ಕಲಾವಿದ ಹಾಗೂ ಗ್ರಾಫಿಕ್ ಡಿಸೈನರ್ ಗಳಿಗೆ ಕ್ರಾಫ್ಟ್ಸ್ ಮಂತ್ರದಲ್ಲಿ ಉದ್ಯೋಗಾವಕಾಶ

ಉಡುಪಿ: ಉಡುಪಿಯ ಇಂದ್ರಾಳಿಯಲ್ಲಿರುವ ಕ್ರಾಫ್ಟ್ಸ್ ಮಂತ್ರದಲ್ಲಿ ಕಲಾವಿದ ಹಾಗೂ ಗ್ರಾಫಿಕ್ ಡಿಸೈನರ್ ಗಳಿಗೆ ಫುಲ್ ಟೈಮ್ ಮತ್ತು ಪಾರ್ಟ್ ಟೈಮ್ ಉದ್ಯೋಗಾವಕಾಶವಿದ್ದು , ಆಸಕ್ತ ಕಲಾವಿದರು ಅರ್ಜಿ ಸಲ್ಲಿಸಬಹುದು. ಬೇಕಾಗಿರುವ ಕೌಶಲ್ಯ: ಚಿತ್ರಕಲೆ ಮತ್ತು ಕಂಪ್ಯೂಟರ್ ಜ್ಞಾನ ಆಸಕ್ತರು ತಮ್ಮ ವೈಯಕ್ತಿಕ ಮಾಹಿತಿಯನ್ನು craftmantrastore@gmail.com ಇ-ಮೇಲ್ ಮಾಡಬಹುದು ಅಥವಾ 6362571412 ಗೆ ಕರೆಮಾಡಬಹುದು.

ಜನವರಿ 14 ರಂದು ಶ್ರೀಕ್ಷೇತ್ರ ಮಂದಾರ್ತಿಯಲ್ಲಿ ರಾಷ್ಟ್ರ ಮಟ್ಟದ ಕುಣಿತ ಭಜನಾ ಸ್ಪರ್ಧೆ

ಮಂದಾರ್ತಿ: ನಮಸ್ತೆ ಭಾರತ್ ಪ್ರಸ್ತುತ ಪಡಿಸುತ್ತಿರುವ ಸಂಕೀರ್ತನ ಮಂದಾರ್ತಿ ಭಕ್ತಿ-ರಾಗ-ತಾಳ ರಾಷ್ಟ್ರೀಯ ಮಟ್ಟದ ಕುಣಿತ ಭಜನಾ ಸ್ಪರ್ಧೆಯು 14 ಜನವರಿ 2023 ರಂದು ಸಂಜೆ 4 ಗಂಟೆಯಿಂದ ಶ್ರೀಕ್ಷೇತ್ರ ಮಂದಾರ್ತಿಯಲ್ಲಿ ನಡೆಯಲಿದೆ. ಪ್ರಥಮ ಬಹುಮಾನ: 1,00,000 ದ್ವಿತೀಯ ಬಹುಮಾನ: 50,000 ತೃತೀಯ ಬಹುಮಾನ: 40,000 ಚತುರ್ಥ ಬಹುಮಾನ: 30,000 ಪಂಚಮ ಬಹುಮಾನ: 2,0000 ಜೊತೆಗೆ ಪ್ರಶಸ್ತಿ ಪತ್ರ ಮತ್ತು ಸ್ಮರಣಿಕೆ ನೀಡಲಾಗುವುದು.

ಡಿ.8,9 ಮತ್ತು 10 ರಂದು ಎಕ್ಸಲೆಂಟ್ ಕಾಲೇಜಿನಲ್ಲಿ ಪ.ಪೂ ಕಾಲೇಜುಗಳ ರಾಜ್ಯಮಟ್ಟದ ವಾಲಿಬಾಲ್ ಪಂದ್ಯಾಟ

ಕುಂದಾಪುರ: ಪದವಿಪೂರ್ವ ಶಿಕ್ಷಣ ಇಲಾಖೆ ಬೆಂಗಳೂರು, ಪದವಿ ಪೂರ್ವ ಶಿಕ್ಷಣ ಇಲಾಖೆ ಉಡುಪಿ, ಎಕ್ಸಲೆಂಟ್ ಪದವಿಪೂರ್ವ ಕಾಲೇಜು ಸುಣ್ಣಾರಿ ಹಾಗೂ ಸುಜ್ಞಾನ್ ಎಜುಕೇಶನಲ್ ಟ್ರಸ್ಟ್ ಕುಂದಾಪುರ ಇವರ ಸಂಯುಕ್ತ ಆಶ್ರಯದಲ್ಲಿ ಪದವಿಪೂರ್ವ ಕಾಲೇಜುಗಳ ರಾಜ್ಯಮಟ್ಟದ ವಾಲಿಬಾಲ್ ಪಂದ್ಯಾಟ ಡಿ.8,9 ಮತ್ತು 10 ರಂದು ಸುಣ್ಣಾರಿಯ ಎಕ್ಸಲೆಂಟ್ ಪದವಿಪೂರ್ವ ಕಾಲೇಜಿನ ಕ್ರೀಡಾಂಗಣದಲ್ಲಿ ನಡೆಯಲಿದೆ ಎಂದು ಸುಜ್ಞಾನ್ ಎಜುಕೇಶನಲ್ ಟ್ರಸ್ಟ್ ನ ಅಧ್ಯಕ್ಷ ಡಾ. ರಮೇಶ್ ಶೆಟ್ಟಿ ತಿಳಿಸಿದ್ದಾರೆ.

