ಭಾರತೀಯ ಚಿತ್ರರಂಗದ ಬಾಹುಬಲಿ ಎಸ್.ಎಸ್.ರಾಜಮೌಳಿ ಜನ್ಮದಿನ: ನಿರ್ದೇಶನದ ‘ರಾಜ’ನಿಗಿದೆ ರಾಯಚೂರಿನ ನಂಟು!

ಭಾರತೀಯ ಚಿತ್ರರಂಗದ ಬಾಹುಬಲಿ ನಿರ್ದೇಶಕ ಎಸ್.ಎಸ್.ರಾಜಮೌಳಿ ಅವರಿಗೆ ಇಂದು ಹುಟ್ಟುಹಬ್ಬದ ಸಂಭ್ರಮ. ಕೊಡೂರಿ ಶ್ರೀಶೈಲ ಶ್ರೀ ರಾಜಮೌಳಿ 10 ಅಕ್ಟೋಬರ್ 1973 ರಲ್ಲಿ ಜನಿಸಿದರು. ಇವರು ಭಾರತದ ಅತಿಹೆಚ್ಚು ಸಂಭಾವನೆ ಪಡೆಯುವ ನಿರ್ದೇಶಕ. ಅವರ ಮೂರು ಚಲನಚಿತ್ರಗಳು, ಬಾಹುಬಲಿ: ದಿ ಬಿಗಿನಿಂಗ್ (2015), ಬಾಹುಬಲಿ 2: ದಿ ಕನ್‌ಕ್ಲೂಷನ್ (2017), ಮತ್ತು ಆರ್.ಆರ್.ಆರ್ (2022) ಇಲ್ಲಿಯವರೆಗೆ ಭಾರತದಲ್ಲಿ ಅತಿ ಹೆಚ್ಚು ಗಳಿಕೆ ಮಾಡಿದ ಚಲನಚಿತ್ರಗಳಲ್ಲಿ ಸೇರಿವೆ. ಅವರು ಮೂರು ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಗಳು, ನಾಲ್ಕು ದಕ್ಷಿಣ ಭಾರತೀಯ […]

ಕಾಸರಗೋಡು: ಭಕ್ತರ ಪ್ರೀತಿಯ ಬಬಿಯಾ ಇನ್ನಿಲ್ಲ; ವಿಷ್ಣುಲೋಕದತ್ತ ಪಯಣಿಸಿದ ದೈವಿಕ ಮೊಸಳೆ

ಕಾಸರಗೋಡು: ಇಲ್ಲಿನ ಅನಂತಪುರಂನ ಅನಂತಪದ್ಮನಾಭಸ್ವಾಮಿ ದೇವಸ್ಥಾನದ ಕೊಳದಲ್ಲಿ ವಾಸವಾಗಿದ್ದ ಭಕ್ತರ ಪ್ರೀತಿಯ ಮೊಸಳೆ ಬಬಿಯಾ ಸಾವನ್ನಪ್ಪಿದೆ. ಸುಮಾರು 75 ವರ್ಷ ವಯಸ್ಸಿನ ಈ ಮೊಸಳೆ ನಿನ್ನೆ ರಾತ್ರಿ ಸಾವನ್ನಪ್ಪಿದೆ. ದಂತಕಥೆಗಳ ಪ್ರಕಾರ, 1945 ರಲ್ಲಿ, ಬ್ರಿಟಿಷ್ ಅಧಿಕಾರಿಯೊಬ್ಬರು ದೇವಾಲಯದಲ್ಲಿ ಮೊಸಳೆಯೊಂದಕ್ಕೆ ಗುಂಡು ಹಾರಿಸಿದ್ದ ಕೆಲವೇ ದಿನಗಳಲ್ಲಿ ಬಬಿಯಾ ದೇವಾಲಯದ ಕೊಳದಲ್ಲಿ ಕಾಣಿಸಿಕೊಂಡಿದ್ದಳು. ಬಬಿಯಾ ಸಂಪೂರ್ಣವಾಗಿ ಸಸ್ಯಾಹಾರಿಯಾಗಿದ್ದಳು. Babiya the crocodile lived in Ananthapadmanabha Swamy Lake Temple of kasargod is no more pic.twitter.com/mFF5bjN4SU […]

ಸಂತ ಭದ್ರಗಿರಿ ಅಚ್ಯುತದಾಸರ ಪುಣ್ಯತಿಥಿ ಸಂಸ್ಮರಣೆ ಕಾರ್ಯಕ್ರಮ

ಭದ್ರಗಿರಿ: ಶ್ರೀ ಭದ್ರಗಿರಿ ವೀರವಿಠ್ಠಲ ದೇವಸ್ಥಾನದಲ್ಲಿ ರವಿವಾರ ಸಂತ ಭದ್ರಗಿರಿ ಅಚ್ಯುತದಾಸರ ಪುಣ್ಯತಿಥಿ ಸಂಸ್ಮರಣೆಯ ಅಂಗವಾಗಿ ಹರಿದಾಸ ಕೃಷ್ಣ ಪೈಯವರಿಂದ ಕನ್ನಡದಲ್ಲಿ ಪಾರ್ಥಸಾರಥ್ಯ ಹರಿಕಥಾ ಕಾಲಕ್ಷೇಪ ಸೇವೆ ನಡೆಯಿತು. ಭದ್ರಗಿರಿ ಅಚ್ಯುತದಾಸರ ಮತ್ತು ಸರ್ವೋತ್ತಮ ಪೈ ಬೆಂಗಳೂರು ಇವರ ಕುಟುಂಬಿಕರು ಇದರ ಸೇವಾದಾರರಾಗಿದ್ದರು. ಹಾರ್ಮೊನಿಯಂನಲ್ಲಿ ಪ್ರಸಾದ್ ಮತ್ತು ತಬಲಾದಲ್ಲಿ ಪುರಂದರ ಕಿಣಿಯ ಸಹಕರಿಸಿದರು. ದೇವಳದ ವತಿಯಿಂದ ಹರಿದಾಸ ಕೃಷ್ಣ ಪೈ ಯವರನ್ನು ಗೌರವಿಸಲಾಯಿತು. ಅಚ್ಯುತದಾಸರ ಪುತ್ರ ರಾಧಾಕೃಷ್ಣ ಪೈ, ಸಂತ ಅಚ್ಯುತದಾಸರ ಹಲವು ಕಾಲದ ಹಾರ್ಮೋನಿಯಂ ಸಹವಾದಕರಾಗಿದ್ದ […]

