ಪ್ರಪಂಚದ ಅತ್ಯಂತ ನಿಗೂಢ ಸೊಕ್ಕಿನ ಬೆಕ್ಕುಗಳನ್ನು ಮುದ್ದಿನ ಬೆಕ್ಕಾಗಿ ಪಳಗಿಸಲು ಯಾರಿಂದಲೂ ಸಾಧ್ಯವಾಗಿಲ್ಲ!!

ಇವತ್ತು ಮನೆ ಮಂದಿಗೆಲ್ಲಾ ಅಚ್ಚುಮೆಚ್ಚಾಗಿರುವ ಆಧುನಿಕ ಬೆಕ್ಕು (ಫೆಲಿಸ್ ಸಿಲ್ವೆಸ್ಟ್ರಿಸ್ ಕ್ಯಾಟಸ್) ನಾಲ್ಕು ಅಥವಾ ಐದು ಪ್ರತ್ಯೇಕ ಕಾಡು ಬೆಕ್ಕುಗಳಲ್ಲಿ ಒಂದು ಅಥವಾ ಹೆಚ್ಚಿನವು ಪ್ರಬೇಧಗಳಿಂದ ಬಂದಿದೆ ಎಂದು ಅಂದಾಜಿಸಲಾಗಿದೆ. ಕಾಡುಬೆಕ್ಕುಗಳ ವಿಭಿನ್ನ ಪ್ರಜಾತಿಗಳಾದ ಸಾರ್ಡಿನಿಯನ್ ವೈಲ್ಡ್ ಕ್ಯಾಟ್ (ಫೆಲಿಸ್ ಸಿಲ್ವೆಸ್ಟ್ರಿಸ್ ಲಿಬಿಕಾ), ಯುರೋಪಿಯನ್ ವೈಲ್ಡ್ ಕ್ಯಾಟ್ (ಎಫ್. ಎಸ್. ಸಿಲ್ವೆಸ್ಟ್ರಿಸ್), ಮಧ್ಯ ಏಷ್ಯಾದ ಕಾಡು ಬೆಕ್ಕು (ಎಫ್.ಎಸ್. ಓರ್ನಾಟಾ) , ಉಪ-ಸಹಾರನ್ ಆಫ್ರಿಕನ್ ವೈಲ್ಡ್ ಕ್ಯಾಟ್ ಎಫ್. ಎಸ್. ಕಾಫ್ರಾ), ಮತ್ತು (ಬಹುಶಃ) ಚೀನೀ ಮರುಭೂಮಿ […]

ನಂದಿನಿ ಸಿಹಿ ಉತ್ಸವ ಉದ್ಘಾಟನೆ: ಸಿಹಿ ಉತ್ಪನ್ನಗಳ ಮೇಲೆ ಶೇ. 20 ರಿಯಾಯಿತಿ

ಉಡುಪಿ: ಪ್ರತಿ ವರ್ಷದಂತೆ ಈ ವರ್ಷವೂ ಕರ್ನಾಟಕ ಹಾಲು ಮಹಾ ಮಂಡಳಿಯು ರಾಜ್ಯಾದಂತ ಡಿ.19 ರಿಂದ ಸೀಮಿತ ಅವಧಿಯವರೆಗೆ ‘ನಂದಿನಿ ಸಿಹಿ ಉತ್ಸವ’ ವನ್ನು ಆಚರಿಸುತ್ತಿದ್ದು ಈ ಬಾರಿ ವಿಶೇಷವಾಗಿ ಎಲ್ಲಾ ನಂದಿನಿ ಸಿಹಿ ಉತ್ಪನ್ನಗಳ ಮೇಲೆ ಶೇ. 20 ರಿಯಾಯಿತಿಯನ್ನು ನೀಡುತ್ತಿದ್ದು ಆ ಪ್ರಯುಕ್ತ ದಕ್ಷಿಣ ಕನ್ನಡ ಹಾಲು ಒಕ್ಕೂಟದ ವತಿಯಿಂದ ಉಡುಪಿಯ ಸಾಲಿಗ್ರಾಮ ನಂದಿನಿ ಫ್ರಾಂಚೈಸಿಯಲ್ಲಿ ನಂದಿನಿ ಸಿಹಿ ಉತ್ಸವವನ್ನು ಕರ್ನಾಟಕ ಹಾಲು ಮಹಾ ಮಂಡಳಿ ಹಾಗೂ ದ.ಕ. ಹಾಲು ಒಕ್ಕೂಟದ ನಿರ್ದೇಶಕದಿವಾಕರ ಶೆಟ್ಟಿ, […]

