ಕಸ್ತೂರ್ಬಾ ಆಸ್ಪತ್ರೆ ಕಾರ್ಪೊರೇಟ್ ಕ್ರಿಕೆಟ್ ಲೀಗ್: ಚಾಂಪಿಯನ್ ಆಗಿ ಹೊರಹೊಮ್ಮಿದ ಮಣಿಪಾಲ ಟೆಕ್ನಾಲಜಿ ಲಿಮಿಟೆಡ್
ಮಣಿಪಾಲ: ಕಸ್ತೂರ್ಬಾ ಆಸ್ಪತ್ರೆ ಮಣಿಪಾಲವು ಕಾರ್ಪೊರೇಟ್ ಕಂಪನಿ, ಬ್ಯಾಂಕ್ ಗಳು, ವೈದ್ಯಕೀಯ ಸಂಘ, ಆಸ್ಪತ್ರೆಗಳು ಮತ್ತು ಮಾಧ್ಯಮ ಮಿತ್ರರಿಗಾಗಿ 3 ದಿನಗಳ ಕಾಲ ಸೌಹಾರ್ದಯುತ ಕಾರ್ಪೊರೇಟ್ ಕ್ರಿಕೆಟ್ ಲೀಗ್ (ಕೆ ಎಚ್ ಸಿ ಸಿ ಎಲ್ 2022) ಅನ್ನು ಆಯೋಜಿಸಿತ್ತು. ಡಿ.16 ಆರಂಭವಾದ ಪಂದ್ಯಾಟವು ಡಿ.೧೯ ರಂದು ಕೊನೆಗೊಂಡಿತು. ಮುಖ್ಯ ಅತಿಥಿಯಾಗಿ ಉಡುಪಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಹಾಕೆ ಅಕ್ಷಯ್ ಮಚ್ಚೇಂದ್ರ ಪಾಲ್ಗೊಂಡಿದ್ದರು. ಎಲ್ಲಾ ತಂಡಗಳು ಒಟ್ಟು 1,20,000 ರೂ. ಮೊತ್ತವನ್ನು ಮಕ್ಕಳ ರಕ್ತಶಾಸ್ತ್ರ ಮತ್ತು ಆಂಕೊಲಾಜಿ ವಿಭಾಗಕ್ಕೆ […]
ಹೊಕ್ಕಾಡಿಗೋಳಿ “ವೀರ – ವಿಕ್ರಮ” ಜೋಡುಕರೆ ಕಂಬಳ ಕೂಟದ ಫಲಿತಾಂಶ
ಡಿ.17 ರಂದು ನಡೆದ ಹೊಕ್ಕಾಡಿಗೋಳಿ “ವೀರ – ವಿಕ್ರಮ” ಜೋಡುಕರೆ ಕಂಬಳ ಕೂಟದ ಫಲಿತಾಂಶ ಇಂತಿದೆ: ಕೂಟದಲ್ಲಿ ಭಾಗವಹಿಸಿದ ಕೋಣಗಳ ಸಂಖ್ಯೆ : ಕನೆಹಲಗೆ: 02 ಜೊತೆ ಅಡ್ಡಹಲಗೆ: 06 ಜೊತೆ ಹಗ್ಗ ಹಿರಿಯ: 25 ಜೊತೆ ನೇಗಿಲು ಹಿರಿಯ: 25 ಜೊತೆ ಹಗ್ಗ ಕಿರಿಯ: 19 ಜೊತೆ ನೇಗಿಲು ಕಿರಿಯ: 73 ಜೊತೆ ಒಟ್ಟು ಕೋಣಗಳ ಸಂಖ್ಯೆ: 150 ಜೊತೆ ಕನೆಹಲಗೆ: ( ಸಮಾನ ಬಹುಮಾನ ) ವಾಮಂಜೂರು ತಿರುವೈಲುಗುತ್ತು ನವೀನ್ಚಂದ್ರ ಆಳ್ವ ಹಲಗೆ ಮುಟ್ಟಿದವರು: […]
ಹೆಮ್ಮಾಡಿ ಜನತಾ ಸ್ವತಂತ್ರ ಪದವಿಪೂರ್ವ ಕಾಲೇಜಿನಲ್ಲಿ ಜನತಾ ಆವಿಷ್ಕಾರ್ 2K22 ಸಂಭ್ರಮ
