ಉಡುಪಿ ಮಹಿಳಾ ಪ್ರಥಮ ದರ್ಜೆ ಕಾಲೇಜು: ವಿದ್ಯಾರ್ಥಿ ವೇದಿಕೆ ಮತ್ತು ಪ್ರತಿಭಾ ದಿನಾಚರಣೆಯ ಉದ್ಘಾಟನಾ ಕಾರ್ಯಕ್ರಮ
ಉಡುಪಿ:ಡಾ. ಜಿ. ಶಂಕರ್ ಸರ್ಕಾರಿ ಮಹಿಳಾ ಪ್ರಥಮ ದರ್ಜೆ ಕಾಲೇಜು ಮತ್ತು ಸ್ನಾತಕೋತ್ತರ ಅಧ್ಯಯನ ಕೇಂದ್ರ, ಅಜ್ಜರಕಾಡು, ಉಡುಪಿ ಇಲ್ಲಿನ 2022-23ನೇ ಸಾಲಿನ ವಿದ್ಯಾರ್ಥಿ ವೇದಿಕೆ ಮತ್ತು ಪ್ರತಿಭಾ ದಿನಾಚರಣೆಯ ಉದ್ಘಾಟನಾ ಕಾರ್ಯಕ್ರಮವನ್ನು ಮಂಗಳವಾರ ಮಹಾತ್ಮ ಗಾಂಧಿ ಜಿಲ್ಲಾ ಕ್ರೀಡಾಂಗಣದಲ್ಲಿ ಹಮ್ಮಿಕೊಳಲಾಯಿತು. ನಾಡೋಜ ಡಾ. ಜಿ.ಶಂಕರ್ ಕಾಲೇಜಿನ ಮಹಾ ಪೋಷಕರು ಕಾರ್ಯಕ್ರಮವನ್ನು ಉದ್ಘಾಟಿಸಿ “ಉಡುಪಿ ಜಿಲ್ಲೆಯ ಲೀಡ್ ಕಾಲೇಜು ಆಗಿರುವ ನಮ್ಮ ಕಾಲೇಜಿನಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಬಡ ಮತ್ತು ಮದ್ಯಮ ವರ್ಗದ ವಿದ್ಯಾರ್ಥಿನಿಯರು ವಿದ್ಯಾಭ್ಯಾಸ ಮಾಡುತ್ತಿದ್ದಾರೆ. ಕಾಲೇಜು […]
ಜ.13 ರಿಂದ 15 ಪವರ್ ಪ್ರಸ್ತುತ ಪಡಿಸುವ 4 ನೇ ಆವೃತ್ತಿಯ ಪವರ್ ಪರ್ಬ 2023- ಗ್ರಾಂಡ್ ವಸ್ತು ಪ್ರದರ್ಶನ ಮತ್ತು ಮಾರಾಟ ಮೇಳ
ಉಡುಪಿ: ಪವರ್ ಪರ್ಬವು ಪವರ್ ಸಂಸ್ಥೆಯಿಂದ ಉಡುಪಿಯಲ್ಲಿ ಆಯೋಜಿಸಲ್ಪಡುತ್ತಿರುವ ಅರ್ಥಪೂರ್ಣ ಕಾರ್ಯಕ್ರಮವಾಗಿದ್ದು ಮಹಿಳಾ ಉದ್ಯಮಿಗಳ ಉತ್ಪನ್ನಗಳಿಗೆ ಮಾರುಕಟ್ಟೆ ಒದಗಿಸುವ ಪ್ರಮುಖ ಉದ್ದೇಶವನ್ನು ಹೊಂದಿದೆ ಎಂದು ಪವರ್ ಸಂಸ್ಥೆಯ ಅಧ್ಯಕ್ಷೆ ಪೂನಂ ಶೆಟ್ಟಿ ಹೇಳಿದರು. ಅವರು ಮಂಗಳವಾರ ನಗರದ ಪತ್ರಿಕಾ ಭವನದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು. ಪವರ್ ಪರ್ಬ ಉಡುಪಿಯ ಜನರ ಆಕರ್ಷಣೆಯ ಹಾಗೂ ಮೆಚ್ಚುಗೆಯ ಕಾರ್ಯಕ್ರಮವಾಗಿದ್ದು ಉತ್ತಮ ಜನ ಸ್ಪಂದನೆಗೆ ಪಾತ್ರವಾಗಿದೆ. ಮಹಿಳಾ ಉದ್ಯಮಿಗಳಿಂದಲೇ ಉತ್ಪಾದಿಸಿ ಮಾರುಕಟ್ಟೆ ಮಾಡಲ್ಪಡುತ್ತಿರುವ ವಿಭಿನ್ನ ಉತ್ಪನ್ನಗಳು ಮತ್ತು ಸೇವೆಗಳ ಪರಿಚಯ ಹಾಗೂ ಮಾಹಿತಿಯನ್ನು […]
ಶ್ರೀ ಉಮಾಮಹೇಶ್ವರ ದೇವಸ್ಥಾನದಲ್ಲಿ ಅತಿರುದ್ರಯಾಗದ ಪೂರ್ವ ತಯಾರಿ ಪ್ರಾರಂಭ
ಉಡುಪಿ: ಶ್ರೀ ಉಮಾಮಹೇಶ್ವರ ದೇವಸ್ಥಾನದಲ್ಲಿ ಫೆಬ್ರವರಿ 22 ರಿಂದ ಪ್ರಾರಂಭ ಗೊಳ್ಳಲಿರುವ ಅತಿರುದ್ರ ಮಹಾಯಾಗದ ಹೋಮ ಕುಂಡಗಳು, ಸಭಾಂಗಣ, ಭೋಜನ ಶಾಲೆ, ಉಗ್ರಾಣ, ಪಾಕಶಾಲೆ ಇತ್ಯಾದಿ ವ್ಯವಸ್ತೆ ಗಳಿಗೋಸ್ಕರ ಜಾಗ ಸಮತಟ್ಟುಗೊಳಿಸುವ ಕಾರ್ಯವು ದೇವಸ್ಥಾನ ಅಭಿವೃದ್ಧಿ ಟ್ರಸ್ಟ್ ನ ಅಧ್ಯಕ್ಷ ಮಹೇಶ್ ಠಾಕೂರ್ ನೇತೃತ್ವದಲ್ಲಿ ಇಂದು ನಡೆಯಿತು. ಈ ಸಂದರ್ಭದಲ್ಲಿ ಆಡಳಿತ ಮೊಕ್ತೇಸರ ಸುಭಾಕರ ಸಾಮಂತ್ ಮತ್ತು ದಿನೇಶ್ ಪ್ರಭು, ಶಾಶ್ವತ ಟ್ರಸ್ಟಿ ದಿನೇಶ್ ಸಾಮಂತ್, ಇತರ ಟ್ರಸ್ಟಿ ಗಳು ಮತ್ತು ಸದಸ್ಯರ ಉಪಸ್ಥಿತರಿದ್ದರು.
