ಸ್ಕೂಟಿಗೆ ಢಿಕ್ಕಿ ಹೊಡೆದು 7 ಕಿ.ಮೀ ಎಳೆದೊಯ್ದು ಯುವತಿಯ ಸಾವಿಗೆ ಕಾರಣವಾಯ್ತು ಕುಡಿದ ಮತ್ತಿನ ವಾಹನ ಚಲಾವಣೆ

ದೆಹಲಿ: ಭಾನುವಾರ ಮುಂಜಾನೆ ದೆಹಲಿಯ ಸುಲ್ತಾನ್‌ಪುರಿಯಲ್ಲಿ ಕಾರೊಂದು ಸ್ಕೂಟಿಗೆ ಢಿಕ್ಕಿ ಹೊಡೆದು ಸುಮಾರು ಏಳು ಕಿಲೋಮೀಟರ್‌ಗಳವರೆಗೆ ಎಳೆದೊಯ್ದ ಪರಿಣಾಮ 20 ವರ್ಷದ ಯುವತಿಯೊಬ್ಬರು ಸಾವನ್ನಪ್ಪಿದ್ದಾರೆ. ಅಪಘಾತದ ಸಮಯದಲ್ಲಿ ಮದ್ಯದ ಅಮಲಿನಲ್ಲಿದ್ದ ದೀಪಕ್ ಖನ್ನಾ (26), ಅಮಿತ್ ಖನ್ನಾ (25), ಕ್ರಿಶನ್ (27), ಮಿಥುನ್ (26) ಮತ್ತು ಮನೋಜ್ ಮಿತ್ತಲ್ (27) ಈ ಐವರನ್ನು ನಿರ್ಲಕ್ಷದ ಸಾವಿಗೆ ಕಾರಣರಾದ ಆರೋಪದ ಮೇಲೆ ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಈ ಭೀಕರ ಅಪಘಾತಕ್ಕೆ ಸಂಬಂಧಿಸಿದಂತೆ ದೆಹಲಿ ಮಹಿಳಾ ಆಯೋಗವು ದೆಹಲಿ […]

ಬೆಂಗಳೂರು-ಮಂಗಳೂರು ಮಾರ್ಗಕ್ಕೆ ಗತಿ ಶಕ್ತಿ: ರಾ.ಹೆ -75ರ ನೆಲಮಂಗಲ-ದೇವಿಹಳ್ಳಿ ರಸ್ತೆ ಕಾಮಗಾರಿ ಸಂಪೂರ್ಣ

ಬೆಂಗಳೂರು: ಬೆಂಗಳೂರು-ಮಂಗಳೂರು ರಾ.ಹೆ-75 ರಲ್ಲಿ ನೆಲಮಂಗಲ-ದೇವಿಹಳ್ಳಿ ನಡುವಿನ ವಿಭಾಗವನ್ನು ಯಶಸ್ವಿಯಾಗಿ ನಿರ್ಮಿಸಲಾಗಿದೆ. ಈ ವಿಭಾಗವು ಮೈಸೂರು, ಸಕಲೇಶಪುರ, ಹೆಳೇಬೀಡು, ಧರ್ಮಸ್ಥಳ ಮುಂತಾದ ಪ್ರವಾಸಿ ತಾಣಗಳಿಗೆ ವೇಗದ ಸಂಪರ್ಕವನ್ನು ಸಶಕ್ತಗೊಳಿಸುತ್ತದೆ . ವಾರಾಂತ್ಯದಲ್ಲಿ ಈ ಮಾರ್ಗವು ಸುಮಾರು 30000 ವಾಹನಗಳನ್ನು ಧಾರಣೆ ಮಾಡುವ ಸಾಮಾರ್ಥ್ಯ ಹೊಂದಿದೆ ಎಂದು ಕೇಂದ್ರ ರಸ್ತೆ ಮತ್ತು ಸಾರಿಗೆ ಸಚಿವ ನಿತಿನ್ ಗಡ್ಕರಿ ಹೇಳಿದ್ದಾರೆ. ಇದು ಬೆಂಗಳೂರು-ಮಂಗಳೂರು, ಬೆಂಗಳೂರು-ಮೈಸೂರು, ಬೆಂಗಳೂರು-ಹಾಸನ-ಸಕಲೇಶಪುರ-ಧರ್ಮಸ್ಥಳವನ್ನು ಸಂಪರ್ಕಿಸುವ ಮಾರ್ಗವಾಗಿಯೂ ಕಾರ್ಯನಿರ್ವಹಿಸುತ್ತದೆ. ಮೈಕ್ರೊ-ಸರ್ಫೇಸಿಂಗ್ ಮಿಶ್ರಣದ ಬಾಗುವ ಶಕ್ತಿಯನ್ನು ಹೆಚ್ಚಿಸಲು ಫೈಬರ್ ಬಲವರ್ಧಿತ […]