ಗರುಡ ಗಮನ ವೃಷಭ ವಾಹನ ನಿರ್ಮಾತೃಗಳ ಮುಂಬರುವ ಕನ್ನಡ ಚಿತ್ರದಲ್ಲಿ ನಟಿಸಲು ಅವಕಾಶ

ಗರುಡ ಗಮನ ವೃಷಭ ವಾಹನ ನಿರ್ಮಾತೃಗಳು ನಟರಿಗೆ ತಮ್ಮ ಪ್ರೊಡಕ್ಷನ್ ನಂಬರ್ 2 ರ ಕನ್ನಡ ಚಿತ್ರದಲ್ಲಿ ನಟಿಸಲು ಕಲಾವಿದರಿಗೆ ಅವಕಾಶ ನೀಡುತ್ತಿದ್ದಾರೆ. ಬೇಕಾಗಿರುವ ಕಲಾವಿದರು ಹೆಣ್ಣು ಮಗು: 5-8 ವರ್ಷ (ತೆಳ್ಳಗೆ; ಕಂದು ಬಣ್ಣ) ಗಂಡು ಮಗು: 6-10; 10-15 ವರ್ಷ(ತೆಳ್ಳಗೆ ಕಂದು ಬಣ್ಣ) ಮಹಿಳೆಯರು: 40-50 ವರ್ಷ ಪುರುಷ ಮತ್ತು ಮಹಿಳೆ: 35 ವರ್ಷ ಮೇಲ್ಪಟ್ಟು ಆಸಕ್ತರು ತಮ್ಮ ಪ್ರೊಫೈಲ್ ಅನ್ನು kannadacasting99@gmail.com ಕಳುಹಿಸಬಹುದು ಅಥವಾ 9353936367ಗೆ ಕರೆ ಮಾಡಬಹುದು

ಕಲ್ಯಾಣಪುರ: ಶ್ರೀ ವೆಂಕಟರಮಣ ದೇವಸ್ಥಾನದ 94ನೇ ಭಜನಾ ಸಪ್ತಾಹ ಮಂಗಲೋತ್ಸವ ಸಂಪನ್ನ

ಕಲ್ಯಾಣಪುರ: ಇಲ್ಲಿನ ಶ್ರೀ ವೆಂಕಟರಮಣ ದೇವಸ್ಥಾನದಲ್ಲಿ 94ನೇ ಭಜನಾ ಸಪ್ತಾಹ ಮಂಗಲೋತ್ಸವ ಆದಿತ್ಯವಾರ ಸಂಪನ್ನಗೊಂಡಿತು. ದೇವಳದ ಆಡಳಿತ ಮೊಕ್ತೇಸರ ಅನಂತ ಪದ್ಮನಾಭ ಕಿಣಿಯವರ ಮಾರ್ಗದರ್ಶನದಲ್ಲಿ 1 ವಾರಗಳ ಕಾಲ ಊರ ಪರವೂರ ಸಂತ ಮಂಡಳಿ ಸಹಕಾರದೊಂದಿಗೆ ಅಹೋರಾತ್ರಿ ಭಜನೆ ಜರುಗಿತು. ದೇವಳದ ಪ್ರಧಾನ ಅರ್ಚಕ ಜಯದೇವ ಭಟ್ ಮತ್ತು ಗಣಪತಿ ಭಟ್ ಧಾರ್ಮಿಕ ಪೂಜಾ ವಿಧಾನಗಳನ್ನು ನೆರವೇರಿಸಿದರು. ಭಜನಾ ಸಮಿತಿ ಅಧ್ಯಕ್ಷ ಕೆ ತುಳಸೀದಾಸ್ ಕಿಣಿ, ಉಪಾಧ್ಯಕ್ಷ ಸೀತಾರಾಮ್ ಭಟ್ ಅರವಿಂದ ಬಾಳಿಗಾ, ದತ್ತತ್ರೇಯ ಕಿಣಿ, ವಿನೋದ್ […]

ಸಪತ್ನೀಕ ಸಮೇತರಾಗಿ ಆನೆಗುಡ್ಡೆ ಶ್ರೀವಿನಾಯಕ ದೇವಸ್ಥಾನಕ್ಕೆ ಭೇಟಿ ನೀಡಿದ ರಿಷಭ್ ಶೆಟ್ಟಿ

ಕುಂದಾಪುರ: ಇಲ್ಲಿನ ಬಹುಪ್ರಸಿದ್ದ ಕುಂಭಾಶಿ ಆನೆಗುಡ್ಡೆ ಶ್ರೀವಿನಾಯಕ ದೇವಸ್ಥಾನಕ್ಕೆ ಕಾಂತಾರ ಚಿತ್ರದ ನಟ, ನಿರ್ದೇಶಕ ರಿಷಭ್ ಶೆಟ್ಟಿ ಕುಟುಂಬ ಸಪತ್ನೀಕ ಸಮೇತರಾಗಿ ಭೇಟಿ ನೀಡಿ ದೇವರ ದರ್ಶನ ಪಡೆದಿದ್ದಾರೆ. ಈ ಸಂದರ್ಭದಲ್ಲಿ ದೇವಾಲಯದ ಆಡಳಿತ ಮೊಕ್ತೇಸರ ಶ್ರೀರಮಣ ಉಪಾಧ್ಯಾಯ, ಹಿರಿಯ ಮೊಕ್ತೇಸರ ಕೆ ಸೂರ್ಯನಾರಾಯಣ ಉಪಾಧ್ಯಾಯ, ಪರ್ಯಾಯ ಅರ್ಚಕರಾದ ದೇವಿದಾಸ ಉಪಾಧ್ಯಾಯ, ಅರ್ಚಕ ಮಂಡಳಿ ಸದಸ್ಯರು, ದೇವಳದ ವ್ಯವಸ್ಥಾಪಕರು ಹಾಗೂ ಸಿಬ್ಬಂದಿವರ್ಗದವರು ಉಪಸ್ಥಿತರಿದ್ದರು.  

