ವಿಶ್ವದ ಮೊದಲ ಕೃತಕ ಗರ್ಭಾಶಯದ ಸೌಲಭ್ಯ ಎಕ್ಟೋಲೈಫ್‌: ಸಂಪೂರ್ಣವಾಗಿ ಲ್ಯಾಬ್ ನೊಳಗೆ ಬೆಳೆಯಲಿವೆ ಶಿಶುಗಳು!!

ಇತ್ತೀಚಿನ ಪರಿಕಲ್ಪನಾ ವೀಡಿಯೊದಲ್ಲಿ, ಜೈವಿಕ ತಂತ್ರಜ್ಞಾನಶಾಸ್ತ್ರಜ್ಞ ಮತ್ತು ಚಲನಚಿತ್ರ ನಿರ್ಮಾಪಕ ಹಶೆಮ್ ಅಲ್-ಘೈಲಿ ಅವರು ವಿಶ್ವದ ಮೊದಲ ಕೃತಕ ಗರ್ಭಾಶಯದ ಸೌಲಭ್ಯವಾದ ಎಕ್ಟೋಲೈಫ್‌ನೊಳಗೆ ವಿಚಿತ್ರ ಮತ್ತು ಆಕರ್ಷಕ ಪ್ರವಾಸಕ್ಕೆ ನಮ್ಮನ್ನು ಕರೆದೊಯ್ಯುತ್ತಾರೆ. ಈ ಕೃತಕ ಬುದ್ದಿಮತ್ತೆ-ಚಾಲಿತ ಕಾಲ್ಪನಿಕ ಸಂಕೀರ್ಣವು ಭವಿಷ್ಯದ ಪೋಷಕರಿಗೆ ನೈಸರ್ಗಿಕ ಹೆರಿಗೆಗೆ ಸಂಭಾವ್ಯವಾಗಿ ಸುರಕ್ಷಿತ ಪರ್ಯಾಯವನ್ನು ನೀಡುತ್ತದೆ ಮತ್ತು ಅದಕ್ಕೆ ಸಂಬಂಧಿಸಿದ ಮಾರಣಾಂತಿಕ ತೊಡಕುಗಳನ್ನು ತೆಗೆದುಹಾಕಲಿದೆ. ವಿಶ್ವ ಆರೋಗ್ಯ ಸಂಸ್ಥೆಯ ಪ್ರಕಾರ, ಸುಮಾರು 300,000 ಮಹಿಳೆಯರು ಗರ್ಭಾವಸ್ಥೆಯ ತೊಂದರೆಗಳಿಂದ ಸಾಯುತ್ತಾರೆ. ಎಕ್ಟೋಲೈಫ್ ಕೃತಕ ಗರ್ಭವನ್ನು […]

