ಬ್ರೌನ್ ವುಡ್ ಫರ್ನೀಚರ್: ಅತ್ಯಾಧುನಿಕ ಪೀಠೋಪಕರಣಗಳ ಬೃಹತ್ ಮಳಿಗೆ ಶುಭಾರಂಭ

ಉಡುಪಿ: ಇಲ್ಲಿನ ಅಂಬಲಪಾಡಿ ಬೈಪಾಸ್ ಬಳಿಯ ಬ್ರಹ್ಮಗಿರಿಯ ಸುರಭಿ ಲೋಟಸ್ ಕಟ್ಟಡದಲ್ಲಿ ಬ್ರೌನ್ ವುಡ್ ಫರ್ನೀಚರ್ ಶೋರೂಂನ ಉದ್ಘಾಟನಾ ಕಾರ್ಯಕ್ರಮವು ಅ.16 ಭಾನುವಾರದಂದು ನಡೆಯಿತು.

ಅಂಬಲಪಾಡಿ ಶ್ರೀ ಜನಾರ್ದನ ಮಹಾಕಾಳಿ ದೇಗುಲದ ಧರ್ಮದರ್ಶಿ ಡಾ. ನಿ.ಬೀ. ವಿಜಯ ಬಲ್ಲಾಳ್ ದೀಪ ಬೆಳಗಿಸಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ, ಅಂಬಲಪಾಡಿ ಒಂದು ಯೋಜನಾಬದ್ದ ನಗರ. ಇಲ್ಲಿನ ಜನ ಶಾಂತಿಪ್ರಿಯರು. ಅಂಬಲಪಾಡಿಯ ಪ್ರಮುಖ ರಸ್ತೆಯಲ್ಲಿ ಗ್ರಾಹಕರ ಅಗತ್ಯತೆಗಳನ್ನು ಗಮನದಲ್ಲಿಟ್ಟುಕೊಂಡು ಪೀಠೋಪಕರಣಗಳ ಬೃಹತ್ ಮಳಿಗೆಯನ್ನು ಆರಂಭಿಸಿರುವುದರಿಂದ ಇಲ್ಲಿನ ಜನತೆಗೆ ಅನುಕೂಲವಾಗಲಿದೆ. ಸಂಸ್ಥೆಯು ಗುಣಮಟ್ಟ ಮತ್ತು ಬದ್ದತೆಗೆ ಹೆಸರುವಾಸಿಯಾಗಿದೆ. ಬದಲಾದ ಕಾಲಘಟ್ಟದಲ್ಲಿ ಆಧುನಿಕತೆಯ ಸ್ಪರ್ಶದೊಂದಿಗೆ ನವ ನವೀನ ಪೀಠೋಪಕರಣಗಳು ಸ್ಪರ್ಧಾತ್ಮಕ ಬೆಲೆಯಲ್ಲಿ ಲಭ್ಯವಿದ್ದು, ಇ.ಎಮ್.ಐ ಸೌಲಭ್ಯವೂ ಲಭ್ಯವಿರುವುದರಿಂದ ಗ್ರಾಹಕರು ಇದರ ಪ್ರಯೋಜನ ಪಡೆದುಕೊಂಡು ತಮ್ಮ ಮನೆಗಳನ್ನು ಅಲಂಕರಿಸಿಕೊಳ್ಳಬಹುದು ಎಂದರು.

