ಬದಿಯಡ್ಕದಿಂದ ನಾಪತ್ತೆಯಾಗಿದ್ದ ದಂತ ವೈದ್ಯರ ಮೃತದೇಹ ಕುಂದಾಪುರ ಬಳಿ ರೈಲ್ವೆ ಹಳಿಯಲ್ಲಿ ಪತ್ತೆ

ಕುಂದಾಪುರ: ನವೆಂಬರ್‌ 8 ರಂದು ನಾಪತ್ತೆಯಾಗಿದ್ದ ದಂತವೈದ್ಯರೊಬ್ಬರ ಮೃತದೇಹವು ಕುಂದಾಪುರ ಸಮೀಪದ ರೈಲ್ವೆ ಹಳಿಯಲ್ಲಿ ಗುರುವಾರ ಸಂಜೆ ಪತ್ತೆಯಾಗಿದೆ. ಕಾಸರಗೋಡಿನ ಕುಂಬಳೆ ಬದಿಯಡ್ಕದ ದಂತ ವೈದ್ಯ ಡಾ. ಎಸ್. ಕೃಷ್ಣ ಮೂರ್ತಿ (57) ನವೆಂಬರ್‌ 8 ರಂದು ನಾಪತ್ತೆಯಾಗಿದ್ದು, ಇದೀಗ ಕುಂದಾಪುರದ ಹಟ್ಟಿಯಂಗಡಿ ಗ್ರಾಮದ ಕಾಡು ಅಜ್ಜಿ ಮನೆ ಎಂಬಲ್ಲಿಯ ರೈಲ್ವೆ ಹಳಿಯಲ್ಲಿ ಮೃತ ದೇಹ ಪತ್ತೆಯಾಗಿದೆ. ಈ ಕುರಿತು ಮಾಹಿತಿ ದೊರೆತ ಕೂಡಲೇ ಕೃಷ್ಣ ಮೂರ್ತಿಯವರ ಕುಟುಂಬಿಕರು ಕುಂದಾಪುರಕ್ಕೆ ತೆರಳಿ ಮೃತ ದೇಹದ ಗುರುತು ಪತ್ತೆ […]

ಮುಂದಿನ ವರ್ಷಾರಂಭದಿಂದಲೆ ಪಡಿತರದಲ್ಲಿ ಕುಚ್ಚಲಕ್ಕಿ ವಿತರಿಸಲು ನಿರ್ಧಾರ: ಕೋಟ ಶ್ರೀನಿವಾಸ ಪೂಜಾರಿ

ಮಂಗಳೂರು: ಮುಂದಿನ ವರ್ಷದ ಜನವರಿ 1 ರಿಂದ ದಕ್ಷಿಣ ಕನ್ನಡ, ಉಡುಪಿ ಹಾಗೂ ಉತ್ತರ ಕನ್ನಡ ಜಿಲ್ಲೆಗಳಲ್ಲಿ ಪಡಿತರದಲ್ಲಿ ಕುಚ್ಚಲಕ್ಕಿ ವಿತರಿಸಲು ನಿರ್ಧಾರ ಕೈಗೊಳ್ಳಲಾಗಿದೆ ಎಂದು ಸಮಾಜ ಕಲ್ಯಾಣ ಸಚಿವ ಕೋಟ ಶ್ರೀನಿವಾಸ ಪೂಜಾರಿ ತಿಳಿಸಿದ್ದಾರೆ. ಪಡಿತರ ಮೂಲಕ ಕುಚ್ಚಲಕ್ಕಿಯನ್ನು ನೀಡುವಂತೆ ಕರಾವಳಿಗರು ಬಹು ದಿನಗಳಿಂದ ಬೇಡಿಕೆ ಇಟ್ಟಿದ್ದು, ಇದನ್ನು ಗಮನಿಸಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಕರಾವಳಿ ಜಿಲ್ಲೆಗಳಲ್ಲಿ ಕುಚ್ಚಲಕ್ಕಿ ವಿತರಣೆಗೆ ಅನುಮತಿ ನೀಡಿದ್ದಾರೆ. ಮುಖ್ಯಮಂತ್ರಿ ಬೊಮ್ಮಾಯಿ ಉಡುಪಿ ಭೇಟಿ ಸಂದರ್ಭದಲ್ಲಿ ಈ ಕುರಿತು ಘೋಷಣೆ ಮಾಡಿದ್ದರು. […]

