ಇಂದು ಸಂಜೆ ದೂರದರ್ಶನದಲ್ಲಿ ಮಕರವಿಳಕ್ಕು ಉತ್ಸವದ ನೇರಪಸಾರ

ಶಬರಿಮಲೆ: ಅಯ್ಯಪ್ಪ ವೃತಧಾರಿಗಳು ಜೀವನದಲ್ಲಿ ಒಂದು ಬಾರಿಯಾದರೂ ದರ್ಶನ ಪಡೆಯಬೇಕೆಂದು ಹಂಬಲಿಸುವ ಮಕರ ಜ್ಯೋತಿ ದರ್ಶನವು ಪ್ರತಿವರ್ಷವೂ ಜನವರಿ 14 ಅಥವಾ 15 ರಂದು ವೀಕ್ಷಿಸಬಹುದಾಗಿದ್ದು, ಇದು ಶಬರಿಮಲೆಯಿಂದ ನಾಲ್ಕು ಕಿಲೋಮೀಟರ್ ದೂರದಲ್ಲಿರುವ ಪೊನ್ನಂಬಲೆಮೇಡುವಿನಿಂದ ಸಂಜೆ 6:00 ರಿಂದ 8:00 ರ ಮಧ್ಯದಲ್ಲಿ ಕಾಣಲು ಸಿಗುತ್ತದೆ. ಮಕರವಿಳಕ್ಕು ಉತ್ಸವವನ್ನು ಶಬರಿಮಲೆ ದೇವಸ್ಥಾನದಿಂದ ಜನವರಿ 14 ರಂದು ಸಂಜೆ 5:00 ಗಂಟೆಯಿಂದ ನೇರ ಪ್ರಸಾರ ಮಾಡಲಾಗುವುದು ಎಂದು ದೂರದರ್ಶನ ಅಧಿಕೃತ ಟ್ವಿಟರ್ ಖಾತೆ ಪ್ರಕಟಿಸಿದೆ. Watch Makaravilakku Festival […]

ಉಡುಪಿ ಕಾರ್ಸ್ ನ 5 ನೇ ವರ್ಷದ ಸಂಭ್ರಮಾಚರಣೆ

ಉಡುಪಿ: ಉಡುಪಿ ಕಾರ್ಸ್ ಸಂಸ್ಥೆಯು ಯಶಸ್ವಿ 5 ವರ್ಷಗಳನ್ನು ಪೂರೈಸಿದ್ದು, ಇದೀಗ 6 ಆರನೇ ವರ್ಷಕ್ಕೆ ಕಾಲಿಟ್ಟಿದೆ. ಈ ಸಂಭ್ರಮವನ್ನು ತನ್ನ ಗ್ರಾಹಕರ ಜೊತೆ ಹಂಚಿಕೊಳ್ಳುವ ಸಲುವಾಗಿ ಸಂಸ್ಥೆಯು ಕಾರ್ಯಕ್ರಮವನ್ನು ಏರ್ಪಡಿಸಿ ಕೃತಜ್ಞತೆ ಸಲ್ಲಿಸಿತು. ಈ ಸಂದರ್ಭದಲ್ಲಿ ಕೇಕ್ ಕಟ್ ಮಾಡುವ ಮೂಲಕ ಸಂಭ್ರಮವನ್ನು ಹಂಚಿಕೊಳ್ಳಲಾಯಿತು. ಮಾಂಡವಿ ಗ್ರೂಪ್ ನ ಜೆರಿ ವಿನ್ಸೆಂಟ್ ಡಯಾಸ್ ಮತ್ತು ಗ್ಲೆನ್ ಡಯಾಸ್ ಸಂಸ್ಥೆಗೆ ಶುಭಹಾರೈಸಿದರು. ಜೇಸನ್ ಡಯಾಸ್, ಸಂಸ್ಥೆಯ ಪಾಲುದಾರರಾದ ಮೊಹಮ್ಮದ್ ಅಶ್ರಫ್, ಝಿಯಾದ್ ಅಹಮದ್ ಮತ್ತು ಸಿಬ್ಬಂದಿಗಳು ಉಪಸ್ಥಿತರಿದ್ದರು.