ಜಿಲ್ಲಾ ಮಟ್ಟದ ರಸಪ್ರಶ್ನೆ ಸ್ಪರ್ಧೆ: ಶ್ರೀ ವೆಂಕಟರಮಣ ಕಾಲೇಜಿಗೆ ಪ್ರಥಮ ಸ್ಥಾನ

ಕುಂದಾಪುರ: ಲಕ್ಷ್ಮಿ ಸೋಮ ಬಂಗೇರ ಸರಕಾರಿ ಪ್ರಥಮ ದರ್ಜೆ ಕಾಲೇಜು ಕೋಟ ಪಡುಕೇರಿ ವತಿಯಿಂದ ಡಿ. 15 ರಂದು ಪದವಿ ಪೂರ್ವ ವಿದ್ಯಾರ್ಥಿಗಳಿಗಾಗಿ ಆಯೋಜಿಸಿದ ಉಡುಪಿ ಜಿಲ್ಲಾ ಮಟ್ಟದ ರಸಪ್ರಶ್ನೆ ಸ್ಪರ್ಧೆಯಲ್ಲಿ ಶ್ರೀ ವೆಂಕಟರಮಣ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿಗಳು ಪ್ರಥಮ ಸ್ಥಾನ ಪಡೆದಿದ್ದಾರೆ. ವಿದ್ಯಾರ್ಥಿಗಳನ್ನು ಕಾಲೇಜಿನ ಆಡಳಿತ ಮಂಡಳಿ, ಪ್ರಾಂಶುಪಾಲರು, ಉಪನ್ಯಾಸಕರು ಹಾಗೂ ಸಿಬ್ಬಂದಿ ವರ್ಗದವರು ಅಭಿನಂದಿಸಿದ್ದಾರೆ.

ವಿಧಾನಸಭೆ ಅಧಿವೇಶನ: ಒಳಗೆ ವೀರ ಸಾವರ್ಕರ್ ಭಾವಚಿತ್ರ; ಹೊರಗೆ ಪ್ರತಿಪಕ್ಷಗಳ ಪ್ರತಿಭಟನೆ

ಬೆಂಗಳೂರು: ರಾಜ್ಯ ವಿಧಾನಸಭೆಯ ಒಳಗೆ ವೀರ್ ಸಾವರ್ಕರ್ ಅವರ ಭಾವಚಿತ್ರವನ್ನು ಹಾಕಿರುವ ಕರ್ನಾಟಕ ಬಿಜೆಪಿ ಸರ್ಕಾರದ ಕ್ರಮವು ವಿಧಾನಸೌಧ ಕಟ್ಟಡದ ಮೆಟ್ಟಿಲುಗಳ ಮೇಲೆ ಪ್ರತಿಪಕ್ಷಗಳ ಪ್ರತಿಭಟನೆಗೆ ಕಾರಣವಾಯಿತು. ಕರ್ನಾಟಕ ವಿಧಾನಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ ವೀರ ಸಾವರ್ಕರ್ ಭಾವಚಿತ್ರವನ್ನು ಅನಾವರಣಗೊಳಿಸಿದರು. ಆದರೆ ವಿರೋಧ ಪಕ್ಷಗಳು ಪಕ್ಷದ ನಾಯಕ ಸಿದ್ದರಾಮಯ್ಯ ಅವರ ನೇತೃತ್ವದಲ್ಲಿ ಪ್ರತಿಭಟನೆ ನಡೆಸಿ, ಕರ್ನಾಟಕ ವಿಧಾನಸಭೆಯಲ್ಲಿ ವಿವಾದಾತ್ಮಕ ವ್ಯಕ್ತಿಯನ್ನು ಪ್ರದರ್ಶಿಸುವ ಅಗತ್ಯವೇನಿದೆ ಎಂದು ಪ್ರಶ್ನಿಸಿದರು. ವೀರ ಸಾವರ್ಕರ್ ಬಗ್ಗೆ ಜಾಗೃತಿ ಮೂಡಿಸುವ ರಾಜ್ಯಾದ್ಯಂತ ಅಭಿಯಾನದ ಭಾಗವಾಗಿ ಬಿಜೆಪಿಯು […]

ಕುಲಾಲರ ಮಾತೃ ಸಂಘದ ಮಹಿಳಾ ವಿಭಾಗದ ವತಿಯಿಂದ ಶ್ರೀ ದೇವಿಗೆ ಸ್ವರ್ಣ ಮಲ್ಲಿಗೆ ಹಾರ ಸಮರ್ಪಣೆ

ಮಂಗಳೂರು: ದ.ಕ ಜಿಲ್ಲಾ ಮೂಲ್ಯರ ಯಾನೆ ಕುಲಾಲರ ಮಾತೃ ಸಂಘದ ಮಹಿಳಾ ವಿಭಾಗದ ನೇತೃತ್ವದಲ್ಲಿ ಡಿ.18 ಭಾನುವಾರದಂದು ಸಂಜೆ 5 ಗಂಟೆಗೆ ಸಮಾಜದ ಭಕ್ತಿಯ ಕಾಣಿಕೆಯಾಗಿ ಶ್ರೀ ದೇವಿಗೆ ಚಿನ್ನದ ಮಲ್ಲಿಗೆ ಹಾರ ಹಾಗೂ ಮಲ್ಲಿಗೆ ಹೂವಿನ ಅಲಂಕಾರ ಸೇವೆಯನ್ನು ಸಮರ್ಪಿಸಲಾಯಿತು. ಮಹಿಳಾ ವಿಭಾಗದ ಸದಸ್ಯೆಯರು ಸ್ವರ್ಣ ಹಾರವನ್ನು ಚೆಂಡೆ ವಾದ್ಯ ಕಲಶಗಳ ಸಹಿತ ಮರೆವಣಿಗೆಯ ಮೂಲಕ ಶ್ರೀದೇವಿಗೆ ಸಮರ್ಪಿಸಿದರು. ಈ ಸ್ವರ್ಣ ಮಲ್ಲಿಗೆ ಹಾರವನ್ನು ಮಂಗಳೂರಿನ ಪ್ರಖ್ಯಾತ ಜ್ಯುವೆಲ್ಲರಿ ಸಂಸ್ಥೆಯಾದ ಭೀಮಾ ಜ್ಯುವೆಲರ್ಸ್ ನವರು ತಯಾರಿಸಿದ್ದು, […]