ಹೆಚ್ಚುತ್ತಿರುವ ಜಾಗತಿಕ ಆರ್ಥಿಕ ಕುಸಿತ: ತಂತ್ರಜ್ಞಾನ ಕಂಪನಿಗಳಿಂದ ಸಾಲು ಸಾಲು ಉದ್ಯೋಗ ಕಡಿತ

ನವದೆಹಲಿ: 10 ವರ್ಷಗಳ ಕಾಲ ಸ್ಟಾಕ್ ಮಾರುಕಟ್ಟೆಯನ್ನು ಆಳಿದ ತಂತ್ರಜ್ಞಾನ ಕಂಪನಿಗಳು ಹೊಸ ವಾಸ್ತವಕ್ಕೆ ಹೊಂದಿಕೊಳ್ಳುತ್ತಿರುವುದರಿಂದ ತಂತ್ರಜ್ಞಾನ ಕ್ಷೇತ್ರದಲ್ಲಿ ಉದ್ಯೋಗ ಕಡಿತಗಳು ಹೆಚ್ಚಾಗುತ್ತಿವೆ. ಟ್ವಿಟ್ಟರ್ ಅನ್ನು ತನ್ನ ತೆಕ್ಕೆಗೆ ತೆಗೆದುಕೊಂಡ ಬಳಿಕ ಅದರ ಹೊಸ ಬಾಸ್ ಎಲೋನ್ ಮಸ್ಕ್ ತನ್ನ ಕಂಪನಿಯ ಅರ್ಧದಷ್ಟು ಉದ್ಯೋಗಿಗಳನ್ನು ಕಂಪನಿಯಿಂದ ಹೊರಕಳಿಸಿದ್ದಾರೆ. ಫೇಸ್‌ಬುಕ್ ಪೋಷಕ ಕಂಪನಿ ಮೆಟಾದ ಸ್ಥಾಪಕ ಮಾರ್ಕ್ ಜುಕರ್ ಬರ್ಗ್ ಇದುವರೆಗಿನ ಅತಿ ಹೆಚ್ಚಿನ ವಜಾಗಳನ್ನು ಘೋಷಿಸಿದೆ. ಮೆಟಾ ತನ್ನ 13% ಸಿಬ್ಬಂದಿಯನ್ನು ತೆಗೆದುಹಾಕುತ್ತಿದೆ ಎಂದು ಬುಧವಾರ ಹೇಳಿದ್ದು, […]

ನವೆಂಬರ್ 15 ಹಾಗೂ 17 ರಂದು ಜಿಲ್ಲಾವ್ಯಾಪ್ತಿಯ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯ

ಉಡುಪಿ: ಜಿಲ್ಲಾ ವ್ಯಾಪ್ತಿಯಲ್ಲಿ ನಿರ್ವಹಣಾ ಕೆಲಸ ಕೈಗೊಳ್ಳುವುದರಿಂದ ನವೆಂಬರ್ 15 ಹಾಗೂ 17 ರಂದು ಈ ಕೆಳಕಂಡ ಪ್ರದೇಶಗಳಲ್ಲಿ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯ ಉಂಟಾಗಲಿದೆ ಎಂದು ಮೆಸ್ಕಾಂನ ಪ್ರಕಟಣೆ ತಿಳಿಸಿದೆ. ನ. 15 ರಂದು 110/33/11ಕೆವಿ ವಿದ್ಯುತ್ ಉಪಕೇಂದ್ರ ಹಿರಿಯಡ್ಕದಲ್ಲಿ 110 ಕೆ.ವಿ ಬಸ್ ಬಾರ್ ಮತ್ತು ಇದಕ್ಕೆ ಸಂಬಂಧಿಸಿದ ಉಪಕರಣಗಳ ತ್ರೈಮಾಸಿಕ ನಿರ್ವಹಣೆಯ ಕಾಮಗಾರಿಯನ್ನು ಹಮ್ಮಿಕೊಂಡಿರುವುದರಿಂದ ಸದರಿ ಸ್ಥಾವರದಿಂದ ಹೊರಡುವ 33ಕೆವಿ ಹೆಬ್ರಿ ಫೀಡರ್‌ನಲ್ಲಿ ವಿದ್ಯುತ್ ಅಡಚಣೆಯಾಗುವುದರಿಂದ 33/11ಕೆವಿ ಹೆಬ್ರಿ ಉಪಕೇಂದ್ರದಿಂದ ಸರಬರಾಜಾಗುವ ಬೇಳೆಂಜೆ, ಕಳ್ತೂರು, […]

ಅಮ್ಮನಿಗಾಗಿ ಒಂದು ಪುಸ್ತಕ ಮತ್ತು ಪತ್ರ ಬರೆಯುವ ಅಭಿಯಾನ ಕಾರ್ಯಕ್ರಮ

ಉಡುಪಿ: ನಗರ ಕೇಂದ್ರ ಗ್ರಂಥಾಲಯ ಉಡುಪಿ ಇವರ ವತಿಯಿಂದ ಅಜ್ಜರಕಾಡು ವಿದ್ಯಾವಾಚಸ್ಪತಿ ಡಾ. ಬನ್ನಂಜೆ ಗೋವಿಂದಾಚಾರ್ಯರ ಸ್ಮಾರಕ ನಗರ ಕೇಂದ್ರ ಗ್ರಂಥಾಲಯದ ಮಕ್ಕಳ ಸಮುದಾಯ ಕೇಂದ್ರದಲ್ಲಿ ರಾಷ್ಟ್ರೀಯ ಗ್ರಂಥಾಲಯ ಸಪ್ತಾಹದ ಅಂಗವಾಗಿ ಮಕ್ಕಳಿಗೆ ಅಮ್ಮನಿಗಾಗಿ ಒಂದು ಪುಸ್ತಕ ಮತ್ತು ಪತ್ರ ಬರೆಯುವ ಅಭಿಯಾನ ಕಾರ್ಯಕ್ರಮವು ಬುಧವಾರ ನಡೆಯಿತು. ಸಾಹಿತಿ ಹಾಗೂ ಜಿಲ್ಲಾ ಗ್ರಂಥಾಲಯ ಪ್ರಾಧಿಕಾರದ ಸದಸ್ಯೆ ವಸಂತಿ ಶೆಟ್ಟಿ ಬ್ರಹ್ಮಾವರ ಕಾರ್ಯಕ್ರಮ ಉದ್ಘಾಟಿಸಿ, ಗ್ರಂಥಾಲಯಗಳ ಮೂಲಕ ಮಕ್ಕಳು ನಿರಂತರವಾಗಿ ಅನೇಕ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳಲು ಸಾಧ್ಯ. ಪೋಷಕರು ಗ್ರಂಥಾಲಯದಲ್ಲಿನ […]