ಚರ್ಮಗಂಟು ರೋಗ ನಿಯಂತ್ರಣಕ್ಕೆ ಮುನ್ನೆಚ್ಚರಿಕಾ ಕ್ರಮ: ಒಂದು ತಿಂಗಳು ಜಾನುವಾರು ಸಾಗಾಟ ನಿಷೇಧ

ಉಡುಪಿ: ಚರ್ಮಗಂಟು ರೋಗವು ಕ್ಯಾಪ್ರಿಪಾಕ್ಸ್ ಎಂಬ ವೈರಾಣುವಿನಿಂದ ಜಾನುವಾರುಗಳಿಗೆ ಹರಡುವ ಖಾಯಿಲೆಯಾಗಿದ್ದು, ರೋಗಗ್ರಸ್ತ ಜಾನುವಾರುವಿನಿಂದ ಆರೋಗ್ಯವಂತ ಜಾನುವಾರುಗಳಿಗೆ ಹರಡುವುದರಿಂದ ಹಾಗೂ ರೋಗದಿಂದ ಜಾನುವಾರು ಮಾಲೀಕರುಗಳಿಗೆ ಆರ್ಥಿಕ ನಷ್ಟವುಂಟಾಗುವುದನ್ನು ತಡೆಗಟ್ಟುವ ಸಲುವಾಗಿ, ಜಿಲ್ಲೆಯಲ್ಲಿ ಚರ್ಮಗಂಟು ರೋಗ ನಿಯಂತ್ರಣಕ್ಕೆ ಮುನ್ನೆಚ್ಚರಿಕಾ ಕ್ರಮವಾಗಿ ಒಂದು ತಿಂಗಳು ಅಥವಾ ಮುಂದಿನ ಆದೇಶದವರೆಗೆ ಜಿಲ್ಲೆಯ ಒಳಗೆ ಮತ್ತು ಹೊರಗೆ ಜಾನುವಾರುಗಳಾದ ದನ ಮತ್ತು ಎಮ್ಮೆಯ ಸಾಗಾಟವನ್ನು ತಾತ್ಕಾಲಿಕವಾಗಿ ನಿಷೇಧಿಸಿ, ಜಿಲ್ಲಾಧಿಕಾರಿಗಳು ಆದೇಶಿಸಿದ್ದು, ಹೈನುಗಾರರು ಹಾಗೂ ರೈತರು ಜಾನುವಾರು ಸಾಗಾಟ ಮಾಡದಂತೆ ಪಶು ಪಾಲನಾ ಇಲಾಖೆಯ […]
ವಿಶ್ವದ ಅತಿ ಎತ್ತರದ ಮತದಾನ ಕೇಂದ್ರ ತಾಶಿಗ್ಯಾಂಗ್ ನಲ್ಲಿ ಮೊದಲ ಬಾರಿಗೆ ವಿಧಾನಸಭೆಗೆ ಮತ ಚಲಾವಣೆ; ನ. 12 ರಿಂದ ಡಿ.5 ಎಕ್ಸಿಟ್ ಪೋಲ್ ಗೆ ನಿಷೇಧ

