ನವೆಂಬರ್ 15 ರಂದು ನೀರು ಸರಬರಾಜಿನಲ್ಲಿ ವ್ಯತ್ಯಯ

ಉಡುಪಿ: ಹಿರಿಯಡ್ಕದ ಬಜೆ ನೀರು ಸರಬರಾಜು ಘಟಕದಲ್ಲಿ ನವೆಂಬರ್ 15 ರಂದು ವಿದ್ಯುತ್ ಸ್ಥಗಿತಗೊಳಿಸುವುದರಿಂದ, ಅಂದು ಉಡುಪಿ ನಗರಸಭಾ ವ್ಯಾಪ್ತಿಯಲ್ಲಿ ನೀರು ಸರಬರಾಜಿನಲ್ಲಿ ವ್ಯತ್ಯಯವಾಗಲಿದೆ ಎಂದು ನಗರಸಭೆ ಪ್ರಕಟಣೆ ತಿಳಿಸಿದೆ.

ಕನಕದಾಸರ ರಚನೆಗಳು ಸಹಬಾಳ್ವೆಯ ಸಂದೇಶ ಸಾರುವ ದಾರಿದೀಪಗಳು: ಅಪರ ಜಿಲ್ಲಾಧಿಕಾರಿ ವೀಣಾ ಬಿ.ಎನ್

ಉಡುಪಿ: ಕನಕದಾಸರು ರಚಿಸಿರುವ ಕೃತಿಗಳು ಮತ್ತು ಅವರು ನೀಡಿರುವ ಸಂದೇಶಗಳು ಮಾನವ ಸಮಾಜದಲ್ಲಿ ಸಮಾನತೆ ಮೂಡಲು ಮತ್ತು ಸಹಬಾಳ್ವೆಯಿಂದ ಬಾಳಲು ಅಗತ್ಯವಿರುವ ಸಂದೇಶವನ್ನು ಸಾರುತ್ತವೆ ಎಂದು ಅಪರ ಜಿಲ್ಲಾಧಿಕಾರಿ ವೀಣಾ ಬಿ.ಎನ್ ಹೇಳಿದರು. ಅವರು ಇಂದು ರಜತಾದ್ರಿಯ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಹಾಗೂ ಕನ್ನಡ ಮತ್ತು ಸಂಸ್ಕಂತಿ ಇಲಾಖೆ ಸಹಯೋಗದಲ್ಲಿ ನಡೆದ ಭಕ್ತ ಕನಕದಾಸ ಮತ್ತು ಒನಕೆ ಓಬವ್ವ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿದರು. ಯಾವುದೇ ಜಾತಿ, ಮತ, ಪಂಥ ಹಾಗೂ ಮೇಲು ಕೀಳುಗಳ […]

ಪದ್ಮಶ್ರೀ ಪ್ರಶಸ್ತಿ ಪುರಸ್ಕೃತ ವಿದ್ವಾನ್ ಆರ್. ಎಲ್. ಕಶ್ಯಪ್ ನಿಧನ

ಬೆಂಗಳೂರು: ಸಾಕ್ಷಿ ಟ್ರಸ್ಟ್ ಸಂಸ್ಥಾಪಕ, ಕಂಪ್ಯೂಟರ್ ಪ್ಯಾಟರ್ನ್ ರೆಕಗ್ನಿಷನ್ ಮತ್ತು ಮೆಷಿನ್ ಇಂಟೆಲಿಜೆನ್ಸ್ ಕ್ಷೇತ್ರದಲ್ಲಿ ಮೂಲಭೂತ ಕೊಡುಗೆಗಳನ್ನು ನೀಡಿರುವ ಹಾಗೂ 25 ಸಾವಿರ ಋಗ್ವೇದ ಮಂತ್ರಗಳನ್ನು ಆಂಗ್ಲ ಭಾಷೆಗೆ ಅನುವಾದಿಸಿ, 50ಕ್ಕೂ ಹೆಚ್ಚು ಪುಸ್ತಕಗಳನ್ನು ರಚಿಸಿರುವ ಪದ್ಮಶ್ರೀ ಪ್ರಶಸ್ತಿ ಪುರಸ್ಕೃತ ಆರ್. ಎಲ್. ಕಶ್ಯಪ್ ತಮ್ಮ 85ನೇ ವಯಸ್ಸಿನಲ್ಲಿ ನಿಧನರಾಗಿದ್ದಾರೆ. ಅವಿವಾಹಿತರಾಗಿದ್ದ ಅವರು ವಯೋಸಹಜ ಅನಾರೋಗ್ಯದಿಂದ ಬಳಲುತ್ತಿದ್ದರು. ವಿದ್ವಾನ್ ಆರ್.ಎಲ್.ಕಶ್ಯಪ್ ನಿಧನಕ್ಕೆ ಗಣ್ಯರು ಸಂತಾಪ ಸೂಚಿಸಿದ್ದಾರೆ.

