ಗೋವಾ ಮುಖ್ಯಮಂತ್ರಿ ಪ್ರಮೋದ್ ಸಾವಂತ್ ಜಿಲ್ಲಾ ಭೇಟಿ
ಉಡುಪಿ: ವಿವಿಧ ಕಾರ್ಯಕ್ರಮ ನಿಮಿತ್ತ ಶನಿವಾರದಂದು ಜಿಲ್ಲೆಗೆ ಆಗಮಿಸಿದ ಗೋವಾ ರಾಜ್ಯದ ಮುಖ್ಯಮಂತ್ರಿ ಪ್ರಮೋದ್ ಸಾವಂತ್ ಅವರನ್ನು ಶಾಸಕ ಕೆ. ರಘುಪತಿ ಭಟ್ ಉಡುಪಿ ಪ್ರವಾಸಿ ಮಂದಿರದಲ್ಲಿ ಸ್ವಾಗತಿಸಿದರು.
ಪಡಿತರದಲ್ಲಿ ಕುಚ್ಚಲಕ್ಕಿ ವಿತರಣೆಗೆ ಕೇಂದ್ರದ ಅನುಮೋದನೆ: ಜಿಲ್ಲಾ ಬಿಜೆಪಿ ಅಭಿನಂದನೆ
ಉಡುಪಿ: ರಾಜ್ಯದ ಕರಾವಳಿ ಜಿಲ್ಲೆಗಳಾದ ಉಡುಪಿ, ದಕ್ಷಿಣ ಕನ್ನಡ ಮತ್ತು ಉತ್ತರ ಕನ್ನಡ ಜಿಲ್ಲೆಗಳಲ್ಲಿ ರೈತರು ಬೆಳೆಯುತ್ತಿರುವ ಸ್ಥಳೀಯ ಕುಚ್ಚಲಕ್ಕಿ ಪ್ರಭೇದಗಳಾದ ಎಂಒ4, ಕಜೆ, ಜಯ, ಜ್ಯೋತಿ, ಪಂಚಮುಖಿ, ಸಹ್ಯಾದ್ರಿ, ಉಮ ಮತ್ತು ಅಭಿಲಾಷ್ ತಳಿಗಳನ್ನು ಕೇಂದ್ರ ಸರಕಾರದ ಕನಿಷ್ಠ ಬೆಂಬಲ ಬೆಲೆಯಡಿ ಖರೀದಿಸಿ ಕರಾವಳಿ ಜಿಲ್ಲೆಗಳ ವ್ಯಾಪ್ತಿಯಲ್ಲಿ ಪಡಿತರ ಮೂಲಕ ವಿತರಿಸಲು ಅನುಮತಿ ನೀಡಿರುವ ಕೇಂದ್ರ ಸರಕಾರದ ಕ್ರಮವನ್ನು ಉಡುಪಿ ಜಿಲ್ಲಾ ಬಿಜೆಪಿ ಸ್ವಾಗತಿಸಿದೆ. ಉಡುಪಿ, ದ.ಕ., ಉತ್ತರ ಕನ್ನಡ ಜಿಲ್ಲೆಗಳ ಜನತೆಯ ಬೇಡಿಕೆಯಂತೆ ಕರ್ನಾಟಕ […]
ಭಾರತೀಯ ವಾಯುಪಡೆಯ ಹೊಸ ಯುದ್ದ ಸಮವಸ್ತ್ರ ಅನಾವರಣ
ಚಂಡೀಗಢ: ಭಾರತೀಯ ವಾಯುಪಡೆಯು ಶನಿವಾರದಂದು ತನ್ನ 90 ನೇ ವಾರ್ಷಿಕೋತ್ಸವದ ಸಂದರ್ಭದಲ್ಲಿ ಹೊಸ ಯುದ್ಧ ಸಮವಸ್ತ್ರವನ್ನು ಅನಾವರಣಗೊಳಿಸಿದೆ. ವಾಯುಪಡೆಯಲ್ಲಿ ವೆಪನ್ ಸಿಸ್ಟಮ್ಸ್ (ಶಸ್ತ್ರಾಸ್ತ್ರ ವ್ಯವಸ್ಥೆ) ಶಾಖೆ ಎಂದು ಕರೆಯಲ್ಪಡುವ ಹೊಸ ಶಾಖೆಯನ್ನು ರಚಿಸಲು ಸರ್ಕಾರವು