ಶಿಮ್ಲಾ: ಹಿಮಾಚಲ ಪ್ರದೇಶದಲ್ಲಿರುವ ತಾಶಿಗ್ಯಾಂಗ್ 15256 ಅಡಿಗಳಷ್ಟು ಎತ್ತರದಲ್ಲಿರುವ ವಿಶ್ವದ ಅತಿ ಎತ್ತರದ ಮತದಾನ ಕೇಂದ್ರವಾಗಿದೆ. ತಾಶಿಗ್ಯಾಂಗ್ ನಿವಾಸಿಗಳು ನಾಳೆ ವಿಧಾನಸಭೆ ಚುನಾವಣೆಯಲ್ಲಿ ಮೊದಲ ಬಾರಿಗೆ ಮತ ಚಲಾಯಿಸಲಿದ್ದಾರೆ ಎಂದು ಎಐಆರ್ ವರದಿಗಾರರು ವರದಿ ಮಾಡಿದ್ದಾರೆ. ವಿಶ್ವದ ಅತಿ ಎತ್ತರದ ಮತದಾನ ಕೇಂದ್ರವಾದ ತಾಶಿಗ್ಯಾಂಗ್ ಅನ್ನು 2019 ರಲ್ಲಿ ಸ್ಥಾಪಿಸಲಾಯಿತು ಮತ್ತು ಮತದಾರರು ಲೋಕಸಭೆ ಚುನಾವಣೆ ಮತ್ತು ಲೋಕಸಭೆ ಉಪಚುನಾವಣೆಯಲ್ಲಿ ಎರಡು ತಮ್ಮ ಹಕ್ಕು ಚಲಾಯಿಸಿದ್ದಾರೆ. ಆದರೆ ಈ ಬಾರಿ ಮತದಾರರು ಇದೇ ಮೊದಲ ಬಾರಿಗೆ ವಿಧಾನಸಭಾ […]
ಆಧಾರ್ ನಿಯಮಗಳಿಗೆ ತಿದ್ದುಪಡಿ ಮಾಡಿದ ಕೇಂದ್ರ: ಪೋಷಕ ದಾಖಲೆಗಳನ್ನು 10 ವರ್ಷಗಳಿಗೊಮ್ಮೆ ನವೀಕರಿಸಿ

ನವದೆಹಲಿ: ಕೇಂದ್ರ ಸರ್ಕಾರವು ಆಧಾರ್ ನಿಯಮಗಳಿಗೆ ತಿದ್ದುಪಡಿ ಮಾಡಿದ್ದು, ಆಧಾರ್ ದಾಖಲಾತಿ ದಿನಾಂಕದಿಂದ 10 ವರ್ಷ ಪೂರ್ಣಗೊಂಡ ನಂತರ ಆಧಾರ್ ಹೊಂದಿರುವವರು ಒಮ್ಮೆಯಾದರೂ ಪೋಷಕ ದಾಖಲೆಗಳನ್ನು ನವೀಕರಿಸಬೇಕು ಎಂದು ನಿರ್ದಿಷ್ಟಪಡಿಸಿದೆ. ಎಲೆಕ್ಟ್ರಾನಿಕ್ಸ್ ಮತ್ತು ಐಟಿ ಸಚಿವಾಲಯ ಹೊರಡಿಸಿದ ಗೆಜೆಟ್ ಅಧಿಸೂಚನೆಯ ಪ್ರಕಾರ, ನವೀಕರಣವು ಕೇಂದ್ರೀಯ ಗುರುತುಗಳ ಡೇಟಾ ರೆಪೊಸಿಟರಿಯಲ್ಲಿ ಆಧಾರ್-ಸಂಬಂಧಿತ ಮಾಹಿತಿಯ ನಿರಂತರ ನಿಖರತೆಯನ್ನು ಖಚಿತಪಡಿಸುತ್ತದೆ. ಆಧಾರ್ ಸಂಖ್ಯೆ ಹೊಂದಿರುವವರು, ಆಧಾರ್‌ಗಾಗಿ ದಾಖಲಾತಿ ದಿನಾಂಕದಿಂದ10 ವರ್ಷ ಪೂರ್ಣಗೊಂಡ ನಂತರ, ಗುರುತಿನ ಪುರಾವೆ ಮತ್ತು ವಿಳಾಸದ ದಾಖಲೆಗಳನ್ನು ಸಲ್ಲಿಸುವ […]
ಮೈಸೂರು ಮತ್ತು ಚೆನ್ನೈ ನಡುವೆ ಚಲಿಸುವ ದಕ್ಷಿಣ ಭಾರತ ಪ್ರಥಮ ವಂದೇ ಭಾರತ್ ರೈಲು ಇಂದು ಉದ್ಘಾಟನೆ