ಸಂಜೀವಿನಿ ಸ್ವಸಹಾಯ ಸಂಘಗಳ ಸದಸ್ಯರ ಮನೆಯಲ್ಲಿ ದ್ರವ ತ್ಯಾಜ್ಯ ನಿರ್ವಹಣೆ ಅನುಷ್ಠಾನ

ಉಡುಪಿ: ಸ್ವಚ್ಛ ಭಾರತ್ ಮಿಷನ್ (ಗ್ರಾಮೀಣ), ರಾಷ್ಟ್ರೀಯ ಗ್ರಾಮೀಣ ಜೀವನೋಪಾಯ ಅಭಿಯಾನ ಹಾಗೂ ಮಹಾತ್ಮಗಾಂಧಿ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯ ಸಹಯೋಗದೊಂದಿಗೆ ಜಿಲ್ಲೆಯ ಸುಮಾರು 60,000 ಸಂಜೀವಿನಿ ಸ್ವಸಹಾಯ ಸಂಘಗಳ ಸದಸ್ಯರ ಮನೆಯಲ್ಲಿ ಕಿಚನ್ ಗಾರ್ಡನ್ ಅಥವಾ ಸೋಕ್ ಪಿಟ್ ಮೂಲಕ ದ್ರವ ತ್ಯಾಜ್ಯ ನಿರ್ವಹಣೆಯನ್ನು ಅನುಷ್ಠಾನ ಮಾಡಲಾಗುತ್ತಿದೆ ಈ ಅಭಿಯಾನದಡಿಯಲ್ಲಿ ಸಂಜೀವಿನಿ ಕುಟುಂಬಗಳಿಂದ ಉದ್ಯೋಗ ಖಾತರಿ ಯೋಜನೆಯಡಿ ಸೋಕ್ ಪಿಟ್ ಹಾಗೂ ಕಿಚನ್ ಗಾರ್ಡನ್ ನಿರ್ಮಾಣಕ್ಕೆ ಅರ್ಜಿ ಸ್ವೀಕರಿಸಿ, ಕುಟುಂಬದ ಅಗತ್ಯತೆಯಂತೆ ಸೋಕ್ ಪಿಟ್ ಅಥವಾ […]

ಮನೆಯ ಕೈತೋಟದಲ್ಲಿ ಬೆಳೆಯುವ ಚೆಂಗುಲಾಬಿ ಹೂವಿನಲ್ಲಿದೆ ಸ್ವಸ್ಥ ಮೈನಸ್ಸು ಮತ್ತು ಸೌಂದರ್ಯದ ಗುಟ್ಟು!

ಗುಲಾಬಿ ಹೂವು ನೀವು ಎಂದೂ ಯೋಚಿಸಿರದ ಹಲವಾರು ಆರೋಗ್ಯ ಪ್ರಯೋಜನಗಳನ್ನು ನಿಮಗೆ ನೀಡುತ್ತದೆ ಎನ್ನುವುದು ನಿಮಗೆ ತಿಳಿದಿದೆಯೆ? ಮನೆಯ ಹೂದೋಟಗಳಲ್ಲಿ ತಣ್ಣನೆ ನಸುನಗುತ್ತಾ ನಿಂತಿರುವ ಈ ಹೂವು ನಿಮ್ಮ ದೇಹ, ಮನಸ್ಸು ಮತ್ತು ಚರ್ಮದ ಮೇಲೆ ಸಕಾರಾತ್ಮಕ ಪರಿಣಾಮವನ್ನು ಬೀರುತ್ತದೆ ಮತ್ತು ಪ್ರಾಚೀನ ಕಾಲದಿಂದಲೂ ಸೌಂದರ್ಯಪ್ರಸಾಧನಗಳಲ್ಲಿ ಇದನ್ನು ಬಳಸಲಾಗುತ್ತಿದೆ. ಗುಲಾಬಿಯು ತಾನು ಎಷ್ಟು ಚೆಲುವುಳ್ಳ ಹೂವಾಗಿದೆಯೋ ಅದನ್ನು ತಲೆಯಲ್ಲಿ ಮುಡಿಯುವುದರಿಂದ ಹೆಂಗಳೆಯರ ಚೆಲುವು ಹೇಗೆ ಇಮ್ಮಡಿಸುತ್ತದೋ ಅಂತೆಯೆ ಗುಲಾಬಿಯನ್ನು ನಿಯಮಿತವಾಗಿ ಮತ್ತು ಹಿತಮಿತವಾಗಿ ಬಳಸಿದಲ್ಲಿ ದೇಹ ಮತ್ತು […]