ಕೊಡವೂರು ದಿವ್ಯಾಂಗ ರಕ್ಷಣಾ ಸಮಿತಿ ವತಿಯಿಂದ ದಿವ್ಯಾಂಗರಿಗೆ ಸಹಾಯ; ದಕ್ಷರಿಗೆ ಸನ್ಮಾನ

ಉಡುಪಿ: ವಿಶ್ವ ಅಂಗವಿಕಲರ ದಿನಾಚರಣೆ ಪ್ರಯುಕ್ತ ದಿವ್ಯಾಂಗರಿಗೆ ಸಹಾಯ ಹಾಗೂ ದಕ್ಷ ಪೋಲೀಸ್ ಅಧಿಕಾರಿಯವರಿಗೆ ಸನ್ಮಾನ ಕಾರ್ಯಕ್ರಮವು ಡಿ.4 ಭಾನುವಾರದಂದು “ಕೊಡವೂರು ದಿವ್ಯಾಂಗ ರಕ್ಷಣಾ ಸಮಿತಿ”, “ಮಠದಬೆಟ್ಟು ಯುವಕ ಮಂಡಲ ಮಠದಬೆಟ್ಟು” ಮತ್ತು “ಬೆಲ್—ಓ—ಸೀಲ್ ಮಜ್ಧೂರ್ ಸಂಘ ಸಂತೆಕಟ್ಟೆ” ಇವರ ಜಂಟಿ ಆಶ್ರಯದಲ್ಲಿ ಬ್ರಹ್ಮರ್ಷಿ ಶ್ರೀ ನಾರಾಯಣಗುರು ಮಂದಿರ ಬನ್ನಂಜೆ ಇಲ್ಲಿ ವಿಶಿಷ್ಟವಾಗಿ ಜರುಗಿತು. ಈ ಸಂದರ್ಭದಲ್ಲಿ ಬೆನ್ನುಮೂಳೆ ಮುರಿತಕ್ಕೊಳಗಾಗಿ ದುಡಿಯಲು ಸಾಧ್ಯವಿಲ್ಲದಂತಹ ಬಡವರು, ಹಾಗೂ ದುರ್ಬಲರು ಹಾಗೂ ಅಶಕ್ತರನ್ನು ಗುರುತಿಸಿ, ಅಂತಹವರಿಗೆ ಅಕ್ಕಿ ಹಾಗೂ ಔಷಧಗಳನ್ನು […]

ಹೃದಯ ಸ್ತಂಭನ ಸಮಯದಲ್ಲಿ ಸಿಪಿಆರ್ ನೀಡಿ ವ್ಯಕ್ತಿಯ ಜೀವ ಉಳಿಸಿ: ಸಿಪಿಆರ್ ನೀಡುವ ವಿಧಾನದ ಬಗ್ಗೆ ತಿಳಿಯಿರಿ

ಇತ್ತೀಚಿನ ದಿನಗಳಲ್ಲಿ ಹೃದಯಾಘಾತ ಮತ್ತು ಹೃದಯ ಸ್ತಂಭನಗಳು ಸಾಮಾನ್ಯವೆಂಬಂತಾಗಿದ್ದು, ಬಾಳಿ ಬದುಕಬೇಕಾಗಿರುವ ಎಳೆ ಜೀವಗಳು ತರಗೆಲೆಗಳಂತೆ ಧರೆಗುರುಳುತ್ತಿರುವ ದೃಶ್ಯಗಳು ಎಲ್ಲೆಲ್ಲೂ ಕಂಡುಬರುತ್ತಿದೆ. ಹೃದಯಾಘಾತ ಅಥವಾ ಹೃದಯಸ್ತಂಭನವಾದಾಗ ಹತ್ತಿರದಲ್ಲೇ ವ್ಯಕ್ತಿಗಳಿದ್ದರೂ ಈ ಸಂದರ್ಭದಲ್ಲಿ ಯಾವ ರೀತಿ ವರ್ತಿಸಬೇಕುನ್ನುವುದು ಬಹುತೇಕರಿಗೆ ತಿಳಿದಿರುವುದಿಲ್ಲ. ಇಂತಹ ಸಂದಿಗ್ಧ ಸಂದರ್ಭದಲ್ಲಿ ಗಾಬರಿಯಾಗದೆ ಹೃದಯ ಸ್ತಂಭನವಾದ ವ್ಯಕ್ತಿಗೆ ತಕ್ಷಣ ಸಿಪಿಆರ್ ನೀಡಿದಲ್ಲಿ ವ್ಯಕ್ತಿಯ ಪ್ರಾಣ ಉಳಿಸಬಹುದು. ಸಿಪಿಆರ್ ಎಂದರೇನು ಮತ್ತು ನಾವು ಅದನ್ನು ಯಾವಾಗ ಬಳಸಬೇಕು? ಕಾರ್ಡಿಯೋಪಲ್ಮನರಿ ಪುನರುಜ್ಜೀವನ (ಸಿಪಿಆರ್) ಎನ್ನುವುದು ತುರ್ತು ವಿಧಾನವಾಗಿದ್ದು, ಉಸಿರಾಟ […]