ಹಿಮಾಚಲ ಪ್ರದೇಶದ ರೀತಿ ಕರ್ನಾಟಕದಲ್ಲೂ ಬಿಜೆಪಿಯನ್ನು ಜನತೆ ಕಿತ್ತೊಗೆಯಲಿದ್ದಾರೆ: ಪ್ರಖ್ಯಾತ ಶೆಟ್ಟಿ 

ಉಡುಪಿ: ಗುಜರಾತ್ ನಲ್ಲಿನ ಗೆಲವು ಭಾರತೀಯ ಜನತಾ ಪಕ್ಷಕ್ಕೆ ಮುಂದಿನ ಕರ್ನಾಟಕ ಚುನಾವಣೆಗೆ ದಿಕ್ಸೂಚಿಯಾದರೆ ಹಿಮಾಚಲ ಪ್ರದೇಶ ಚುನಾವಣೆ ಕೂಡ ಯಾಕೆ ದಿಕ್ಸೂಚಿಯಾಗಬಾರದೆಂದು ಉಡುಪಿ ಜಿಲ್ಲಾ ಕಾಂಗ್ರೆಸ್ ಉಪಾಧ್ಯಕ್ಷ ಪ್ರಖ್ಯಾತ್ ಶೆಟ್ಟಿ ಪ್ರಶ್ನಿಸಿದ್ದಾರೆ. ಈ ಹಿಂದಿನ ಚುನಾವಣೆಗಿಂತ ಗುಜರಾತ್‌ ನಲ್ಲಿ ಬಿಜೆಪಿ ಗೆದ್ದಿರುವುದರಲ್ಲಿ ಆಶ್ಚರ್ಯ ವೇನಿಲ್ಲ. ಆಮ್‌ ಆದ್ಮಿ ಪಕ್ಷದವರು ಸ್ಪರ್ಧೆ ಒಡ್ಡಿ ಕಾಂಗ್ರೆಸ್ ಮತಗಳನ್ನು ಪಡೆದುಕೊಂಡಿದ್ದಾರೆ. ಬಹುತೇಕ ಕ್ಷೇತ್ರಗಳಲ್ಲಿ ಆಮ್‌ ಆದ್ಮಿ ಪಕ್ಷ ಕಾಂಗ್ರೆಸ್ ಮತಗಳನ್ನೇ ಕಬಳಿಸಿದೆ. ಇದರಿಂದ ಗುಜರಾತ್‌ ನಲ್ಲಿ ಹಿನ್ನಡೆಯಾಗಿದೆ. ಕೇವಲ ಗುಜರಾತ್ […]

ಬಾಂಗ್ಲಾ ಚೆಂಡಿಗರನ್ನು ಬಗ್ಗಿಸಿದ ಭಾರತೀಯ ಬ್ಯಾಟರ್ ಇಶಾನ್ ಕಿಶನ್: ಏಕದಿನ ಪಂದ್ಯದಲ್ಲಿ ದಾಖಲೆಯ ದ್ವಿಶತಕ ಬಾರಿಸಿದ ಪೋರ

ಚಿತ್ತಗಾಂಗ್‌: ಇಲ್ಲಿ ನಡೆದ ಬಾಂಗ್ಲಾದೇಶ ವಿರುದ್ಧದ ಮೂರನೇ ಏಕದಿನ ಪಂದ್ಯದಲ್ಲಿ ಬ್ಯಾಟಿಂಗ್‌ಗೆ ಇಳಿದ ನಂತರ ಇಶಾನ್ ಕಿಶನ್ ಅವರ ದ್ವಿಶತಕ ಮತ್ತು ವಿರಾಟ್ ಕೊಹ್ಲಿ ಅವರ 113 ರನ್‌ಗಳ ಬೆಂಬಲದೊಂದಿಗೆ ಭಾರತವು 409/8 ರನ್ ಗಳಿಸಿದೆ. ಮೆಹಿದಿ ಹಸನ್ ಕೇವಲ ಐದನೇ ಓವರ್‌ನಲ್ಲಿ ಶಿಖರ್ ಧವನ್ ಅವರನ್ನು ಎಲ್‌ಬಿಡಬ್ಲ್ಯೂ ಬಲೆಗೆ ಬೀಳಿಸುವ ಮೂಲಕ ಭಾರತಕ್ಕೆ ಆಘಾತ ನೀಡಿದರು. ರೋಹಿತ್ ಶರ್ಮಾ ಗಾಯಗೊಂಡ ನಂತರ ತಂಡದಲ್ಲಿದ್ದ ಕಿಶನ್ ಇನ್ನಿಂಗ್ಸ್ ಸ್ಥಿರತೆ ಕಾಯ್ದುಕೊಳ್ಳಲು ಕೊಹ್ಲಿಯೊಂದಿಗೆ ಕೈಜೋಡಿಸಿದರು. ಮೂವತ್ತರ ಶತಕ ಬಾರಿಸುವವರೆಗೂ […]

