ಚಾಲಕನ ನಿಯಂತ್ರಣ ತಪ್ಪಿ ಎಟಿಎಂ ನೊಳಗೆ ನುಗ್ಗಿದ ಕಾರು
ಉಡುಪಿ: ಇಲ್ಲಿನ ಹಳೇ ಡಯಾನಾ ವೃತ್ತ ಬಳಿಯ ಕಲ್ಯಾಣ್ ಜುವೆಲ್ಲರ್ಸ್ ಬಳಿ ಕಾರೊಂದು ಚಾಲಕನ ನಿಯತ್ರಣ ತಪ್ಪಿ ಕರ್ನಾಟಕ ಬ್ಯಾಂಕ್ ನ ಎಟಿಎಂ ಒಳಗೆ ನುಗ್ಗಿದೆ. ಯಾರಿಗೂ ಅಪಾಯವಾಗಿಲ್ಲ ಎಂದು ತಿಳಿದು ಬಂದಿದೆ.
ಡಿ. 29 ರಂದು ದಿವ್ಯಾಂಗರಿಗಾಗಿ ಉದ್ಯೋಗ ಮೇಳ; ಆರೋಗ್ಯ ಮಾಹಿತಿ ಕಾರ್ಯಕ್ರಮ
ಉಡುಪಿ: ಶ್ರೀ ಕೃಷ್ಣಾಪುರ ಮಠದಆಶೀರ್ವಾದದೊಂದಿಗೆ ಚೋಸನ್ ಜನರೇಷನ್ ಚಾರಿಟೇಬಲ್ ಟ್ರಸ್ಟ್ ,ಆದಿತ್ಯ ಟ್ರಸ್ಟ್, ರೋಟರಿ ಕ್ಲಬ್ ಕಲ್ಯಾಣಪುರ,ರಾಷ್ಟ್ರೀಯ ಪದವಿ ಪೂರ್ವ ವಿದ್ಯಾರ್ಥಿಗಳ ಪೋಷಕರ ಮತ್ತು ಶಿಕ್ಷಕರ ಸಂಘ ಹಾಗೂ ಕೊಡವೂರು ದಿವ್ಯಾಂಗ ರಕ್ಷಣಾ ಸಮಿತಿಇವರ ಸಂಯುಕ್ತ ಆಶ್ರಯದಲ್ಲಿ ದಿವ್ಯಾಂಗರಿಗೆ ಉದ್ಯೋಗ ಮೇಳ ಹಾಗೂ ಆರೋಗ್ಯ ಮಾಹಿತಿ ಮತ್ತು ಪ್ರತಿಭಾ ಪ್ರದರ್ಶನ ಕಾರ್ಯಕ್ರಮವು ಡಿ. 29 ರಂದು ರಾಜಾಂಗಣದಲ್ಲಿ ಬೆಳಿಗ್ಗೆ 9.00 ರಿಂದ ಸಂಜೆ 3.00 ರ ವರೆಗೆ ನಡೆಯಲಿದೆ ಎಂದು ಪ್ರಕಟಣೆ ತಿಳಿಸಿದೆ.
ಡಿ.25 ರಂದು ಬಿದ್ಕಲ್ ಕಟ್ಟೆಯಲ್ಲಿ ಕುಲಾಲ ಕ್ರೀಡೋತ್ಸವ
ತೆಕ್ಕಟ್ಟೆ: ಕುಲಾಲ ಸಮಾಜ ಸುಧಾರಕ ಸಂಘ ಕುಂದಾಪುರ ಇವರ ಆಶ್ರಯದಲ್ಲಿ ಕರ್ನಾಟಕ ರಾಜ್ಯ ಕುಲಾಲ ಕುಂಬಾರ ಯುವ ವೇದಿಕೆ ಬೈಂದೂರು ಇವರ ಸಾರಥ್ಯದಲ್ಲಿ ಕುಂದಾಪುರ ಮತ್ತು ಬೈಂದೂರು ವಿಧಾನಸಭಾ ಕ್ಷೇತ್ರ ಕುಲಾಲ ಸಮಾಜ ಬಾಂಧವರಿಗಾಗಿ ಕುಲಾಲ ಕ್ರೀಡೋತ್ಸವ ಡಿ. 25 ರಂದು ಬಿದ್ಕಲ್ ಕಟ್ಟೆ ಕರ್ನಾಟಕ ಪಬ್ಲಿಕ್ ಸ್ಕೂಲ್ ನ ಪ್ರೌಢಶಾಲಾ ವಿಭಾಗದ ಕ್ರೀಡಾಂಗಣದಲ್ಲಿ ನಡೆಯಲಿದೆ. ರಾಜ್ಯ ಕುಲಾಲ ಕುಂಬಾರರ ಮಹಾಸಂಘ ಬೆಂಗಳೂರು ಇದರ ಗೌರವಾಧ್ಯಕ್ಷ ಡಾ|ಎಂ. ವಿ ಕುಲಾಲ್ ಅವರು ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ. ದೇವರಾಜ ಅರಸು […]
