ಕರಾವಳಿ ಪ್ರದೇಶದ ಸಾಂಪ್ರದಾಯಿಕ ನಾಡದೋಣಿ ಮೀನುಗಾರರ ಮನವಿಗೆ ಸ್ಪಂದನೆ: ಸಚಿವೆ ಮನವಿ ಮೇರೆಗೆ ರಾಜ್ಯಕ್ಕೆ ಹೆಚ್ಚುವರಿ 30 ಲಕ್ಷ ಲೀಟರ್ ಸೀಮೆ ಎಣ್ಣೆ ಬಿಡುಗಡೆ ಮಾಡಿದ ಕೇಂದ್ರ
ಉಡುಪಿ/ ಮಂಗಳೂರು: ರಾಜ್ಯದ ಕರಾವಳಿ ಜಿಲ್ಲೆಗಳಲ್ಲಿ ಸಾಂಪ್ರದಾಯಿಕವಾಗಿ ನಡೆಸಿಕೊಂಡು ಬರುತ್ತಿರುವ ನಾಡದೋಣಿ ಮೀನುಗಾರಿಕೆಗೆ ಹಂಚಿಕೆಯಾಗಿದ್ದ ಸೀಮೆ ಎಣ್ಣೆ ಸಕಾಲದಲ್ಲಿ ಸಿಗುತ್ತಿಲ್ಲ ವಾಗಿದ್ದು, ಈ ಕುರಿತು ಕೇಂದ್ರ ಸರಕಾರದ ಗಮನವನ್ನು ಸೆಳೆದು ಹಂಚಿಕೆಯಾಗಿರುವ ಸೀಮೆ ಎಣ್ಣೆಯನ್ನು ತ್ವರಿತವಾಗಿ ಬಿಡುಗಡೆ ಮಾಡಿ ಈ ಮೂಲಕ ಕರಾವಳಿಯ ಮೀನುಗಾರರ ಹಿತವನ್ನು ಕಾಪಾಡಬೇಕು ಎಂದು ಉಡುಪಿಯ ಮೀನುಗಾರರ ಒಕ್ಕೂಟವು ಕೇಂದ್ರ ಕೃಷಿ ಮತ್ತು ರೈತರ ಕಲ್ಯಾಣ ರಾಜ್ಯ ಸಚಿವೆ, ಶೋಭಾ ಕರಂದ್ಲಾಜೆಯವರಿಗೆ ಮನವಿಯನ್ನು ಸಲ್ಲಿಸಿದ್ದು, ಕರಾವಳಿಯ ಮೀನುಗಾರರ ಮನವಿಯನ್ನು ಕೇಂದ್ರ ಸಚಿವೆ, […]
ಮುಖ್ಯಮಂತ್ರಿಗಳ ಅಮೃತ ನಗರೋತ್ಥಾನ ಯೋಜನೆಯಡಿ ಅನುಸೂಚಿತ ಜಾತಿಗಳಿಗೆ ಸಹಾಯಧನ ವಿತರಣೆ: ಅರ್ಜಿ ಆಹ್ವಾನ
ಕಾರ್ಕಳ: ಕಾರ್ಕಳ ಪುರಸಭೆಯ ವತಿಯಿಂದ 2021-22 ನೇ ಸಾಲಿನ ಮುಖ್ಯಮಂತ್ರಿಗಳ ಅಮೃತ ನಗರೋತ್ಥಾನ ಯೋಜನೆಯಡಿ ಶೇ.24.10 ರ ಅನುದಾನದಡಿ ಅನುಸೂಚಿತ ಜಾತಿಯವರ ಮನೆ ಮೇಲ್ಛಾವಣಿ ದುರಸ್ಥಿ, ಸ್ವ-ಉದ್ಯೋಗಕ್ಕೆ ಸಹಾಯಧನ, ಮನೆ ನಿರ್ಮಾಣಕ್ಕೆ ಸಹಾಯಧನ, ಆರೋಗ್ಯ ವೈದ್ಯಕೀಯ ವೆಚ್ಚ, ರಸ್ತೆ ಅಪಘಾತ, ಶಸ್ತ್ರ ಚಿಕಿತ್ಸೆಗಾಗಿ ವೈದ್ಯಕೀಯ ಸಹಾಯಧನ ಹಾಗೂ ಸಣ್ಣ ಉದ್ದಿಮೆ ಮಾಡುವ ಫಲಾನುಭವಿಗಳಿಗೆ ಸಹಾಯಧನ, ಶೇ. 7.25 ರ ಅನುದಾನದಡಿ ಇತರೆ ಬಡಜನರ ಕಲ್ಯಾಣಾಭಿವೃದ್ಧಿಗಾಗಿ ಮನೆ ಮೇಲ್ಛಾವಣಿ ದುರಸ್ಥಿ, ಆರೋಗ್ಯ ವೈದ್ಯಕೀಯ ವೆಚ್ಚಕ್ಕೆ ಸಹಾಯಧನ ಹಾಗೂ ವೈಯಕ್ತಿಕ […]
ಅಮೇರಿಕಾ ಇಂಗ್ಲೆಂಡ್ ಗಳಿಗಿಂತಲೂ ದುಪ್ಪಟ್ಟು ಮಹಿಳಾ ವಾಣಿಜ್ಯ ಪೈಲಟ್ ಗಳನ್ನು ಹೊಂದಿರುವ ದೇಶ ಭಾರತ!
