ಉಡುಪಿ ನಗರಸಭೆ ನಗರೋತ್ಥಾನ ಅನುದಾನದಡಿ ಸಹಾಯಧನಕ್ಕಾಗಿ ಅರ್ಜಿ ಆಹ್ವಾನ

ಉಡುಪಿ: ಉಡುಪಿ ನಗರಸಭೆಯ ನಗರೋತ್ಥಾನ 4 ನೇ ಹಂತದ ಅನುದಾನದಡಿ ಶೇ.24.10, ಶೇ.7.25 ಮತ್ತು ಶೇ.5ಕ್ಕೆ ಮಂಜೂರಾದ ಮೊತ್ತದಲ್ಲಿ, ಪ.ಜಾತಿ, ಪ.ಪಂಗಡ, ಬಡಜನರು ಮತ್ತು ವಿಕಲಚೇತನರಿಗೆ ವಿವಿಧ ಸೌಲಭ್ಯಗಳಿಗೆ ಸಹಾಯಧನ ನೀಡಲು ಅರ್ಜಿಗಳನ್ನು ಆಹ್ವಾನಿಸಿದ್ದು, 2022-23 ನೇ ಸಾಲಿನ ಆಸ್ತಿ ತೆರಿಗೆ ಪಾವತಿ ರಸೀದಿ, ಪಡಿತರ ಚೀಟಿ ಪ್ರತಿ, ಆಧಾರ್ ಕಾರ್ಡ್ ಪ್ರತಿಯೊಂದಿಗೆ ಡಿಸೆಂಬರ್ 31 ರೊಳಗೆ ನಗರಸಭಾ ಕಚೇರಿಗೆ ಅರ್ಜಿ ಸಲ್ಲಿಸುವಂತೆ ಪೌರಾಯುಕ್ತರ ಪ್ರಕಟಣೆ ತಿಳಿಸಿದೆ.