ಕಾರ್ಕಳ: ಡಿ. 29 ರಂದು ಬಜಗೋಳಿಯಲ್ಲಿ ಔಷಧಿ ಸಸ್ಯಗಳ ಕ್ಷೇತ್ರೋತ್ಸವ
ಕಾರ್ಕಳ: ಕರ್ನಾಟಕ ರಾಜ್ಯ ಔಷಧಿ ಗಿಡಮೂಲಿಕಾ ಪ್ರಾಧಿಕಾರ, ಕರ್ನಾಟಕ ಜೀವವೈವಿಧ್ಯ ಮಂಡಳಿ ಹಾಗೂ ಕಾಂಪ್ಕೋ ಮಂಗಳೂರು ಇವರ ಸಹಯೋಗದಲ್ಲಿ ರಾಷ್ಟ್ರೀಯ ಔಷಧಿ ಗಿಡಮೂಲಿಕಾ ಮಂಡಳಿ ಪ್ರಾಯೋಜಿತ ಯೋಜನೆ ಅಡಿಯಲ್ಲಿ ಪಶ್ಚಿಮ ಘಟ್ಟದ ತಪ್ಪಲಿನ ಔಷಧಿ ಸಸ್ಯಗಳ ಕ್ಷೇತ್ರೋತ್ಸವ ಕಾರ್ಯಕ್ರಮವನ್ನು ಡಿಸೆಂಬರ್ 29 ರಂದು ಕಾರ್ಕಳ ತಾಲೂಕು ಬಜಗೋಳಿಯ ತ್ರಿಭುವನ ಮಾಳ ಇಲ್ಲಿ ಹಮ್ಮಿಕೊಳ್ಳಲಾಗಿದೆ. ಕಾರ್ಯಕ್ರಮದಲ್ಲಿ ಔಷಧಿ ಸಸ್ಯಗಳ ಕೃಷಿಯ ಅವಶ್ಯಕತೆ ಮತ್ತು ಪ್ರಾಮುಖ್ಯತೆ, ಅಡಿಕೆ ಮತ್ತು ತೆಂಗಿನ ತೋಟದಲ್ಲಿ ಅಂತರ ಬೆಳೆಯಾಗಿ ಬೆಳೆಯಲು ಸೂಕ್ತವಾದ ಔಷಧಿ ಸಸ್ಯಗಳ […]
ಜ್ಞಾನಸುಧಾ ಸಂಸ್ಥಾಪಕರ ದಿನಾಚರಣೆ: ವಿದ್ಯಾರ್ಥಿಗಳಿಗೆ ಸನ್ಮಾನ; ರಾಷ್ಟ್ರ ರಕ್ಷಣಾ ನಿಧಿಗೆ ದೇಣಿಗೆ ಅರ್ಪಣೆ
ಗಣಿತನಗರ : ಬುದ್ದಿವಂತಿಕೆ ನೈತಿಕತೆಯ ಬಳ್ಳಿಯಾಗಿದೆ. ಎಲ್ಲಿಯವರೆಗೆ ನೈತಿಕತೆಯಿಂದ ಕೂಡಿದ ಬುದ್ದಿವಂತಿಕೆ ಇರುವುದಿಲ್ಲವೋ ಅಲ್ಲಿಯ ತನಕ ನಾವು ಯಾರಿಗೂ ಪ್ರಯೋಜನವಾಗುವುದಿಲ್ಲ. ಹೆಣವಾಗುವ ಮುನ್ನಇತರರ ಬಾಳಿಗೆ ನಾವೆಷ್ಟು ಹಣತೆಯನ್ನು ಹಚ್ಚಿದ್ದೇವೆ ಅನ್ನೋದು ಮುಖ್ಯವೇ ವಿನಃ ನಮ್ಮ ಪದವಿ, ಅಂತಸ್ತುಅಲ್ಲಎಂದು ಶಿವಮೊಗ್ಗದ ಸುಬ್ಬಯ್ಯ ಮೆಡಿಕಲ್ ಕಾಲೇಜಿನ ಡೀನ್ ಡಾ. ಕೃಷ್ಣ ಪ್ರಸಾದ್ ಎಂ.ಎಸ್. ಅಭಿಪ್ರಾಯ ವ್ಯಕ್ತಪಡಿಸಿದರು. ಅವರು ಕಾರ್ಕಳ ಜ್ಞಾನಸುಧಾ ಶಿಕ್ಷಣ ಸಂಸ್ಥೆಗಳ ಆವರಣದ ಗಣಿತನಗರ ಕ್ರೀಡಾಂಗಣದಲ್ಲಿಅಜೆಕಾರ್ ಪದ್ಮಗೋಪಾಲ್ಎಜ್ಯುಕೇಶನ್ ಟ್ರಸ್ಟ್ನ ವತಿಯಿಂದ ನಡೆದ ಸಂಸ್ಥಾಪಕರ ದಿನಾಚರಣೆ ಹಾಗೂ ರಾಷ್ಟ್ರೀಯ ಗಣಿತ […]