ಮಂಗಳೂರು: ಜ. 22 ರಂದು ಶ್ರೀಕ್ಷೇತ್ರ ಹಟ್ಟಿಯಂಗಡಿ ಮೇಳದವರಿಂದ ಬಡಗುತಿಟ್ಟು ಯಕ್ಷಗಾನ ಪ್ರದರ್ಶನ

ಮಂಗಳೂರು: ಬಳ್ಕೂರು ಯಕ್ಷ ಕುಸುಮ ಪ್ರತಿಷ್ಠಾನ ಮತ್ತು ಕಲಾಸ್ತಕರ ಬಳಗ, ಕೊಡಿಯಾಲ್ ಬೈಲ್ ಮಂಗಳೂರು ಇವರ ಆಶ್ರಯದಲ್ಲಿ ಶ್ರೀಕ್ಷೇತ್ರ ಕುದ್ರೋಳಿ ಭಗವತೀ ದೇವಸ್ಥಾನ ಮತ್ತು ರಂಗಸ್ಥಳ ಮಂಗಳೂರು ಇವರ ಪ್ರೋತ್ಸಾಹದೊಂದಿಗೆ ಮಂಗಳೂರಿನಲ್ಲಿ ಪ್ರಥಮ ಬಾರಿಗೆ  ಬಡಗುತಿಟ್ಟಿನ ಪ್ರಸಿದ್ಧ ಶ್ರೀಕ್ಷೇತ್ರ ಹಟ್ಟಿಯಂಗಡಿ ಮೇಳದವರಿಂದ ಕಾಲಮಿತಿ ಯಕ್ಷಗಾನ ಪ್ರದರ್ಶನವಾಗಿ ‘ಕೃಷ್ಣ ಗಾರುಡಿ’ ಮತ್ತು ‘ಜಾಂಬವತಿ’ ಎಂಬ ಕಥಾನಕ ಪ್ರದರ್ಶನವು ಜನವರಿ 22 ರಂದು ಸಂಜೆ 4 ರಿಂದ ರಾತ್ರಿ 10 ರವರೆಗೆ ಕೊಡಿಯಾಲ್ ಬೈಲ್ ಕುದ್ರೋಳಿ ಶ್ರೀ ಭಗವತೀ ದೇವಸ್ಥಾನದ […]

ಕಮಲಾಕ್ಷಿ ಬಹುಕೋಟಿ ಹಗರಣದ ಮುಖ್ಯ ಆರೋಪಿಗೆ ಷರತ್ತು ಬದ್ದ ಜಾಮೀನು

ಉಡುಪಿ: ಇಲ್ಲಿನ ಕಮಲಾಕ್ಷಿ ವಿವಿಧೋದ್ದೇಶ ಸಹಕಾರಿ ಸಂಘದಲ್ಲಿ 100 ಕೋಟಿ ರೂ.ಗೂ ಮಿಕ್ಕಿ ನಡೆದಿದೆ ಎನ್ನಲಾದ ಹಗರಣ ಪ್ರಕರಣದ ಮುಖ್ಯ ಆರೋಪಿ ಬ್ಯಾಂಕಿನ ಅಧ್ಯಕ್ಷ ಬಿ.ವಿ.ಲಕ್ಷ್ಮಿನಾರಾಯಣ್ ಅವರಿಗೆ ನ್ಯಾಯಾಲಯವು ಷರತ್ತು ಬದ್ದ ಜಾಮೀನು ನೀಡಿದೆ. ಕಮಲಾಕ್ಷಿ ವಿವಿಧೋದ್ದೇಶ ಸಹಕಾರಿ ಸಂಘದಲ್ಲಿ ಹಗರಣ ನಡೆದಿರುವ ಬಗ್ಗೆ ಗ್ರಾಹಕರಿಂದ ದೂರು ದಾಖಲಾದ ಬಳಿಕ ಪೊಲೀಸರು ತಲೆಮರೆಸಿಕೊಂಡಿದ್ದ ಬ್ಯಾಂಕಿನ ಅಧ್ಯಕ್ಷ ಬಿ.ವಿ ನಾರಾಯಣ್ ಅವರನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದರು. ಬ್ಯಾಂಕಿನ ನಿರ್ದೇಶಕರಾದ ರವಿ ಉಪಾಧ್ಯಾಯ, ಬಿ ವಿ ಬಾಲಕೃಷ್ಣ, ಭಾಸ್ಕರ್ ಉಪಾಧ್ಯಾಯ, […]

ಮಡದಿ ಮಕ್ಕಳ ಜೊತೆ ಸಂಕ್ರಾತಿ ಆಚರಿಸಿದ ರಾಕಿಂಗ್ ಸ್ಟಾರ್ ಯಶ್

ಹಾಸನದಲ್ಲಿರುವ ತಮ್ಮ ಫಾರ್ಮ್‌ಹೌಸ್‌ನಲ್ಲಿ ರಾಕಿಂಕ್ ಸ್ಟಾರ್, ರಾಕಿ ಭಾಯ್ ಖ್ಯಾತಿಯ ಚಿತ್ರನಟ ಯಶ್ ಸಂಕ್ರಾತಿ ಹಬ್ಬವನ್ನು ಸರಳವಾಗಿ ಆಚರಿಸಿದ್ದಾರೆ. ತಂದೆ, ತಾಯಿ, ಪತ್ನಿ ರಾಧಿಕಾ ಪಂಡಿತ್ ಮಕ್ಕಳಾದ ಆಯ್ರಾ ಮತ್ತು ಯಥರ್ವ್‌ ಜೊತೆಗೆ ಯಶ್ ಹಬ್ಬವನ್ನು ಆಚರಿಸಿದ್ದಾರೆ. ಈ ಚಿತ್ರಗಳನ್ನು ಅವರು ಟ್ವಿಟರ್ ನಲ್ಲಿಹಂಚಿಕೊಂಡಿದ್ದಾರೆ.  

