ಪರ್ಕಳ: ಶ್ರೀ ದುರ್ಗಾಪರಮೇಶ್ವರಿ ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿಯ ನೂತನ ಕಟ್ಟಡದ ಶಿಲಾನ್ಯಾಸ ಕಾರ್ಯಕ್ರಮ

ಪರ್ಕಳ: ಶ್ರೀ ದುರ್ಗಾಪರಮೇಶ್ವರಿ ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿಯು ಸ್ವಂತ ಕಟ್ಟಡವನ್ನು ನಿರ್ಮಿಸುವ ಯೋಜನೆ ಹೊಂದಿ ಪರ್ಕಳ ಮುಖ್ಯರಸ್ತೆಯ ಪಕ್ಕದಲ್ಲಿ ಸ್ಥಳ ಖರೀದಿಸಿದ್ದು, ಡಿ. 16 ರಂದು ಶ್ರೀ ಸಂಸ್ಥಾನ ಗೌಡಪಾದಾಚಾರ್ಯ ಮಠ ಕವಳೇ ಗೋವಾ ಇದರ 77 ನೇ ಯತಿಗಳಾದ ಶ್ರೀಮತ್ ಶಿವಾನಂದ ಸರಸ್ವತಿ ಸ್ವಾಮಿ ಮಹಾರಾಜ್ ರವರು ಶಿಲಾನ್ಯಾಸ ಕಾರ್ಯಕ್ರಮ ನೆರವೇರಿಸಿ, ಸೊಸೈಟಿಯು ಅಭಿವೃದ್ದಿ ಹೊಂದಿ 6 ಶಾಖೆಗಳಲ್ಲಿ ರೂ. 115 ಕೋಟಿಗೂ ಮಿಕ್ಕಿ ದುಡಿಯುವ ಬಂಡವಾಳ, ರೂ 98 ಕೋಟಿ ಠೇವಣಿ ಹೊಂದಿದ್ದು ಗ್ರಾಹಕರ, […]

ಕೊಡವೂರು: ಲಕ್ಷ್ಮೀ ನಗರ ರಿಕ್ಷಾ ನಿಲ್ದಾಣದಲ್ಲಿ ಸೋಲಾರ್ ದೀಪ ಅಳವಡಿಕೆ

ಕೊಡವೂರು: ವಾರ್ಡಿನ ಲಕ್ಷ್ಮೀ ನಗರ ರಿಕ್ಷಾ ನಿಲ್ದಾಣಕ್ಕೆ ಸೋಲಾರ್ ದೀಪ ಅಳವಡಿಕೆಯ ಉದ್ಘಾಟನಾ ಕಾರ್ಯಕ್ರಮವು ಡಿ. 15, ಗುರುವಾರದಂದು ಲಕ್ಷ್ಮೀನಗರ ರಿಕ್ಷಾ ನಿಲ್ದಾಣದಲ್ಲಿ ನಡೆಯಿತು. ಕೆಲವು ತಿಂಗಳ ಹಿಂದೆ ಜನರ ಕುಂದು ಕೊರತೆಗಳನ್ನು ವಿಚಾರಿಸುವ ಸಂದರ್ಭದಲ್ಲಿ ಕೊಡವೂರಿನ ಲಕ್ಷ್ಮೀನಗರ ಆಟೋ ನಿಲ್ದಾಣದಲ್ಲಿ ಗ್ರಾಮ ಸಭೆಯನ್ನು ನಡೆಸಿದಾಗ ಸೋಲಾರ್ ದೀಪದ ಅವಶ್ಯಕತೆಯನ್ನು ಅಲ್ಲಿನ ರಿಕ್ಷಾ ಚಾಲಕರು ಕೊಡವೂರು ವಾರ್ಡ್ ಅಭಿವೃದ್ಧಿ ಸಮಿತಿಯ ಗಮನಕ್ಕೆ ತಂದಿದ್ದರು. ಈ ಹಿನ್ನೆಲೆಯಲ್ಲಿ ನಿಲ್ದಾಣಕ್ಕೆ ದಾನಿಗಳ ನೆರವಿನಿಂದ ಸೋಲಾರ್ ದೀಪವನ್ನು ಅಳವಡಿಸಲಾಯಿತು. ದಾನಿಗಳಾದ ಕರಾವಳಿ […]

ಕರ್ನಾಟಕ ಕರಾವಳಿಯಲ್ಲಿ ಕನಿಷ್ಠ ತಾಪಮಾನ ಸಾಧ್ಯತೆ: ಹವಾಮಾನ ಇಲಾಖೆ

ಉಡುಪಿ: ಮುಂದಿನ 48 ಗಂಟೆಗಳಲ್ಲಿ ಕರ್ನಾಟಕ ಕರಾವಳಿಯ ಪ್ರತ್ಯೇಕ ಸ್ಥಳಗಳಲ್ಲಿ ಕನಿಷ್ಠ ತಾಪಮಾನವು ಸಾಮಾನ್ಯಕ್ಕಿಂತ 3 ರಿಂದ 5 ಡಿಗ್ರಿ ಸೆಲ್ಸಿಯಸ್‌ಗಿಂತ ಕಡಿಮೆ ಇರುತ್ತದೆ ಎಂದು ಭಾರತೀಯ ಹವಾಮಾನ ಇಲಾಖೆ ತಿಳಿಸಿದೆ.

