ಆಳ್ವಾಸ್ ಶಿಕ್ಷಣ ಸಂಸ್ಥೆ ಮೂಡುಬಿದಿರೆಯಲ್ಲಿ ಜಾಂಬೂರಿಗೆ ಭರ್ಜರಿ ಸಿದ್ಧತೆ: 100 ಎಕರೆ ಜಾಗ, 50 ಸಾವಿರ ವಿದ್ಯಾರ್ಥಿಗಳು, 10 ಸಾವಿರ ತರಬೇತುದಾರರು, ಜಾಂಬೂರಿಯ ವಿಶೇಷತೆಗಳು ಇಲ್ಲಿದೆ ಸಂಪೂರ್ಣ ಮಾಹಿತಿ..
ಮೂಡುಬಿದಿರೆ: ಸ್ಕೌಟ್ಸ್- ಗೈಡ್ ಸಂಸ್ಥೆಯು ಅಂತಾರಾಷ್ಟ್ರೀಯ ಸಂಸ್ಥೆಯಾಗಿದ್ದು, ಪ್ರಪಂಚದ 216ಕ್ಕಿಂತಲೂ ಹೆಚ್ಚಿನ ದೇಶಗಳಲ್ಲಿ ಯುವಜನತೆಯ ಸರ್ವಾಂಗೀಣ ಅಭಿವೃದ್ಧಿಗೆ ಪೂರಕ ಚಟುವಟಿಕೆಗಳೊಂದಿಗೆ ಮುನ್ನಡೆಯುತ್ತಿದೆ.1907ರಲ್ಲಿ ಬೇಡನ್ ಪೋವೆಲ್ ರವರು ಈ ಸಂಸ್ಥೆಯನ್ನು ಸ್ಥಾಪಿಸಿದ್ದರು. ಸ್ಕೌಟ್ಸ್-ಗೈಡ್ಸ್ ಸಂಸ್ಥೆಗೆ ನಮ್ಮ ಜಿಲ್ಲೆಯಲ್ಲೂ 100 ವರ್ಷಗಳ ಇತಿಹಾಸವನ್ನು ಹೊಂದಿದೆ. ಈಗಾಗಲೇ ಜಾಗತಿಕ ಮಟ್ಟದಲ್ಲಿ 24 ಜಾಂಬೂರಿ ಕಾರ್ಯಕ್ರಮ ನಡೆದಿದ್ದು, ದೇಶದಲ್ಲಿ ಪ್ರಪ್ರಥಮ ಬಾರಿಗೆ ಸ್ಕೌಟ್ಸ್-ಗೈಡ್ಸ್ ಅಂತಾರಾಷ್ಟ್ರೀಯ ಸಾಂಸ್ಕೃತಿಕ ಜಾಂಬೂರಿ ಕಾರ್ಯಕ್ರಮ ನಡೆಸುವ ಸೌಭಾಗ್ಯ ದಕ್ಷಿಣ ಕನ್ನಡ ಜಿಲ್ಲೆಯ ಮೂಡುಬಿದಿರೆಯ ಆಳ್ವಾಸ್ ಶಿಕ್ಷಣ ಸಂಸ್ಥೆಗೆ ದೊರಕಿದೆ […]
ಆಳ್ವಾಸ್ ‘ಜಾಂಬೂರಿ’: ಭಾರತ ದೇಶ ಶ್ರೇಷ್ಟ ಪರಂಪರೆ, ಇತಿಹಾಸ ಹಾಗೂ ಸಂಸ್ಕೃತಿಯಿಂದ ಕೂಡಿದೆ: ಮುಖ್ಯಮಂತ್ರಿ
ಮಂಗಳೂರು: ಸಣ್ಣವಯಸ್ಸಿನಲ್ಲಿ ಚರಿತ್ರೆ ಮತ್ತು ಶಿಸ್ತು ರೂಪಿಸುವ ಸುಸಮಯವಾಗಿದ್ದು, ಚರಿತ್ರೆಯ ಜೊತೆಗೆ ಚಾರಿತ್ರ್ಯ ಬೆಳೆಸುವಲ್ಲಿ ಸ್ಕೌಟ್ಸ್ ಮತ್ತು ಗೈಡ್ಸ್ ಬೆಳೆಸುತ್ತದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದ್ದಾರೆ. ದಕ್ಷಿಣ ಕನ್ನಡ ಜಿಲ್ಲೆಯ ಮೂಡಬಿದಿರೆಯ ಆಳ್ವಾಸ್ ಶಿಕ್ಷಣ ಸಂಸ್ಥೆಯ ಸಂಕೀರ್ಣದಲ್ಲಿ ಭಾನುವಾರ ಭಾರತ್ ಸೌಟ್ಸ್ ಮತ್ತು ಗೈಡ್ಸ್ ವತಿಯಿಂದ ಆಯೋಜಿಸಲಾಗಿರುವ ಅಂತರಾಷ್ಟ್ರೀಯ ಸಾಂಸ್ಕೃತಿಕ ಜಾಂಬೂರಿ ಕಾರ್ಯಕ್ರಮ ದಲ್ಲಿ ಮಾತನಾಡಿದರು. ಸಣ್ಣ ವಯಸ್ಸಿನಲ್ಲಿ ಮಕ್ಕಳಲ್ಲಿ ಮೌಲ್ಯ, ಆದರ್ಶಗಳನ್ನು ತುಂಬಿ, ಹಿರಿಯರಿಗೆ ಗೌರವಾದರಗಳನ್ನು ತೋರುವ, ಕಿರಿಯರಿಗೆ ಪ್ರೀತಿಯನ್ನು ತೋರುವ ಗುಣಧರ್ಮವನ್ನು ಇಲ್ಲಿ […]
ಡಿ.21ರಿಂದ 27: ಮೂಡಬಿದಿರೆಯಲ್ಲಿ ಸ್ಕೌಟ್ಸ್ ಅಂಡ್ ಗೈಡ್ಸ್ ಅಂತಾರಾಷ್ಟ್ರೀಯ ಜಾಂಬೂರಿ, ಇಲ್ಲಿದೆ ಆಮಂತ್ರಣ
ಮಂಗಳೂರು: ನಾಳೆಯಿಂದ ಒಂದು ವಾರಗಳ ಕಾಲ (ಡಿಸೆಂಬರ್ 21ರಿಂದ 27) ಮೂಡಬಿದಿರೆಯ ಆಳ್ವಾಸ್ ಆವರಣದಲ್ಲಿ ಅಂತಾರಾಷ್ಟ್ರೀಯ ಸಾಂಸ್ಕೃತಿಕ ಜಾಂಬೂರಿ ನಡೆಯಲಿದೆ. ನಾಳೆ ಅಲ್ಲಿನ ವಿವಿಧ ವೇದಿಕೆಗಳಲ್ಲಿ ಹಲವು ಕಾರ್ಯಕ್ರಮಗಳು ನಡೆಯಲಿವೆ. ಈ ಜಾಂಬೂರಿಯಲ್ಲಿ 50,000 ಸ್ಕೌಟ್ಸ್ ಹಾಗೂ ಗೈಡ್ ಗಳು ಸೇರಿದಂತೆ ಒಟ್ಟು 63,000 ಮಂದಿ ಭಾಗವಹಿಸಲಿದ್ದಾರೆ. 10 ದೇಶಗಳಿಂದ 10,000 ಮಂದಿ ತರಬೇತಿ ನೀಡುವವರು ಹಾಗೂ 3,000 ಮಂದಿ ಸ್ವಯಂ ಸೇವಕರು ಕಾರ್ಯಕ್ರಮದಲ್ಲಿ ಭಾಗಿಯಾಗುವ ನಿರೀಕ್ಷೆ ಇದೆ. ದೇಶದಲ್ಲಿ ಇಂತಹ ಕಾರ್ಯಕ್ರಮ ನಡೆಯುವುದು ಇದೇ ಮೊದಲು […]
ಮಲ್ಪೆ: ಮೀನುಗಾರರ ಬಲೆಗೆ ಬಿದ್ದ ಅತ್ಯಂತ ದುಬಾರಿ ಗೋಳಿ ಮೀನು 2 ಲಕ್ಷ ರೂ ಗೆ ಮಾರಾಟ
