ವಿಕಲಚೇತನರಿಗೆ ಅನುಕಂಪವಲ್ಲ, ಸ್ವಾಭಿಮಾನದಿಂದ ಬದುಕುವ ಅವಕಾಶ ನೀಡಿ: ಶರ್ಮಿಳಾ ಎಸ್

ಉಡುಪಿ: ವಿಕಲಚೇತನರ ಸಾಧನೆಗಳಿಗೆ ಸಮಾಜವು ಪ್ರೋತ್ಸಾಹ ನೀಡಬೇಕು. ಅವರನ್ನು ಅನುಕಂಪದಿಂದ ಕಾಣುವುದಕ್ಕಿಂತ ಸ್ವಾಭಿಮಾನದಿಂದ ಬದುಕುವ ಹಕ್ಕು ಮತ್ತು ಅವಕಾಶವನ್ನು ನೀಡಬೇಕು. ಅವರಿಗೆ ಅವಮಾನ ಮಾಡುವುದು, ವಂಚಿಸುವುದು ಅವರ ಸಾಧನಗಳನ್ನು ಹಾಳುಗೆಡುವುದು ಜಾಮೀನುರಹಿತ ಅಪರಾಧವಾಗಿದ್ದು, 6 ತಿಂಗಳಿಂದ 6 ವರ್ಷದವರೆಗೆ ಜೈಲು ಶಿಕ್ಷೆಯನ್ನು ವಿಧಿಸಬಹುದಾಗಿದ್ದು, ವಿಕಲಚೇತನರನ್ನು ಮುಖ್ಯವಾಹಿನಿಗೆ ತರಲು ಎಲ್ಲರೂ ಶ್ರಮಿಸಬೇಕು ಎಂದು ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಹಾಗೂ ಹಿರಿಯ ಸಿವಿಲ್ ನ್ಯಾಯಧೀಶೆ ಶರ್ಮಿಳಾ ಎಸ್ ಹೇಳಿದರು. ಅವರು ಶನಿವಾರ ನಗರದ ಶ್ರೀಮತಿ ಅಮ್ಮಣ್ಣಿ […]

ಗುಜರಾತಿನ ನರ್ಮದಾ ನದಿಯ ಬಯಲಿನಲ್ಲಿದೆ ಭೂಗ್ರಹದ ಅತ್ಯಂತ ಹಳೆಯ ಬೃಹತ್ ಜೀವಿಗಳ ಪಳೆಯುಳಿಕೆಗಳು!

ಇಂದಿಗೆ ಸುಮಾರು 180 ಮಿಲಿಯನ್ ವರ್ಷಗಳ ಹಿಂದಿನ ಮಾತಿದು. ಆಗ ಭೂಗ್ರಹದ ಭೂಖಂಡಗಳು ಇಂದಿನಂತಿರದೆ ಒಂದಕ್ಕೊಂದು ಅಂಟಿಕೊಂಡಿದ್ದವು. ಈ ಒಂದೇ ಭೂಖಂಡವನ್ನು ಪಾಂಜಿಯಾ ಎಂದು ಕರೆಯಲಾಗುತ್ತದೆ. ಈ ಕಾಲವನ್ನು ಜುರಾಸಿಕ್ ಯುಗವೆಂದೂ ಕರೆಯಲಾಗುತ್ತದೆ. ಭೂ ತಟ್ಟೆಗಳ ಚಲನೆಯಿಂದಾಗಿ ಈ ಪಾಂಜಿಯಾ ಖಂಡವು ಬೇರ್ಪಟ್ಟು ಇಂದು ನಾವು ನೋಡುತ್ತಿರುವ ಸಪ್ತಖಂಡಗಳಾಗಿ ಹರಿದು ಹಂಚಿಹೋದವು. ಕ್ರಿಟೇಶಿಯಸ್ ಅವಧಿಯ ಸರಿಸುಮಾರು 145-65 ಮಿಲಿಯನ್ ವರ್ಷಗಳ ಅಂತರದಲ್ಲಿ ಈ ಎಲ್ಲಾ ಭೂಖಂಡಗಳು ನಿಧಾನವಾಗಿ ದೂರ ಸರಿದು, ಭಾರತೀಯ ಖಂಡವು ಸಮುದ್ರದಲ್ಲಿ ತೇಲುತ್ತಾ ಏಷಿಯಾ […]

ಡಿಸೆಂಬರ್ 6 ಮತ್ತು 8 ರಂದು ವಿವಿಧೆಡೆ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯ

ಉಡುಪಿ: ಜಿಲ್ಲಾ ವ್ಯಾಪ್ತಿಯಲ್ಲಿ ನಿರ್ವಹಣಾ ಕೆಲಸಗಳ ಕಾರಣದಿಂದ ಡಿಸೆಂಬರ್ 6 ಮತ್ತು 8 ರಂದು ವಿವಿಧೆಡೆ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಲಿದೆ ಎಂದು ಮೆಸ್ಕಾಂನ ಪ್ರಕಟಣೆ ತಿಳಿಸಿದೆ. 110/11 ಕೆವಿ ಬೆಳ್ಮಣ್ ವಿದ್ಯುತ್ ಉಪಕೇಂದ್ರದಿಂದ ಹೊರಡುವ 11ಕೆ.ವಿ ಫೀಡರ್ ಗಳಾದ ಮುಂಡ್ಕೂರು ,ನಂದಳಿಕೆ ಮತ್ತು ಬೆಳ್ಮಣ್ ಫೀಡರ್ ನಲ್ಲಿ ತುರ್ತು ನಿರ್ವಹಣಾ ಕಾಮಗಾರಿ ಹಮ್ಮಿಕೊಂಡಿರುವುದರಿಂದ ಸದರಿ ಫೀಡರ್‌ಗಳಲ್ಲಿ ಬೆಳ್ಮಣ್, ಗೋಳಿಕಟ್ಟೆ, ನೀಚಾಲು, ಬೆಳ್ಮಣ್ ದೇವಸ್ಥಾನ, ನಂದಳಿಕೆ, ಜಂತ್ರ, ಕೆದಿಂಜೆ, ಮಾವಿನಕಟ್ಟೆ, ದೇಂದೊಟ್ಟು ಪದವು, ಇಟ್ಟಮೇರಿ, ಮುಂಡ್ಕೂರು, ಕಾಂಜರಕಟ್ಟೆ, […]

ಜೆ.ಇ ಲಸಿಕೆ ಕುರಿತ ಮಾಹಿತಿಗಾಗಿ ಸಹಾಯವಾಣಿ ಪ್ರಾರಂಭ

ಉಡುಪಿ: ಜಿಲ್ಲೆಯಲ್ಲಿ ಡಿಸೆಂಬರ್ 5 ರಿಂದ 24 ರ ವರೆಗೆ ಜೆ.ಇ ಲಸಿಕಾ ಅಭಿಯಾನ ನಡೆಯಲಿದ್ದು, ಈ ಕುರಿತು ಮಕ್ಕಳ ಪೋಷಕರಿಗೆ ಹಾಗೂ ಸಾರ್ವಜನಿಕರಿಗೆ ಮಾಹಿತಿ ಒದಗಿಸುವ ಸಲುವಾಗಿ ಸಹಾಯವಾಣಿ ಸಂಖ್ಯೆ: 9449843213 ಅನ್ನು ಆರಂಭಿಸಲಾಗಿದೆ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಬಲಿಷ್ಠ ಮತ್ತು ಸಮೃದ್ಧ ಉಡುಪಿಯ ನಿರ್ಮಾಣಕ್ಕಾಗಿ ಪ್ರತಿಯೊಬ್ಬರೂ ಕಾರ್ಯೋನ್ಮುಖರಾಗಿ: ಸಚಿವ ಸುನೀಲ್ ಕುಮಾರ್

ಉಡುಪಿ: ಉಡುಪಿ ಜಿಲ್ಲೆ ರಚನೆಯಾಗಿ 25 ವರ್ಷಗಳಾಗಿದ್ದು, ಮುಂದಿನ 25 ವರ್ಷಗಳಲ್ಲಿ, ಜಿಲ್ಲೆಯನ್ನು ಎಲ್ಲಾ ಆಯಾಮಗಳಲ್ಲಿ ಅಭಿವೃದ್ಧಿ ಪಡಿಸುವ ಯೋಜನೆಗಳ ಕುರಿತಂತೆ ದಿಕ್ಸೂಚಿಯನ್ನು ರಚಿಸಿ, ಅದರಂತೆ ಕಾರ್ಯನಿರ್ವಹಿಸುವ ಮೂಲಕ ಬಲಿಷ್ಠ ಮತ್ತು ಸಮೃದ್ಧ ಉಡುಪಿ ಜಿಲ್ಲೆಯನ್ನಾಗಿಸಲು ಪ್ರತಿಯೊಬ್ಬರೂ ಕಾರ್ಯನಿರ್ವಹಿಸಬೇಕಿದೆ ಎಂದು ಇಂಧನ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ವಿ. ಸುನೀಲ್ ಕುಮಾರ್ ಹೇಳಿದರು. ಅವರು ಶನಿವಾರ ಪುರಭವನದಲ್ಲಿ, ಜಿಲ್ಲಾಡಳಿತ ಉಡುಪಿ ಜಿಲ್ಲೆ ಇವರ ವತಿಯಿಂದ ನಡೆದ ಉಡುಪಿ ಜಿಲ್ಲಾ ರಜತ ಮಹೋತ್ಸವದ ಅಂಗವಾಗಿ ದಿಕ್ಸೂಚಿ […]