ಹಿರಿಯ ಸಾಹಿತಿ ಸಾರಾ ಅಬೂಬಕ್ಕರ್ ಇನ್ನಿಲ್ಲ
ಮಂಗಳೂರು: ಹಿರಿಯ ಸಾಹಿತಿ ಚಿಂತಕಿ ಸಾರಾ ಅಬೂಬಕ್ಕರ್ (86 ವರ್ಷ) ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಮಂಗಳವಾರ ಮಧ್ಯಾಹ್ನ 1 ಗಂಟೆ ಸುಮಾರಿಗೆ ನಿಧನ ಹೊಂದಿದದ್ದಾರೆ. ಕರ್ನಾಟಕ ಸಾಹಿತ್ಯ ಅಕಾಡಮಿ ಸೇರಿದಂತೆ ವಿವಿಧ ಪ್ರಶಸ್ತಿಗಳಿಗೆ ಅವರು ಭಾಜನರಾಗಿದ್ದರು. ಕಾಸರಗೋಡಿನ ಚಂದ್ರಗಿರಿ ಎಂಬಲ್ಲಿ ಜೂನ್ 30, 1936ರಂದು ಜನಿಸಿದ್ದ ಸಾರಾ ಅಬೂಬಕ್ಕರ್ ಮಹಿಳಾ ಸಮಾನತೆಮತ್ತು ಸಬಲೀಕರಣದ ಚಿಂತನೆಯನ್ನು ಹೊಂದಿದ್ದರು. ಅವರ ಮೊದಲ ಕಾದಂಬರಿ ‘ಚಂದ್ರಗಿರಿಯ ತೀರದಲ್ಲಿ’ ಬಹಳ ಪ್ರಸಿದ್ದವಾಗಿದೆ. ಇವರು 10ಕ್ಕೂ ಹೆಚ್ಚು ಕಾದಂಬರಿ, 6 ಕಥಾ ಸಂಕಲನ, 5 […]
ಸ್ವರಕ್ಷಣೆ ಮತ್ತು ಜಾಗರೂಕತೆ ಮಹಿಳೆಯರಿಗೆ ಭೂಷಣ: ಎಸ್.ಐ ವೆಲೆಟ್ ಫೆಮಿನಾ
ಉಡುಪಿ: ತಂತ್ರಜ್ಞಾನ ಬೆಳೆದಂತೆ ಮೋಸದ ಬಲೆಯಲ್ಲಿ ಬೀಳಿಸಲು ಪ್ರಯತ್ನಿಸುವವರ ಸಂಖ್ಯೆ ಹೆಚ್ಚಾಗುತ್ತಿದೆ. ಇಂದು ಅವಿದ್ಯಾವಂತರಿಗಿಂತ ವಿದ್ಯಾವಂತರೆ ಹೆಚ್ಚು ಹೆಚ್ಚು ಮೋಸದ ಬಲೆಗೆ ಬೀಳುತ್ತಿದ್ದಾರೆ. ಪ್ರಸ್ತುತ ಸನ್ನಿವೇಶದಲ್ಲಿ ಹೆಣ್ಣು ಮಕ್ಕಳು ಮತ್ತು ಮಹಿಳೆಯರು ತಮ್ಮ ಬಗ್ಗೆ ಜಾಗರೂಕರಾಗಿರುವ ಅವಶ್ಯಕತೆ ಹೆಚ್ಚಿದೆ. ಸ್ವರಕ್ಷಣೆ ಮತ್ತು ಜಾಗರೂಕತೆ ಎಲ್ಲ ಕಾಲ ಮತ್ತು ಸನ್ನಿವೇಶಗಳಲ್ಲೂ ಮಹಿಳೆಯರಿಗೆ ಭೂಷಣ ಎಂದು ಉಡುಪಿ ಪೊಲೀಸ್ ಸಬ್ ಇನ್ಸ್ಪೆಕ್ಟರ್ ಶ್ರೀಮತಿ ವೆಲೆಟಾ ಫೆಮಿನಾ ಅಭಿಪ್ರಾಯಪಟ್ಟರು. ಅವರು ಇತ್ತೀಚಿಗೆ ಉಡುಪಿಯ ಬಾಲಕಿಯರ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಪ್ರೌಢಶಾಲಾ […]