ಪೌರಕಾರ್ಮಿಕರಿಗೆ ಸರಕಾರದ ಸೌಲಭ್ಯಗಳ ಸಮಗ್ರ ಮಾಹಿತಿ ನೀಡಿ: ಜಿಲ್ಲಾಧಿಕಾರಿ ಕೂರ್ಮರಾವ್ ಎಂ

ಉಡುಪಿ: ಜಿಲ್ಲೆಯ ಎಲ್ಲಾ ನಗರ ಸ್ಥಳೀಯ ಸಂಸ್ಥೆಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಪೌರ ಕಾರ್ಮಿಕರಿಗೆ, ಅವರಿಗೆ ಸರ್ಕಾರದ ವಿವಿಧ ಯೋಜನೆಗಳಲ್ಲಿ ದೊರೆಯುವ ಸೌಲಭ್ಯಗಳ ಬಗ್ಗೆ ಸಮಗ್ರ ಮಾಹಿತಿಯನ್ನು ನೀಡುವಂತೆ ಜಿಲ್ಲಾಧಿಕಾರಿ ಕೂರ್ಮಾರಾವ್ ಎಂ ಹೇಳಿದರು. ಅವರು ಶುಕ್ರವಾರ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ನಡೆದ ಜಿಲ್ಲಾ ಮಟ್ಟದ ಸಫಾಯಿ ಕರ್ಮಚಾರಿಗಳ ಜಿಲ್ಲಾ ಜಾಗೃತ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಜಿಲ್ಲೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಪೌರಕಾರ್ಮಿಕರಿಗೆ ಮತ್ತು ಅವರು ಕುಟುಂಬದವರಿಗೆ ವಿವಿಧ ಇಲಾಖೆಗಳಲ್ಲಿ ಹಲವು ಸೌಲಭ್ಯಗಳಿದ್ದು, ಈ ಬಗ್ಗೆ ಎಲ್ಲಾ ಸ್ಥಳೀಯ ಸಂಸ್ಥೆಗಳ ಅಧಿಕಾರಿಗಳು […]

ಆಯುಷ್ ಟಿ.ವಿಯಲ್ಲಿ ಯೋಗ ಬೋಧಕರಾಗಲು ಅವಕಾಶ

ಉಡುಪಿ: ಆಯುಷ್ ಟಿ.ವಿಯು ಕಳೆದ 7 ವರ್ಷಗಳಿಂದ ನಾಡಿನ ಜನರ ಆರೋಗ್ಯ ಮತ್ತು ಭಾರತೀಯ ಪ್ರಾಚೀನ ವೈದ್ಯಕೀಯ ಪರಂಪರೆಯನ್ನು ವಿಶ್ವಕ್ಕೆ ತಲುಪಿಸುವ ನಿಟ್ಟಿನಲ್ಲಿ ಕಾರ್ಯನಿರ್ವಹಿಸುತ್ತಿದ್ದು, ಇದರೊಂದಿಗೆ ಯೋಗದಿಂದ ಆರೋಗ್ಯವಾಗಿರಲು ಈಗಾಗಲೇ ಹಲವಾರು ಕಾರ್ಯಕ್ರಮಗಳನ್ನು ರೂಪಿಸಿ, ಜನರಿಗೆ ತಲುಪಿಸಿದೆ. ಯೋಗವನ್ನು ದೈನಂದಿನ ಜೀವನದ ಒಂದು ಭಾಗವಾಗಿಸುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರದ ಅಂಗವಾಗಿ ಮೊರಾರ್ಜಿ ದೇಸಾಯಿ ರಾಷ್ಟ್ರೀಯ ಯೋಗ ಸಂಸ್ಥೆ (ಎಂ.ಡಿ.ಎನ್.ವೈ) ಯ ಯೋಗ ಸರ್ಟಿಫಿಕೇಷನ್ ಬೋರ್ಡ್ ಸಿಬ್ಬಂದಿ ಪ್ರಮಾಣೀಕರಣ ಮಾನ್ಯತೆಯನ್ನು ಆಯುಷ್ ಟಿ.ವಿ ಪಡೆದಿದೆ. ಆಯುಷ್ ಟಿ.ವಿ.ಯು ರಾಜ್ಯದಾದ್ಯಂತ […]

ಕ್ರಿಮಿನಲ್ ಪ್ರಕರಣಗಳ ವಿಚಾರಣೆ ವ್ಯವಸ್ಥೆಯಲ್ಲಿ ಸುಧಾರಣೆ ಅತ್ಯಗತ್ಯ: ಸುಪ್ರೀಂಕೋರ್ಟ್ ನ್ಯಾ.ಅಬ್ದುಲ್ ನಜೀರ್