ಬೆಂಗಳೂರು: ಪ್ರಧಾನಿ ನರೇಂದ್ರ ಮೋದಿ ಅವರು ಶುಕ್ರವಾರ ಬೆಂಗಳೂರಿನಿಂದ ಭಾರತದ ಐದನೇ ವಂದೇ ಭಾರತ್‌ಗೆ ಚಾಲನೆ ನೀಡಲಿದ್ದು, ಇದು ದಕ್ಷಿಣದ ಮೊದಲ ಸೆಮಿ-ಹೈ-ಸ್ಪೀಡ್ ರೈಲಾಗಿದೆ. ರೈಲು ಮೈಸೂರು ಮತ್ತು ಚೆನ್ನೈ ನಡುವೆ ಚಲಿಸಲಿದ್ದು, ಈ ಮಾರ್ಗದ ಪ್ರಯಾಣದ ಸಮಯವನ್ನು ಕಡಿತಗೊಳಿಸಲು ಸಹಾಯ ಮಾಡುತ್ತದೆ. ವಂದೇ ಭಾರತ್ ಕೆಎಸ್‌ಆರ್ ಬೆಂಗಳೂರು ನಿಲ್ದಾಣದಲ್ಲಿ ಉದ್ಘಾಟನೆಗೊಂಡು ನಂತರ ಚೆನ್ನೈಗೆ ಆಗಮಿಸಲಿದೆ. ಹೊಸ ವಂದೇ ಭಾರತ್ ರೈಲಿನ ಪ್ರಮುಖ ಅಂಶಗಳು: ಚೆನ್ನೈನಿಂದ ಮೈಸೂರಿಗೆ ಪ್ರಯಾಣಿಸುವ ಪ್ರಯಾಣಿಕರು ಕಾರ್ ಕುರ್ಚಿಗೆ 1,200 ರೂ ಮತ್ತು […]
ಕಲ್ಯಾಣಪುರ: ಶ್ರೀವೆ೦ಕಟರಮಣ ದೇವಸ್ಥಾನದಲ್ಲಿ ವಾರ್ಷಿಕ ದೀಪೋತ್ಸವ

ಕಲ್ಯಾಣಪುರ: ಶ್ರೀವೆ೦ಕಟರಮಣ ದೇವಸ್ಥಾನದಲ್ಲಿ ಕಾರ್ತಿಕ ಮಾಸದ ವಾರ್ಷಿಕ ದೀಪೋತ್ಸವ ಬುಧವಾರ ಹಾಗೂ ಗುರುವಾರದಂದು ಸಂಪನ್ನವಾಯಿತು. ದೇವರ ಸನ್ನಿಧಿಯಲ್ಲಿ ಸಾವಿರಾರು ಹಣತೆಗಳ ದೀಪಗಳಿಂದ ಅಲಂಕೃತವಾದ ಕೆರೆ ದೀಪ ಉತ್ಸವ, ಬಳಿಕ ಪೇಟೆ ಉತ್ಸವ ನೆರವೇರಿತು. ದೇವರಿಗೆ ವಿಶೇಷ ಹೂವಿನ ಅಲಂಕಾರ ಹಾಗು ಮಹಾ ಪೂಜೆಯ ಬಳಿಕ ಪ್ರಸಾದ ವಿತರಣೆ ನಡೆಯತು. ಆಡಳಿತ ಮೊಕ್ತೇಸರ ಕೆ ಅನ೦ತಪದ್ಮನಾಭ ಕಿಣಿ ಅರ್ಚಕರಾದ ಜಯದೇವ ಭಟ್, ಗಣಪತಿ ಭಟ್ ಹಾಗೂ ಆಡಳಿತ ಮ೦ಡಳಿಯ ಸದಸ್ಯರು ಮತ್ತು ಸಮಾಜ ಬಾ೦ಧವರು ಈ ಸ೦ದರ್ಭದಲ್ಲಿ ಉಪಸ್ಥಿತರಿದ್ದರು.