ಹವಾಮಾನಾಧಾರಿತ ರೋಗಗಳ ನಿಯಂತ್ರಣಕ್ಕೆ ಯೋಜನೆ ರೂಪಿಸಿ: ಜಿಲ್ಲಾಧಿಕಾರಿ ಕೂರ್ಮಾ ರಾವ್

ಉಡುಪಿ: ಸಾಮಾನ್ಯವಾಗಿ ರೋಗ ರುಜಿನಗಳು ಹವಾಮಾನಕ್ಕೆ ಅನುಗುಣವಾಗಿ ಹರಡುತ್ತವೆ. ಇವುಗಳ ನಿಯಂತ್ರಣಕ್ಕೆ ಆರೋಗ್ಯ ಇಲಾಖೆ ವತಿಯಿಂದ ವರ್ಷದ ಮೊದಲನೇ ಮಾಸದಿಂದ ಕೊನೆಯ ಮಾಸದವರೆಗೆ ಮುನ್ನೆಚ್ಚರಿಕಾ ಕ್ರಮಗಳು ಸೇರಿದಂತೆ ಮತ್ತಿತರ ಕಾರ್ಯಗಳನ್ನು ಕೈಗೊಳ್ಳಲು ಯೋಜನೆಗಳನ್ನು ರೂಪಿಸಿ, ಅನುಷ್ಠಾನಕ್ಕೆ ತಂದಲ್ಲಿ ಸಮಾಜವು ಆರೋಗ್ಯಯುಕ್ತವಾಗಿ ಇರಲು ಸಾಧ್ಯ. ಸಾರ್ವಜನಿಕರಿಗೆ ಸಾಂಕ್ರಾಮಿಕ ರೋಗಗಳ ಹರಡುವಿಕೆ, ಅವುಗಳ ಲಕ್ಷಣಗಳ ಬಗ್ಗೆ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳುವ ಬಗ್ಗೆ ಆಗಿಂದಾಗ್ಗೆ ಅರಿವು ಮೂಡಿಸಿದ್ದಲ್ಲಿ ಮಾತ್ರ ಜನರು ರೋಗಮುಕ್ತರಾಗಿರಲು ಸಾಧ್ಯ. ಈ ಬಗ್ಗೆ ಆರೋಗ್ಯ ಇಲಾಖಾ ಅಧಿಕಾರಿಗಳು ಮತ್ತು […]

ಹೆಜಮಾಡಿ ಟೋಲ್ ನಲ್ಲಿ ದುಪ್ಪಟ್ಟು ಹಣ ಸಂಗ್ರಹ: ಡಿ.29 ರಂದು ಉಡುಪಿ ತಾಲೂಕು ಕಚೇರಿ ಮುಂಭಾಗ ಬೃಹತ್ ಸಾಮೂಹಿಕ ಧರಣಿಗೆ ನಿರ್ಧಾರ

ಉಡುಪಿ: ಸುರತ್ಕಲ್ ಎನ್.ಐ.ಟಿ.ಕೆ ಬಳಿ ಇದ್ದ ಟೋಲ್ ಸುಂಕವನ್ನು ಹೆಜಮಾಡಿ ಟೋಲ್ ನಲ್ಲಿ ಸಂಗ್ರಹಿಸುವ ಹೆದ್ದಾರಿ ಪ್ರಾಧಿಕಾರದ ಆದೇಶ ಜಾರಿಗೊಳ್ಳುವ ಹಿನ್ನೆಲೆಯಲ್ಲಿ ಟೋಲ್ ಗೇಟ್ ವಿರೋಧಿ ಹೋರಾಟ ಸಮಿತಿ ಹಾಗೂ ಉಡುಪಿಯ ಸಮಾನ ಮನಸ್ಕ ಸಂಘಟನೆಗಳ ಮುಖಂಡರು ಅಜ್ಜರಕಾಡಿನ ವಿಮಾ ನೌಕರರ ಸಂಘದ ಕಚೇರಿಯಲ್ಲಿ ಸಭೆ ನಡೆಸಿದರು. ಸುರತ್ಕಲ್ ಟೋಲ್ ಸುಂಕವನ್ನು ಹೆಜಮಾಡಿಯಲ್ಲಿ ಸಂಗ್ರಹಿಸುವ ಹೆದ್ದಾರಿ ಪ್ರಾಧಿಕಾರದ ಆದೇಶ ರಾಜ್ಯ ಸರಕಾರದ ಅಧಿಕೃತ ಒಪ್ಪಿಗೆಯೊಂದಿಗೆ ಪ್ರಕಟಗೊಂಡಿದ್ದು, ಟೋಲ್ ಪ್ಲಾಜಾದ ಮಾಲಕತ್ವ ಹೊಂದಿರುವ ನವಯುಗ ಸಂಸ್ಥೆಯು ಟೋಲ್ ಸಂಗ್ರಹಕ್ಕೆ […]