ಸವಾರರು ಹತ್ತಿಳಿಯುವಾಗ ಅಪಘಾತಕ್ಕೆ ಕಾರಣವಾಗುವ ಬಸ್ ಸಿಬ್ಬಂದಿ ವಿರುದ್ದ ಕಠಿಣ ಕ್ರಮ: ಎಸ್.ಪಿ ಹಾಕೆ ಅಕ್ಷಯ್ ಮಚ್ಚೀಂದ್ರ

ಉಡುಪಿ: ಇತ್ತೀಚಿನ ದಿನಗಳಲ್ಲಿ ಬಸ್ ಹತ್ತುವಾಗ ಮತ್ತು ಇಳಿಯುವಾಗ ಬಸ್ ಚಾಲಕ ಮತ್ತು ನಿರ್ವಾಹಕರ ಬೇಜವಾಬ್ದಾರಿ ಮತ್ತು ನಿರ್ಲಕ್ಷ್ಯತನದ ವರ್ತನೆಯಿಂದಾಗಿ ಅನೇಕರು ಬಸ್ ನ ಚಕ್ರದಡಿಗೆ ಸಿಲುಕಿ ಪ್ರಾಣ ಕಳೆದುಕೊಳ್ಳುತ್ತಿರುವ ನಿದರ್ಶನಗಳು ಹೆಚ್ಚುತ್ತಿವೆ. ಇಂತಹ ಅಪಘಾತಗಳಿಗೆ ನೇರವಾಗಿ ಕಾರಣವಾಗುವ ಬಸ್ ಚಾಲಕ ಹಾಗೂ ನಿರ್ವಾಹಕರ ವಿರುದ್ಧ ನಿರ್ದಾಕ್ಷಿಣ್ಯವಾಗಿ ಕಾನೂನು ಕ್ರಮ ತೆಗೆದುಕೊಳ್ಳಲಾಗುವುದು ಎಂದು ಉಡುಪಿ ಜಿಲ್ಲಾ ಪೊಲೀಸ್ ಅಧೀಕ್ಷಕ ಹಾಕೆ ಅಕ್ಷಯ್ ಮಚ್ಚೀಂದ್ರ ತಿಳಿಸಿದ್ದಾರೆ. ಪ್ರಯಾಣಿಕ ಬಸ್‌ಗಳಲ್ಲಿ ಬಸ್ಸಿನ ಚಾಲಕ ಹಾಗೂ ನಿರ್ವಾಹಕರು ನಿರ್ಲಕ್ಷ್ಯದಿಂದ ಪ್ರಯಾಣಿಕರು ಇಳಿಯುವ […]

ಕೋಟೇಶ್ವರ ಕೊಡಿ ಹಬ್ಬದಲ್ಲಿ ಅನ್ಯ ಧರ್ಮೀಯರಿಗೆ ವ್ಯಾಪಾರಕ್ಕೆ ಅವಕಾಶ ನೀಡದಂತೆ ವಿಹಿಂಪ ಮನವಿ

ಕುಂದಾಪುರ: ಕೋಟೇಶ್ವರ ಕೋಟಿ ಲಿಂಗೇಶ್ವರ ದೇವಸ್ಥಾನದಲ್ಲಿ ಡಿ.8 ರಂದು ಕೊಡಿಹಬ್ಬ ಜಾತ್ರೆ ನಡೆಯಲಿದ್ದು, ಜಾತ್ರಯ ಸಂದರ್ಭದಲ್ಲಿ ಮುಸ್ಲಿಂ ವ್ಯಾಪಾರಿಗಳಿಗೆ ಅವಕಾಶ ನೀಡದಂತೆ ದೇವಳದ ವ್ಯವಸ್ಥಾಪನಾ ಸಮಿತಿ ಮತ್ತು ಆಡಳಿತಾಧಿಕಾರಿಗಳಿಗೆ ವಿಶ್ವ ಹಿಂದೂ ಪರಿಷತ್ ಮನವಿ ನೀಡಿದೆ. ನಿರಂತರ ಹಿಂದೂಗಳ ಮೇಲೆ ಹೆಚ್ಚುತ್ತಿರುವ ಆಕ್ರಮಣ, ಲವ್ ಜಿಹಾದ್, ದೇಶದಲ್ಲಿ ದೇವಸ್ಥಾನದ ಬಾಗಿಲಿನಲ್ಲಿ ಭಯೋತ್ಪಾದನಾ ಚಟುವಟಿಕೆಗಳನ್ನು ಮಾಡುವವರಿಗೆ ದೇವಸ್ಥಾನಗಳ ಬಾಗಿಲಿನಲ್ಲಿ ವ್ಯಾಪಾರ ಮಾಡಲು ಅವಕಾಶ ನೀಡಬಾರದು ಎನ್ನುವ ದೃಷ್ಟಿಯಿಂದ ಮನವಿ ಸಲ್ಲಿಸಲಾಗಿದೆ. ಹಿಂದೂ ವ್ಯಾಪಾರಿಗಳು ಮುಸ್ಲಿಂ ಉರೂಸ್ ಸಂದರ್ಭದಲ್ಲಿ ಹಿಂದೂಗಳಿಗೆ […]