ಬೆಂಗಳೂರು: ಇಂದು ಸಂಜೆ ಶೆಫ್ ಟಾಕ್ 15 ನೇ ವರ್ಷದ ಸಂಭ್ರಮಾಚರಣೆ

ಬೆಂಗಳೂರು: ಶೆಫ್ ಟಾಕ್ ತನ್ನ 15 ವರ್ಷದ ವಾರ್ಷಿಕೋತ್ಸವವನ್ನು ಆಚರಿಸುತ್ತಿದ್ದು, ಡಿ.31 ರಂದು ಸಂಜೆ 4 ಗಂಟೆಗೆ ಬೊಮ್ಮನಹಳ್ಳಿಯ ಶ್ರೀ ನಾರಾಯಣಗುರು ಆಡಿಟೋರಿಯಂನಲ್ಲಿ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ.

ಮುಖ್ಯ ಅತಿಥಿಗಳಾಗಿ ಹಿರೇಹಡಗಲಿ ಹಲಸಂಸ್ಥಾನದ ಶ್ರೀ ಅಭಿನವ ಹಲಶ್ರೀ ಸ್ವಾಮೀಜಿ, ಫಿಶ್ ಮಾರ್ಟ್ ಇಂಡಿಯಾ ಪ್ರೈ.ಲಿನ ಅಧ್ಯಕ್ಷ ಹಾಗೂ ವ್ಯವಸ್ಥಾಪಕ ನಿರ್ದೇಶಕ ಎಸ್.ಕೆ ವಿವೇಕಾನಂದ, ಕರ್ನಾಟಕ ರಾಜ್ಯ ಪೊಲೀಸ್ ಎಸಿಪಿ ಸುಧಾಕರ್, ಬಂಡೇಪಾಳ್ಯ ಪೊಲೀಸ್ ಠಾಣೆಯ ವೃತ್ತ ನಿರೀಕ್ಷಕ ಎಲ್.ವೈ ರಾಜೇಶ್ ಭಾಗವಹಿಸಲಿದ್ದಾರೆ ಎಂದು ಶೆಫ್ ಟಾಕ್ ಫುಡ್ಸ್ ಎಂಡ್ ಹಾಸ್ಪಿಟಾಲಿಟಿ ಸರ್ವಿಸಸ್ ಪ್ರೈ.ಲಿ ನ ವ್ಯವಸ್ಥಾಪಕ ನಿರ್ದೇಶಕ ಡಾ. ಗೋವಿಂದ ಬಾಬು ಪೂಜಾರಿ ತಿಳಿಸಿದ್ದಾರೆ.