ಅಂಧರ ಟಿ20 ವಿಶ್ವಕಪ್ ನಲ್ಲಿ ಹ್ಯಾಟ್ರಿಕ್ ಗೆಲುವು ಸಾಧಿಸಿದ ಭಾರತ: ಮೂರನೇ ಬಾರಿಯೂ ಕಪ್ ನಮ್ದೇ
ಬೆಂಗಳೂರು: ಶನಿವಾರ ನಡೆದ ಅಂಧರ ಟಿ20 ವಿಶ್ವಕಪ್ನ ಅಂತಿಮ ಹಣಾಹಣಿಯಲ್ಲಿ ಭಾರತ ಬಾಂಗ್ಲಾದೇಶವನ್ನು ಸೋಲಿಸಿ ಈ ಬಾರಿಯೂ ಕಪ್ ನಮ್ದೇ ಎಂದು ಬೀಗಿದೆ. ಭಾರತವು ಪಂದ್ಯಾವಳಿಯಲ್ಲಿ ತಮ್ಮ ಮೂರನೇ ಪ್ರಶಸ್ತಿಯನ್ನು ದಾಖಲಿಸಿದೆ. ಈ ಪಂದ್ಯದಲ್ಲಿ ಭಾರತ 120 ರನ್ಗಳ ಬೃಹತ್ ಅಂತರದಿಂದ ಎದುರಾಳಿಗಳನ್ನು ಸೋಲಿಸಿದೆ. ಆರಂಭದಿಂದಲೂ ಆತಿಥೇಯ ತಂಡವು ತಮ್ಮ ನೆರೆಯ ಬಾಂಗ್ಲಾದೇಶದ ವಿರುದ್ಧ ಫೈನಲ್ಗೆ ಹೋಗುವ ನೆಚ್ಚಿನ ತಂಡವಾಗಿತ್ತು ಮತ್ತು ಬೆಂಗಳೂರಿನ ಮೈದಾನದಲ್ಲಿ ಇತಿಹಾಸವನ್ನು ಸೃಷ್ಟಿಸಿ ಅದ್ಭುತ ವಿಜಯವನ್ನು ಪೂರ್ಣಗೊಳಿಸಿತು. #TeamIndia beat Bangladesh by […]
ಉಡುಪಿ ಕಥೊಲಿಕ್ ಕ್ರೆಡಿಟ್ ಕೊ- ಆಪರೇಟಿವ್ ಸೊಸೈಟಿಯ ಬಾಲ್ಯದ ನಡೆ, ಅಭಿವೃದ್ಧಿಯ ಕಡೆ
ಉಡುಪಿ ಕಥೊಲಿಕ್ ಕ್ರೆಡಿಟ್ ಕೊ- ಆಪರೇಟಿವ್ ಸೊಸೈಟಿಯ, ಕಳೆದ 25 ವರ್ಷಗಳಿಂದ ಉಡುಪಿ ಜಿಲ್ಲೆಯ ಜನತೆಗೆ ಸೇವೆ ನೀಡಿ, ಲಾಭ ಗಳಿಸಿ, ಯಶಸ್ವಿಯಾಗಿ ಮುನ್ನಡೆತ್ತಿರುವುದು ಸಂತಸದ ವಿಷಯ. ಈ ನಾಡಿನ ಹಾಗೂ ಜನರ ಅಭಿವೃದ್ದಿಯಲ್ಲಿ ಈ ಸಂಘವು ಪಾತ್ರವಹಿಸಿದೆ. ಈ ಸಂಘವು ಸ್ವತಂತ್ರವಾಗಿ, ಸಹಕಾರಿ ಸಂಘಗಳ ನಿಯಮಾನುಸಾರವಾಗಿ ಯಶಸ್ವಿಯಾಗಿ ಕಾರ್ಯವೆಸಗಬೇಕು ಎಂಬ ಸಂಸ್ಥಾಪಕರ ಕನಸು ಇಂದು ನನಸಾಗಿದೆ. ಇದರ ಸ್ಥಾಪನೆಯಲ್ಲಿ ನನ್ನ ಸಣ್ಣ ಪಾತ್ರವೂ ಇದ್ದು, ಕಳೆದ 25 ವರ್ಷಗಳಲ್ಲಿ ಇದರ ಸದೃಶ್ಯನಾಗಿ, ಗ್ರಾಹಕನಾಗಿ, ಹಿತೈಶಿಯಾಗಿ, ಸಂಘದ […]
