ವಿದ್ಯಾರ್ಥಿಯ ಸರ್ವತೋಮುಖ ಬೆಳವಣಿಗೆಗೆ ಕ್ರೀಡೆ ಅವಶ್ಯ: ಸಂತೋಷ್ ಡಿಸಿಲ್ವಾ

ಕಾರ್ಕಳ: ಶಿಕ್ಷಣ ಎಂದರೇ ಕೇವಲ ಪಾಠ ಪ್ರವಚನ ಮಾತ್ರವಲ್ಲ, ವಿದ್ಯಾರ್ಥಿಯ ದೇಹ ಮನಸ್ಸುಗಳನ್ನು ಒಂದುಗೂಡಿಸುವ ಜ್ಞಾನದ ಜೊತೆಗೆ ಕ್ರೀಡೆಯೂ ಕೂಡಾ ಬಹು ಮುಖ್ಯ. ಆಗ ಮಾತ್ರ ವಿದ್ಯಾರ್ಥಿಯ ಸರ್ವತೋಮುಖ ಬೆಳವಣಿಗೆಗೊಳ್ಳಲು ಸಾಧ್ಯ ಎಂದು ಉದ್ಯಮಿ ಸಂತೋಷ್ ಡಿಸಿಲ್ವಾ ಹೇಳಿದರು. ಅವರು ಕಾರ್ಕಳ ಜ್ಞಾನಸುಧಾ ಪ.ಪೂ.ಕಾಲೇಜಿನ ಗಣಿತನಗರ ಕ್ರೀಡಾಂಗಣದಲ್ಲಿ ನಡೆದ ಉಡುಪಿ ಜ್ಞಾನಸುಧಾ ಪದವಿ ಪೂರ್ವ ಕಾಲೇಜಿನ ವಾರ್ಷಿಕ ಕ್ರೀಡಾಕೂಟವನ್ನು ಉದ್ಘಾಟಿಸಿ ಮಾತನಾಡಿದರು. ಪರಿಶ್ರಮ ಮತ್ತು ಮುನ್ನುಗ್ಗುವ ಛಲವಿದ್ದಲ್ಲಿ ಕ್ರೀಡೆಯಲ್ಲಿ ಉತ್ತಮ ಭವಿಷ್ಯವಿದೆ. ಜೀವನದಲ್ಲಿ ಒತ್ತಡ ರಹಿತವಾಗಿರಲು ಕ್ರೀಡೆಗಳು […]

ಹೆಬ್ರಿ-ಪರ್ಕಳ ರಾಷ್ಟ್ರೀಯ ಹೆದ್ದಾರಿಗಾಗಿ ಮರಗಳ ತೆರವು: ಸಾರ್ವಜನಿಕ ಅಹವಾಲು ಸಭೆ

ಉಡುಪಿ: ಹೆಬ್ರಿ-ಪರ್ಕಳ ರಾಷ್ಟ್ರೀಯ ಹೆದ್ದಾರಿ ಅಭಿವೃದ್ಧಿ ಕಾಮಗಾರಿಗೆ ಸಂಬಂಧಿಸಿದಂತೆ, ಉಡುಪಿ ನಗರಸಭಾ ವ್ಯಾಪ್ತಿಯ ಕರಾವಳಿ ಜಂಕ್ಷನ್‌ನಿಂದ ಮಲ್ಪೆವರೆಗೆ ಕಾಮಗಾರಿಗೆ ಅಡಚಣೆಯಾಗುವ 205 ಮರಗಳನ್ನು ತೆರವುಗೊಳಿಸುವ ಹಿನ್ನೆಲೆ, ಡಿ.27 ರಂದು ಬೆಳಗ್ಗೆ 11 ಗಂಟೆಗೆ ಉಡುಪಿ ವಲಯ ಕಚೇರಿಯ ಸಭಾಂಗಣದಲ್ಲಿ ಹಾಗೂ ಪೆರ್ಡೂರು ಗ್ರಾಮ ಪಂಚಾಯತ್ ವ್ಯಾಪ್ತಿಯ ಮುಳ್ಳುಗುಡ್ಡೆಯಿಂದ ತಾಣದಮನೆವರೆಗೆ ಇರುವ ಒಟ್ಟು 1549 ವಿವಿಧ ಜಾತಿಯ ಮರಗಳನ್ನು ತೆರವುಗೊಳಿಸುವ ಹಿನ್ನೆಲೆ, ಡಿ. 31 ರಂದು ಮಧ್ಯಾಹ್ನ 3 ಗಂಟೆಗೆ ಹೆಬ್ರಿ ವಲಯ ಕಚೇರಿಯ ಸಭಾಂಗಣದಲ್ಲಿ ಸಾರ್ವಜನಿಕ ಅಹವಾಲು […]

