ಪ್ರಕೃತಿಗೆ ಸಮೀಪವಾಗಿ ಬದುಕುವ ಆಯುರ್ವೇದದ ಆರೋಗ್ಯಕರ ಜೀವನ ಪದ್ದತಿ ಆಳವಡಿಸಿಕೊಳ್ಳಿ: ಜಿಲ್ಲಾಧಿಕಾರಿ ಕೂರ್ಮಾ ರಾವ್
ಉಡುಪಿ: ಪ್ರಕೃತಿಯೊಂದಿಗೆ ಬಾಳುವುದು ಮಾನವನ ಜೀವನ ವಿಧಾನ. ಪ್ರಕೃತಿಗೆ ಹತ್ತಿರವಾಗಿದ್ದುಕೊಂಡು ಆರೋಗ್ಯಕರವಾಗಿ ಜೀವನ ನಡೆಸಬೇಕು ಎಂಬ ತಿಳುವಳಿಕೆ ನೀಡುವ ಆಯುರ್ವೇದ ಪದ್ದತಿಯನ್ನು ಪ್ರತಿಯೊಬ್ಬರೂ ಜೀವನದಲ್ಲಿ ಅಳವಡಿಸಿಕೊಳ್ಳಬೇಕು. ಆಧುನಿಕ ವೈದ್ಯಕೀಯ ಪದ್ದತಿಯಲ್ಲಿ ಅನಾರೋಗ್ಯ ಪೀಡಿತ ವ್ಯಕ್ತಿಗೆ ಚಿಕಿತ್ಸೆ ನೀಡಲಾಗುತ್ತದೆ. ಆದರೆ ಆಯುರ್ವೇದವು ವ್ಯಕ್ತಿಯು ತನ್ನ ಆರೋಗ್ಯವನ್ನು ಪ್ರತಿದಿನದ ತನ್ನ ಜೀವನ ಪದ್ದತಿಯಲ್ಲಿ ಹೇಗೆ ಅಳವಡಿಸಿಕೊಳ್ಳಬೇಕು ಎಂಬುದನ್ನು ತಿಳಿಸುತ್ತದೆ. ಇದರಲ್ಲಿ ಯಾವುದೇ ಅಡ್ಡಪರಿಣಾಮಗಳಿಲ್ಲ. ಆಯುರ್ವೇದ ಸೂತ್ರಗಳನ್ನು ಪ್ರತಿದಿನದ ನಮ್ಮ ದಿನಚರಿಯಲ್ಲಿ ಪಾಲಿಸಬೇಕು ಎಂದರು. ಅವರು ಆದಿತ್ಯವಾರದಂದು ಅಜ್ಜರಕಾಡು ಜಿಲ್ಲಾ ಆಯುಷ್ […]
ಬನ್ನಂಜೆ ನಾರಾಯಣಗುರು ಕಾಂಪ್ಲೆಕ್ಸ್ ನಲ್ಲಿ ಅಕ್ಷಯ ಭೂಮಿ ಕಚೇರಿ ಉದ್ಘಾಟನೆ
ಬನ್ನಂಜೆ: ಬನ್ನಂಜೆ ನಾರಾಯಣಗುರು ಕಾಂಪ್ಲೆಕ್ಸ್ ನಲ್ಲಿ ನೂತನವಾಗಿ ಪ್ರಾರಂಭವಾದ ಅಕ್ಷಯ ಭೂಮಿ ಕಚೇರಿಯನ್ನು ಆದಿತ್ಯವಾರದಂದು ಬನ್ನಂಜೆ ಬಿಲ್ಲವ ಸೇವಾ ಸಂಘದ ಅಧ್ಯಕ್ಷ ಆನಂದ ಕಿದಿಯೂರು ಉದ್ಘಾಟಿಸಿದರು. ಆ ಬಳಿಕ ಮಾತನಾಡಿದ ಅವರು, ಸೇವಾಭಾವನೆ ಮತ್ತು ನಗುನಗುತ್ತಾ ಕೆಲಸ ಮಾಡಿದಲ್ಲಿ ಯಶಸ್ಸು ಕಟ್ಟಿಟ್ಟ ಬುತ್ತಿ. ಕಚೇರಿಯು ಗ್ರಾಹಕರಿಗೆ ಉತ್ತಮ ಸೇವೆಯನ್ನು ನೀಡಿ ಅಭಿವೃದ್ದಿ ಹೊಂದಲಿ ಎಂದು ಹಾರೈಸಿದರು. ಕಚೇರಿಯ ಮಾಲಕರಾದ ಶ್ರೀಮತಿ ಅಕ್ಷಯ ಮತ್ತು ಉಮೇಶ್ ಕುಪ್ಪೆಟ್ಟು ಉಪಸ್ಥಿತರಿದ್ದರು. ಅಕ್ಷಯ ಭೂಮಿಯಲ್ಲಿ ಜನರ ದಿನನಿತ್ಯದ ಜೀವನಕ್ಕೆ ಬೇಕಾಗುವ ಎಲ್ಲ […]
ಸ್ಮರಣಿಕದೊಂದಿಗೆ ಈ ಬಾರಿಯ ದೀಪಾವಳಿಯನ್ನು ಸ್ಮರಣೀಯವಾಗಿಸಿ…. ಗೂಡು ದೀಪ ಪ್ರದರ್ಶನ, ಸಿಹಿಖಾದ್ಯಗಳ ಸವಿಯನ್ನು ಆನಂದಿಸಿ…
ಉಡುಪಿ: ಉಡುಪಿಯಲ್ಲಿ ಮನೆ ಮಾತಾಗಿರುವ ಸ್ಮರಣಿಕಾ ರೊಯಾಲೆಯೊಂದಿಗೆ ಈ ಬಾರಿಯ ಬೆಳಕಿನ ಹಬ್ಬವನ್ನಾಚರಿಸಿ ಈ ದಿನವನ್ನು ಸ್ಮರಣೀಯವಾಗಿಸಿ. ದೀಪಾವಳಿ ಪ್ರಯುಕ್ತ ಸ್ಮರಣಿಕಾ ರೊಯಾಲೆಯಲ್ಲಿ ಬೃಹತ್ ಗೂಡು ದೀಪ ಪ್ರದರ್ಶನ ಮತ್ತು ಮಾರಾಟ. ಬಾಯಲ್ಲಿ ನೀರೂರಿಸುವ ರುಚಿರುಚಿಯಾದ ಮುಂಬಾಯಿಯ ಪ್ರಸಿದ್ದ ಸಿಹಿತಿಂಡಿಗಳು, ಶುಗರ್ ಫ್ರೀ ಖಾದ್ಯಗಳು, ಬಾಂಬೆ ಸ್ವೀಟ್ಸ್ ಗಳ ಬೃಹತ್ ಮಾರಾಟ ಮೇಳ ಗ್ರಾಹಕರನ್ನು ಕೈಬೀಸಿ ಕರೆಯುತ್ತಿದೆ. ಕಳೆದ ಹಲವು ವರ್ಷಗಳಿಂದ ಆಕರ್ಷಕ ಗೂಡು ದೀಪಗಳ ಮಾರಾಟದಲ್ಲಿ ಹೆಸರುವಾಸಿಗಿರುವ ಸ್ಮರಣಿಕಾ ಸಂಸ್ಥೆ,ಈ ಬಾರಿ ದೀಪಾವಳಿಯಲ್ಲಿ ಹಲವು […]
ಕೊಪ್ಪಳ: ಬಸಯ್ಯ ಹಿರೇಮಠ ಇವರಿಗೆ ಸರ್ವ ಶ್ರೇಷ್ಠ ಐಕಾನ್ ಆಫ್ ಭಾರತ್ ಗೌರವ
