ಹಿರಿಯಡ್ಕ: ವೃದ್ದೆಯ ಚಿನ್ನದ ಸರ ಕಳ್ಳತನ ಮಾಡಿದ ಕೆಲಸದಾಕೆಯ ಬಂಧನ
ಹಿರಿಯಡ್ಕ: ಹಿರಿಯಡ್ಕದ ಚೆನ್ನಿಬೆಟ್ಟು ಮದಗ ನಿವಾಸಿ ವಯೋ ವೃದ್ದೆ ಸರಸ್ವತಿ (98) ಎಂಬವರ ಮನೆಯಲ್ಲಿ ಆಕೆಯ ಆರೈಕೆಗಾಗಿ ಉಡುಪಿ ಉಷಾ ಮ್ಯಾರೇಜ್ ಬ್ಯುರೋ ಜಾಬ್ ಲಿಂಕ್ಸ್ ಏಜೆನ್ಸಿ ಮೂಲಕ ಕೆಲಸಕ್ಕೆ ಹೋಂ ನರ್ಸ್ ಅನ್ನು ನೇಮಿಸಲಾಗಿತ್ತು. ಬಾಗಲಕೋಟೆ ಮೂಲದ ರೇಖಾ ಹೆಬ್ಬಳ್ಳಿ ಎನ್ನುವಾಕೆ ಕೆಲಸಕ್ಕೆಂದು ಬಂದಿದ್ದ ಸಮಯದಲ್ಲಿ ಸರಸ್ವತಿಯವರು ಮನೆಯಲ್ಲಿ ಒಬ್ಬರೇ ಇದ್ದದ್ದನ್ನು ಮನಗಂಡು ಅವರ ಕುತ್ತಿಗೆಯಲ್ಲಿದ್ದ ಸುಮಾರು 1.45 ಲಕ್ಷ ಮೌಲ್ಯದ ಚಿನ್ನದ ಸರವನ್ನು ಎಗರಿಸಿ ಪರಾರಿಯಾಗಿದ್ದಳು ಎನ್ನಲಾಗಿದೆ. ಹಿರಿಯಡ್ಕ ಪೊಲೀಸರು ಈ ಬಗ್ಗೆ […]
ಇನ್ನು ಮುಂದೆ ಅಂಗೈಯಲ್ಲಿ ಆರಕ್ಷಕರು: ನಾಗರಿಕರಿಗಾಗಿ ರಾಜ್ಯ ಪೊಲೀಸರ ಅಧಿಕೃತ ಮೊಬೈಲ್ ಅಪ್ಲಿಕೇಶನ್ ಕೆ.ಎಸ್.ಪಿ ಆ್ಯಪ್
ಬೆಂಗಳೂರು: ಕೆ.ಎಸ್.ಪಿ ಮೊಬೈಲ್ ಅಪ್ಲಿಕೇಶನ್ ಕರ್ನಾಟಕ ರಾಜ್ಯ ಪೊಲೀಸರ ಅಧಿಕೃತ ಮೊಬೈಲ್ ಅಪ್ಲಿಕೇಶನ್ ಆಗಿದೆ. ಆಂಡ್ರಾಯ್ಡ್ ಮತ್ತು ಐಒಎಸ್ ಎರಡೂ ವೇದಿಕೆಗಳಲ್ಲಿ ಅಪ್ಲಿಕೇಶನ್ ಲಭ್ಯವಿದೆ. ಕನ್ನಡ ಮತ್ತು ಇಂಗ್ಲಿಷ್ ಎರಡೂ ಭಾಷೆಗಳಲ್ಲಿ ಲಭ್ಯವಿದೆ. ಯಾವುದೇ ನಾಗರಿಕರು ತಮ್ಮ ಯಾವುದೇ ವಿಶ್ವಾಸಾರ್ಹ ಸಂಪರ್ಕಗಳಿಗೆ ಎಸ್ಒಎಸ್ ಬಟನ್ ಮೂಲಕ ತುರ್ತು ಪರಿಸ್ಥಿತಿಯ ಕುರಿತು ಎಸ್.ಎಂ.ಎಸ್ ಮೂಲಕ ತಿಳಿಸಲು ಈ ಅಪ್ಲಿಕೇಶನ್ ಅನುಕೂಲ ಮಾಡುತ್ತದೆ. ಫೋನ್ಗಳು ಜಿಪಿಎಸ್ ಹೊಂದಿದ್ದರೆ, ನಾಗರಿಕರು ತಾವಿರುವ ಸ್ಥಳವನ್ನು ಅವರ ವಿಶ್ವಾಸಾರ್ಹ ಸಂಪರ್ಕಗಳಿಗೆ ಹಂಚಿಕೊಳ್ಳುವ ಸಾಮರ್ಥ್ಯವನ್ನು ಅಪ್ಲಿಕೇಶನ್ […]
ಹೆಜಮಾಡಿ ದುಬಾರಿ ಟೋಲ್ ದರ 40% ಕಮೀಷನ್ ನ ಮತ್ತೊಂದು ಉದಾಹರಣೆ: ವೆರೋನಿಕಾ ಕರ್ನೆಲಿಯೋ
