ನೀಟ್ ಯುಜಿ, ಕ್ಯೂಎಟ್ ಜೆಇಇ ಮೈನ್ಸ್ ಪರೀಕ್ಷಾ ದಿನಾಂಕ ಪ್ರಕಟಣೆ

ನವದೆಹಲಿ: ನ್ಯಾಷನಲ್ ಟೆಸ್ಟಿಂಗ್ ಏಜೆನ್ಸಿಯು ಮೇ 7 ರಂದು ನೀಟ್(NEET) ಯುಜಿ ಮತ್ತು ಮೇ 21 ಮತ್ತು 31 ರ ನಡುವೆ ಕ್ಯೂಎಟ್(CUET) ಪರೀಕ್ಷೆಯನ್ನು ನಡೆಸಲಿದೆ. ಪರೀಕ್ಷೆ ನಡೆಸುವ ಸಂಸ್ಥೆ ಇಂದು ಕ್ಯಾಲೆಂಡರ್ ಅನ್ನು ಬಿಡುಗಡೆ ಮಾಡಿದೆ ಮತ್ತು ಜೆಇಇ(JEE) ಮೈನ್ಸ್ 2023 ರ ನೋಂದಣಿ ಪ್ರಕ್ರಿಯೆಯನ್ನು ಸಹ ಪ್ರಾರಂಭಿಸಿದೆ.

ಜೆಇಇ ಮೈನ್ಸ್ ನ ಜನವರಿ ಸೆಶನ್ ನ ಕಾಯ್ದಿರಿಸಿದ ದಿನಾಂಕಗಳು ಫೆಬ್ರವರಿ 1, 2 ಮತ್ತು 3 ರಂದು ಮತ್ತು ಎರಡನೇ ಸೆಶನ್ಸ್ – ಏಪ್ರಿಲ್ 6,8,10,11 ಮತ್ತು 12 ರ ನಡುವೆ ಏಪ್ರಿಲ್ 13 ಮತ್ತು 15 ರಂದು ನಡೆಸಲಾಗುವುದು.

ಜೆಇಇ ಮೈನ್ಸ್ ಪರೀಕ್ಷೆಯ ನೋಂದಣಿ ಪ್ರಾರಂಭವಾಗಿದೆ ಮತ್ತು ಆಕಾಂಕ್ಷಿಗಳು ಅಧಿಕೃತ ವೆಬ್‌ಸೈಟ್-jeemain.nta.nic.in ನಲ್ಲಿ ಅರ್ಜಿ ಸಲ್ಲಿಸಬಹುದು.

ಪದವಿಪೂರ್ವ ಪ್ರವೇಶಕ್ಕಾಗಿ ಕ್ಯೂಎಟ್(ವಿಶ್ವ ವಿದ್ಯಾನಿಯಗಳ ಪ್ರವೇಶ ) ಪರೀಕ್ಷೆಗಳನ್ನು ಜುಲೈ 15 ರಿಂದ ಆಗಸ್ಟ್ 30 ರವರೆಗೆ ನಡೆಸಲಾಗಿದೆ.

ಇಂಡಿಯನ್ ಕೌನ್ಸಿಲ್ ಆಫ್ ಅಗ್ರಿಕಲ್ಚರಲ್ ರಿಸರ್ಚ್(ICAR AIEEA) ಪರೀಕ್ಷೆ 2023ರ ಏಪ್ರಿಲ್ 26-29 ರ ನಡುವೆ ನಡೆಯಲಿದೆ.

ಅಭ್ಯರ್ಥಿಗಳು ಜನವರಿ 12 ರ ತನಕ ರಾತ್ರಿ 9 ಗಂಟೆಯವರೆಗೆ ಅರ್ಜಿ ಸಲ್ಲಿಸಬಹುದು. ಪರೀಕ್ಷೆಗಳನ್ನು ಜನವರಿ 24, 25, 27, 28, 29, 30 ಮತ್ತು 31 ರಂದು ನಡೆಸಲಾಗುವುದು.

ಜೆಇಇ (ಮೇನ್ಸ್) – 2023 ಅನ್ನು 13 ಭಾಷೆಗಳಾದ ಇಂಗ್ಲಿಷ್, ಹಿಂದಿ, ಅಸ್ಸಾಮಿ, ಬೆಂಗಾಲಿ, ಗುಜರಾತಿ, ಕನ್ನಡ, ಮಲಯಾಳಂ, ಮರಾಠಿ, ಒಡಿಯಾ, ಪಂಜಾಬಿ, ತಮಿಳು, ತೆಲುಗು ಮತ್ತು ಉರ್ದು ನಲ್ಲಿ ನಡೆಸಲಾಗುತ್ತದೆ.