ಮಲ್ಪೆ: ಇಲ್ಲಿನ ಬಂದರಿನ ಮೀನುಗಾರರ ಬಲೆಗೆ ಲಕ್ಷಾಂತರ ರೂಪಾಯಿ ಬೆಲೆ ಬಾಳುವ ಗೋಳಿ ಮೀನು ಬಿದ್ದಿದೆ. ಈ ಮೀನು 22 ಕೆಜಿ ತೂಕವಿದ್ದು, ಬರೋಬ್ಬರಿ 2,34,080 ರೂಪಾಯಿಗಳಿಗೆ ಮಾರಾಟವಾಗಿದೆ. ಈ ಹಿಂದೆ ಶಾನ್ ರಾಜ್ ತೊಟ್ಟಂ ಎಂಬವರಿಗೆ 20 ಕೆಜಿ ತೂಕದ ಗೋಳಿ ಮೀನು ಸಿಕ್ಕಿ,ಇದು 1.90 ಲಕ್ಷ ರೂಪಾಯಿಗೆ ಮಾರಾಟವಾಗಿ ಸುದ್ದಿಯಾಗಿತ್ತು. ‘ಸಾಗರದ ಚಿನ್ನ’ ಎಂದುಕರೆಯಲ್ಪಡುವ ಘೋಲ್ ಮೀನು ಸ್ಥಳೀಯ ಭಾಷೆಯಲ್ಲಿ ಗೋಳಿ ಮೀನು ಎಂದು ಚಿರಪರಿಚಿತವಾಗಿದ್ದು, ಭಾರತದ ಅತ್ಯಂತ ದುಬಾರಿ ಮೀನುಗಳಲ್ಲಿ ಒಂದಾಗಿದೆ. ಈ […]
ಕುಂದಾಪುರ: ದ್ವಿಚಕ್ರ ವಾಹನಕ್ಕೆ ಡಿಕ್ಕಿ ಹೊಡೆದ ಕ್ರೇನ್; ಸ್ಥಳದಲ್ಲೇ ಅಸುನೀಗಿದ ಸಹಸವಾರ
ಕುಂದಾಪುರ: ಚಲಿಸುತ್ತಿದ್ದ ದ್ವಿಚಕ್ರ ವಾಹನಕ್ಕೆ ಹಿಂಬದಿಯಿಂದ ಕ್ರೇನ್ ವಾಹನವೊಂದು ಡಿಕ್ಕಿ ಹೊಡೆದ ಪರಿಣಾಮ ದ್ವಿಚಕ್ರ ವಾಹನನಲ್ಲಿದ್ದ ಹಿಂಬದಿ ಸವಾರ ಸ್ಥಳದಲ್ಲೇ ಅಸುನೀಗಿದ ಘಟನೆ ಕುಂದಾಪುರ ತಾಲೂಕಿನ ಬಳ್ಕೂರು ಗ್ರಾಮದ ಪಾನಕದಕಟ್ಟೆ ಎಂಬಲ್ಲಿ ಡಿ.26ರಂದು ರಾತ್ರಿ ನಡೆದಿರುವುದಾಗಿ ವರದಿಯಾಗಿದೆ. ತಾಲೂಕಿನ ಹುಣಸೆಮಕ್ಕಿ ಸಮೀಪದ ಹೊಂಬಾಡಿ ನಿವಾಸಿ ಪ್ರಶಾಂತ್ ಮೊಗವೀರ (31) ಮೃತಪಟ್ಟವರು ಎಂದು ಗುರುತಿಸಲಾಗಿದೆ. ದಿನೇಶ್ ಪೂಜಾರಿ ಎಂಬವರ ದ್ವಿಚಕ್ರ ವಾಹನದ ಹಿಂಬದಿಯಲ್ಲಿ ಕುಳಿತಿದ್ದ ಪ್ರಶಾಂತ್, ಕುಂದಾಪುರ ಕಡೆಯಿಂದ ಸಿದ್ದಾಪುರ ಕಡೆಗೆ ತೆರಳುತ್ತಿದ್ದಾಗ ನೋಂದಣಿ ಸಂಖ್ಯೆ ಇಲ್ಲದ ಹೊಸ […]