ಇಂದಿನಿಂದ ಮಾರುತಿ ಸುಜುಕಿಯ ಎಲ್ಲಾ ಮಾಡೆಲ್‌ ಕಾರುಗಳ ಬೆಲೆಯಲ್ಲಿ 1.1% ಹೆಚ್ಚಳ

ಬೆಂಗಳೂರು: ಉತ್ಪಾದಕ ವೆಚ್ಚದ ಒತ್ತಡದಿಂದಾಗಿ ಜನವರಿ 16 ರಿಂದ ಜಾರಿಗೆ ಬರುವಂತೆ ತನ್ನ ಕಾರುಗಳ ಎಲ್ಲ ಮಾದರಿಗಳಾದ್ಯಂತ ಸರಾಸರಿ 1.1% ರಷ್ಟು ಬೆಲೆಗಳನ್ನು ಹೆಚ್ಚಿಸುತ್ತಿದೆ ಎಂದು ಭಾರತದ ಅಗ್ರ ಕಾರು ತಯಾರಕ ಮಾರುತಿ ಸುಜುಕಿ ಸೋಮವಾರ ಹೇಳಿದೆ. ನಿಯಂತ್ರಕ ಅಗತ್ಯತೆಗಳಿಗೆ ಸಂಬಂಧಿಸಿದ ಹೆಚ್ಚಿನ ಹಣದುಬ್ಬರ ಮತ್ತು ವೆಚ್ಚದ ಒತ್ತಡದಿಂದ ಪ್ರಭಾವವನ್ನು ರವಾನಿಸಲು ಜನವರಿಯಲ್ಲಿ ಬೆಲೆಗಳನ್ನು ಹೆಚ್ಚಿಸಬೇಕಾಗುತ್ತದೆ ಎಂದು ಡಿಸೆಂಬರ್‌ನಲ್ಲಿ ಮಾರುತಿ ಹೇಳಿತ್ತು. ಕಂಪನಿಯು ವೆಚ್ಚವನ್ನು ಕಡಿಮೆ ಮಾಡಲು ಮತ್ತು ಹೆಚ್ಚಳವನ್ನು ಭಾಗಶಃ ಸರಿದೂಗಿಸಲು ಗರಿಷ್ಠ ಪ್ರಯತ್ನಗಳನ್ನು ಮಾಡುತ್ತಿರುವಾಗ, […]

ಹಿಂದೂ ವಿವಾಹ ಕಾಯ್ದೆಯಡಿ ಅಂತರ್ ಧರ್ಮೀಯ ಜೋಡಿಯ ವಿವಾಹಗಳು ಅಸಿಂಧು: ಸುಪ್ರೀಂಕೋರ್ಟ್

ನವದೆಹಲಿ: ಹಿಂದೂ ವಿವಾಹ ಕಾಯ್ದೆಯಡಿ ಅಂತರ್ ಧರ್ಮೀಯ ಜೋಡಿಗಳ ನಡುವಿನ ಯಾವುದೇ ವಿವಾಹವು ಅಸಿಂಧು ಮತ್ತು ಹಿಂದೂಗಳು ಮಾತ್ರ ಅದೇ ಕಾನೂನಿನ ಅಡಿಯಲ್ಲಿ ಮದುವೆಯಾಗಬಹುದು ಎಂದು ಸುಪ್ರೀಂ ಕೋರ್ಟ್ ಹೇಳಿದೆ. 2017ರ ಆಗಸ್ಟ್‌ನಲ್ಲಿ ತೆಲಂಗಾಣ ಹೈಕೋರ್ಟ್‌ನ ಆದೇಶವನ್ನು ಪ್ರಶ್ನಿಸಿ ಸಲ್ಲಿಸಲಾಗಿದ್ದ ಅರ್ಜಿಯ ವಿಚಾರಣೆ ವೇಳೆ ನ್ಯಾಯಮೂರ್ತಿಗಳಾದ ಕೆ.ಎಂ.ಜೋಸೆಫ್ ಮತ್ತು ಬಿ.ವಿ.ನಾಗರತ್ನ ಅವರ ಪೀಠ ಶುಕ್ರವಾರ ಈ ಅಭಿಪ್ರಾಯ ವ್ಯಕ್ತಪಡಿಸಿದೆ. ಮುಂದಿನ ವಿಚಾರಣೆಯನ್ನು ನ್ಯಾಯಾಲಯವು ಫೆಬ್ರವರಿಗೆ ಮುಂದೂಡಿದೆ. ಅರ್ಜಿದಾರರು ಕ್ರಿಶ್ಚಿಯನ್ ಮತದವರಾಗಿದ್ದು, ದೂರುದಾರ ಮಹಿಳೆ ಹಿಂದೂ ಧರ್ಮಕ್ಕೆ ಸೇರಿದವರಾಗಿದ್ದಾರೆ. […]