ಡಾ.ಜಿ. ಶಂಕರ್ ಸರಕಾರಿ ಕಾಲೇಜಿನ ನಾಲ್ವರು ಸಹಪ್ರಾಧ್ಯಾಪಕರಿಗೆ ಪ್ರಾಧ್ಯಾಪಕ ಹುದ್ದೆಗೆ ಪದೋನ್ನತಿ
ಉಡುಪಿ: ಅಜ್ಜರಕಾಡಿನಲ್ಲಿರುವ ಡಾ.ಜಿ.ಶಂಕರ್ ಸರಕಾರಿ ಮಹಿಳಾ ಪ್ರಥಮ ದರ್ಜೆಕಾಲೇಜು ಹಾಗೂ ಸ್ನಾತಕೋತ್ತರ ಅಧ್ಯಯನ ಕೇಂದ್ರದ ನಾಲ್ಕು ಮಂದಿ ಸಹಪ್ರಾಧ್ಯಾಪಕರಿಗೆ ಪ್ರಾಧ್ಯಾಪಕ ಹುದ್ದೆಗೆ ಪದೋನ್ನತಿ ನೀಡಿ ಸರಕಾರ ಆದೇಶ ಹೊರಡಿಸಿದೆ. ಕಾಲೇಜಿನ ಪ್ರಾಂಶುಪಾಲ, ಇತಿಹಾಸಶಾಸ್ತ್ರ ವಿಭಾಗದ ಮುಖ್ಯಸ್ಥ ಡಾ. ಭಾಸ್ಕರ ಶೆಟ್ಟಿ, ರಸಾಯನ ಶಾಸ್ತ್ರ ವಿಭಾಗದ ಮುಖ್ಯಸ್ಥ ಡಾ. ಶ್ರೀಧರ್ ಪ್ರಸಾದ್ ಕೆ., ಕನ್ನಡ ವಿಭಾಗದ ಮುಖ್ಯಸ್ಥೆ ಡಾ. ನಿಕೇತನ, ಕನ್ನಡ ವಿಭಾಗದ ಸಹ ಪ್ರಾಧ್ಯಾಪಕ ಡಾ. ರವಿರಾಜ್ ಶೆಟ್ಟಿ ಅವರನ್ನು ಪ್ರೊಫೆಸರ್ ಹುದ್ದೆಗೆ ನೇಮಿಸಲಾಗಿದೆ. ಇದೇ ಮೊದಲ […]
ಮಂಗಳೂರು ವಿಶ್ವವಿದ್ಯಾನಿಲಯದಿಂದ ವಿದ್ಯಾರ್ಥಿಗಳಿಗಾಗುತ್ತಿರುವ ಸಮಸ್ಯೆ ಬಗೆಹರಿಸಲು ಜಿಲ್ಲಾಧಿಕಾರಿಗೆ ಮನವಿ ನೀಡಿದ ಎಬಿವಿಪಿ
ಉಡುಪಿ: ಮಂಗಳೂರು ವಿಶ್ವವಿದ್ಯಾನಿಲಯದಿಂದ ವಿದ್ಯಾರ್ಥಿಗಳು ಅನುಭವಿಸುತ್ತಿರುವ ಶೈಕ್ಷಣಿಕ ಸಮಸ್ಯೆಯ ಕುರಿತು ಡಿ.17 ರಂದು ಎಬಿವಿಪಿ ವತಿಯಿಂದ ವಿದ್ಯಾರ್ಥಿಗಳು ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದರು. ಮಂಗಳೂರು