ಪದವಿ ಫಲಿತಾಂಶ ಮತ್ತುಅಂಕಪಟ್ಟಿ ಸಮಸ್ಯೆ: ಮಂಗಳೂರು ವಿವಿಗೆ ಮುತ್ತಿಗೆ ಹಾಕಿದ ಎಬಿವಿಪಿ ಕಾರ್ಯಕರ್ತರು

ಮಂಗಳೂರು: ಎಬಿವಿಪಿ ಮಂಗಳೂರು ವತಿಯಿಂದ ಮಂಗಳೂರು ವಿಶ್ವ ವಿದ್ಯಾಲಯದ ಫಲಿತಾಂಶ ತಕ್ಷಣ ಬಿಡುಗಡೆ ಮಾಡುವಂತೆ ಆಗ್ರಹಿಸಿ ಮಂಗಳೂರು ವಿಶ್ವ ವಿದ್ಯಾನಿಲಯಕ್ಕೆ ಮುತ್ತಿಗೆ ಹಾಕಲಾಯಿತು. ಈ ಸಂದರ್ಭ ಪೊಲೀಸರು ಮತ್ತು ಕಾರ್ಯಕರ್ತರ ನಡುವೆ ತಳ್ಳಾಟ ನಡೆದಿದೆ. ಕಾರ್ಯಕರ್ತರು ನಮಗೆ ನ್ಯಾಯ ಬೇಕು ಎಂದು ಘೋಷಣೆಗಳನ್ನು ಕೂಗಿದ್ದಾರೆ. ವಿದ್ಯಾರ್ಥಿಗಳ ಫಲಿತಾಂಶ ಬರಲು ವಿಳಂಬವಾಗಿದೆ, ಅಂಕಪಟ್ಟಿಯೂ ಬಂದಿಲ್ಲ. ವಿದ್ಯಾರ್ಥಿವೇತನಕ್ಕೆ ಅರ್ಜಿ ಹಾಕಲು ಸಮಸ್ಯೆಯಾಗುತ್ತಿದೆ. ಫಲಿತಾಂಶ ಬಾರದಿದ್ದರೂ ಕಾಲೇಜು ಶುಲ್ಕ ವಸೂಲಾತಿ ಮಾಡಲಾಗಿದೆ. ಇದರಿಂದ ಹಲವಾರು ವಿದ್ಯಾರ್ಥಿಗಳಿಗೆ ಸಮಸ್ಯೆಯಾಗಿದ್ದು, ಇದಕ್ಕೆ ನೇರವಾಗಿ ವಿಶ್ವ ವಿದ್ಯಾಲಯದ […]

ಪರಿಶಿಷ್ಟ ಪಂಗಡಗಳ ಪಟ್ಟಿಗೆ ಬೆಟ್ಟ ಕುರುಬ ಸಮುದಾಯ: ಲೋಕಸಭೆಯಲ್ಲಿ ಮಸೂದೆ ಅಂಗೀಕಾರ

ನವದೆಹಲಿ: ‘ಬೆಟ್ಟ-ಕುರುಬ’ ಸಮುದಾಯವನ್ನು ‘ಕಾಡು ಕುರುಬ’ ಸಮುದಾಯದ ಜೊತೆಗೆ ಕರ್ನಾಟಕದ ಪರಿಶಿಷ್ಟ ಪಂಗಡಗಳ ಪಟ್ಟಿಗೆ ಸೇರಿಸುವ ಮಸೂದೆಯನ್ನು ಲೋಕಸಭೆ ಸೋಮವಾರ ಅಂಗೀಕರಿಸಿದೆ. ಕರ್ನಾಟಕದ ಚಾಮರಾಜನಗರ, ಕೊಡಗು ಮತ್ತು ಮೈಸೂರು ಜಿಲ್ಲೆಗಳಲ್ಲಿ ‘ಬೆಟ್ಟ-ಕುರುಬ’ ಸಮುದಾಯದ ಜನರು ವಾಸಿಸುತ್ತಿದ್ದಾರೆ. ಇವರು ತಮ್ಮನ್ನು ಪರಿಶಿಷ್ಟ ಪಂಗಡಗಳ ವರ್ಗಕ್ಕೆ ಸೇರಿಸಬೇಕು ಎಂದು ಸರಕಾರವನ್ನು ಒತ್ತಾಯಿಸುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ರಾಜ್ಯದ ವಿನಂತಿಯ ಮೇರೆಗೆ ಸಂಸತ್ತಿನ ಕೆಳಮನೆಯ 20 ಕ್ಕೂ ಹೆಚ್ಚು ಸದಸ್ಯರು ಚರ್ಚೆಯಲ್ಲಿ ಭಾಗವಹಿಸಿದ ನಂತರ ಸಂವಿಧಾನ (ಪರಿಶಿಷ್ಟ ಬುಡಕಟ್ಟುಗಳು) ಆದೇಶ (ನಾಲ್ಕನೇ ತಿದ್ದುಪಡಿ) […]