ಭಾರತೀಯ ಆಯುರ್ವೇದ ಪರಂಪರೆಗೆ ಪಕೃತಿ ನೀಡಿದ ವರದಾನ: ‘ಅಮೃತಬಳ್ಳಿಯ’ ಅನನ್ಯ ಆರೋಗ್ಯ ಪ್ರಯೋಜನಗಳು

ವಿಶ್ವದಾದ್ಯಂತ ನಡೆಸಿದ ಅನೇಕ ಅಧ್ಯಯನಗಳ ಆಧಾರದಲ್ಲಿ ಭಾರತದ ಆಯುರ್ವೇದ ಚಿಕಿತ್ಸೆಯನ್ನು ಸರ್ವಶ್ರೇಷ್ಠ ಎಂದು ಪರಿಗಣಿಸಲಾಗಿದೆ. ಸಾವಿರಾರು ವರ್ಷಗಳಿಂದ ಭಾರತದಲ್ಲಿ ಆಯುರ್ವೇದ ಚಿಕಿತ್ಸೆಯನ್ನು ಪರಿಣಾಮಕಾರಿಯಾಗಿ ರೋಗ ಚಿಕಿತ್ಸೆಯಲ್ಲಿ ಬಳಸಿಕೊಳ್ಳಲಾಗಿದೆ. ಭಾರತದ ಆಯುರ್ವೇದ ಪರಂಪರೆಯಲ್ಲಿ ಪಕೃತಿ ವರವಾಗಿ ನೀಡಿರುವ ಮೂರು ಅಮೃತ ಸಸ್ಯಗಳಿವೆ. ಬೆಳ್ಳುಳ್ಳಿ, ಹರೀತಕಿ ಮತ್ತು ಅಮೃತಬಳ್ಳಿ ಇವೇ ಆ ಮೂರು ಸಸ್ಯಗಳು. ಹೆಸರೇ ಸೂಚಿಸುವಂತೆ ಸಾವಿನದವಡೆಯಲ್ಲಿರುವವರನ್ನೂ ಬದುಕಿಸುವ ಶಕ್ತಿ ಉಳ್ಳ ಸಸ್ಯವೇ ಅಮೃತ ಬಳ್ಳಿ. ಸಂಸ್ಕೃತದಲ್ಲಿ ಅಮೃತವಲ್ಲಿ, ಅಮೃತ, ಗುಡೂಚಿ ಮತ್ತು ಹಿಂದಿಯಲ್ಲಿ ಗಿಲೋಯ್ ಎಂದು ಕರೆಯಲ್ಪಡುವ […]

ಡಿ.11 ರಂದು ಕೋಟ ಸಹಕಾರಿ ವ್ಯಾವಸಾಯಿಕ ಸಂಘದ ನೂತನ ಸಭಾಭವನ ಹಾಗೂ ಗೋದಾಮು ಉದ್ಘಾಟನೆ

ಕೋಟ: ಕೋಟ ಸಹಕಾರಿ ವ್ಯಾವಸಾಯಿಕ ಸಂಘದ ನೂತನ ಸಭಾಭವನ, ಸೇವಾಕೇಂದ್ರ ಹಾಗೂ ಗೋದಾಮು ಉದ್ಘಾಟನೆಯು ಡಿ. 11 ರಂದು ಜರಗಲಿದೆ. ಕಾರ್ಯಕ್ರಮವನ್ನು ದ.ಕ.ಜಿ.ಕೇ.ಸ. ಬ್ಯಾಂಕ್ ನ ಅಧ್ಯಕ್ಷ ಡಾ.ಎಂ. ಎನ್. ರಾಜೇಂದ್ರ ಕುಮಾರ್ ಉದ್ಘಾಟಿಸಲಿದ್ದಾರೆ . ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಸಚಿವ ಕೋಟ ಶ್ರೀನಿವಾಸ ಪೂಜಾರಿ ಪಡಿತರ ಗೋದಾಮು, ಶಾಸಕ ಹಾಲಾಡಿ ಶ್ರೀನಿವಾಸ ಶೆಟ್ಟಿ ‘ಬಿ.ಸಿ. ಹೊಳ್ಳ’ಸಹಕಾರ ಸಭಾಭವನ, ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷ ಕೆ. ಜಯಪ್ರಕಾಶ್ ಹೆಗ್ಡೆ ಸೇವಾ ಕೇಂದ್ರವನ್ನು, ವಿ.ಪ. ಸದಸ್ಯ ಮಂಜುನಾಥ […]

ಕಾರ್ಕಳ: ಖಾಸಗಿ ಬಸ್- ಕಾರಿನ ನಡುವೆ ಅಪಘಾತ; ಮೂವರು ಸ್ಥಳದಲ್ಲೇ ಮೃತ್ಯುವಶ

ಕಾರ್ಕಳ: ಉಡುಪಿ ಸುಬ್ರಹ್ಮಣ್ಯ ಹೆದ್ದಾರಿಯಲ್ಲಿ ಬಜಗೋಳಿ ಸಮೀಪ ನೆಲ್ಲಿಕಾರು ಬಳಿ ಖಾಸಗಿ ಬಸ್ ಮತ್ತು ಕಾರಿನ ನಡುವೆ ನಡೆದ ಭೀಕರ ಅಪಘಾತದಲ್ಲಿ ಒಂದೇ ಕುಟುಂಬದ ಗಂಡ ಹೆಂಡತಿ ಮತ್ತು ಮಗು ಸೇರಿ ಮೂರು ಮಂದಿ ಸ್ಥಳದಲ್ಲೇ ಮೃತಪಟ್ಟ ಘಟನೆ ಶನಿವಾರದಂದು ನಡೆದಿದೆ. ಮೃತಪಟ್ಟ ಕುಟುಂಬವು ಆಂಧ್ರ ಮೂಲದವರಾಗಿದ್ದು, (ಶನಿವಾರ ) ಇಂದು ಬೆಳಿಗ್ಗೆ 7ರ ವೇಳೆಗೆ ಈ ಅಪಘಾತ ಸಂಭವಿಸಿದೆ ಎಂದು ವರದಿಯಾಗಿದೆ. ಭೀಕರ ಅಪಘಾತದಲ್ಲಿ ಬಲಿಯಾದವರನ್ನು ಆಂಧ್ರಪ್ರದೇಶ ಮೂಲದ ನಾಗರಾಜ್ (40), ಅವರ ಪತ್ನಿ ಪ್ರತ್ಯೂಷಾ […]