತ ನಾಗರೀಕ ಸೇವಾ ಕ್ರೀಡಾಕೂಟ: ಸಾರಿಕಾ ಶೆಟ್ಟಿ ಇವರಿಗೆ ಕಂಚಿನ ಪದಕ

ಉಡುಪಿ: ಇತ್ತೀಚೆಗೆ ನವದೆಹಲಿಯಲ್ಲಿ ನಡೆದ 2022-23 ನೇ ಸಾಲಿನ ಅಖಿಲ ಭಾರತ ನಾಗರೀಕ ಸೇವಾ ಕ್ರೀಡಾಕೂಟದಲ್ಲಿ, ಉಡುಪಿಯ ವಾಣಿಜ್ಯ ತೆರಿಗೆ ಇಲಾಖೆಯ ಪ್ರಥಮ ದರ್ಜೆ ಸಹಾಯಕಿ ಸಾರಿಕಾ ಶೆಟ್ಟಿ ಅವರು, ಕರ್ನಾಟಕ ರಾಜ್ಯ ತಂಡವನ್ನು ಪ್ರತಿನಿಧಿಸಿ , ವೈಯಕ್ತಿಕ ಬಟರ್ ಪ್ಲೈ ಈಜು ವಿಭಾಗದಲ್ಲಿ ಕಂಚಿನ ಪದಕ ಪಡೆದಿರುತ್ತಾರೆ.

ಜ. 22 ರಂದು ಬೀಚ್ ಉತ್ಸವದಲ್ಲಿ ಶಾಲಾಮಕ್ಕಳಿಗಾಗಿ ಚಿತ್ರಕಲಾ ಸ್ಪರ್ಧೆ

ಉಡುಪಿ: ಉಡುಪಿ ಜಿಲ್ಲಾ ರಜತ ಮಹೋತ್ಸವ ಕಾರ್ಯಕ್ರಮದ ಅಂಗವಾಗಿ ಜನವರಿ 20 ರಿಂದ 22 ರ ವರೆಗೆ ಮಲ್ಪೆ ಬೀಚ್‌ನಲ್ಲಿ ಬೀಚ್ ಉತ್ಸವ ನಡೆಯಲಿದ್ದು, ಕಾರ್ಯಕ್ರಮದಲ್ಲಿ ಜ. 22 ರಂದು ಬೆಳಗ್ಗೆ 10 ಗಂಟೆಗೆ ಚಿತ್ರಕಲಾ ಚಿತ್ರಕಲಾ ಸ್ಪರ್ಧೆಯನ್ನು ಪ್ರಾಥಮಿಕ, ಪ್ರೌಢ, ಪದವಿ ಪೂರ್ವ ಹಾಗೂ ಪದವಿ ವಿದ್ಯಾರ್ಥಿಗಳಿಗೆ ಆಯೋಜಿಸಲಾಗಿದೆ. 1 ರಿಂದ 4 ನೇ ತರಗತಿಯ ಕಿರಿಯ ಪ್ರಾಥಮಿಕ ವಿಭಾಗದವರಿಗೆ ಐಚ್ಛಿಕ ವಿಷಯದ ಕುರಿತು, 5 ರಿಂದ 7 ನೇ ತರಗತಿಯ ಹಿರಿಯ ಪ್ರಾಥಮಿಕ ವಿದ್ಯಾರ್ಥಿಗಳಿಗೆ […]

ಹಾಲು ಖರೀದಿ ದರ ಹೆಚ್ಚಳಕ್ಕೆ ಆಗ್ರಹಿಸಿ ಜ.19 ರಂದು ಹೈನುಗಾರರಿಂದ ಪ್ರತಿಭಟನೆ

ಉಡುಪಿ: ಸಹಕಾರ ಸಂಘಗಳ ಪ್ಯಾನ್-ಇಂಡಿಯಾ ಎನ್.ಜಿ.ಒ ಸಹಕಾರ ಭಾರತಿ ಬ್ಯಾನರ್ ಅಡಿಯಲ್ಲಿ ಹೈನುಗಾರರು, ಜ.19 ರಂದು ಮಣಿಪಾಲದ ರಜತಾದ್ರಿಯಲ್ಲಿರುವ ಜಿಲ್ಲಾಧಿಕಾರಿ ಕಚೇರಿ ಸಂಕೀರ್ಣ ಮುಂಭಾಗದಲ್ಲಿ ಲೀಟರ್ ಹಾಲಿನ ಖರೀದಿ ದರವನ್ನು 2 ರೂ ನಿಂದ ಹೆಚ್ಚಿಸಿ ಕನಿಷ್ಠ 5 ರೂಗೆ ಏರಿಸುವಂತೆ ಒತ್ತಾಯಿಸಿ ಪ್ರತಿಭಟನೆ ನಡೆಸಲಿದ್ದಾರೆ. ಕಳೆದ ವರ್ಷ ನವೆಂಬರ್‌ನಲ್ಲಿ ಕರ್ನಾಟಕ ಹಾಲು ಮಹಾಮಂಡಳವು ಲೀಟರ್ ಹಾಲು ಬೆಲೆಯನ್ನು 3 ರೂಗೆ ಹೆಚ್ಚಳ ಮಾಡಲು ಕೋರಿಕೊಂಡಿದ್ದವು, ಆದರೆ ಸರಕಾರ ಕೇವಲ 2 ರೂ ಹೆಚ್ಚಳ ಮಾಡಲು ಪ್ರಸ್ತಾಪಿಸಿತ್ತು. […]