ಉಡುಪಿ: ನ್ಯಾಯಾಲಯದಲ್ಲಿನ ಕ್ರಿಮಿನಲ್ ಪ್ರಕರಣಗಳಲ್ಲಿ ಶೇ.95 ರಷ್ಟು ಮಂದಿ ಅಂತಿಮ ವಿಚಾರಣೆಯಲ್ಲಿ ನಿರಪರಾಧಿಗಳೆಂದು ಬಿಡುಗಡೆಯಾಗುತ್ತಿದ್ದು, ಇಂತಹ ಪ್ರಕರಣಗಳು ಇತ್ಯರ್ಥಗೊಳ್ಳುವುದಕ್ಕೆ ಸುಮಾರು 10 ವರ್ಷಗಳು ತೆಗೆದುಕೊಳ್ಳಲಿದ್ದು, ಈ ಪ್ರಕ್ರಿಯೆಗಳು ಮುಗಿಯುವವರೆಗೆ ಆಪಾದಿತ ವ್ಯಕ್ತಿಯು ಒಂದು ರೀತಿಯಲ್ಲಿ ಶಿಕ್ಷೆಯನ್ನೇ ಅನುಭವಿಸುತ್ತಾನೆ. ಈ ಬಗ್ಗೆ ಸುಧಾರಣೆಯ ಅಗತ್ಯವಿದೆ ಎಂದು ಸುಪ್ರೀಂಕೋರ್ಟ್ ನ್ಯಾಯಮೂರ್ತಿ ಎಸ್. ಅಬ್ದುಲ್ ನಝೀರ್ ಅಭಿಪ್ರಾಯ ಪಟ್ಟರು. ಅವರು ಶುಕ್ರವಾರ ನಗರದ ಜಿಲ್ಲಾ ಕೋರ್ಟ್ ಆವರಣದಲ್ಲಿ, ಜಿಲ್ಲಾ ನ್ಯಾಯಾಂಗ, ಲೋಕೋಪಯೋಗಿ ಇಲಾಖೆ ಉಡುಪಿ, ವಕೀಲರ ಸಂಘ ಉಡುಪಿ ಮತ್ತು ಬೈಂದೂರು […]

ಡಿ. 10 ರಿಂದ ವಿ4 ಚಾನಲ್ ನಲ್ಲಿ ಪುಟಾಣಿಗಳ ಸಿಂಗಿಂಗ್ ರಿಯಾಲಿಟಿ ಶೋ ಹಾಡು ನೀ ಹಾಡು ಪ್ರಸಾರ

ಉಡುಪಿ: ಸಹಾಯ ಹಸ್ತ ಮಣಿಪಾಲ ಲಯನ್ಸ್ ಚಾರಿಟೇಬಲ್ ಫೌಂಡೇಶನ್ ಇದರ ಪ್ರಾಯೋಜಕತ್ವದಲ್ಲಿ ಹೊಸತೊಂದು ಕಾರ್ಯಕ್ರಮವನ್ನು ಆಯೋಜಿಸಲಾಗಿದೆ. ಅದುವೇ ಹಾಡು ನೀ ಹಾಡು ಸೀಸನ್ ಒನ್ ಸಿಂಗಿಂಗ್ ರಿಯಾಲಿಟಿ ಶೋ. ಪ್ರತಿಭಾವಂತ ಗಾಯಕ-ಗಾಯಕಿ ಮಕ್ಕಳಿಗೆ ಇದು ದೊಡ್ಡ ವೇದಿಕೆಯಾಗಿದೆ. ಉಡುಪಿ ಮತ್ತು ದಕ್ಷಿಣ ಕನ್ನಡದ ಗ್ರಾಮೀಣ ಭಾಗದ ಪ್ರತಿಭಾವಂತ ಗಾಯಕ-ಗಾಯಕಿ ಮುದ್ದು ಪುಟಾಣಿಗಳಿಗೆ ಇಲ್ಲಿ ಹಾಡುವ ಅವಕಾಶ ಸಿಕ್ಕಿದೆ. ಈಗಾಗಲೇ 40 ಅಭ್ಯರ್ಥಿಗಳ ಮೆಗಾ ಆಡಿಷನ್ ನಡೆದಿದ್ದು, ಕಾರ್ಯಕ್ರಮದ ರಿಯಲ್ ಗೇಮ್ ಶುರುವಾಗಿದೆ. 30 ಮುದ್ದು ಪುಟಾಣಿ ಸ್ವರ […]

ಬೆಂಗಳೂರು: ಇಂದು ಸಂಜೆ ಶೆಫ್ ಟಾಕ್ 15 ನೇ ವರ್ಷದ ಸಂಭ್ರಮಾಚರಣೆ

ಬೆಂಗಳೂರು: ಶೆಫ್ ಟಾಕ್ ತನ್ನ 15 ವರ್ಷದ ವಾರ್ಷಿಕೋತ್ಸವವನ್ನು ಆಚರಿಸುತ್ತಿದ್ದು, ಡಿ.31 ರಂದು ಸಂಜೆ 4 ಗಂಟೆಗೆ ಬೊಮ್ಮನಹಳ್ಳಿಯ ಶ್ರೀ ನಾರಾಯಣಗುರು ಆಡಿಟೋರಿಯಂನಲ್ಲಿ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ. ಮುಖ್ಯ ಅತಿಥಿಗಳಾಗಿ ಹಿರೇಹಡಗಲಿ ಹಲಸಂಸ್ಥಾನದ ಶ್ರೀ ಅಭಿನವ ಹಲಶ್ರೀ ಸ್ವಾಮೀಜಿ, ಫಿಶ್ ಮಾರ್ಟ್ ಇಂಡಿಯಾ ಪ್ರೈ.ಲಿನ ಅಧ್ಯಕ್ಷ ಹಾಗೂ ವ್ಯವಸ್ಥಾಪಕ ನಿರ್ದೇಶಕ ಎಸ್.ಕೆ ವಿವೇಕಾನಂದ, ಕರ್ನಾಟಕ ರಾಜ್ಯ ಪೊಲೀಸ್ ಎಸಿಪಿ ಸುಧಾಕರ್, ಬಂಡೇಪಾಳ್ಯ ಪೊಲೀಸ್ ಠಾಣೆಯ ವೃತ್ತ ನಿರೀಕ್ಷಕ ಎಲ್.ವೈ ರಾಜೇಶ್ ಭಾಗವಹಿಸಲಿದ್ದಾರೆ ಎಂದು ಶೆಫ್ ಟಾಕ್ ಫುಡ್ಸ್ ಎಂಡ್ […]