ಬ್ರೌನ್ ವುಡ್ ಫರ್ನಿಚರ್ ನ ವಿಶಾಲ ಮಳಿಗೆಯಲ್ಲಿ ಆಧುನಿಕ ಜಗತ್ತಿಗೆ ಸೂಕ್ತವೆನಿಸುವ ಪೀಠೋಪಕರಣಗಳ ಜೊತೆಗೆ ಗ್ರಾಹಕರ ಇಚ್ಛೆಗೆ ತಕ್ಕಂತೆ ಪೀಠೋಪಕರಣಗಳನ್ನು ಕಸ್ಟಮೈಸ್ ಮಾಡುವ ವ್ಯವಸ್ಥೆಯೂ ಇದೆ. ಸಂಸ್ಥೆಯು 25 ಸಾವಿರ ಚದರ ಮೀ.ನ ತನ್ನದೇ ಆದ ಕಾರ್ಖಾನೆ ಹೊಂದಿದ್ದು, ಗ್ರಾಹಕರ ಬೇಡಿಕೆಗನುಗುಣವಾಗಿ ಪೀಠೋಪಕರಣಗಳನ್ನು ಮಾಡಿಕೊಡುವ ವ್ಯವಸ್ಥೆ ಇದ್ದು, ಸಾರ್ವಜನಿಕರು ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದ ಅವರು ಸಂಸ್ಥೆಯು ಉತ್ತರೋತ್ತರ ಬೆಳವಣಿಗೆ ಹೊಂದಿ ಅಭಿವೃದ್ದಿ ಕಾಣಲಿ ಎಂದು ಹಾರೈಸಿದರು.

ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದ ಕೆನರಾ ಬ್ಯಾಂಕ್ ಪ್ರಾದೇಶಿಕ ಕಚೇರಿಯ ಡಿಜಿಎಂ ಲೀನಾ ಪಿಂಟೋ ಮಾತನಾಡಿ, ಕೆನರಾ ಬ್ಯಾಂಕ್ ಕಳೆದ ಹತ್ತು ವರ್ಷಗಳಿಂದ ಸಂಸ್ಥೆಯ ಜೊತೆ ಪಾಲುದಾರಿಕೆ ಹೊಂದಿದೆ. ಬೆಳೆಯುತ್ತಿರುವ ಆರ್ಥಿಕತೆಗನುಗುಣವಾಗಿ ಮನೆ ಕಟ್ಟಲು, ಪೀಠೋಪಕರಣ ಖರೀದಿಸಲು ಸಾಲದ ವ್ಯವಸ್ಥೆಯನ್ನು ನೀಡುತ್ತಿದ್ದು, ಜನರು ಇದರ ಪ್ರಯೋಜನ ಪಡೆದುಕೊಳ್ಳುವಂತೆ ಹೇಳಿದರು.

ಸಾಮಾಜಿಕ ಕಾರ್ಯಕರ್ತ ವಿಶು ಶೆಟ್ಟಿ ಅಂಬಲಪಾಡಿ, ಉದ್ಯಾವರ ಸಾಯಿರಾಮ್ ಇಂಟೀರಿಯರ್ಸ್ ಎಂಡ್ ಡೆಕೋರೇಟರ್ಸ್ ನ ಯತೀಶ್ ಅಂಚನ್, ತ್ರಾಸಿ ಅಂಬಾ ಎಲೆಕ್ಟ್ರಿಕಲ್ಸ್ ಎಂಡ್ ಫರ್ನೀಚರ್ ನ ಸುಧಾಕರ ಶೆಟ್ಟಿ, ಸುರಭಿ ಬಿಲ್ಡರ್ಸ್ ಎಂಡ್ ಡೆವಲಪರ್ಸ್ ನ ಪ್ರಭಾಕರ ಭಟ್, ಉದ್ಯಮಿ ಅಬೂಬಕ್ಕರ್ ಕಿದಿಯೂರು, ಅಲೆವೂರು ವಿಕೆ ಡೆವಲಪರ್ಸ್ ನ ಕಾರ್ತಿಕ್ ಶೆಟ್ಟಿ, ಮಲ್ಪೆ ಆರಕ್ಷಕ ಠಾಣೆಯ ಸಬ್ ಇನ್ಸ್ಪೆಕ್ಟರ್ ಶಕ್ತಿವೇಲು ಮುಂತಾದವರು ಉಪಸ್ಥಿತರಿದ್ದರು.