ಅಕ್ಟೋಬರ್ 19 ರಂದು ಉದ್ಯೋಗ ವಿನಿಮಯ ಕಚೇರಿಯಲ್ಲಿ ಮಿನಿ ಉದ್ಯೋಗ ಮೇಳ
ಉಡುಪಿ: ಕೈಗಾರಿಕಾ ತರಬೇತಿ ಮತ್ತು ಉದ್ಯೋಗ ಇಲಾಖೆಯ ವತಿಯಿಂದ ಅಕ್ಟೋಬರ್ 19 ರಂದು ಬೆಳಗ್ಗೆ 10.30 ಕ್ಕೆ ಮಣಿಪಾಲ ರಜತಾದ್ರಿಯ ಜಿಲ್ಲಾಧಿಕಾರಿ ಕಚೇರಿ ಸಂಕೀರ್ಣದ ಉದ್ಯೋಗ ವಿನಿಮಯ ಕಚೇರಿಯಲ್ಲಿ ಮಿನಿ ಉದ್ಯೋಗ ಮೇಳ ನಡೆಯಲಿದೆ. ಎಸ್.ಎಸ್.ಎಲ್.ಸಿ, ಪಿ.ಯು.ಸಿ, ಐ.ಟಿ.ಐ, ಬಿ.ಕಾಂ, ಬಿ.ಇ ಇಂಜಿನಿಯರಿಂಗ್, ಡಿಪ್ಲೋಮಾ ಹಾಗೂ ಇತರೆ ಪದವಿ ವಿದ್ಯಾರ್ಹತೆಯೊಂದಿಗೆ ಉತ್ತೀರ್ಣರಾದ ಅಭ್ಯರ್ಥಿಗಳು ತಮ್ಮ ಅಂಕಪಟ್ಟಿ, ಸ್ವವಿವರವುಳ್ಳ ರೆಸ್ಯೂಮ್/ಸಿವಿ ಹಾಗೂ ಆಧಾರ್ ಕಾರ್ಡ್ಪ್ರತಿ ಯೊಂದಿಗೆ ಮಿನಿ ಉದ್ಯೋಗ ಮೇಳದಲ್ಲಿ ಭಾಗವಹಿಸಬಹುದಾಗಿದೆ. ಹೆಚ್ಚಿನ ಮಾಹಿತಿಗಾಗಿ ಜಿಲ್ಲಾ ಉದ್ಯೋಗ ವಿನಿಮಯ […]
ಉಡುಪಿ ಶಾಸಕರ ಕಾರ್ಯವೈಖರಿಗೆ ಮೆಚ್ಚುಗೆ: ಕಾಂಗ್ರೆಸ್ ಕಾರ್ಯಕರ್ತರು ಬಿಜೆಪಿಗೆ ಸೇರ್ಪಡೆ
ಉಡುಪಿ: ಭಾರತೀಯ ಜನತಾ ಪಕ್ಷ ನೇತೃತ್ವದ ಕೇಂದ್ರ ಮತ್ತು ರಾಜ್ಯ ಸರ್ಕಾರದ ಜನಪರ ಕಾಳಜಿಯ ಅಭಿವೃದ್ಧಿ ಕಾರ್ಯಕ್ರಮಗಳು ಹಾಗೂ ಉಡುಪಿ ವಿಧಾನಸಭಾ ಕ್ಷೇತ್ರದಲ್ಲಿ ಶಾಸಕ ರಘುಪತಿ ಭಟ್ ಅವರ ಕಾರ್ಯ ವೈಖರಿ, ಜನಪರ ಕಾಳಜಿ ಹಾಗೂ ಕ್ಷೇತ್ರದಾದ್ಯಂತ ನಡೆದ ಅಭಿವೃದ್ಧಿ ಕಾರ್ಯಗಳನ್ನು ಮೆಚ್ಚಿ ಕಾಂಗ್ರೆಸ್ ಪಕ್ಷದ ಪ್ರಮುಖ ಕಾರ್ಯಕರ್ತರು, ಗ್ರಾಮ ಪಂಚಾಯತ್ ಮಾಜಿ ಸದಸ್ಯರು ಶನಿವಾರದಂದು ಭಾರತೀಯ ಜನತಾ ಪಕ್ಷಕ್ಕೆ ಸೇರ್ಪಡೆಯಾದರು. ಎರಡು ಬಾರಿ ಕಾಂಗ್ರೆಸ್ ಬೆಂಬಲಿತ ಗ್ರಾಮ ಪಂಚಾಯತ್ ಸದಸ್ಯರಾಗಿದ್ದ ಬಾವ್ತಿಸ್ ಡಿಸೋಜಾ ಹಾಗೂ ಕಾಂಗ್ರೆಸ್ […]
ಉನ್ನತಿ ಕೆರಿಯರ್ ಅಕಾಡೆಮಿ: ಬ್ಯಾಂಕಿಂಗ್ ಫೈನಾಶಿಯಲ್ ಕ್ಷೇತ್ರದ ಅಭ್ಯರ್ಥಿಗಳಿಂದ ಕೌಶಲ್ಯ ಪ್ರದರ್ಶನ