ಪಾದಚಾರಿಗಳಿಗೆ ಕಾರು ಡಿಕ್ಕಿ: ಹಲವರಿಗೆ ಗಾಯ; ಓರ್ವ ಮೃತ್ಯುವಶ

ಮಣಿಪಾಲ: ಇಲ್ಲಿನ ಸೆಂಟ್ರಲ್ ಪಾರ್ಕ್ ಹೋಟೇಲ್ ಇಳಿಜಾರು ರಸ್ತೆಯಲ್ಲಿ ತಡರಾತ್ರಿ ಅತಿ ವೇಗದಿಂದ ಬಂದ ಕಾರೊಂದು ಪಾದಚಾರಿಗಳಿಗೆ ಡಿಕ್ಕಿ ಹೊಡೆದಿದೆ. ಪರಿಣಾಮವಾಗಿ ಹಲವರು ಗಾಯಗೊಂಡಿದ್ದು, ಓರ್ವ ಯುವಕ ಮೃತನಾಗಿದ್ದಾನೆ. ಇಲ್ಲಿನ ಐನಾಕ್ಸ್ ಚಿತ್ರಮಂದಿರದ ಹತ್ತಿರ ಹೋಟೇಲ್ ಒಂದರಲ್ಲಿ ಕೆಲಸ ಮುಗಿಸಿ ಬರುತ್ತಿದ್ದ ಪಶ್ಚಿಮ ಬಂಗಾಲದ ನಿವಾಸಿ ಸಾಹಿನ್ ಎಸ್.ಕೆ(18) ಮೃತಪಟ್ಟ ಯುವಕ. ಇನ್ನುಳಿದ ಇತರ ಪಾದಾಚಾರಿಗಳಾದ ಸುಮಿತ್ ಜಸ್ವಾಲ್, ಸಂಸುಲ್ ಆರೀಫ್ ಹೋಕ್ಯೂ, ಲತೀಫುಲ್ ಚೌಧರಿ, ಸುಕ್ದೇಬ್ ಕರ್ಮರ್ಕರ್ ಇವರಿಗೆ ಕಾರು ಡಿಕ್ಕಿ ಹೊಡೆದಿದೆ. ಈ ಎಲ್ಲರಿಗೂ […]

ಮುಂದಿನ ವರ್ಷದಿಂದ ಪ್ರಯಾಣಿಕ ಮತ್ತು ವಾಣಿಜ್ಯ ವಾಹನಗಳ ಬೆಲೆಯೇರಿಕೆ ಸಾಧ್ಯತೆ

ನವದೆಹಲಿ: ಮುಂದಿನ ವರ್ಷ ಏಪ್ರಿಲ್‌ನಿಂದ ಪ್ರಾರಂಭವಾಗುವ ಕಟ್ಟುನಿಟ್ಟಾದ ಹೊರಸೂಸುವಿಕೆ ಮಾನದಂಡಗಳನ್ನು ಪೂರೈಸಲು ಆಟೋಮೊಬೈಲ್ ಕಂಪನಿಗಳು ವಾಹನಗಳನ್ನು ನವೀಕರಿಸಲು ಹೂಡಿಕೆ ಮಾಡುತ್ತಿರುವುದರಿಂದ ಪ್ರಯಾಣಿಕ ಮತ್ತು ವಾಣಿಜ್ಯ ವಾಹನಗಳ ಬೆಲೆಗಳು ಏರಿಕೆಯಾಗುವ ಸಾಧ್ಯತೆಯಿದೆ. ಭಾರತೀಯ ಆಟೋಮೊಬೈಲ್ ಉದ್ಯಮವು ಪ್ರಸ್ತುತ ತಮ್ಮ ಉತ್ಪನ್ನಗಳನ್ನು ಭಾರತ್ ಸ್ಟೇಜ್ VI ರ ಎರಡನೇ ಹಂತವನ್ನು ಪೂರೈಸಲು ಕೆಲಸ ಮಾಡುತ್ತಿದೆ, ಇದು ನೈಜ ಸಮಯದ ಚಾಲನಾ ಪರಿಸ್ಥಿತಿಗಳಲ್ಲಿ ಯುರೋ-VI ಹೊರಸೂಸುವಿಕೆಯ ಮಾನದಂಡಗಳಿಗೆ ಸಮನಾಗಿರುತ್ತದೆ. ಕಾರು ಮುಂತಾದ ಪ್ರಯಾಣಿಕ ಮತ್ತು ವಾಣಿಜ್ಯ ವಾಹನಗಳಿಗೆ ಮುಂದಿನ ಹಂತದ ಹೊರಸೂಸುವಿಕೆ […]