ಉಡುಪಿ ಕಥೊಲಿಕ್ ಕ್ರೆಡಿಟ್ ಕೊ- ಆಪರೇಟಿವ್ ಸೊಸೈಟಿಯ ಬಾಲ್ಯದ ನಡೆ, ಅಭಿವೃದ್ಧಿಯ ಕಡೆ

ಉಡುಪಿ ಕಥೊಲಿಕ್ ಕ್ರೆಡಿಟ್ ಕೊ- ಆಪರೇಟಿವ್ ಸೊಸೈಟಿಯ, ಕಳೆದ 25 ವರ್ಷಗಳಿಂದ ಉಡುಪಿ ಜಿಲ್ಲೆಯ ಜನತೆಗೆ ಸೇವೆ ನೀಡಿ, ಲಾಭ ಗಳಿಸಿ, ಯಶಸ್ವಿಯಾಗಿ ಮುನ್ನಡೆತ್ತಿರುವುದು ಸಂತಸದ ವಿಷಯ. ಈ ನಾಡಿನ ಹಾಗೂ ಜನರ ಅಭಿವೃದ್ದಿಯಲ್ಲಿ ಈ ಸಂಘವು ಪಾತ್ರವಹಿಸಿದೆ. ಈ ಸಂಘವು ಸ್ವತಂತ್ರವಾಗಿ, ಸಹಕಾರಿ ಸಂಘಗಳ ನಿಯಮಾನುಸಾರವಾಗಿ ಯಶಸ್ವಿಯಾಗಿ ಕಾರ್ಯವೆಸಗಬೇಕು ಎಂಬ ಸಂಸ್ಥಾಪಕರ ಕನಸು ಇಂದು ನನಸಾಗಿದೆ. ಇದರ ಸ್ಥಾಪನೆಯಲ್ಲಿ ನನ್ನ ಸಣ್ಣ ಪಾತ್ರವೂ ಇದ್ದು, ಕಳೆದ 25 ವರ್ಷಗಳಲ್ಲಿ ಇದರ ಸದೃಶ್ಯನಾಗಿ, ಗ್ರಾಹಕನಾಗಿ, ಹಿತೈಶಿಯಾಗಿ, ಸಂಘದ ಬೆಳವಣಿಕೆಯನ್ಮು ಗಮನಿಸುತ್ತಾ ಬಂದ್ದಿದ್ದೇನೆ.

ಕಥೊಲಿಕ್ ಸಭೆಯ ನೇತ್ರತ್ವದಲ್ಲಿ ಮೊತ್ತಮೊದಲಿಗೆ ಕುಂದಾಪುರದ ರೋಜರಿ ಕ್ರೆಡಿಟ್ ಕೊ- ಅಪರೇಟಿವ್ ಸೊಸೈಟಿ ಪ್ರಾರಂಭವಾಯಿತು. ನಂತರ 1997 ರಲ್ಲಿ ಬ್ರಹ್ಮಾವರ ಹಾಗೂ ಉಡುಪಿಯಲ್ಲಿ ಸೊಸೈಟಿಗಳನ್ನು ಪ್ರಾರಂಭಿಸಲು ಚಾಲನೆ ನೀಡಲಾಯಿತು. ಕಥೊಲಿಕ್ ಸಭೆ- ಮಂಗಳೂರು ಪ್ರದೇಶದ ಸಲಹೆ ಮೇರೆಗೆ ಅವಿಭಾಜ್ಯ ಕಲ್ಯಾಣಪುರ ವಲಯದ ( ಕಲ್ಯಾಣಪುರ ಹಾಗೂ ಉಡಪಿ ವಲಯ) ಸಭೆ ಕರೆದು, ಉಡುಪಿ ಕಥೊಲಿಕ್ ಕ್ರೆಡಿಟ್ ಕೊ- ಅಪರೇಟಿವ್ ಸೊಸೈಟಿಯ ಸ್ಥಾಪಿಸಲು ನಿರ್ಧರಿಸಲಾಯಿತು. ಈ ಸಭೆಯಲ್ಲಿ ದಿ. ಡೆನಿಸ್ ಡಿ. ಸಿಲ್ವಾ, ಶ್ರೀ ಇಗ್ನೆಶಿಯಸ್ ಮೋನಿಸ್, ಡಾ. ಜೆರಾಲ್ಡ್ ಪಿಂಟೊ, ಶ್ರೀ ಆಲ್ಪೋನ್ಸ್, ಡಿ‌. ಕೋಸ್ಟಾ, ಶ್ರೀ ಲುವಿಸ್ ಅಲ್ಮೇಡ, ಶ್ರೀ ಎಲ್ಯಾಸ್ ಕ್ರಾಸ್ಟೊ, ಶ್ರೀ ಆಲ್ಫ್ರೆಡ್ ಡಿಸೋಜ ಹಾಜರಿದ್ದರು. ನಂತರ ಎರಡೂ ವಲಯ ಸಮಿತಿಗಳಲ್ಲಿ ಚರ್ಚಿಸಿ, ಸೊಸೈಟಿಯ ಸ್ಥಾಪನೆ ಬಗ್ಗೆ ನಿರ್ಧಾರ ತೆಗೆದುಕೊಳ್ಳಲಾಯ್ತು. ಜಂಟಿವಲಯಗಳ ಸಮಿತಿಯಲ್ಲಿ ಕಥೊಲಿಕ್ ಕ್ರೆಡಿಟ್ ಕೊ- ಅಪರೇಟಿವ್ ಸೊಸೈಟಿಯ ಸ್ಥಾಪಿಸಲು ಒಂದು ಸಮಿತಿಯನ್ನು ರಚಿಸಲಾಯ್ತು. ಇದರಲ್ಲಿ ಶ್ರೀ ಡೆನಿಸ್ ಡಿ’ ಸಿಲ್ವಾ ಪ್ರಮುಖ ಪ್ರವರ್ತಕರಾಗಿ, ಶ್ರೀ ಲುವಿಸ್ ಅಲ್ಮೇಡ ಸಂಯೋಜಕರಾಗಿ ಆರಿಸತಾಯಿತು.