ಮಂಗಳೂರು: ಕಳೆದ ಹಲವು ವರ್ಷಗಳಿಂದ ಎಡೆಬಿಡದೆ ಹೋರಾಟ ನಡೆಸಿ ಸುರತ್ಕಲ್ ಟೋಲ್ಗೇಟ್ ಅನ್ನು ತೆರವುಗೊಳಿಸಿದರೂ ಈಗ ಅದನ್ನು ಹೆಜಮಾಡಿ ಟೋಲ್ ಪ್ಲಾಝಾ ಜತೆ ವಿಲೀನಗೊಳಿಸಿದ್ದಲ್ಲದೆ ದುಬಾರಿ ಟೋಲ್ ದರ ಇಟ್ಟಿರುವುದು ಸಂಸದ ನಳಿನ್ ಕುಮಾರ್ ಕಟೀಲ್ ಅವರ 40% ಕಮೀಷನ್ ಗೆ ಮತ್ತೊಂದು ಉದಾಹರಣೆಯಾಗಿದೆ ಎಂದು ಕೆಪಿಸಿಸಿ ವಕ್ತಾರರಾದ ವೆರೋನಿಕಾ ಕರ್ನೆಲಿಯೋ ಕಿಡಿ ಕಾರಿದ್ದಾರೆ. ಸಂಸದ ನಳಿನ್ ಕುಮಾರ್ ಇತ್ತೀಚೆಗೆ ಟ್ವೀಟ್ ಮಾಡಿ ಸುರತ್ಕಲ್ ಟೋಲ್ ರದ್ದು ಮಾಡಿದ್ದಕ್ಕಾಗಿ ಕೇಂದ್ರ ಭೂಸಾರಿಗೆ ಸಚಿವರಿಗೆ ಧನ್ಯವಾದ ಅರ್ಪಿಸಿದ್ದಾರೆ ಆದರೆ […]
ಬಾಲಿವುಡ್ ಬೇಡ ಕನ್ನಡ ಮಾತ್ರ ಸಾಕು; ಕನ್ನಡ ನನ್ನ ಕರ್ಮಭೂಮಿ: ರಿಷಭ್ ಶೆಟ್ಟಿ
ಟೈಮ್ಸ್ ನೌ ಶೃಂಗಸಭೆ 2022 ರಲ್ಲಿ ಹಿಂದಿ ಚಿತ್ರ ನಟ ಅನುಪಮ್ ಖೇರ್, ಕನ್ನಡ ನಟ ರಿಷಭ್ ಶೆಟ್ಟಿ ನಡುವೆ ಲೇಖಕ ಚೇತನ್ ಭಗತ್ ಸಂವಾದವೇರ್ಪಡಿಸಿದ್ದಾರೆ. ಟೈಮ್ಸ್ ನೌ ಶೃಂಗಸಭೆಯ ಹಿಂದಿನ ಆವೃತ್ತಿಗಳಲ್ಲಿ ಭಾರತದ ಪ್ರಧಾನಿ ನರೇಂದ್ರ ಮೋದಿ, ಕೇಂದ್ರ ಸಚಿವರಾದ ಅಮಿತ್ ಶಾ, ನಿರ್ಮಲಾ ಸೀತಾರಾಮನ್, ರವಿಶಂಕರ್ ಪ್ರಸಾದ್, ಪಿಯೂಷ್ ಗೋಯಲ್, ನಿತಿನ್ ಗಡ್ಕರಿ, ಸ್ಮೃತಿ ಇರಾನಿ, ಪೀಟರ್ ಝೈಹಾನ್, ಕೆ ಶಿವನ್ ಮತ್ತು ಶ್ರೀ ರವಿಶಂಕರ್ ಮುಂತಾದವರು ಭಾಗವಹಿಸಿದ್ದಾರೆ. ಈ ಬರಿ ಹಿಂದಿ ಚಿತ್ರನಟ […]
ಕೇಂದ್ರ ಗ್ರಂಥಾಲಯದಲ್ಲಿ ಸಂವಿಧಾನ ದಿನಾಚರಣೆ
ಉಡುಪಿ: ವಿದ್ಯಾ ವಾಚಸ್ಪತಿ ಡಾ ಬನ್ನಂಜೆ ಗೋವಿಂದಾಚಾರ್ಯರ ಸ್ಮಾರಕ ನಗರ ಕೇಂದ್ರ ಗ್ರಂಥಾಲಯದಲ್ಲಿ ಶನಿವಾರ ಭಾರತದ ಸಂವಿಧಾನ ದಿನಾಚರಣೆ ನಡೆಯಿತು. ಭಾರತ ರತ್ನ ಸಂವಿಧಾನ ಶಿಲ್ಪಿ ಡಾ. ಬಾಬಾ ಸಾಹೇಬ್ ಅಂಬೇಡ್ಕರರ ವೇದ ವಾಕ್ಯದಂತೆ ಸರ್ವರಿಗೂ ಸಮಪಾಲು ಸರ್ವರಿಗೂ ಸಮಬಾಳು ಎಂಬಂತೆ ಸಂವಿಧಾನವು 1949 ನವೆಂಬರ್ 26 ರಂದು ಸಮರ್ಪಣೆಯಾಗಿರುತ್ತದೆ. ಕಾರ್ಯಕ್ರಮವನ್ನು ಸಾಹಿತಿ ಹಾಗೂ ಜಿಲ್ಲಾ ಗ್ರಂಥಾಲಯ ಪ್ರಾಧಿಕಾರದ ಉಪಾಧ್ಯಕ್ಷೆ ವಸಂತಿ ಶೆಟ್ಟಿ ಬ್ರಹ್ಮಾವರ ಉದ್ಘಾಟಿಸಿದರು. ಭಾರತ ಸಂವಿಧಾನದ ಬಗ್ಗೆ ಚರ್ಚಾಕೂಟದಲ್ಲಿ ಮಾತನಾಡಿದ ಮಹಾಲಿಂಗ ಕಲ್ಕುಂದ , […]