ಉಡುಪಿ: ಕೌಶಲ್ಯ ಶಿಕ್ಷಣಕ್ಕೆ ಪ್ರಸಿದ್ದಿ ಪಡೆದಿರುವ ಹಾಗೂ ಕರ್ನಾಟಕ ಕೌಶಲ್ಯ ಅಭಿವೃದ್ಧಿ ನಿಗಮದ ತರಬೇತಿ ಪಾಲುದಾರ ಸಂಸ್ಥೆಯಾದ ಉಡುಪಿಯ ಉನ್ನತಿ ಕೆರಿಯರ್ ಅಕಾಡೆಮಿಯು ಕಳೆದ 2 ತಿಂಗಳಲ್ಲಿ ಉಡುಪಿ ಜಿಲ್ಲೆಯ ಆಯ್ದ 60 ಅಭ್ಯರ್ಥಿಗಳಿಗೆ ಆಲ್ ಕಾರ್ಗೋ-ಸಂಚಲನ ಸಂಸ್ಥೆಗಳ ಸಿ ಎಸ್ ಆರ್ ಯೋಜನೆಯಡಿ ಬ್ಯಾಂಕಿಂಗ್ ಮತ್ತು ಫೈನಾನ್ಶಿಯಲ್ ಕ್ಷೇತ್ರದ ಪ್ರಮುಖ ವಿಷಯಗಳಾದ ಕೆ ವೈ ಸಿ-ಎ ಎಂ ಎಲ್, ಕಸ್ಟಮರ್ ಸರ್ವೀಸ್, ಡಿಜಿಟಲ್ ಬ್ಯಾಂಕಿಂಗ್ ನಲ್ಲಿ ನುರಿತ ತಜ್ಞರಿಂದ ಉಚಿತ ತರಬೇತಿ ನೀಡಿದೆ. ತರಬೇತಿ ಪಡೆದ […]
ಮಣಿಪಾಲ: ಅ.17 ರಂದು ತನುಜಾಸ್ ಮೈಂಡ್ ಥೆರಪಿ ಉದ್ಘಾಟನಾ ಕಾರ್ಯಕ್ರಮ
ಮಣಿಪಾಲ: ಖ್ಯಾತ ವ್ಯಕ್ತಿತ್ವ ತರಬೇತುಗಾರ್ತಿ ತನುಜಾ ಮಾಬೆನ್ ರವರ ತನುಜಾಸ್ ಮೈಂಡ್ ಥೆರಪಿ ಅ.17 ಸೋಮವಾರದಂದು 10 ಗಂಟೆಗೆ ಮಣಿಪಾಲದ ಕೆನರಾ ಬ್ಯಾಂಕ್ ನ ಎದುರು ಮನಿಸಿಪಲ್ ಕಾಂಪ್ಲೆಕ್ಸ್ ನ ಮೊದಲನೆ ಮಹಡಿಯಲ್ಲಿ ಉದ್ಘಾಟನೆಗೊಳ್ಳಲಿದ್ದು, ಶಾಸಕ ಕೆ ರಘುಪತಿ ಭಟ್, ಮನಿಪಾಲ್ ಟೆಕ್ನಾಲಜೀಸ್ ನ ಕಾರ್ಯಾಧ್ಯಕ್ಷ ಗೌತಮ್ ಪೈ, ಶಿಕ್ಷಣತಜ್ಞೆ ಕೋಮಲ್ ಜೆನಿಫರ್ ಡಿ’ಸೋಜಾ ಭಾಗವಹಿಸಲಿದ್ದಾರೆ. ಶನಿವಾರ ಪತ್ರಿಕಾ ಭವನದಲ್ಲಿ ಈ ಬಗ್ಗೆ ಮಾಹಿತಿ ನೀಡಿ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಮಾನಸಿಕ ತರಬೇತುಗಾರ್ತಿ ಮತ್ತು ಚಿಕಿತ್ಸಕಿ ತನುಜಾ ಮಾಬೆನ್, […]
ಬ್ರೌನ್ ವುಡ್ ಫರ್ನೀಚರ್: ಅತ್ಯಾಧುನಿಕ ಪೀಠೋಪಕರಣಗಳ ಬೃಹತ್ ಮಳಿಗೆ ಶುಭಾರಂಭ
ಉಡುಪಿ: ಇಲ್ಲಿನ ಅಂಬಲಪಾಡಿ ಬೈಪಾಸ್ ಬಳಿಯ ಬ್ರಹ್ಮಗಿರಿಯ ಸುರಭಿ ಲೋಟಸ್ ಕಟ್ಟಡದಲ್ಲಿ ಬ್ರೌನ್ ವುಡ್ ಫರ್ನೀಚರ್ ಶೋರೂಂನ ಉದ್ಘಾಟನಾ ಕಾರ್ಯಕ್ರಮವು ಅ.16 ಭಾನುವಾರದಂದು ನಡೆಯಿತು. ಅಂಬಲಪಾಡಿ ಶ್ರೀ ಜನಾರ್ದನ ಮಹಾಕಾಳಿ ದೇಗುಲದ ಧರ್ಮದರ್ಶಿ ಡಾ. ನಿ.ಬೀ. ವಿಜಯ ಬಲ್ಲಾಳ್ ದೀಪ ಬೆಳಗಿಸಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ, ಅಂಬಲಪಾಡಿ ಒಂದು ಯೋಜನಾಬದ್ದ ನಗರ. ಇಲ್ಲಿನ ಜನ ಶಾಂತಿಪ್ರಿಯರು. ಅಂಬಲಪಾಡಿಯ ಪ್ರಮುಖ ರಸ್ತೆಯಲ್ಲಿ ಗ್ರಾಹಕರ ಅಗತ್ಯತೆಗಳನ್ನು ಗಮನದಲ್ಲಿಟ್ಟುಕೊಂಡು ಪೀಠೋಪಕರಣಗಳ ಬೃಹತ್ ಮಳಿಗೆಯನ್ನು ಆರಂಭಿಸಿರುವುದರಿಂದ ಇಲ್ಲಿನ ಜನತೆಗೆ ಅನುಕೂಲವಾಗಲಿದೆ. ಸಂಸ್ಥೆಯು ಗುಣಮಟ್ಟ […]