ಇತರ ಸದಸ್ಯರು :

ಶ್ರೀ ಇಗ್ನೆಶಿಯಸ್ ಮೋನಿಸ್ ಮೂಡುಬೆಳ್ಳೆ, ಶ್ರೀ ಲುವಿಸ್ ಅಲ್ಮೇಡ, ಶ್ರೀ ಎಲ್ಯಾಸ್ ಕ್ರಾಸ್ಟೊ ಕಲ್ಯಾಣಪುರ, ಶ್ರೀ ಪರ್ಸಿ ಜೆ. ಡಿ ಸೋಜ ಕಲ್ಯಾಣಪುರ, ಶ್ರೀ ಪ್ರೆಡ್ರಿಕ್ ಸ್ವಿಕ್ವೇರ ಕಲ್ಯಾಣಪುರ, ಶ್ರೀ ವಿನ್ಸೆಂಟ್ ಡಿ’ ಕೋಸ್ಟಾ ಉಡುಪಿ, ಜೊರ್ಜ್ ಪವ್ಲ್ ಡಿ’ ಸೋಜ, ಕೆಮ್ಮಣ್ಣು, ಶ್ರೀ ಹೆನ್ರಿ ಕ್ವಾಡ್ರಾಸ್ ಕಲ್ಮಾಡಿ, ಶ್ರೀ ಜೇಮ್ಸ್ ಡಿ’ ಸೋಜ ಯೆರ್ಮಾಳ್, ಶ್ರೀಮತಿ ಜೂಡಿತ್ ಶ್ರೇಷ್ಟ ಮಣಿಪಾಲ್, ಶ್ರೀ ವಿನ್ಸೆಂಟ್ ಡಿ ಸೋಜ ಪೆರಂಪಳ್ಳಿ, ಶ್ರೀ ಮೆಲ್ವಿನ್ ರೇಗೊ, ಮೌಂಟ್ ರೋಜರಿ, ಶ್ರೀ ಲಿಯೋಬೋಲ್ಡ್ ಡಿ ಸೋಜಾ ಕೊಳಳಗಿರಿ, ಶ್ರೀಮತಿ ಜಸಿಂತ ಡಿ ಸೋಜಾ, ಮೂಡುಬೆಳ್ಳೆ, ಶ್ರೀ ಪ್ರಕಾಶ್ ಕಾಸ್ಟೆಲಿಯೊ ಮೂಡುಬೆಳ್ಳೆ. ಡಾ. ಜೆರಾಲ್ಡ್ ಪಿಂಟೊ, ಶ್ರೀ ಆಲ್ಪೋನ್ಸ್ ಡಿ’ ಕೋಸ್ತಾ. ಈ ಸದಸ್ಯರಲ್ಲಿ ಕೆಲವರು ಮುಂದೆ ಅಧ್ಯಕ್ಷರಾಗಿ, ನಿರ್ದೇಶಕರಾಗಿ ಸೇವೆ ಸಲ್ಲಿಸಿದ್ದಾರೆ.ಕೆಲವರು ಇನ್ನೂ ಸೇವೆ ಸಲ್ಲಿಸುತ್ತಿದ್ದಾರೆ. ಈ ಸದಸ್ಯರು ಕಥೊಲಿಕ್ ಸಭೆಯ ಸಹಕಾರದಿಂದ ಪಾಲು ಬಂಡವಾಳವನ್ನು ಸಂಗ್ರಹಿಸಿದರು. 16.12. 1997 ರಂದು ಉಡುಪಿ ಕಥೊಲಿಕ್ ಕ್ರೆಡಿಟ್ ಕೊ- ಆಪರೇಟಿವ್ ಸೊಸೈಟಿಯನ್ನು ನೋಂದಾಯಿಸಲಾಯಿತು.