ಎರಡು ವರ್ಷದ ಮಗುವನ್ನು ನುಂಗಿ ಕಕ್ಕಿದ ಹಿಪ್ಪೋ: ಉಗಾಂಡಾದಲ್ಲೊಂದು ವಿಚಿತ್ರ ಘಟನೆ

ಕ್ಯಾಪಿಟಲ್ ಎಫ್‌ಎಂ ಉಗಾಂಡಾ ಪೊಲೀಸರನ್ನು ಉಲ್ಲೇಖಿಸಿ ಮಾಡಿರುವ ವರದಿಯ ಪ್ರಕಾರ ಅಂಬೆಗಾಲಿಡುತ್ತಿರುವ ಎರಡು ವರ್ಷದ ಮಗುವೊಂದು ಡಿಸೆಂಬರ್ 4 ರಂದು ಕಟ್ವೆ ಕಬಟೊರೊ ಪಟ್ಟಣದ ಸರೋವರದ ತೀರದಲ್ಲಿ ತನ್ನ ಮನೆಯ ಬಳಿ ಆಟವಾಡುತ್ತಿದ್ದಾಗ ಹಸಿದ ಹಿಪ್ಪೋ ಒಂದು ತನ್ನ ದೊಡ್ಡ ದವಡೆಗಳಿಂದ ಅವನನ್ನು ಹಿಡಿದು ನುಂಗಲು ಪ್ರಯತ್ನಪಟ್ಟಿದೆ. ಇದನ್ನು ನೋಡಿದ ಅಲ್ಲೇ ಇದ್ದ ಕ್ರಿಸ್ಪಾಸ್ ಬಾಗೊಂಜಾ ಎಂಬ ವ್ಯಕ್ತಿ ಹಿಪ್ಪೋ ಮಗುವನ್ನು ಸಂಪೂರ್ಣವಾಗಿ ನುಂಗುವ ಮೊದಲು, ಅದರ ಮೇಲೆ ಕಲ್ಲುಗಳನ್ನು ಎಸೆಯಲು ಪ್ರಾರಂಭಿಸಿದ್ದಾರೆ. ಇದರಿಂದಾಗಿ ಹಿಪ್ಪೋ ಆ […]

ಮಂಗಳೂರಿಗೆ ಮೂರನೇ ಐಷಾರಾಮಿ ಹಡಗು ಎಂಎಸ್ ನೌಟಿಕಾ ಆಗಮನ

ಮಂಗಳೂರು: ನವಮಂಗಳೂರು ಬಂದರಿಗೆ ಪ್ರಸಕ್ತ ಸಾಲಿನ ಮೂರನೇ ಐಷಾರಾಮಿ ಹಡಗು ಆಗಮಿಸಿದೆ. ಎಂಎಸ್ ನೌಟಿಕಾ ಎನ್ನುವ ಈ ಹಡಗಿನಲ್ಲಿ ಸುಮಾರು 548 ಪ್ರಯಾಣಿಕರು ಹಾಗೂ 397 ಸಿಬ್ಬಂದಿಗಳು ಪ್ರವಾಸ ಮಾಡುತ್ತಿದ್ದು, ಹಡಗು 30,277 ಟನ್‌ಗಳನ್ನು ಸಾಗಿಸುವ ಸಾಮರ್ಥ್ಯವನ್ನು ಹೊಂದಿದೆ. ಮಾಲ್ಡೀವ್‌ ದ್ವೀಪಕ್ಕೆ ಪ್ರಯಾಣ ಬೆಳೆಸಿರುವ ಈ ಹಡಗು ಮಸ್ಕತ್‌ನಿಂದ ಭಾರತಕ್ಕೆ ಬಂದಿದ್ದು, ಮುಂಬೈ, ಮೊರ್ಮಗಾಂವ್ ಮೂಲಕ ಮಂಗಳೂರು ಬಂದರು ಪ್ರವೇಶಿಸಿದೆ. ನವ ಮಂಗಳೂರು ಬಂದರಿಗೆ ಗುರುವಾರ ಬೆಳಿಗ್ಗೆ 6 ಗಂಟೆಗೆ ತಲುಪಿದ್ದು, ಅದರಲ್ಲಿದ್ದ ಪ್ರಯಾಣಿಕರು ಕುದ್ರೋಳಿ ಗೋಕರ್ಣನಾಥ […]

ಮಂಗಳಮುಖಿಯರಿಂದ ಅನೈತಿಕ ಕಾರ್ಯ ದೂರು ಹಿನ್ನೆಲೆ: ಖುದ್ದು ಕಾರ್ಯಾಚರಣೆ ನಡೆಸಿದ ಎಸ್ಪಿ ಅಕ್ಷಯ್ ಹಾಕೆ