ಕೊಪ್ಪಳ: ಎನ್.ಡಿ.ಟಿ.ವಿ ಮತ್ತು ಫ್ರೀಡಂ ಆಪ್ ನಡೆಸುತ್ತಿರುವ “ಐಕಾನ್ಸ್ ಆಫ್ ಭಾರತ್” ಎಂಬ ರಿಯಾಲಿಟಿ ಶೋ ನಲ್ಲಿ ಜಿಲ್ಲೆಯ ಬಸಯ್ಯ ಹಿರೇಮಠ ಇವರು ರಾಷ್ಟ್ರೀಯ ಮಟ್ಟದಲ್ಲಿ”ಸರ್ವ ಶ್ರೇಷ್ಠ ಐಕಾನ್ ಆಫ್ ಭಾರತ್” ಎಂದು ಗುರುತಿಸಲ್ಪಟ್ಟಿದ್ದಾರೆ. ಬಸಯ್ಯ ಹಿರೇಮಠ ಅವರು ಅಪೌಷ್ಟಿಕತೆ ಪೀಡಿತ ಜಿಲ್ಲೆಗಳಲ್ಲಿ ಅಪೌಷ್ಟಿಕತೆ ನಿವಾರಣೆಗೆ ಶ್ರಮಿಸುತ್ತಿದ್ದಾರೆ. ಅವರು ಮೊರಿಂಗಾದ ಸಾವಯವ ಕೃಷಿ ಮತ್ತು ಸಾವಯವ ಮೊರಿಂಗಾದ ಮೌಲ್ಯವರ್ಧನೆಯಲ್ಲಿ ಕೆಲಸ ಮಾಡುತ್ತಿದ್ದಾರೆ. ಗ್ರಾಮೀಣ ಉದ್ಯೋಗ ಮತ್ತು ಮಹಿಳಾ ಸಬಲೀಕರಣದ ಮೇಲೆ ಹೆಚ್ಚು ಗಮನ ಹರಿಸುತ್ತಿದ್ದಾರೆ. ಕೃಷಿ ಮತ್ತು […]
ಪ್ರತಿಭಾ ಕುಳಾಯಿ ಘನತೆಗೆ ಧಕ್ಕೆ ತಂದವರ ವಿರುದ್ದ ಮಾನಹಾನಿ ಪ್ರಕರಣ ದಾಖಲು
ಮಂಗಳೂರು: ಸಾಮಾಜಿಕ ಕಾರ್ಯಕರ್ತೆ ಮತ್ತು ಕಾಂಗ್ರೆಸ್ ಪಕ್ಷದ ಸಂಯೋಜಕಿ ಪ್ರತಿಭಾ ಕುಳಾಯಿ ಅವರ ವಿರುದ್ಧ ಸಾಮಾಜಿಕ ಜಾಲತಾಣದಲ್ಲಿ ಅಸಭ್ಯವಾಗಿ ಬರೆದು ಅವರ ಘನತೆಗೆ ಧಕ್ಕೆ ತಂದ ವ್ಯಕ್ತಿಯ ಬಂಧನಕ್ಕೆ ಎರಡು ತಂಡ ರಚಿಸಲಾಗಿದ್ದು, ಆತನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಗುವುದು ಎಂದು ಮಂಗಳೂರು ನಗರ ಪೊಲೀಸ್ ಆಯುಕ್ತ ಎನ್.ಶಶಿಕುಮಾರ್ ತಿಳಿಸಿದ್ದಾರೆ. ಸುರತ್ಕಲ್ ಟೋಲ್ ಗೇಟ್ ವಿರುದ್ಧ ಪ್ರತಿಭಟನೆಯಲ್ಲಿ ತೊಡಗಿಕೊಂಡಿದ್ದ ಸಂದರ್ಭದಲ್ಲಿ ಪ್ರತಿಭಾ ಅವರ ವೀಡಿಯೋ ಚಿತ್ರಗಳನ್ನು ಸಂಕಲನ ಮಾಡಿ ಅದನ್ನು ಅಸಭ್ಯ ರೀತಿಯಲ್ಲಿ ಚಿತ್ರಿಸಿ ಸಾಮಾಜಿಕ ಜಾಲತಾಣಗಳಲ್ಲಿ […]