ಅನುಮೋದಿಸಿದೆ. ಎಲ್ಲಾ ಶಸ್ತ್ರಾಸ್ತ್ರ ವ್ಯವಸ್ಥೆ ನಿರ್ವಾಹಕರನ್ನು ಒಂದೇ ಘಟಕದ ಅಡಿಯಲ್ಲಿ ಏಕೀಕರಿಸುವ ಗುರಿಯನ್ನು ಇದು ಹೊಂದಿದೆ. ವಾಯುಪಡೆಯ ಹೊಸದಾಗಿ ವಿನ್ಯಾಸಗೊಳಿಸಿದ ಯುದ್ಧ ಟೀ ಶರ್ಟ್ ಅನ್ನು ಕೂಡಾ ಸೇನೆಗೆ ಸೇರ್ಪಡೆಗೊಳಿಸಲಾಗಿದೆ. Indian Air Force Day: New Combat Uniform unveiled!@IAF_MCC […]
ರಾಷ್ಟೀಯ ಕ್ರೀಡಾಕೂಟದಲ್ಲಿ ಅತಿ ಕಿರಿಯ ಮಲ್ಲಕಂಬ ಕ್ರೀಡಾಳು 10 ವರ್ಷದ ಶೌರ್ಯಜಿತ್
ಅಹಮದಾಬಾದ್: ಗುಜರಾತಿನ ಅಹಮದಾಬಾದಿನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ 36ನೇ ರಾಷ್ಟೀಯ ಕ್ರೀಡಾಕೂಟ-2022 ನಡೆಯುತ್ತಿದ್ದು, ಮಲ್ಲಕಂಬ ವಿಭಾಗದಲ್ಲಿ ಶೌರ್ಯಜಿತ್ ಎನ್ನುವ 10 ವರ್ಷದ ಬಾಲಕ ಸ್ಪರ್ಧಾಳುವಾಗಿ ಭಾಗವಹಿಸಿ ಎಲ್ಲರೂ ಅಚ್ಚರಿಗೊಳ್ಳುವಂತೆ ಮಾಡಿದ್ದಾನೆ. ಗುಜರಾತಿನ ಶೌರ್ಯಜಿತ್ ಕ್ರೀಡಾಕೂಟದಲ್ಲಿ ಸ್ಪರ್ಧಿಸಿದ ಅತ್ಯಂತ ಕಿರಿಯ ಆಟಗಾರ. ಈ ಪುಟ್ಟ ಪೋರ ಮಲ್ಲಕಂಬವನ್ನು ಲೀಲಾಜಾಲವಾಗಿ ಏರಿ ಜಿಮ್ನಾಸ್ಟಿಕ್ ಮಾಡುತ್ತಿರುವ ದೃಶ್ಯಗಳು ಎಲ್ಲೆಡೆ ವೈರಲ್ ಆಗಿವೆ. Chhota Packet Bada Dhamaka🤯 10 year old Shauryajit from #Gujarat is the youngest […]
ಅಕ್ಟೋಬರ್ 13 ರಂದು ಉಡುಪಿ ತಾ.ಪಂ ಸಾಮಾನ್ಯ ಸಭೆ
ಉಡುಪಿ: ಉಡುಪಿ ತಾಲೂಕು ಪಂಚಾಯತ್ನ ಸಾಮಾನ್ಯ ಸಭೆಯು ಅಕ್ಟೋಬರ್ 13 ರಂದು ಮಧ್ಯಾಹ್ನ 12 ಗಂಟೆಗೆ ತಾಲೂಕು ಪಂಚಾಯತ್ ಸಭಾಂಗಣದಲ್ಲಿ ನಡೆಯಲಿದೆ ಎಂದು ಪ್ರಕಟಣೆ ತಿಳಿಸಿದೆ.