ಉಡುಪಿ: ಇಲ್ಲಿನ ಸಿಟಿ ಬಸ್ ನಿಲ್ದಾಣದ ಸಮೀಪ ಮಂಗಳಮುಖಿಯರನ್ನು ಅನೈತಿಕ ಕಾರ್ಯದಲ್ಲಿ ತೊಡಗಿಸಿಕೊಳ್ಳುತ್ತಿರುವ ದೂರಿನ ಹಿನ್ನೆಲೆಯಲ್ಲಿ ಡಿ. 16 ರಂದು ತಡ ರಾತ್ರಿ ಉಡುಪಿ ಜಿಲ್ಲಾ ಪೊಲೀಸ್ ಅಧೀಕ್ಷಕ ಹಾಕೆ ಅಕ್ಷಯ್ ಮಚ್ಚೀಂದ್ರ ಖುದ್ದು ಕಾರ್ಯಾಚರಣೆ ನಡೆಸಿದ್ದಾರೆ. ಕಾರ್ಯಾಚರಣೇಯ ಸಂದರ್ಭ ಇಬ್ಬರನ್ನು ವಶಕ್ಕೆ ಪಡೆದು ಪ್ರಕರಣ ದಾಖಲಿಸಲಾಗಿದೆ. ನಗರದ ಬಸ್ ನಿಲ್ದಾಣಗಳಲ್ಲಿ ರಾತ್ರಿ ಹೊತ್ತಿನಲ್ಲಿ ಕೆಲವು ಮಂಗಳಮುಖಿಯರು ಸಾರ್ವಜನಿಕರ ವಾಹನಗಳನ್ನು ಅಡ್ಡಹಾಕಿ ತೊಂದರೆ ಕೊಡುವ ಬಗ್ಗೆ ವರದಿಯಾಗಿತ್ತು. ಇದಲ್ಲದೆ ದಾರಿದೀಪಗಳನ್ನು ಒಡೆದು ಹಾಕಿ ಜನರಿಂದ ಬಲವಂತವಾಗಿ ಹಣ […]

ರಕ್ಷಣಾ ಕಾಯ್ದೆ ಜಾರಿಗೆ ಆಗ್ರಹಿಸಿ ವಕೀಲರ ಸಂಘದಿಂದ ಸಾಂಕೇತಿಕ ಪ್ರತಿಭಟನೆ

ಉಡುಪಿ: ವಕೀಲರ ರಕ್ಷಣಾ ಕಾಯ್ದೆಯನ್ನು ಸರಕಾರ ಶೀಘ್ರವೆ ಜಾರಿಗೊಳಿಸಬೇಕು ಎಂದು ಆಗ್ರಹಿಸಿ ಶುಕ್ರವಾರದಂದು ವಕೀಲರ ಸಂಘದಿಂದ ಸಾಂಕೇತಿಕ ಪ್ರತಿಭಟನೆ ನಡೆಸಲಾಯಿತು. ಜಿಲ್ಲಾ ನ್ಯಾಯಾಲಯ ಸಂಕೀರ್ಣದ ಮುಂಭಾಗದಲ್ಲಿ ವಕೀಲರೆಲ್ಲ ಜಮಾಯಿಸಿ ಕಾಯ್ದೆಯನ್ನು ಆದಷ್ಟು ಬೇಗ ಜಾರಿಗೆ ತರುವಂತೆ ಸರಕಾರವನ್ನು ಒತ್ತಾಯಿಸಿದರು. ಸಮಾಜದ ರಕ್ಷಣೆಯಲ್ಲಿ ತೊಡಗಿರುವ ವಕೀಲರಿಗೆ ರಕ್ಷಣೆ ಇಲ್ಲ, ಇತ್ತೀಚೆಗೆ ವಕೀಲರ ಮೇಲೆ ಹಲ್ಲೆ ನಡೆಸುವ ಘಟನೆಗಳು ಹೆಚ್ಚುತ್ತಿವೆ. ವಕೀಲರಿಗೂ ರಕ್ಷಣೆ ಅವಶ್ಯ. ಹಿರಿ-ಕಿರಿ ಎಲ್ಲ ವಕೀಲರಿಗೂ ರಕ್ಷಣೆಯ ಅಗತ್ಯವಿದ್ದು, ಸರಕಾರ ಮುಂಬರುವ ಅಧಿವೇಶನದಲ್ಲೇ ಕಾಯ್ದೆಯನ್ನು ಜಾರಿಗೆ ತರುವ […]