ಸಂಘದ ಸ್ಥಾಪನೆಯಲ್ಲಿ ಶ್ರೀ ವಲೇರಿಯನ್ ಮಿನೇಜಸ್ ಕೋಟಾ ಮಾರ್ಗದರ್ಶನ ನೀಡಿದ್ದಾರೆ. ಡಾ. ಜೆರಾಲ್ಡ್ ಪಿಂಟೊ ಶ್ರೀ ಡೆನಿಸ್ ಡಿ’ ಸಿಲ್ವರಿಗೆ ಸಂಘದ ನಿಯಮಗಳನ್ನು ರಚಿಸಲು ಹಾಗೂ ಸರ್ವ ವಿಷಯಗಳಲ್ಲಿ ಸಹಕರಿಸಿದ್ದಾರೆ. ಸ್ಥಾಪಕ ಅದ್ಯಕ್ಷರಾಗಿ ಶ್ರೀ ಡೆನಿಸ್ ಡಿ’ ಸಿಲ್ವಾ, ಶ್ರೀ ಜೊರ್ಜ್ ಪಾವ್ಲ್ ಡಿ’ ಸೋಜ, ಕೆಮ್ಮಣ್ಣು ಉಪಾದ್ಯಕ್ಷರಾಗಿ, ಕಾರ್ಯದರ್ಶಿಗಳಾಗಿ ಶ್ರೀ ಪ್ರೆಡ್ರಿಕ್ ಸಿಕ್ವೇರಾ ಸಂಘಕ್ಕೆ ಭದ್ರ ತಳಪಾಯ ಹಾಕಿದರು. ಸ್ಥಾಪಹ ಸಭೆಯ ಸಂಚಾಲಕರಾದ ಶ್ರೀ ಲುವಿಸ್ ಅಲ್ಮೇಡರವರು, ರಜತ ಮಹೋತ್ಸವದ ಸಮಯ, ಸಂಘದ ಅದ್ಯಕ್ಷರಾಗಿ, ಸಂಘವನ್ನು ಮುಂದುವರಿಸುತ್ತಿರುವುದು ಉಲ್ಲೇಖನಿಯ. ಅವರ ಜೊತೆ ಉಪಾದ್ಯಕ್ಷರಾದ ಶ್ರೀ ಲುವಿಸ್ ಲೋಬೊ ಹಾಗೂ ನಿರ್ದೇಶಕರ ಹಾಗೂ ಸಿಬ್ಬಂದಿ ವರ್ಗದ ನಿಸ್ವಾರ್ಥ ಸೇವೆ ಹಾಗೂ ಸದಸ್ಯರ ಸಹಕಾರದಿಂದ ಸಂಘ ಭದ್ರವಾಗಿ ನಿಂತಿದೆ. ನಾಲ್ಕು ಶಾಖೆಗಳನ್ನು ಹೊಂದಿ 14 ಮಂದಿ ಸಿಬ್ಬಂದಿ ವರ್ಗ ದುಡಿಯುತ್ತಿದೆ. 5437 ಸದಸ್ಯರನ್ನು ಹೊಂದಿ 96 ಲಕ್ಷ ಪಾಲು ಬಂಡವಾಳ ಹೊಂದಿದೆ. ಕಳೆದ ವರ್ಷದಲ್ಲಿ ಸುಮಾರು 44 ಲಕ್ಷ ಲಾಭ ಗಳಿಸಿ, 17% ಡಿವಿಡೆಂಡ್ ನೀಡಿದೆ. ಇದು ಸ್ಥಾಪಕ್ ಸದಸ್ಯರಾದ ನಮಗೆ ನಿಜವಾಗಿಯು ಸಂತೋಷದ ವಿಷಯ.

ಸಂಘವು ಸ್ವರ್ಣ ಮಹೋತ್ಸವದತ್ತ ಸಾಗುವಾಗ ಇನ್ನೂ ಎತ್ತರಕ್ಕೆ ಬೆಳೆಯಲಿ, ಸಮಾಜದ ಹಾಗೂ ದೇಶದ ಪ್ರಗತಿಗೆ ಅಮೂಲ್ಯವಾದ ಕೊಡುಗೆ ನೀಡಲಿ ಎಂದು ಭಗವಂತನನ್ನು ಬೇಡುತ್ತೇನೆ.

ಲೇ: ಡಾ. ಜೆರಾಲ್ಡ್ ಪಿಂಟೊ, ಕಲ್ಯಾಣಪುರ