ಉಡುಪಿ ನಗರಸಭೆ ನಗರೋತ್ಥಾನ ಅನುದಾನದಡಿ ಸಹಾಯಧನಕ್ಕಾಗಿ ಅರ್ಜಿ ಆಹ್ವಾನ

ಉಡುಪಿ: ಉಡುಪಿ ನಗರಸಭೆಯ ನಗರೋತ್ಥಾನ 4 ನೇ ಹಂತದ ಅನುದಾನದಡಿ ಶೇ.24.10, ಶೇ.7.25 ಮತ್ತು ಶೇ.5ಕ್ಕೆ ಮಂಜೂರಾದ ಮೊತ್ತದಲ್ಲಿ, ಪ.ಜಾತಿ, ಪ.ಪಂಗಡ, ಬಡಜನರು ಮತ್ತು ವಿಕಲಚೇತನರಿಗೆ ವಿವಿಧ ಸೌಲಭ್ಯಗಳಿಗೆ ಸಹಾಯಧನ ನೀಡಲು ಅರ್ಜಿಗಳನ್ನು ಆಹ್ವಾನಿಸಿದ್ದು, 2022-23 ನೇ ಸಾಲಿನ ಆಸ್ತಿ ತೆರಿಗೆ ಪಾವತಿ ರಸೀದಿ, ಪಡಿತರ ಚೀಟಿ ಪ್ರತಿ, ಆಧಾರ್ ಕಾರ್ಡ್ ಪ್ರತಿಯೊಂದಿಗೆ ಡಿಸೆಂಬರ್ 31 ರೊಳಗೆ ನಗರಸಭಾ ಕಚೇರಿಗೆ ಅರ್ಜಿ ಸಲ್ಲಿಸುವಂತೆ ಪೌರಾಯುಕ್ತರ ಪ್ರಕಟಣೆ ತಿಳಿಸಿದೆ.

ಎಫ್‌ಐಎಚ್ ನೇಷನ್ಸ್ ಕಪ್‌ ಮಹಿಳಾ ಹಾಕಿ ಪಂದ್ಯಾವಳಿ: ಕಪ್ ಗೆದ್ದು ಬೀಗಿದ ಭಾರತೀಯ ಮಹಿಳಾ ತಂಡ

ಸ್ಪೇನ್‌ನ ವೆಲೆನ್ಸಿಯಾದಲ್ಲಿ ನಡೆದ ಉದ್ಘಾಟನಾ ಎಫ್‌ಐಎಚ್ ನೇಷನ್ಸ್ ಕಪ್‌ನಲ್ಲಿ ಕ್ಯಾಪ್ಟನ್ ಸವಿತಾ ಪುನಿಯಾ ನೇತೃತ್ವದ ಭಾರತೀಯ ಮಹಿಳಾ ಹಾಕಿ ತಂಡವು ಫೈನಲ್‌ನಲ್ಲಿ ಸ್ಪೇನ್ ಅನ್ನು 1-0 ಗೋಲುಗಳಿಂದ ಸೋಲಿಸಿದೆ. ಭಾರತದ ಗುರ್ಜಿತ್ ಕೌರ್ ಗೆಲುವಿನ ಗೋಲು ದಾಖಲಿಸಿದ್ದಾರೆ. ಉದ್ಘಾಟನಾ ಎಫ್‌ಐಎಚ್ ನೇಷನ್ಸ್ ಕಪ್ ಸ್ಪೇನ್‌ನ ವೇಲೆನ್ಸಿಯಾದಲ್ಲಿ ಡಿ.11ರಿಂದ17 ರವರೆಗೆ ನಡೆಯಿತು. ಕೋವಿಡ್-19 ಸಂಬಂಧಿತ ಸಮಸ್ಯೆಗಳಿಂದಾಗಿ ಆಸ್ಟ್ರೇಲಿಯಾ ಮತ್ತು ನ್ಯೂಜಿಲೆಂಡ್‌ ತಂಡ ಪಂದ್ಯದಿಂದ ಹೊರಗುಳಿದ ಬಳಿಕ ಬದಲಿ ತಂಡಗಳಾಗಿ ಭಾರತ ಮತ್ತು ಸ್ಪೇನ್ ನ ಮಹಿಳಾ ಹಾಕಿ ತಂಡಗಳು […]

ಡಿ .25 ರಂದು ಜಿಲ್ಲೆಯಲ್ಲಿ ಅಟಲ್ ಉತ್ಸವ; ಬೂತ್ ಸಂಗಮ ಕಾರ್ಯಕ್ರಮ

ಉಡುಪಿಯ: ಭಾರತೀಯ ಜನತಾ ಪಾರ್ಟಿ ಉಡುಪಿ ನಗರ ಹಾಗೂ ಗ್ರಾಮಾಂತರ ವತಿಯಿಂದ ಮಾಜಿ ಪ್ರಧಾನಮಂತ್ರಿ ಭಾರತ ರತ್ನ ಅಟಲ್ ಬಿಹಾರಿ ವಾಜಪೇಯಿ ಅವರ ಜನ್ಮ ದಿನಾಚರಣೆ ಪ್ರಯುಕ್ತ ಉಡುಪಿಯಲ್ಲಿ ನಡೆಯಲಿರುವ ಅಟಲ್ ಬಿಹಾರಿ ಉತ್ಸವ ಪ್ರಯುಕ್ತ ಡಿ .25 ರಂದು ಬೂತ್ ಸಂಗಮ ಕಾರ್ಯಕ್ರಮವು ಎಂಜಿಎಂ ಕಾಲೇಜು ಮೈದಾನದಲ್ಲಿ ನಡೆಯಲಿದ್ದು, ಇದರ ಚಪ್ಪರ ಮುಹೂರ್ತವನ್ನು ಸೋಮವಾರದಂದು ಶಾಸಕ ಕೆ ರಘುಪತಿ ಭಟ್ ನೆರವೇರಿಸಿದರು. ಉತ್ಸವದ ಅಂಗವಾಗಿ ಡಿ.24 ರಂದು ರಾಷ್ಟ್ರೀಯ ಮಟ್ಟದ ಹೊನಲು ಬೆಳಕಿನ ಕಬ್ಬಡ್ಡಿ ಪಂದ್ಯಾಟ […]