ಪಡುಬಿದೆ: ಹೆಜ್ಜೇನು ದಾಳಿಯಿಂದ ಬಚಾವಾಗಲು ನೀರಿಗೆ ಹಾರಿ ಓರ್ವ ಮೃತ; ಇನ್ನೋರ್ವ ಗಂಭೀರ

ಪಡುಬಿದ್ರೆ: ಹೆಜ್ಜೇನು ದಾಳಿಯಿಂದ ಬಚಾವಾಗಲು ಹೋಗಿ ನೀರಿನಲ್ಲಿ ಮುಳುಗಿ ಓರ್ವ ಸಾವನ್ನಪ್ಪಿದ್ದು, ಓರ್ವನ ಸ್ಥಿತಿ ಗಂಭೀರವಾಗಿರುವಂತಹ ಘಟನೆ ಪಡುಬಿದ್ರೆ ಬೀಚ್ ಬಳಿ ನಡೆದಿದೆ. ಪಡುಬಿದ್ರೆ ಬೀಚ್ ಬಳಿ ಇಬ್ಬರು ವ್ಯಕ್ತಿಗಳು ಅಡ್ಡಾಡುತ್ತಿದ್ದಾಗ ಹೆಜ್ಜೇನು ದಾಳಿ ಮಾಡಿದೆ ಎನ್ನಲಾಗಿದೆ. ಹೆಜ್ಜೇನು ಕಡಿತದಿಂದ ಬಚಾವಾಗಲು ಪ್ರಯತ್ನಿಸಿ ಇಬ್ಬರೂ ಕೂಡಾ ನೀರಿಗೆ ಹಾರಿದ್ದಾರೆ. ಘಟನೆಯಲ್ಲಿ ಓರ್ವ ಮೃತ ಪಟ್ಟಿದ್ದು, ಇನ್ನೋರ್ವನ ಸ್ಥಿತಿ ಗಂಭೀರವಾಗಿದೆ. ವಾಸುದೇವ ಡಿ.ಸಾಲಿಯಾನ್​(65) ಮೃತಪಟ್ಟವರು. ಮೀನುಗಾರರಾಗಿರುವ ವಾಸುದೇವ ಸಾಲ್ಯಾನ್ ಹೆಜ್ಜೇನು ದಾಳಿ ತನ್ನನ್ನು ರಕ್ಷಿಸಿಕೊಳ್ಳಲು ಅಲ್ಲೇ ಸಮೀಪದ ಸಮುದ್ರದ […]

