ಉಡುಪಿ ಕಾರ್ಸ್ ನ 5 ನೇ ವರ್ಷದ ಸಂಭ್ರಮಾಚರಣೆ

ಉಡುಪಿ: ಉಡುಪಿ ಕಾರ್ಸ್ ಸಂಸ್ಥೆಯು ಯಶಸ್ವಿ 5 ವರ್ಷಗಳನ್ನು ಪೂರೈಸಿದ್ದು, ಇದೀಗ 6 ಆರನೇ ವರ್ಷಕ್ಕೆ ಕಾಲಿಟ್ಟಿದೆ. ಈ ಸಂಭ್ರಮವನ್ನು ತನ್ನ ಗ್ರಾಹಕರ ಜೊತೆ ಹಂಚಿಕೊಳ್ಳುವ ಸಲುವಾಗಿ ಸಂಸ್ಥೆಯು ಕಾರ್ಯಕ್ರಮವನ್ನು ಏರ್ಪಡಿಸಿ ಕೃತಜ್ಞತೆ ಸಲ್ಲಿಸಿತು. ಈ ಸಂದರ್ಭದಲ್ಲಿ ಕೇಕ್ ಕಟ್ ಮಾಡುವ ಮೂಲಕ ಸಂಭ್ರಮವನ್ನು ಹಂಚಿಕೊಳ್ಳಲಾಯಿತು.

ಮಾಂಡವಿ ಗ್ರೂಪ್ ನ ಜೆರಿ ವಿನ್ಸೆಂಟ್ ಡಯಾಸ್ ಮತ್ತು ಗ್ಲೆನ್ ಡಯಾಸ್ ಸಂಸ್ಥೆಗೆ ಶುಭಹಾರೈಸಿದರು.

ಜೇಸನ್ ಡಯಾಸ್, ಸಂಸ್ಥೆಯ ಪಾಲುದಾರರಾದ ಮೊಹಮ್ಮದ್ ಅಶ್ರಫ್, ಝಿಯಾದ್ ಅಹಮದ್ ಮತ್ತು ಸಿಬ್ಬಂದಿಗಳು ಉಪಸ್ಥಿತರಿದ್ದರು.