ಭಾರತವು ಜಾಗತಿಕವಾಗಿ ಅತಿ ಹೆಚ್ಚು ಶೇಕಡಾವಾರು ಮಹಿಳಾ ಪೈಲಟ್ಗಳನ್ನು ಹೊಂದಿರುವ ರಾಷ್ಟ್ರವಾಗಿದೆ. ಇಂಟರ್ನ್ಯಾಶನಲ್ ಸೊಸೈಟಿ ಆಫ್ ವುಮೆನ್ ಏರ್ಲೈನ್ ಪೈಲಟ್ಗಳ ಅಂದಾಜಿನ ಪ್ರಕಾರ ವಿಶ್ವದ ಮಹಿಳಾ ಪೈಲಟ್ಗಳ ಒಟ್ಟು ಸಂಖ್ಯೆಯಲ್ಲಿ ಸುಮಾರು 12.4% ಭಾರತದ ಮಹಿಳಾ ಪೈಲಟ್ ಗಳಿದ್ದಾರೆ. ವಿಶ್ವದ ಅತಿದೊಡ್ಡ ವಾಯುಯಾನ ಮಾರುಕಟ್ಟೆಯಾದ ಅಮೇರಿಕಾ ಸಂಯುಕ್ತ ಸಂಸ್ಥಾನದ 5.5% ಮತ್ತು ಯುನೈಟೆಡ್ ಕಿಂಗ್ಡಮ್ ನ 4.7% ರೊಂದಿಗೆ ಹೋಲಿಸಿದರೆ ಈ ಎರಡೂ ದೇಶಗಳಿಗಿಂತ ದ್ವಿಗುಣ ಪಾಲು ಭಾರತದ ಮಹಿಳಾ ವಾಣಿಜ್ಯ ಪೈಲಟ್ ಗಳು ಪಡೆದಿದ್ದಾರೆ. 2021ರ […]
ಟಿ20 ವಿಶ್ವಕಪ್ ಇತಿಹಾಸದಲ್ಲೇ ಅತಿ ಹೆಚ್ಚು ರನ್ ಗಳಿಸಿದ ಆಟಗಾರನೆಂಬ ಹೆಗ್ಗಳಿಕೆಗೆ ಪಾತ್ರನಾದ ವಿರಾಟ್ ಕೊಹ್ಲಿ
ಅಡಿಲೇಡ್: ಅಡಿಲೇಡ್ನಲ್ಲಿ ನಡೆಯುತ್ತಿರುವ ಬಾಂಗ್ಲಾದೇಶ ವಿರುದ್ಧ ಭಾರತದ ಗುಂಪು 2 ಪಂದ್ಯದಲ್ಲಿ ಕಿಂಗ್ ಕೊಹ್ಲಿ ಟಿ20 ವಿಶ್ವಕಪ್ ಇತಿಹಾಸದಲ್ಲಿ ಅತಿ ಹೆಚ್ಚು ರನ್ ಗಳಿಸಿದ ಆಟಗಾರನಾಗಿ ಹೊರಹೊಮ್ಮಿದ್ದಾರೆ. ವಿರಾಟ್ ತಮ್ಮ ಅಜೇಯ ಅರ್ಧಶತಕದ ಹಾದಿಯಲ್ಲಿ ತಮ್ಮ 16 ನೇ ರನ್ ಬಾರಿಸಿದಾಗ, ಅವರು ಟಿ20 ವಿಶ್ವಕಪ್ನಲ್ಲಿ ಶ್ರೀಲಂಕಾದ ಮಾಜಿ ನಾಯಕ ಮಹೇಲಾ ಜಯವರ್ಧನೆ ಅವರ 1016 ರನ್ಗಳ ದಾಖಲೆಯನ್ನು ಮುರಿದು ಪ್ರಥಮ ಸ್ಥಾನವನ್ನು ಅಲಂಕರಿಸಿದರು. ಇದು ಈ ಟೂರ್ನಿಯ ನಾಲ್ಕು ಪಂದ್ಯಗಳಲ್ಲಿ ಕೊಹ್ಲಿ ಅವರ ಮೂರನೇ ಅರ್ಧಶತಕವಾಗಿದೆ. […]
ದ.ಕ ನೂತನ ಜಿಲ್ಲಾಧಿಕಾರಿ ರವಿಕುಮಾರ್ ಎಂ ಆರ್ ಅಧಿಕಾರ ಸ್ವೀಕಾರ
ಮಂಗಳೂರು: ದಕ್ಷಿಣ ಕನ್ನಡದ ಜಿಲ್ಲಾಧಿಕಾರಿಯಾಗಿ ಐಎಎಸ್ ಅಧಿಕಾರಿ ರವಿಕುಮಾರ್ ಎಂ ಆರ್ ಅಧಿಕಾರ ವಹಿಸಿಕೊಂಡಿದ್ದಾರೆ. ಹಿಂದಿನ ಜಿಲ್ಲಾಧಿಕಾರಿ ಡಾ.ರಾಜೇಂದ್ರ ಕೆ.ವಿ ಮೈಸೂರಿಗೆ ವರ್ಗಾವಣೆಗೊಂಡ ಹಿನ್ನೆಲೆಯಲ್ಲಿ ಪ್ರಭಾರಿ ಜಿಲಾಧಿಕಾರಿಯಾಗಿ ನೇಮಕಗೊಂಡಿದ್ದ ಡಾ.ಕುಮಾರ್ ಅವರಿಂದ ಅಧಿಕಾರ ಸ್ವೀಕರಿಸಿದರು. ರವಿಕುಮಾರ್ 2012 ರ ಬ್ಯಾಚ್ನ ಕರ್ನಾಟಕ ಕೇಡರ್ ನ ಐಎಎಸ್ ಮತ್ತು ಪ್ರಸ್ತುತ ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯದ ರಿಜಿಸ್ಟ್ರಾರ್ ಆಗಿ ಸೇವೆ ಸಲ್ಲಿಸಿದ್ದಾರೆ.