ಕೈಗಾರಿಕೆ ಮತ್ತು ವಾಣಿಜ್ಯ ಇಲಾಖೆಯಿಂದ ಕರಕುಶಲಕರ್ಮಿಗಳಿಗೆ ಸಾಲ-ಸಹಾಯಧನ ಲಭ್ಯ

ಉಡುಪಿ: ಕೈಗಾರಿಕೆ ಮತ್ತು ವಾಣಿಜ್ಯ ಇಲಾಖೆಯ ವತಿಯಿಂದ ವಿವಿಧ ವರ್ಗದ ಕುಶಲಕರ್ಮಿಗಳಿಗೆ ತಲಾ 50,000 ರೂ. ವರೆಗೆ ಸಾಲ-ಸಹಾಯಧನ ಯೋಜನೆಯನ್ನು ಜಾರಿಗೊಳಿಸಲಾಗಿದ್ದು, ವಾಣಿಜ್ಯ ಬ್ಯಾಂಕ್, ಸಹಕಾರ ಬ್ಯಾಂಕ್ ಹಾಗೂ ಪ್ರಾದೇಶಿಕ ಗ್ರಾಮೀಣ ಬ್ಯಾಂಕ್ (ಪತ್ತಿನ ಸಹಕಾರ ಸಂಘಗಳನ್ನು ಹೊರತುಪಡಿಸಿ) ಗಳಿಂದ ಮಂಜೂರಾದ ಸಾಲದ ಮೇಲೆ ಇಲಾಖೆ ವತಿಯಿಂದ ಶೇ. 30 ರಷ್ಟು ಗರಿಷ್ಠ 15,000 ರೂ. ವರೆಗೆ ಸಹಾಯಧನ ನೀಡಲಾಗುವುದು. ಜಿಲ್ಲೆಯ 18 ವರ್ಷ ಮೇಲ್ಪಟ್ಟ ಕಮ್ಮಾರಿಕೆ, ಮರಗೆಲಸ, ಬುಟ್ಟಿ ಹೆಣೆಯುವವರು, ಗೋಲ್ಡ್ ಸ್ಮಿತ್ (ಆಭರಣ ತಯಾರಿಕೆ), […]

ನಿಟ್ಟೂರು ಅಡ್ಕದಕಟ್ಟೆ ನ್ಯಾಯಬೆಲೆ ಅಂಗಡಿಯಲ್ಲಿ ಪಡಿತರ ವಿತರಣೆ ಪ್ರಾರಂಭ

ಉಡುಪಿ: ಉಡುಪಿ ತಾಲೂಕಿನ ನಗರ ವ್ಯಾಪ್ತಿಯ ಗುಂಡಿಬೈಲು ಹಾಗೂ ಅಂಬಾಗಿಲು ಪ್ರದೇಶದ ಪಡಿತರದಾರರಿಗೆ ಅನುಕೂಲವಾಗುವಂತೆ ನಿಟ್ಟೂರು ಗ್ರಾಮದ ಅಡ್ಕದಕಟ್ಟೆಯ ಶ್ರೀ ಗುರು ರಾಘವೇಂದ್ರ ಕ್ರೆಡಿಟ್ ಕೋ ಆಪರೇಟಿವ್ ಸೊಸೈಟಿ ಇಲ್ಲಿ ಹೊಸ ನ್ಯಾಯಬೆಲೆ ಅಂಗಡಿ ತೆರೆಯಲಾಗಿದ್ದು, ಗುಂಡಿಬೈಲು ಹಾಗೂ ಅಂಬಾಗಿಲು ಪ್ರದೇಶದ ಪಡಿತರದಾರರು ಜನವರಿ ತಿಂಗಳಿಂದ ಸದ್ರಿ ನ್ಯಾಯಬೆಲೆ ಅಂಗಡಿಯಲ್ಲಿ ಪಡಿತರವನ್ನು ಪಡೆಯಬಹುದಾಗಿದೆ ಎಂದು ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯ ಉಪನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಜಿಲ್ಲಾ ಮಟ್ಟದ ಯುವ ವಿದ್ಯಾರ್ಥಿ ಸಮ್ಮೇಳನ ಸಂಪನ್ನ

ಉಡುಪಿ: ಶುಕ್ರವಾರ ಉಡುಪಿ ಚರ್ಚಿನಲ್ಲಿ, ನೆಹರೂ ಯುವಕೇಂದ್ರ ಸಂಘಟನೆ ಉಡುಪಿ ಜಿಲ್ಲೆ, ಯುವ ವಿದ್ಯಾರ್ಥಿ ಸಂಚಲನ, ಉಡುಪಿ ಧರ್ಮಕ್ಷೇತ್ರ ಇವರ ಜಂಟಿ ಆಶ್ರಯದಲ್ಲಿ ಉಡುಪಿ ಜಿಲ್ಲಾ ಮಟ್ಟದ ಯುವ ವಿದ್ಯಾರ್ಥಿ ಸಮ್ಮೇಳನವನ್ನು ಏರ್ಪಡಿಸಲಾಗಿತ್ತು. ಕರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಜಿಲ್ಲಾಧಿಕಾರಿ ಕೂರ್ಮಾ ರಾವ್, ಸಮಾಜದಲ್ಲಿ ಬದುಕುವ ಪ್ರತಿಯೋರ್ವನೂ ಮೊದಲು ಮಾನವನಾಗುವತ್ತ ಕಾರ್ಯಪ್ರವೃತ್ತನಾದರೆ ಸಮಾಜದಲ್ಲಿ ಶಾಂತಿ ನೆಲೆಸಲು ಸಾಧ್ಯ. ಮನುಷ್ಯ ಸದಾ ಕ್ರಿಯಾಶೀಲನಾಗಿರಲು ಬಯಸುತ್ತಾನೆ. ಯಾವುದಾದರೂ ಚಟುವಟಿಕೆಯಲ್ಲಿ ತನ್ನನ್ನೇ ತಾನು ತೊಡಗಿಸಿಕೊಳ್ಳುತ್ತಾನೆ. ಇದು ಮನುಷ್ಯರಲ್ಲಿ ಅಂತರ್ಗತವಾಗಿರುವ ಗುಣ. ವಿದ್ಯಾರ್ಥಿಗಳು ತಮ್ಮ […]