ನೀಟ್ ಯುಜಿ, ಕ್ಯೂಎಟ್ ಜೆಇಇ ಮೈನ್ಸ್ ಪರೀಕ್ಷಾ ದಿನಾಂಕ ಪ್ರಕಟಣೆ

ನವದೆಹಲಿ: ನ್ಯಾಷನಲ್ ಟೆಸ್ಟಿಂಗ್ ಏಜೆನ್ಸಿಯು ಮೇ 7 ರಂದು ನೀಟ್(NEET) ಯುಜಿ ಮತ್ತು ಮೇ 21 ಮತ್ತು 31 ರ ನಡುವೆ ಕ್ಯೂಎಟ್(CUET) ಪರೀಕ್ಷೆಯನ್ನು ನಡೆಸಲಿದೆ. ಪರೀಕ್ಷೆ ನಡೆಸುವ ಸಂಸ್ಥೆ ಇಂದು ಕ್ಯಾಲೆಂಡರ್ ಅನ್ನು ಬಿಡುಗಡೆ ಮಾಡಿದೆ ಮತ್ತು ಜೆಇಇ(JEE) ಮೈನ್ಸ್ 2023 ರ ನೋಂದಣಿ ಪ್ರಕ್ರಿಯೆಯನ್ನು ಸಹ ಪ್ರಾರಂಭಿಸಿದೆ. ಜೆಇಇ ಮೈನ್ಸ್ ನ ಜನವರಿ ಸೆಶನ್ ನ ಕಾಯ್ದಿರಿಸಿದ ದಿನಾಂಕಗಳು ಫೆಬ್ರವರಿ 1, 2 ಮತ್ತು 3 ರಂದು ಮತ್ತು ಎರಡನೇ ಸೆಶನ್ಸ್ – ಏಪ್ರಿಲ್ […]

ಇಂಡಿಯನ್‌ ಆಯಿಲ್‌ ಹಾಗೂ ಎಂಆರ್‌ಪಿಎಲ್‌ ನಲ್ಲಿ ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನ

ಮಂಗಳೂರು: ಇಂಡಿಯನ್ ಆಯಿಲ್ ಕಾರ್ಪೋರೇಷನ್ ಲಿಮಿಟೆಡ್‌ (IOCL) ನಲ್ಲಿ ಖಾಲಿ ಇರುವ ಹುದ್ದೆಗೆ ಅರ್ಜಿ ಆಹ್ವಾನಿಸಲಾಗಿದೆ. ಆಸಕ್ತ ಅಭ್ಯರ್ಥಿಗಳು ಈ ಕೆಳಗಿನ ವಿವರಗಳನ್ನು ಓದಿ ಅರ್ಜಿ ಸಲ್ಲಿಸಬಹುದು. ಹೆಚ್ಚಿನ ಮಾಹಿತಿ ಈ ಕೆಳಗೆ ನೀಡಲಾಗಿದೆ. ಮೆಕ್ಯಾನಿಕಲ್, ಇಲೆಕ್ಟ್ರೀಷಿಯನ್, ಇನ್‌ಸ್ಟ್ರುಮೆಂಟೇಷನ್‌, ಸಿವಿಲ್, ಫಿಟ್ಟರ್, ಇನ್‌ಸ್ಟ್ರುಮೆಂಟ್ ಮೆಕ್ಯಾನಿಕ್, ಮಷಿನಿಸ್ಟ್‌, ಡಾಟಾ ಎಂಟ್ರಿ ಆಪರೇಟರ್, ಹೀಗೆ ಹಲವು ವಿಭಾಗಗಳಲ್ಲಿ ತರಬೇತಿಗೆ ಅಭ್ಯರ್ಥಿಗಳನ್ನು ನಿಯೋಜಿಸಲಾಗುತ್ತದೆ. ರಾಜ್ಯ ಹಾಗೂ ಟ್ರೇಡ್‌ / ಟೆಕ್ನೀಷಿಯನ್ / ಗ್ರಾಜುಯೇಟ್‌ವಾರು ಹುದ್ದೆಗಳ ಸಂಖ್ಯೆಗಳನ್ನು ಕೆಳಗಿನ ನೋಟಿಫಿಕೇಶನ್‌ನಲ್ಲಿ ಓದಿ ತಿಳಿಯಬಹುದು. […]