ವಿಶ್ವವಿದ್ಯಾನಿಲಯವು ಪದವಿ ಮತ್ತು ಸ್ನಾತಕೋತ್ತರ ವಿದ್ಯಾರ್ಥಿಗಳಿಗೆ ಅಂಕಪಟ್ಟಿ ನೀಡದೆ ಸತಾಯಿಸುತ್ತಿರುವುದು, ಅಂಕಪಟ್ಟಿ ಬಾರದ ಹಿನ್ನೆಲೆ ವಿದ್ಯಾರ್ಥಿ ವೇತನಕ್ಕೆ ಅರ್ಜಿ ಹಾಕಲು ಸಮಸ್ಯೆಯಾಗುತ್ತಿರುವುದು, ಮೌಲ್ಯಮಾಪನವನ್ನು ಸೂಕ್ತ ಸಮಯದಲ್ಲಿ ನಡೆಸದೇ ಇರುವುದು, ಮರು ಪರೀಕ್ಷೆ ಹಾಗೂ ಮರುಮೌಲ್ಯಮಾಪನಗಳಲ್ಲಿ ಗೊಂದಲ, ಮರು ಮೌಲ್ಯಮಾಪನದಲ್ಲಿ ಶುಲ್ಕ ಮರುಪಾವತಿಗೆ ನಿಗದಿ ಪಡಿಸಿದಷ್ಟು ಅಂಕ ಬಂದರೂ ಸಹ ಕಟ್ಟಿದ ಶುಲ್ಕವು ಮರುಪಾವತಿಯಾಗದಿರುವುದು, […]
ಪೆರ್ಡೂರು: ಆತಂಕ ಸೃಷ್ಟಿಸಿದ್ದ ಚಿರತೆ ಸೆರೆ
ಪೆರ್ಡೂರು: ಇಲ್ಲಿನ ಜನತೆಯ ಆತಂಕಕ್ಕೆ ಕಾರಣವಾಗಿದ್ದ ಹೆಣ್ಣು ಚಿರತೆಯೊಂದನ್ನು ಬೋನಿಗೆ ಬೀಳಿಸುವಲ್ಲಿ ಅರಣ್ಯ ಇಲಾಖೆಯ ಅಧಿಕಾರಿಗಳು ಯಶಸ್ವಿಯಾಗಿದ್ದಾರೆ. ಪೆರ್ಡೂರು ಪರಿಸರದಲ್ಲಿ ಕಳೆದ ಮೂರು ದಿನಗಳಿಂದ ಚಿರತೆಯೊಂದು ಆತಂಕ ಸೃಷ್ಟಿಸಿತ್ತು. ಮೂರು ದಿನಗಳ ಹಿಂದಷ್ಟೇ ಚಿರತೆಯ ಮರಿಯೊಂದನ್ನು ಹಿಡಿದು ಆಗುಂಬೆ ಕಾಡಿನಲ್ಲಿ ಬಿಡಲಾಗಿತ್ತು. ಅದರ ತಾಯಿ ತನ್ನ ಮರಿಯನ್ನರಸಿಕೊಂಡು ಪೆರ್ಡೂರು ಪರಿಸರದಲ್ಲಿ ಅಡ್ಡಾಡುತ್ತಿತ್ತು. ಇದರಿಂದಾಗಿ ಇಲ್ಲಿನ ಪರಿಸರದ ಜನರಲ್ಲಿ ಆತಂಕ ಮನೆ ಮಾಡಿತ್ತು. ಚಿರತೆಯನ್ನು ಹಿಡಿಯಲು ಅರಣ್ಯ ಇಲಾಖೆಯ ಅಧಿಕಾರಿಗಳು ಬೋನು ಇರಿಸಿದ್ದರು. ಇದೀಗ ಚಿರತೆಯು ಬೋನಿನೊಗಳೆ ಬಿದ್ದಿದ್ದು, […]