ಹೆಮ್ಮಾಡಿ: ಜನತಾ ಸ್ವತಂತ್ರ ಪದವಿಪೂರ್ವ ಕಾಲೇಜು ಹೆಮ್ಮಾಡಿಯಲ್ಲಿ ಡಿ.14ರಂದು ಜನತಾ ಆವಿಷ್ಕಾರ್ 2K22(ಬಿಸ್ ನೆಸ್ ಡೇ) ವಿನೂತನ ಕಾರ್ಯಕ್ರಮ ಜರುಗಿತು. ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿದ್ದ ಶ್ರೀ ವಿ.ವಿ.ವಿ.ಮಂಡಳಿ, ಕ.ರಾ.ರ.ಸಾ.ನಿಗಮದ ಮಾಜಿ ಅಧ್ಯಕ್ಷ ಹಾಗೂ ಮಾಜಿ ಶಾಸಕ ಕೆ.ಗೋಪಾಲ ಪೂಜಾರಿಯವರು ಮಾತನಾಡಿ, ಜನತಾ ಪದವಿಪೂರ್ವ ಕಾಲೇಜಿನ ಶೈಕ್ಷಣಿಕ ಸಾಧನೆಗಳನ್ನು ಶ್ಲಾಘಿಸಿದರು.ಸ್ಪರ್ಧಾತ್ಮಕ ಜಗತ್ತಿನ ವೇಗದ ಜೊತೆಗೆ ವಿದ್ಯಾರ್ಥಿಗಳ ಬೆಳವಣಿಗೆಗೆ ಆವಿಷ್ಕಾರ್ ನಂತಹ ಕಾರ್ಯಕ್ರಮಗಳು ಅರ್ಥಪೂರ್ಣ ಎಂದರು. ಕಾರ್ಯಕ್ರಮವನ್ನು ಉದ್ಘಾಟಿಸಿದ ಜನತಾ ಫಿಶ್ ಮಿಲ್ ನ ಮಾಲಕ ಆನಂದ ಸಿ.ಕುಂದರ್ ಮಾತನಾಡಿ, […]
ಫುಟ್ ಬಾಲ್ ಮಾಂತ್ರಿಕ ಮೆಸ್ಸಿ ಮಿಂಚಿನ ಆಟ: ಫ್ರಾನ್ಸ್ ಅನ್ನು ಮಣಿಸಿ 36 ವರ್ಷಗಳ ಬಳಿಕ ವಿಶ್ವಕಪ್ ಎತ್ತಿದ ಅರ್ಜೆಂಟೀನಾ
120 ನಿಮಿಷಗಳ ಕಾಲ 3-3 ಸಮಾನ ಗೋಲ್ ಗಳ ರೋಚಕ ಪಂದ್ಯದ ನಂತರ ಅರ್ಜೆಂಟೀನಾ ಪೆನಾಲ್ಟಿಯಲ್ಲಿ ಫ್ರಾನ್ಸ್ ಅನ್ನು 4-2 ಗೋಲುಗಳಿಂದ ಸೋಲಿಸಿ 36 ವರ್ಷಗಳ ಬಳಿಕ ಮೂರನೇ ವಿಶ್ವಕಪ್ ಅನ್ನು ಗೆದ್ದಿತು. ಅರ್ಜೆಂಟೀನಾ ಲಿಯೋನೆಲ್ ಮೆಸ್ಸಿ ಮತ್ತು ಏಂಜೆಲ್ ಡಿ ಮಾರಿಯಾ ಮೂಲಕ 2-0 ಮುನ್ನಡೆ ಸಾಧಿಸಿದರೆ, ದ್ವಿತೀಯಾರ್ಧದಲ್ಲಿ 97 ಸೆಕೆಂಡುಗಳಲ್ಲಿ ಫ್ರಾನ್ಸ್ ಅನ್ನು ಮರಳಿ ಲಯಕ್ಕೆ ಮರಳಿಸಿದ್ದು ಕೈಲಿಯನ್ ಎಂಬಪ್ಪೆ. ಹೆಚ್ಚುವರಿ ಸಮಯದಲ್ಲಿ ಮೆಸ್ಸಿ ಮತ್ತೊಮ್ಮೆ ಗೋಲ್ ಹೊಡೆದರೆ, ಎಂಬಪ್ಪೆ ತಾನೂ ಒಂದು ಗೋಲ್ […]